Featured ಅಂಕಣ

ಸರ್ಫಿಂಗ್’ನಲ್ಲಿ ದೊಡ್ಡ ಸಾಧನೆ ಮಾಡಲು ಹೊರಟಿರುವ ತನ್ವಿಗೆ ಸಹಾಯ ಮಾಡಲಾರಿರಾ?

ಮೊನ್ನೆ ಫೇಸ್’ಬುಕ್ ಚೆಕ್ ಮಾಡಿದಾಗ ಎಲ್ಲೆಡೆ ಪಿ.ವಿ.ಸಿಂಧು, ಸಾಕ್ಷಿ ಮಲಿಕ್’ರ ಫೋಟೋಗಳು, ಅವರ ಬಗೆಗಿನ ಸ್ಟೇಟಸ್’ಗಳು ರಾರಾಜಿಸುತ್ತಿದ್ದವು. ಎಲ್ಲರೂ ಕೂಡ ಅವರ ಗೆಲುವನ್ನ, ಯಶಸ್ಸನ್ನ ಸಂಭ್ರಮಿಸುವುದರಲ್ಲೇ ಬ್ಯುಸಿಯಾಗಿದ್ದರು. ಒಂದು ಕ್ಷಣಕ್ಕೆ ನನ್ನ ಹೃದಯವೂ ತುಂಬಿ ಬಂದಿತ್ತು. ನನಗೆ ಬಹಳ ಖುಷಿಯಾಗಿತ್ತು ಯಾಕೆಂದರೆ ಈ ಗೆಲುವು ಹೆಣ್ಣುಮಕ್ಕಳ ಬಗೆಗಿರುವ ಎಲ್ಲಾ ರೂಢಿಬದ್ಧ ಪ್ರಶ್ನೆಗಳನ್ನ ಉತ್ತರಿಸಿದ್ದವು. ಹೆಣ್ಣು ಮಕ್ಕಳು ಪುರುಷರನ್ನೂ ಮೀರಿಸಬಲ್ಲರು ಎನ್ನುವುದನ್ನು ತೋರಿಸಿದ್ದವು. ಒಲಂಪಿಕ್ ಪದಕದೊಂದಿಗೆ ಉತ್ತರಿಸುವುದಕ್ಕಿಂತ ಉತ್ತಮ ದಾರಿ ಬೇರೆ ಯಾವುದಿದೆ?? ನನಗೆ ಇನ್ನೂ ಖುಷಿ ಕೊಟ್ಟಿದ್ದು ನನ್ನ ಹಾಗೆ ಖುಷಿ ಪಟ್ಟವರನ್ನ ನೋಡಿ, ಉತ್ಸಾಹದಿಂದ ಸಂಭ್ರಮಿಸಿದ್ದನ್ನ ನೋಡಿ.

  ಆದರೆ ಇದನ್ನಷ್ಟೆಯೇ ನಾವು ಮಾಡುವುದಕ್ಕಾಗುವುದು..? ನಮ್ಮ ಜವಾಬ್ದಾರಿ ಇಲ್ಲಿಗೇ ಮುಗಿಯುತ್ತದೆಯೇ? ಸೌಲಭ್ಯಗಳ ಕೊರತೆಯನ್ನ ಟೀಕಿಸುವುದು, ಸರಿಯಾದ ಸಹಕಾರ ನೀಡದ ನಮ್ಮ ವ್ಯವಸ್ಥೆಯನ್ನ ಹಳಿಯುವುದು ನಮ್ಮ ರೂಢಿಯಾಗಿಬಿಟ್ಟಿದೆ. “ಇಲ್ಲಿ ಸರಿಯದ ವ್ಯವಸ್ಥೆಗಳಿಲ್ಲ, ಸಹಕಾರ ನೀಡುವುದಿಲ್ಲ, ಭಾರತಕ್ಕೆ ಕ್ರೀಡೆಯಲ್ಲಿ ಅಂತಹ ಯಶಸ್ಸೇನೂ ಇಲ್ಲ” ಇಷ್ಟು ಹೇಳಿ ಟೀಕಿಸಿ ಬಿಟ್ಟರೆ ನಮ್ಮ ಕೆಲಸ ಮುಗಿಯಿತು. ಇನ್ನು ಆ ಬ್ಲೇಮ್’ಗೇಮ್ ಮುಂದಿನ ಒಲಂಪಿಕ್ ಸಮಯಕ್ಕೆ ಮತ್ತೆ ಶುರು,  ನಾವೇನೂ ಮಾಡದೇ ಹೀಗೆ ಇದ್ದರೆ ಇದು ಇನ್ನೂ ೨೦-೩೦ ವರ್ಷ ಇದೇ ರೀತಿಯಲ್ಲಿ ಮುಂದುವರೆಯುವುದು.

ನನ್ನ ಈ ಕಾಳಜಿ ಎಚ್ಚೆತ್ತುಕೊಂಡಿದ್ದು ನಮ್ಮ ರೀಡೂಗೆ ಇ-ಮೇಲ್ ಬಂದಾಗ. ಮೇಲ್ ಹೀಗಿತ್ತು.

ನನ್ನ ಹೆಸರು ತನ್ವೀ ಜಗದೀಶ್. ನಾನೊಬ್ಬ ಸರ್ಫರ್   ಇಲ್ಲ, ಇರಿ.. ಈ ರೀತಿ ಆರಂಭಿಸುತ್ತೇನೆ. ನನ್ನ ಹೆಸರು ತನ್ವೀ ಜಗದೀಶ್, ೧೬ ವರ್ಷದ ಹುಡುಗಿ. ಡೆಲ್ಲಿ ಪಬ್ಲಿಕ್ ಸ್ಕೂಲಿನಲ್ಲಿ ಓದಿದ್ದು. ಕರ್ನಾಟಕದ  ಮಂಗಳೂರಿನವಳು. ನಾನೊಬ್ಬ ಸರ್ಫರ್.ಒಬ್ಬ ಭಾರತೀಯಳಾಗಿ, ನಾನು ನನ್ನ ಬದುಕಲ್ಲಿ ಏನು ಮಾಡಬೇಕು ಎನ್ನುವುದು ನನ್ನ ಲಿಂಗ, ನನ್ನ ವಯಸ್ಸು, ನನ್ನ ಮೂಲ ಇನ್ನು ಮುಂತಾದ ಅಸಂಬದ್ಧ ಅಂಶಗಳಿಗೆ ಅಂಟಿಕೊಂದಿದೆ. ಓದಿ ನನ್ನ ಕಥೆ”

FB_IMG_1471605144253

ಇದಕ್ಕಿಂತ ಚನ್ನಾಗಿ ಅಭಿವ್ಯಕ್ತಗೊಳಿಸಲು ಸಾಧ್ಯವಿದೆಯಾ ಅಂತ ಆಶ್ಚರ್ಯಪಟ್ಟಿದ್ದೆ. ಆಕೆಯ ಮೇಲ್’ನ್ನು ಓದುತ್ತಾ ಹೋದಂತೆ ಆಕೆಯಲ್ಲಿ ಮುಂದಿನ ಪಿ.ವಿ.ಸಿಂಧುವನ್ನು ಕಾಣಲಾರಂಭಿಸಿದ್ದೆ. ಈ ಚೂಟಿ ಹುಡುಗಿ ತನ್ನ ಸರ್ಫಿಂಗ್ ಪಯಣವನ್ನು ಆರಂಭಿಸಿದ್ದು ಆಕೆ ೧೪ವರ್ಷದವಳಿದ್ದಾಗ.  ತನ್ನ ೮ನೇ ವಯಸ್ಸಿನಿಂದಲೇ ಸರ್ಫಿಂಗ್ ಮಾಡುಬೇಕೆಂದು ಬಯಸಿದ್ದು, ಅದಕ್ಕಾಗಿ ತನ್ನ ಕುಟುಂಬ, ಸಮಾಜ ಹಾಗೂ ಇನ್ನೂ ಹಲವು ಒತ್ತಡಗಳೊಂದಿಗೆ ಆಕೆಯ ಹೋರಾಡಿದ್ದು ಎಲ್ಲವನ್ನು ಪತ್ರದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾಳೆ. “ಸರ್ಫಿಂಗ್ ಎನ್ನುವುದು ಹೆಣ್ಣುಮಕ್ಕಳ ಕ್ರೀಡೆ ಎಂದು ಯಾವತ್ತೂ ಪರಿಗಣಿಸಿಯೇ ಇಲ್ಲ. ಕ್ಷಮಿಸಿ ಭಾರತದ ಹೆಣ್ಣುಮಕ್ಕಳಿಗೆ” ಎನ್ನುತ್ತಾ ತನ್ನ ಅಳಲು ತೋಡಿಕೊಳ್ಳುತ್ತಾಳೆ. ನಿಜ ತನ್ವಿ. ನೀನು ಇರುವ ಸಮಾಜದಲ್ಲಿ ಸ್ವಿಮ್’ಸೂಟ್ ಧರಿಸುವುದು ಕೂಡ ಪ್ರತಿಬಂಧಕವೇ!!

received_10207416636927486

ಆದರೇನು ಈ ಹುಡುಗಿ ಒತ್ತಡಗಳಿಗೆ ಮಣಿಯುವವಳಾಗಿರಲಿಲ್ಲ. ಕೈಚೆಲ್ಲಿ ಕೂರದೆ ‘ಮಂತ್ರಾ ಸರ್ಫ್’ಕ್ಲಬ್’ಗೆ ಸೇರಿಕೊಂಡು ಸರ್ಫಿಂಗ್ ಹಾಗೂ ಎಸ್.ಯು.ಪಿ (ಸ್ಟ್ಯಾಂಡ್’ ಅಪ್ ಪ್ಯಾಡಲಿಂಗ್)ನಲ್ಲಿ ಟ್ರೈನಿಂಗ್ ಪಡೆಯುವಲ್ಲಿ ಸಾಕಷ್ಟು ಸಮಯ ಕಳೆಯಲಾರಂಭಿಸಿದಳು. ಆಕೆ ಇದನ್ನು ಮಾಡಬಲ್ಲಳು ಎಂದು ತಂದೆ ತಾಯಿಯನ್ನು ಒಪ್ಪಿಸಿದ್ದು ಅಲ್ಲಿಯ ಟ್ರೈನರ್’ಗಳು.

ಅಲ್ಲಿಂದ ಆಕೆಯ ರಾಷ್ಟ್ರಮಟ್ಟದ ಸಾಧನೆಯ ಪಟ್ಟಿ ಆರಂಭವಾಗುತ್ತದೆ. ಆಕೆಯ ಮೊದಲ ಸ್ಪರ್ಧೆ ಇದ್ದಿದ್ದು ೨೦೧೫ರಲ್ಲಿ ಚೆನ್ನೈನಲ್ಲಿ.

  •         ೨೦೧೫ ಎಸ್.ಯು.ಪಿ ನ್ಯಾಷನಲ್ಸ್ ಕೋವಲಂಗ್ ಪಾಯಿಂಟ್ ಸರ್ಫ್ ಕ್ಲಾಸಿಕ್ –ಮೊದಲ ಸ್ಥಾನ
  •         ೨೦೧೬ ಎಸ್.ಯು.ಪಿ  ನ್ಯಾಷನಲ್ಸ್ ಮನಪಡ್ ಕ್ಲಾಸಿಕ್ ಸರ್ಫ್ ಅಂಡ್ ಸೈಲ್ ಫೆಸ್ಟಿವಲ್ – ಮೊದಲ ಸ್ಥಾನ
  •         ೨೦೧೬ ಎಸ್.ಯು.ಪಿ ನ್ಯಾಷನಲ್ಸ್ ಇಂಡಿಯನ್ ಓಪನ್ ಆಫ್ ಸರ್ಫಿಂಗ್ (ಕರ್ನಾಟಕ ಟೂರಿಸಂ ಪ್ರಾಯೋಜಕತ್ವದಲ್ಲಿ)- ಮೊದಲ ಸ್ಥಾನ
  •         ೨೦೧೬ ಸರ್ಫಿಂಗ್ ನ್ಯಾಷನಲ್ಸ್ ಇಂಡಿಯನ್ ಓಪನ್ ಆಫ್ ಸರ್ಫಿಂಗ್ – ತೃತೀಯ ಸ್ಥಾನ

ನಂತರ ಬಂದಿದ್ದೇ ದೊಡ್ದ ಸುದ್ದಿ. ಇಂಟರ್’ನ್ಯಾಷನಲ್ ಕಾಂಪಿಟೇಷನ್ ಇನ್ ಚೈನ ಫಾರ್ ಎಸ್.ಯು.ಪಿ’ಗೆ ಆಕೆಗೆ ವೈಲ್ಡ್’ಕಾರ್ಡ್ ಎಂಟ್ರಿ ದೊರಕಿತ್ತು. ಅದರ ನಂತರ ನಡೆದಿದ್ದು ಆಕೆಯ ಪತ್ರದ ಮೂಲ ಉದ್ದೇಶ. “ಆದರೆ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪೋಷಕರ ಆರ್ಥಿಕ ಹಾಗೂ ಭಾವನಾತ್ಮಕ ಸಹಕಾರವಿಲ್ಲದೇ ಭಾಗವಹಿಸಲು ಸಾಧ್ಯವಿಲ್ಲ. ನಾನು ಪೋಷಕರನ್ನು ಒಪ್ಪಿಸುವುದರಲ್ಲೇ ನಾನು ಈ ಅಂತರಾಷ್ಟ್ರೀಯ ಸ್ಪರ್ಧೆಯನ್ನ ಮಿಸ್ ಮಾಡಿಕೊಳ್ಳುತ್ತೇನೋ ಏನೋ. ಆ ಮೂಲಕ ಬದಲಾವಣೆ ತರುವ ನನ್ನ ಆಶಯವೂ ಮಿಸ್ ಮಾಡಿಕೊಳ್ಳುತ್ತೇನೆ.  ನೀವು ನೀಡಬಹುದಾದ ಯಾವುದೇ ರೀತಿಯ ಸಹಾಯ ನೀಡಿ ಎಂದು ವಿನಂತಿಸುತ್ತೇನೆ. ಸಾಧ್ಯವಾದಲ್ಲಿ ನನ್ನ ಕಥೆಯನ್ನ ನನಗೆ ಸಹಾಯ ಮಾಡುವಂತರಿಗೆ ತಿಳಿಸಿ.”

ಇದನ್ನು ಓದಿ ನಿಜಕ್ಕೂ ದುಃಖವಾಯಿತು. ಒಬ್ಬ ಉತ್ತಮ ಕ್ರೀಡಾಪಟು, ಒಂದು ವೆಬ್’ಸೈಟ್’ಗೆ ಪತ್ರ ಬರೆದು ತನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ವಿನಂತಿಸಿಕೊಳ್ಳುತ್ತಾಳೆಂದರೆ ಇದಕ್ಕಿಂತ ದುಃಖದ ಸಂಗತಿ ಇನ್ನೇನಿದೆ?! ಒಬ್ಬ ಕ್ರೀಡಾಪಟು ಒಂದು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ತನ್ನ ರಾಷ್ತ್ರವನ್ನು ಪ್ರತಿನಿಧಿಸಲು ಆರ್ಥಿಕ ಸಹಾಯ ಕೇಳಿ, ವೆಬ್’ಸೈಟ್’ಗಳಿಗೆ, ಪೇಜ್’ಗಳಿಗೆ ಪತ್ರ ಬರೆಯುತ್ತಾ ತನ್ನ ಸಮಯ ಕಳೆಯುತ್ತಿದ್ದಾಳೆ!!

ಈಗ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ, ನಾವು ಆಕೆಗೆ ಏನು ಮಾಡಬಹುದು? ಆಕೆಗೆ ಯಾವ ರೀತಿಯಲ್ಲಿ ಸಹಾಯ ಮಾಡಬಹುದು? ನಾವೀಗ ಆಕೆಗೆ ಸಹಾಯಧನ, ಸಹಕಾರ ನೀಡಿ ಮುಂದಿನ ಧ್ರುವತಾರೆ ಮಾಡೋಣವಾ ಅಥವಾ ಆಕೆಯನ್ನ ಆಕೆಯ ಪಾಡಿಗೆ ತನ್ನ ಕನಸುಗಳಿಗಾಗಿ ಹೋರಾಡಲು,  ಸಹಾಯದ ಆಸೆಯಲ್ಲಿ ಕಣ್ಣೀರು ಸುರಿಸಲು, ಬೆವರು, ರಕ್ತ ಸುರಿಸಲು ಬಿಟ್ಟು ಬಿಡೋಣವಾ?? ಅಲ್ಲಿಯ ತನಕ ಸುಮ್ಮನಿದ್ದು, ಆಕೆ ಗೆದ್ದ ನಂತರ (ಆಕೆ ಗೆದ್ದೇ ಗೆಲ್ಲುತ್ತಾಳೆಂಬ ಭರವಸೆ ನನಗಿದೆ. ಏಕೆಂದರೆ ಆಕೆಗೆ ಉಕ್ಕಿನಂತಹ ದೃಢ ಮನಸ್ಸನ್ನು ಹೊಂದಿದ್ದಾಳೆ) ನಮ್ಮ ಫೇಸ್’ಬುಕ್’ನಲ್ಲಿ ಭಾವನಾತ್ಮಕ ಸ್ಟೇಟಸ್ ಹಾಕಿ, ದೇಶದ ಹೆಮ್ಮೆಯ ಪುತ್ರಿ ಅಂತ ಶ್ಲಾಘಿಸೋಣವಾ? ಆಕೆಯ ಪರಿಸ್ಥಿತಿಯನ್ನ ನಿಮ್ಮ ಮುಂದೆ ಇಟ್ಟು, ಆಕೆಗೆ ಸಹಕರಿಸುತ್ತಾ ನಾನು ನನ್ನ ಪಾತ್ರವನ್ನು ನಿಭಾಯಿಸಿದ್ದೇನೆ. ಆಕೆಗಾಗಿ ಧ್ವನಿ ಎತ್ತಿದ್ದೇನೆ. ನೀವು ಆಕೆಗಾಗಿ ದನಿ ಎತ್ತುವಿರಿ ಅಲ್ಲವಾ? ಮೊದಲು ಆಕೆಗೆ ಆರ್ಥಿಕವಾಗಿ, ಭಾವನಾತ್ಮಕವಾಗಿ ಸಹಕಾರ ನೀಡಿ ನಂತರ ಆಕೆಯ ಗೆಲುವನ್ನ ಸಂಭ್ರಮಿಸೋಣವಾ? (ನಾನು ಪುನರುಚ್ಛರಿಸುತ್ತೇನೆ, ಉಕ್ಕಿನಂತಹ ದೃಢ ಮನಸ್ಸಿರುವ ಆಕೆಗೆ ಗೊತ್ತಿರುವುದು ಒಂದೇ ಒಂದು. ಯಶಸ್ಸು..!!)

ಅಡಿಟಿಪ್ಪಣಿ: ತನ್ವಿಯೊಂದಿಗಿನ ಸಂಭಾಷಣೆಯಲ್ಲಿ ನಾನು ಕಲಿತದ್ದು ಇದನ್ನೇ. ನಾವು ರೀಡೂ ಅವರು ಕೂಡ ಇದನ್ನು ದೃಢಪಡಿಸುತ್ತೇವೆ. ಒಬ್ಬ ಹೆಣ್ಣುಮಗಳು ಸಾಮಾನ್ಯಕ್ಕಿಂತ ಭಿನ್ನವಾಗಿ ಏನಾದರೂ ಮಾಡಲು ಹೊರಟಾಗ, ತನ್ನ ಕನಸುಗಳನ್ನು ಬೆನ್ನತ್ತಿ ಹೊರಟಾಗ ಆಕೆಗೆ ಸಿಗುವುದು ಸಾಧಿಸುವ ಛಲವನ್ನೇ ನುಂಗಿ ಹಾಕುವಂತಹ ವ್ಯಂಗ್ಯ ನೋಟಗಳು ಹಾಗೂ ನುಡಿಗಳು. ಆದರೂ ಇವೆಲ್ಲಾ ಅಡೆತಡೆಗಳ ಹೊರತಾಗಿಯೂ ತನ್ವಿಯಂತಹ ಹೆಣ್ಣು ಮಕ್ಕಳು ಅಸಾಧ್ಯವನ್ನು ಸಾಧ್ಯ ಮಾಡಿ ತೋರಿಸುತ್ತಾರೆ. ಹಾಗಾದರೆ ಆರಂಭದಿಂದಲೇ ಅವರಿಗೆ ಯಾಕೆ ಪ್ರೋತ್ಸಾಹಿಸಬಾರದು? ತನ್ವಿಯಂತಹ ಪ್ರತಿಭೆಗಳನ್ನ ಗುರುತಿಸಿ, ಅವರಿಗೆ ಸಹಕಾರ ನೀಡಿ, ಅವರ ಪ್ರತಿಭೆಯನ್ನು ಪೋಷಿಸಿ ನಂತರ ಅವರ ಗೆಲುವನ್ನ ಯಾಕೆ ಆನಂದಿಸಬಾರದು? ಒಬ್ಬ ಹೆಣ್ಣುಮಗಳು ಗೆದ್ದಾಗ ತಾನು ಪ್ರತಿನಿಧಿಸಿದ ದೇಶಕ್ಕೆ ಗೌರವವನ್ನ ತರುತ್ತಾಳೆ, ಒಬ್ಬ ಹೆಣ್ಣುಮಗಳು ಗೆದ್ದಾಗ ಗೆಲ್ಲುವುದು ಮಾನವೀಯತೆ. ಹಾಗಾದರೆ ತನ್ವಿಗೆ ‘ಚೀರ್ಸ್’ ಹೇಳುತ್ತಾ ಆಕೆಯನ್ನು ಪ್ರೋತ್ಸಾಹಿಸೋಣವೇ?!

ಹಾಗಾದರೆ ಕೆಳಗೆ ನೀಡಿರುವ ಬ್ಯಾಂಕ್ ಅಕೌಂಟಿಗೆ ನಮ್ಮ ಕೈಲಾದಷ್ಟು ಹಣ ಹಾಕಿ ತನ್ವಿ, ಚೈನಾದಲ್ಲಿ ನಡೆಯಲಿರುವ ಅಂತಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಕೆಗೆ ನೆರವಾಗೋಣ.

Bank:        STATE BANK OF MYSORE

Name:      SATHYA SHAMANTH GOWDA

ISFC :       SBMY0040158

AC :          64099528610

BRANCH:  N R MOHALLA  MYSORE ( NARASIMHARAJA MOHALLA)

#GirlSurferIndia

# Girlpower

#ISUPPORTTANVI

ಮೂಲ ಲೇಖನ: ಆಶಿಶ್ ಸಾರಡ್ಕ

ಅನುವಾದ: ಶ್ರುತಿ ರಾವ್

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!