ಅಂಕಣ

ರಾಜಕೀಯ ಮತ್ತು ಮಾಧ್ಯಮ

“ವಿವಿಧತೆಯಲ್ಲಿ ಏಕತೆ – ಏಕತೆಯಲ್ಲಿ ವಿವಿಧತೆ” ಇದು ನಮ್ಮ ದೇಶ ಭಾರತ. ಹಲವಾರು ಜಾತಿ, ಮತ, ಭಾಷೆ, ಸಂಸ್ಕøತಿ,ಆಚರಣೆಗಳನ್ನು ಒಳಗೊಂಡು ಶಾಂತಿ, ಸೌಹಾರ್ಧ, ಅಹಿಂಸಾತತ್ವಗಳಿಗೆ ಪ್ರಪಂಚದಲ್ಲೇ ಹೆಸರುವಾಸಿ ನಮ್ಮ ದೇಶ ಭಾರತ. ನಾಗರೀಕತೆಯ ಬೇರುಗಳಿರುವ ಹರಪ್ಪ – ಮಹೇಂಜದಾರೊಗಳನ್ನೊಳಗೊಂಡು 21ನೇ ಶತಮಾನದ ಅತ್ಯಾಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಿಕೊಂಡಿರುವ ದೇಶ ಭಾರತ. ಹಚ್ಚ – ಹಸಿರುಗಳಿಂದ ಕಂಗೊಳಿಸಿ, ಸಕಾಲದಲ್ಲಿ ಮಳೆ – ಬೆಳೆಯಾಗಿ,ಸಮೃದ್ಧಿಗೆ ಹೆಸರುವಾಸಿಯಾಗಿದ್ದಂತ ದೇಶ – ಭಾರತ.

ಇಂತಹ ಒಂದು ಅದ್ಭುತ ದೇಶದಲ್ಲಿನ ಆಗು ಹೋಗುಗಳನ್ನು, ದೈನಂದಿನ ಚಟುವಟಿಕೆಗಳನ್ನು, ರಾಜಕೀಯ ಸ್ಥಿತಿ-ಗತಿಗಳನ್ನು,ಆರ್ಥಿಕತೆಯನ್ನು ನಮ್ಮ ಶತ್ರು ದೇಶಗಳಲ್ಲದೇ, ಮಿತ್ರ ದೇಶಗಳೂ ಗಮನಿಸುತ್ತಿರುವುದು ಆಶ್ಚರ್ಯದ ಸಂಗತಿಯೇನಲ್ಲ.ಇಂತಹ ಪರಿಸ್ಥಿಯಲ್ಲಿ, ನಮ್ಮ ದೇಶದ ಹಿಂದಿನ – ಇಂದಿನ – ನಾಳೆಯ ಬಗ್ಗೆ ನನ್ನ ಪುಟ್ಟದೊಂದು ಆಲೋಚನೆಯನ್ನು ಈ ಲೇಖನದಲ್ಲಿ ಮೂಡಿಸುವ ಪ್ರಯತ್ನ ಇದಾಗಿದೆ.

ಸ್ವಾತಂತ್ರ್ಯದ ನಂತರ ನೆಹರು ಕುಟುಂಬ ನಮ್ಮ ದೇಶವನ್ನು ಹಲವಾರು ದಶಕಗಳು ಆಳಿದೆ. ಜವಹರಲಾಲ್ ನೆಹರುಜೀ,ಇಂದಿರಗಾಂಧಿ, ರಾಜೀವ್‍ಗಾಂಧಿ, ಸೋನಿಯಾಗಾಂಧಿಯವರೆಗೆ ಮತ್ತು ಈಗ ನಮ್ಮೆಲ್ಲರ ಆಶೋತ್ತರಗಳನ್ನು ಈಡೇರಿಸುವ ಪ್ರತಿಜ್ಞೆಯೊಂದಿಗೆ, ಭರವಸೆಯೊಂದಿಗೆ ಬಂದಿರುವ ನರೇಂದ್ರ ಮೋದಿಜೀ ಮತ್ತು ಮುಂದಿನ ದಿನಗಳಲ್ಲಿ ಬರಬಹುದಾದ ಇತರೆ ಪ್ರಧಾನಿಗಳ ಅವಧಿಯಲ್ಲಿನ ಒಂದು ಅವಿಭಾಜ್ಯ ಅಂಗ ಮಾಧ್ಯಮ. ಕಾನೂನು ಸುವ್ಯವಸ್ಥೆ, ರಕ್ಷಣೆ, ಆಡಳಿತಗಳು ಒಂದೆಡೆ ಇದ್ದರೆ,ಮಾಧ್ಯಮ & ರಾಜಕೀಯ ಎಂಬುದೇ ಇನ್ನೊಂದೆಡೆ.

ನಮ್ಮ ದೇಶದಲ್ಲಿ ಇದಕ್ಕೆ ಒಂದು ವಿಶೇಷವಾದ ಶಕ್ತಿ, ಜನಸಮಾನ್ಯರಲ್ಲಿ ಆಸಕ್ತಿ, ಸರ್ಕಾರಿ ನೌಕರರಲ್ಲಿ ಭಯ ಹುಟ್ಟಿಸುವಂತದ್ದು ರಾಜಕೀಯ ವiತ್ತು ಮಾಧ್ಯಮ. ಅತೀ ವೇಗದಲ್ಲಿ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ (ಎಂದು ನಂಬಿರುವ) ನಮ್ಮ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರತೀ ಹಳ್ಳಿ ಹಳ್ಳಿಗಳಲ್ಲೂ ಜನರು ಸರ್ಕಾರದ ಯೋಜನೆಗಳು, ತಂತ್ರಜ್ಞಾನ, ಅಂತರರಾಷ್ಟ್ರೀಯ ಸುದ್ಧಿಗಳನ್ನು ಕೂಡ ಗಮನಿಸುತ್ತಿರುವುದು ಉತ್ತಮ ಸಂಗತಿ. ಆ ಮುಗ್ಧಜನರಿಗೆ ವಿಷಯಗಳನ್ನು ತಲುಪಿಸುತ್ತಿರುವ ಮಾಧ್ಯಮ ಮತ್ತು ತಂತ್ರಜ್ಞಾನಗಳಿಗೆ ಅಭಿನಂದನೆಗಳು.

ಆದರೇ, ನನ್ನಲ್ಲಿ ಕಾಡುತ್ತಿರುವ ಭಯ ಮತ್ತು ಪ್ರಶ್ನೆ ಏನೆಂದರೆ,

ಮಾಧ್ಯಮಗಳ ಮೌಲ್ಯಮಾಪನ ಮಾಡುವವರು ಯಾರು ? ಇದಕ್ಕೂ ರಾಜಕೀಯಕ್ಕೂ ಏನು ಸಂಬಂಧ ?

ಜನಸಮಾನ್ಯರಿಗೆ ತಲುಪುವ ಸುದ್ಧಿಗಳು, ವಿಚಾರಧಾರೆಗಳಲ್ಲಿನ ಸತ್ಯಾಂಶದ ಕೊರತೆ, ಸುದ್ದಿಯನ್ನು ತಿರುಚುವ, ಸಾಮಾನ್ಯ ಸಂಗತಿಗಳಿಗೆ, ಗಣ್ಯರ ವೈಯಕ್ತಿಕ ಹಾಗು ಸಮಾಜದ ಇತರೆ ವಿಷಯಗಳಿಗೆ ಹಲವಾರು ಅರ್ಥ ಕಲ್ಪಿಸಿ ತೇಜೋವಧೆವಾಡುವ ಮಾಧ್ಯಮದ ಕಾರ್ಯವೈಖರಿ ಬದಲಾಗಬೇಕು.

ನನ್ನ ಅಂದಾಜಿನ ಪ್ರಕಾರ ನೂರಕ್ಕೆ 70 ಜನರ ಆಲೋಚನೆಗಳು, ನಿರ್ಧಾರಗಳು, ಅನಿಸಿಕೆಗಳು ಮಾಧ್ಯಮವನ್ನು ಅವಲಂಭಿಸಿವೆ ಅಥವಾ ಅವುಗಳ ಮೂಲ ಆಧಾರವೇ ಮಾಧ್ಯಮ. ಉದಾಹರಣೆಗೆ: ಇತ್ತೀಚಿನ ಅಣ್ಣಾ ಹಜಾರೆ ಹೋರಾಟ, ದೆಹಲಿಯ ರಾಜಕೀಯಕ್ಕೆ ಹೊಸ ಅರ್ಥ ಕಲ್ಪಿಸಿದೆ.

ಮಾಧ್ಯಮಗಳು ಇರುವ ಸಂಗತಿಯನ್ನು ಇದ್ದ ಹಾಗೇ ಹೇಳಬೇಕೆ ಹೂರತು, ಅವರ ಸ್ವಂತ, ವೈಯಕ್ತಿಕ ನಿರ್ಧಾರಗಳನ್ನು, ಊಹೆಗಳನ್ನು,ಅರ್ಥವಿಲ್ಲದ ಚರ್ಚೆಗಳನ್ನು ಮಾಡಬಾರದು. ಹಲವಾರು ಟಿ.ವಿ. ಮಾಧ್ಯಮಗಳ ಸುದ್ಧಿ ವಾಚಕರಿಗೆ, ಹೇಳುವವರು ಇಲ್ಲ, ಕೇಳುವವರು ಇಲ್ಲ. ಅವರೇ ನ್ಯಾಯಾಲಯದಂತೆ ವರ್ತಿಸುವುದು ಬೇಸರದ ಮತ್ತು ಗಂಭೀರವಾದ ಸಂಗತಿ.

ಚರ್ಚೆಗಳಲ್ಲಿ ವಿಷಯ ಮತ್ತು ಸಾರಾಂಶಗಳಿಗಿಂತ ಕೂಗಾಟ-ಆರ್ಭಟಗಳ ಮಾಡಿ ಜನರ ದಿಕ್ಕು ತಪ್ಪಿಸುವುದು, ನೈಜ ಸುದ್ಧಿಯನ್ನು ತಿರುಚುವುದು, ಸರ್ಕಾರ ಅಥವಾ ಯಾವುದೋ ಒಂದು ಸಂಸ್ಥೆಯನ್ನು – ಅಧಿಕಾರಿಯನ್ನು ಮುಜುಗರಕ್ಕೆ ಈಡು ಮಾಡುವುದೇ ಇಂದಿನ ಮಾಧ್ಯಮದ ಧ್ಯೇಯವಾಗಿ ಹೋಗಿದೆ.ಇದಕ್ಕೆ ಪರಿಹಾರ ಹುಡುಕುತ್ತಾ ಹೋದರೆ, ಪರಿಹಾರವೇ ಇಲ್ಲ. ಏಕೆಂದರೆ, ಮಾಧ್ಯಮಗಳಿಗೆ ಸರ್ಕಾರ ಕಡಿವಾಣ ಹಾಕಬೇಕು, ಕೋರ್ಟುಗಳು ಸ್ವಯಿಚ್ಚೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಅತೀ ವಿರಳ.

ನನ್ನ ಪ್ರಕಾರ ನಮ್ಮ ದೇಶದಲ್ಲಿ (ಪ್ರಜಾತಂತ್ರ) ಸರ್ಕಾರ ಅಂದರೆ ರಾಜಕೀಯ ಅಥವಾ ಸರ್ಕಾರದ ಮೂಲ ರಾಜಕೀಯ. ರಾಜಕೀಯಕ್ಕೆ ಮೊದಲ ಅವಶ್ಯಕತೆ ಮಾಧ್ಯಮ. ಹಾಗಾಗಿ ರಾಜಕೀಯ ಮುಖಂಡರುಗಳು (ಪ್ರಮುಖವಾಗಿ ಹಿಂದಿನ ಅಥವಾ ಮುಂದಿನ ಮಂತ್ರಿಗಳು) ಹಣ ಬಲದಿಂದಲೋ ಅಥವಾ ಇತರೆ ಬಲಗಳಿಂದ ಮಾಧ್ಯಮಗಳನ್ನು ಓಲೈಸುವುದು ಸರ್ವೇ ಸಮಾನ್ಯ

ವಾರ್ತೆಗಳನ್ನು ನೋಡಿದರೆ ಸಾಮಾನ್ಯ ಜ್ಞಾನ ಹೆಚ್ಚುತ್ತದೆ ಎಂಬ ಮಾತಿತ್ತು. ಆದರೇ, ಈಗ ಸುದ್ದಿ ಮಾಧ್ಯಮಗಳಿಂದ ತಪ್ಪು ತಪ್ಪು ಅಭಿಪ್ರಾಯಗಳು, ತಿರುಚಿದ ವಿಷಯಗಳು, ಇರುವ ಸತ್ಯಾಂಶಕ್ಕಿಂತ ಮಾಧ್ಯಮದ ಸೃಷ್ಠಿಯೇ ಹೆಚ್ಚು.

ಈ ಎರಡು ಪದಗಳು (ರಾಜಕೀಯ & ಮಾಧ್ಯಮ)  ಸರಿಯಾಗಿ ಕಾರ್ಯನಿರ್ವಹಿಸಿದರೆ ನಿಜವಾದ ಬದಲಾವಣೆ ಸಾಧ್ಯ. ಮಾಧ್ಯಮಗಳು ಇರುವ ಸಂಗತಿಯನ್ನು ಭಿತ್ತರಿಸಬೇಕೇ ಹೊರತು ತಮ್ಮ ಅಭಿಪ್ರಾಯಗಳನ್ನು ಮಂಡಿಸಬಾರದು. ರಾಜಕೀಯ ಮುಖಂಡರುಗಳು ನಿಜವಾಗಿಯೂ ಬೆಳೆಯಬೇಕೆಂದರೆ ಅದು ಅವರ ರಾಜಕೀಯ ಉದ್ದೇಶ ಮತ್ತು ಮಾಡುವ ಕಾರ್ಯದಿಂದ ಮಾತ್ರ ಸಾಧ್ಯ. ಮಾಧ್ಯಮಗಳನ್ನು ಓಲೈಸಿದರೆ ಇಂದಲ್ಲಾ ನಾಳೆ ಅದೇ ಮಾಧ್ಯಮ ಅವರಿಗೆ ಕುತ್ತಾಗಿ ಪರಿಣಮಿಸುವುದು. ಇದು ಸತ್ಯ

ವಿದ್ಯಾರ್ಥಿಗಳು, ಯುವಜನತೆ, ಪ್ರಜ್ಞಾವಂತರು ರಾಜಕೀಯ ವiತ್ತು ಮಾಧ್ಯಮಗಳ ನಿಜವಾದ ಪಾತ್ರ ಏನೆಂಬುದನ್ನು ಅರಿತು,ಇತರರಲ್ಲಿ ಜಾಗೃತಿ ಮೂಡಿಸಬೇಕೆಂಬುದು ನನ್ನ ಮನವಿ.

ಓಂಕಾರಯ್ಯ ಹೆಚ್.ಎಂ.

ಬೆಂಗಳೂರು

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!