ಅಂಕಣ

ಒಲಂಪಿಕ್ಸ್’ನಲ್ಲಿ ನಾವೇಕೆ ಅಲ್ಪತೃಪ್ತರು?

ಮೋದಿ ಸ್ವಚ್ಛ ಭಾರತದಿಂದ ಹೊಟ್ಟೆ ತುಂಬುತ್ತಾ? ಯೋಗ ದಿವಸದಿಂದ ಏನಾದ್ರೂ ಹೊಟ್ಟೆ ತುಂಬುತ್ತಾ? GST ಬಿಲ್ ಇಂದ ಏನಾದ್ರೂ ಹೊಟ್ಟೆ ತುಂಬುತ್ತಾ?  ಏನಪ್ಪಾ ಇವನು ಒಲಂಪಿಕ್ಸ್ ಬಗ್ಗೆ ಬರೀತಾನೆ ಅನ್ಕೊಂಡ್ರೆ  ಏನೇನೋ ಹೇಳ್ತಿದ್ದಾನೆ ಅಂತ ಅನ್ಕೊಂಡ್ರಾ? ಖಂಡಿತ ಇಲ್ಲ. ಇದನ್ನೇ ಇನ್ನು ಸ್ವಲ್ಪ ವಿಸ್ತರಿಸೋಣ

ಮಧ್ಯಾನ್ಹ ಆಟ ಆಡಿ ಮಗ ಮನೆಗೆ ಬಂದಿರ್ತಾನೆ

ಅಪ್ಪ ಕೇಳ್ತಾನೆ ಎಲ್ಲಿಗೆ  ಹೋಗಿದ್ಯೋ?

ಮಗ ಹೇಳ್ತಾನೆ ಅಪ್ಪ ಆಟ ಆಡೋಕೆ ಹೋಗಿದ್ದೆ

ತಕ್ಷಣ ಗದರಿದ ಅಪ್ಪ ಬೇರೆ ಕೆಲಸ ಇಲ್ವೇನೋ ಆಟ ಆಡೊಂದ್ರಿಂದ ಏನಾದ್ರೂ  ಹೊಟ್ಟೆ ತುಂಬುತ್ತಾ? ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೋ.

ಈಗ ನಾ ಹೇಳಿದ್ದು ನಿಮಗೆ ಸ್ವಲ್ಪ ಅರ್ಥ ಆಯ್ತು ಅನ್ಕೋತೀನಿ ಹೌದು ನಾವು materialistic ಲೈಫ್’ಗೆ ಎಷ್ಟು ಒಗ್ಗಿ ಬಿಟ್ಟಿದ್ದೀವೆಂದರೆ ಎಲ್ಲದರಲ್ಲೂ ಹಣ ಹುಡುಕುವ ಚಾಳಿ ಬೆಳೆಸಿಕೊಂಡು ಬಿಟ್ಟಿದ್ದೇವೆ.  ವಿಶ್ವಕ್ಕೆ ವೇದಾಂತ ಸಾರಿದ ಭಾರತದ ಇಂದಿನ ಪರಿಸ್ಥಿತಿ ಇದು.

ಮೊದಲೇ ಹೇಳಿ ಬಿಡುತ್ತೇನೆ  ಒಲಂಪಿಕ್’ನಲ್ಲಿ ಪದಕವನ್ನು ನಿರೀಕ್ಷೆ ಮಾಡುವ ಅರ್ಹತೆ ಭಾರತೀಯರಾದ ನಾವು ಕಳೆದುಕೊಂಡಿದ್ದೇವೆ ಏಕೆಂದರೆ ಕ್ರಿಕೆಟ್ ಬಿಟ್ಟು ಬೇರೆಲ್ಲ  ಕ್ರೀಡೆಗಳನ್ನು ಮೂಲೆಗೆ ಸರಿಸಿದವರು ನಾವೇ. ಹೀಗಾಗಿ ನಮಗೆ ಪದಕ ನಿರೀಕ್ಷಿಸುವ ಹಕ್ಕಿಲ್ಲ .

ಭಾರತ ದೇಶ ಎಲ್ಲ ರಂಗಗಳಲ್ಲಿಯೂ ಬೆಳೆಯುತ್ತಿರುವ ಪರ್ವ ಕಾಲವಿದು ಆದರೆ ಒಲಂಪಿಕ್ ನಲ್ಲಿ ಯಾಕೆ ಹಿಂದೆ ಎಂದು ಯೋಚಿಸಿದಾಗ ಈ ಕೆಳಗಿನ ಅಂಶಗಳು ನಮಗೆ ಉತ್ತರ ಕೊಡುತ್ತವೆ

1. ಮೊದಲನೆಯಾದಾಗಿ ಕ್ರಿಕೆಟ್ ಬಿಟ್ಟು ಬೇರೆ ಕ್ರೀಡೆಗಳೆಲ್ಲವೂ ನಾಲಾಯಕ್ ಅಂತ ಬಹುತೇಕ ಭಾರತೀಯರು ತೀರ್ಮಾನಿಸಿದ್ದಾರೆ. ಇನ್ನು ಭಾರತೀಯ ತಂದೆ ತಾಯಿಗಳೋ ತಮ್ಮ ಮಕ್ಕಳನ್ನು ಇಂಜಿನಿಯರ್ ಹಾಗು ಡಾಕ್ಟರ್ ಮಾಡಬೇಕೆಂದು ಮಗು ಇನ್ನು ಗರ್ಭದಲ್ಲಿರುವಾಗಲೇ ನಿಶ್ಚಸಿರುತ್ತಾರೆ. ಅದಕ್ಕಾಗಿ ಮೊದಲಿಂದಲೇ ತಯಾರಿಯು ಪ್ರಾರಂಭವಾಗುತ್ತದೆ. ಶಾಲೆ ಬಿಟ್ಟ ಕೂಡಲೇ ಟ್ಯೂಷನ್ ಮನೆಗೆ ಬಂದ ಮೇಲೆ ಹೋಂ ವರ್ಕ್. ಇನ್ನು ಮಗುವಿಗೆ ತನ್ನ ಇಷ್ಟವಾದ ಕ್ರೀಡೆ ಆಯ್ಕೆ ಮಾಡಿಕೊಳ್ಳಲು ಅವಕಾಶವೆಲ್ಲಿ? ಇನ್ನು ಇಷ್ಟವಾದ ಕ್ರೀಡೆ ಆಯ್ಕೆ ಮಾಡಿಕೊಂಡರು ಅದು ೧೦ ನೇ ತರಗತಿಯವರೆಗೆ ಮಾತ್ರ. ಮುಂದುವರಿಯಲು ಬಹುತೇಕ ಪಾಲಕರೇ ಬಿಡುವುದಿಲ್ಲ. ಇನ್ನೆಲ್ಲಿಯ ಒಲಂಪಿಕ್ಸ್. ಉಸೈನ್ ಬೋಲ್ಟ್ ಏನಾದರೂ ಭಾರತದಲ್ಲಿ ಹುಟ್ಟಿದ್ದರೆ ಅವನು ಇಷ್ಟೊತ್ತಿಗೆ ಯಾವುದಾದರೂ ಸಾಫ್ಟ್ವೆರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಷ್ಟೇ.

2. ಪ್ರಾಥಮಿಕ ಹಾಗು ಹೈಸ್ಕೂಲ್ ಮಟ್ಟದಲ್ಲಿ ಬಹುತೇಕ ಪ್ರತಿಭಾನ್ವಿತ ಆಟಗಾರರು ಉದಯಿಸುತ್ತಾರೆ ಆದರೆ ಕೆಲವೇ ಕೆಲವು ಜನ ಮುಂದುವರೆಯುತ್ತಾರೆ ಅವರನ್ನು ಗುರುತಿಸಿ ಬೆಳೆಸುವಲ್ಲಿ  ನಮ್ಮ ಶಿಕ್ಷಕರು ಎಡವಿದ್ದಾರೆ. ಕ್ರೀಡೆಯನ್ನು ಸಿರಿಯಸ್ಸಾಗಿ ತೆಗೆದುಕೊಂಡಿರುವ ಶಾಲೆಗಳು ತುಂಬಾ ಕಡಿಮೆ, ಅವುಗಳಿಗೆ ೧೦೦% ಫಲಿತಾಂಶ ಕೊಟ್ಟರೆ ಅದೇ ದೊಡ್ಡ ಸಾಧನೆ. ಬೆಂಗಳೂರಿನ ಎಷ್ಟೋ ಶಾಲೆಗಳಿಗೆ ಕ್ರೀಡಾಂಗಣವೇ ಇಲ್ಲ.

3. ಇನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಹಗರಣ ಮಾಡುವ ಸರ್ಕಾರಗಳು ಕ್ರೀಡಾ ಕ್ಷೇತ್ರ ಬಿಡುತ್ತದೆಯೇ? ಕಾಮನ್ವೆಲ್ತ ಹಗರಣವೇ ನಮಗೆ ಉದಾಹರಣೆ. ನಮ್ಮ ಸರ್ಕಾರಗಳು ಇದ್ದ ಕೆಲವೇ ಕೆಲವು ಆಟಗಾರರಿಗೆ ಸೂಕ್ತ ತರಬೇತಿ, ತರಬೇತುದಾರ, ಹಾಗು ಅದಕ್ಕೆ ಬೇಕಾದ infrastructure ಕಲ್ಪಿಸುವುದೇ ಇಲ್ಲ. ಬೇಡದ ಯೋಜನೆಗಳಿಗೆ ಲಕ್ಷಾಂತರ ಕೋಟಿ ವ್ಯಯಿಸುವ ಸರ್ಕಾರಗಳು ಅಥ್ಲೆಟಿಕ್ಸ್ ವಿಭಾಗದ ಆಟಗಾರರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡುವುದಿಲ್ಲ. ೭೦ ವರ್ಷಗಳಿಂದ ನಡೆದು ಬಂಡ ದಾರಿ ಇದು. ಮೊನ್ನೆ ಜಿಮ್ನ್ಯಾಸ್ಟಿಕ್’ನಲ್ಲಿ ಹೆಸರು ಮಾಡಿದ ದೀಪ ಕರ್ಮಾಕರ್ ಅಭ್ಯಾಸ ಮಾಡಿದ್ದು ಒಂದು ಹಳೆಯ ಸ್ಕೂಟರ್  ಅನ್ನು ಉಪಯೋಗಿಸಿಕೊಂಡು ಎಂದರೆ ನೀವು ನಂಬಲೇ ಬೇಕು.

ಇದಕ್ಕೆಲ್ಲ ಪರಿಹಾರವೆಂದರೆ ಮೊದಲು ಪಾಲಕರು ತಮ್ಮ ಮಗುವಿನ ಆಸಕ್ತಿಯನ್ನು ಗುರುತಿಸಿ ಆ ಮಗುವನ್ನು ಬೆಳೆಸಬೇಕು. ಇಂಜಿನಿಯರ್ ಡಾಕ್ಟರ್ ಓದುವುದೇ ಸಾಧನೆ ಎಂಬ ಮನಸ್ಥಿತಿಯನ್ನು ತೆಗೆದು ಹಾಕಿ ದೇಶದ ಹಿತಕ್ಕೋಸ್ಕರ ಮಕ್ಕಳನ್ನು ಬೆಳೆಸಬೇಕು. ಕ್ರೀಡೆಯು ಒಂದು career path ಎನ್ನುವುದನ್ನು ತಿಳಿಯಬೇಕು. ಇನ್ನು ಸರ್ಕಾರಗಳು  ಗೆದ್ದ ಆಟಗಾರರಿಗೆ ಕೋಟಿ ಕೋಟಿ ಹಣ  ಕೊಡುವುದಕ್ಕಿಂತ ಮೊದಲೇ ಕ್ರೀಡಾ ನಿಧಿ ತೆರೆಯಬೇಕು.  ಶಾಲಾ ಮಟ್ಟದಲ್ಲಿಯೇ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಆಯ್ಕೆಯಾದ ಪ್ರತಿಭೆಗಳಿಗೆ ಉತ್ತಮ ಪ್ರೋತ್ಸಾಹಧನ ಮತ್ತು infrastructure ಕಲ್ಪಿಸಬೇಕು. ಐಪಿಎಲ್ ಮಾದರಿಯಲ್ಲಿಯೇ ಅಥ್ಲೆಟಿಕ್ಸ್ ಕ್ರೀಡೆಗಳನ್ನು ರೂಪಿಸಿ ಪ್ರೋತ್ಸಾಹಿಸಬೇಕು. ಇಷ್ಟೆಲ್ಲ ಮಾಡಿದರೆ ಮುಂದಿನ ೨೦ ವರ್ಷಗಳಲ್ಲಿ ಭಾರತವು ಒಲಂಪಿಕ್ಸ್ ನಲ್ಲಿ ಪದಕ ಗಳಿಸಬಹುದು. ಈಗಿರುವ ವ್ಯವಸ್ಥೆಯೇ ಮುಂದುವರಿದರೆ ಅಥ್ಲೆಟಿಕ್ಸ್ ಅಷ್ಟೇ ಅಲ್ಲ, ನಮ್ಮ ಸಂಗೀತ, ಪಾರಂಪರಿಕ ನೃತ್ಯ ನಶಿಸಿ ಹೋಗಿ ದೇಶದ ತುಂಬೆಲ್ಲ ಇಂಜಿನಿಯರ್ ಗಳು ತುಂಬುತ್ತಾರೆ.

-ಪ್ರಹ್ಲಾದ್ ಜೋಷಿ

pralhad.kj@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!