ಕವಿತೆ ವರ್ಷ-ಹರ್ಷ July 20, 2016by Guest Author1 min read shares Share on Facebook Twitter WhatsApp Buffer Reddit Pocket Flipboard ಕಾದಿದೆ ಇಳೆಯು ಮಳೆಯ ಆಗಮನಕೆ ಎಲ್ಲರ ಬಾಯಲ್ಲೂ ಒಂದೇ ಮಾತು ಅಬ್ಬಬ್ಬಾ ಎಂಥಾ ಸೆಕೆ ! ಗ್ರೀಷ್ಮ ಕಳೆದು ವರ್ಷ ಬಂತು || ದೂರದಿ ಕೇಳುವ ಕಡಲ ಭೋರ್ಗರೆತ ಧಾವಿಸಿತು ನೈಋತ್ಯ ಮಾರುತ | ಯಾರೋ ಅತ್ತಿಸಿ ಬಂದಂತೆ ಓಡುವ ಮೋಡಗಳು ನೀರ ಹನಿಗೆ ಹಾತೊರೆದಿವೆ ಜೀವ ಸಂಕುಲಗಳು || ಝಲ್ಲನೆ ಆಗಸ-ಭುವಿಯ ಬೆಳಗಿತು ಮಿಂಚು ಅದನು ಮೀರಿಸಲು ಗುಡುಗಿನ ಸಂಚು | ಬಾನಿನ ತುಂಬಾ ಕವಿಯಿತು ಕಾರ್ಮೋಡ ಸುರಿಯಿತು ವರ್ಷಧಾರೆ ಧೋ ಎಂದು ನೋಡಾ || ಬಾಡಿದ ರೈತನ ಮೊಗದಲ್ಲಿ ಹರುಷ ಮಾಡುವನು ಬಿತ್ತನೆ ತಡೆಯದೇ ನಿಮಿಷ | ಹಚ್ಚಹಸಿರ ಚಾದಿರ ಧರೆಯ ಮುಚ್ಚಿತು ಬಾಗಿ ನಿಂತವು ಗಿಡಗಳು ಹನಿಮುತ್ತ ಹೊತ್ತು || ವಿದ್ಯಾಶ್ರೀ ಹೆಬ್ಬಾರ್ Facebook ಕಾಮೆಂಟ್ಸ್