ಅಂಕಣ

ಪೋಲೀಸ್ ಪುತ್ರನ ಮನದಾಳದ ಮಾತುಗಳಿವು

·         ಹೆಸರು:ಓಂಕಾರಯ್ಯ ಹೆಚ್.ಎಂ

·         ವಯಸ್ಸು &ಉದ್ಯೋಗ: 28 ವರ್ಷ,ಇಂಜಿನಿಯರ್ಬೆಂಗಳೂರು

·         ತಂದೆ: ಪುಟ್ಟಯ್ಯಹೆಚ್.ಎಂ

·         ಉದ್ಯೋಗ:ಪೋಲೀಸ್ ಮುಖ್ಯಪೇದೆ, ತುಂಗಾನಗರಠಾಣೆ, ಶಿವಮೊಗ್ಗ.

·         ತಾಯಿ:ವಿಜಯಾಂಬಿಕ,

·         ತಂಗಿ: ಓಂಶ್ರೀಹೆಚ್.ಎಂ. (Senior Consultant – Accenture, Bangalore)

(Weekend ಗೆ ಇಂದು ಶಿವಮೊಗ್ಗ ಬಂದಿರುವೆ, TVಯಲ್ಲಿ ಪೊಲೀಸ್ ಇಲಾಖೆಯ ಕುರಿತು ಚರ್ಚೆ ನೋಡಿನನ್ನ ಕಳೆದ 20 ವರ್ಷಗಳ ಅನುಭವ ನೆನೆದು ಅದನ್ನು ಹಂಚಿಕೊಳ್ಳುವ ಪ್ರಯತ್ನ, ಕೆಳಗಿನ ಎಲ್ಲಾ ಅಂಶಗಳುನನ್ನ ವೈಯಕ್ತಿಕ , ಇದಕ್ಕೂ ನನ್ನ ತಂದೆಗೂ ಯಾವುದೇ ಸಂಭಂದವಿಲ್ಲ. ಅಪ್ಪ ಮಾಮೂಲಿನಂತೆ ಡ್ಯೂಟಿಗೆಹೊಗಿದ್ದಾರೆ…..)

·         ಖಾಕಿ, ಲಾಠಿ, ಬೆಲ್ಟ್, ಶೂ, ಇವುಗಳು ನಮ್ಮ ಮನೆಯ ದೇವರು ಎಂದರೆ ತಪ್ಪಾಗಲಾರದು. ಏಕೆಂದರೆ, ಒಂದು ಬಾರಿ ಅಪ್ಪ ಗಡಿ-ಬಿಡಿಯಲ್ಲಿ ಶೂ ಹಾಕಿಕೊಂಡು ಮನೆಯೊಳಗೆ ಬಂದಾಗ ಅಮ್ಮ ಅದಕ್ಕೆ ಪ್ರತಿರೋದ ವ್ಯಕ್ತಪಡಿಸಿ ಅಪ್ಪಕೋಪದಲ್ಲಿ ಕೈಯಲ್ಲಿ ಇದ್ದ ಲಾಠಿ ಬೀಸಿ – ಇದೇ ಶೂ ಇಂದ ನಾವು ಅನ್ನ ತಿನ್ನುತ್ತಿರುವುದು ಎಂಬ ಸುಮಾರು 10 ವರ್ಷಗಳ ಹಿಂದಿನ ಮಾತನ್ನು ನಾನು ಸಾಯುವವರೆಗೂ ಮರೆಯಲ್ಲ.

·         ಬಾಲ್ಯದಲ್ಲಿ ಪೊಲೀಸ್ ಲಾಠಿ, ಬೆಲ್ಟ್ನ ರುಚಿ ಊರಿನ ಕಳ್ಳರಿಗಿಂತ ನಾನು & ನನ್ನ ತಂಗಿ ಹೆಚ್ಚುಪಡೆದಿದ್ದೆವು. (ತುಂಟ ಮಕ್ಕಳು – ಶಿಸ್ತಿನ/ಕೋಪದ ಅಪ್ಪ)

·         ನಂತರ ಸ್ವಲ್ಪ ದೊಡ್ಡವರಾದಗ ಶಿವಮೊಗ್ಗದಡಿ.ಎ.ಆರ್ ಕ್ವಾಟರ್ಸ್ ನಲ್ಲಿ ಅಪ್ಪ/ಅಮ್ಮಸಾಕಷ್ಟು ಪ್ರಯತ್ನ ಮಾಡಿ ಕ್ವಾಟರ್ಸ ಪಡೆದರು.

o   (ಇರುವ ಪೇದೆಗಳಿಗೆಲ್ಲಾ ಕ್ವಾಟರ್ಸಸಿಗುತ್ತದೆ ಎಂಬುದು ತಪ್ಪು ಕಲ್ಪನೆ, ಅದಕ್ಕೂಹಿರಿಯ ಅಧಿಕಾರಿಗಳ ಕಾಲು ಹಿಡಿಯಬೇಕು.ಅಮ್ಮ DYSP, SP ಅವರ ಬಳಿ ಹೋಗಿಮನವಿ ಮಾಡುತ್ತಿದ್ದದ್ದು ಇನ್ನು ನೆನೆಪಿದೆ)

·         P – 120, Police DAR Quarters, Shimoga.  ನಮ್ಮ ಆಗಿನ ಮನೆ. 4 ಜನರ ಕುಟುಂಬಕ್ಕೆ ಅದು ಗುಬ್ಬಿಯ ಗೂಡಿನಂತೆ. ಮನೆಗೆ ಒಬ್ಬ ಅತಿಥಿ ಬಂದರೂ ಮುಜುಗರ.ನಾನು PUC, ತಂಗಿ SSLC.

·          ಅಪ್ಪಂಗೆ ನಮ್ಮ Education ಅಂದರೆ ಕಷ್ಟಪಟ್ಟು Fees ಕಟ್ಟುವುದು ಮಾತ್ರ. ಏಕೆಂದರೆ ಅವರ ಬಳಿ TIME ಇರಲಿಲ್ಲ. ಅಮ್ಮನೇ ನಮಗೆಲ್ಲಾ. (POLICE WORKING HOURS 24*7)

·         ಹಬ್ಬ ಹರಿದಿನಗಳಲ್ಲಿ ನೆಮ್ಮದಿಯಾಗಿ ಅಪ್ಪನ ಜೊತೆ ಊಟ ಮಾಡಿದ್ದು ಬಹಳ ಕಡಿಮೆ. ಅಮ್ಮಂಗೆ ಅಪ್ಪ Duty ಹೋಗೊ ಮುಂಚೆ ಪೂಜೆನಾದರೂ ಮಾಡಬೇಕು ಎಂಬ ಆಸೆ.ಹಬ್ಬದ ಊಟ ಬಿಡಿ, ಪೂಜೆಗೂ ಸರಿಯಾಗಿಇರುತ್ತಿರಲಿಲ್ಲ. ಇದಕ್ಕೆ ಇಲಾಖೆಯಲ್ಲಿ ಹೇಳುವ ಹೆಸರುಹಬ್ಬದ ಬಂದೋಬಸ್ತ್.

·         Family Trip ಎಂಬುದು ನಮ್ಮ ಪೊಲೀಸ್ಕುಟುಂಬಗಳಿಗೆ ಅನ್ವಯಿಸುವುದಿಲ್ಲ. ಪ್ರತೀ ಭಾನುವಾರ ಅಪ್ಪಂಗೆ Roll Call and Parade.

·         DAR quarters ಪೊಲೀಸ್ಗ್ರೌಂಡ್ನಲ್ಲಿ ಆಗಾಗ ಹುತಾತ್ಮ ಪೊಲೀಸರ ಶವ ತಂದು ದೇಶದ ಧ್ವಜ ಹಾಕಿ, ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಮರ್ಪಿಸಿದಾಗ ನನಗೂ ಪೊಲೀಸ್ ಆಗುವ ಆಸೆ….

ಅಪ್ಪನ ಕೆಲವು ಮರೆಯಲಾಗದ ಮಾತುಗಳು,

ನಾವು ಇರದೇ ಇದ್ದರೆ ದೇಶ &ರಾಜ್ಯವು 24 ಗಂಟೆಗಳಲ್ಲಿ ಅಲ್ಲೋಲ ಕಲ್ಲೋಲ ಆಗುತ್ತದೆಎಂಬ ಹೆಮ್ಮೆಯ ಮಾತು.

 ಜೀತ ಎಂಬುದು ರೂಡಿಯಲ್ಲಿ ಇದೆಅಂದರೆ ಅದುನಮ್ಮ ಕೆಲಸವೇಎಂದು ಕೆಲಸದ ಒತ್ತಡದ ಮಾತು.

ಜೀವನದಲ್ಲಿ ಏನು ಬೇಕಾದರೂ ಆಗು, ಪೊಲೀಸ್ ಆಗಬೇಡಎಂದು ಮಗನಿಗೆ ಸಲಹೆ ನೀಡಿದ್ದು.

 ನೀನು ತಪ್ಪ ಮಾಡಬೇಡ ಜನ ನಗುತ್ತಾರೆ ಏಕೆಂದರೆ ನೀನು ಪೊಲೀಸನ ಮಗಎಂದು ಎಚ್ಚರಿಕೆ ಮಾತು.

·      ಅಪ್ಪನಿಗೆ ಅವರ ಇಲಾಖೆಯ ಮೇಲೆ ನಮ್ಮೆಲ್ಲರಿಗಿಂತಲೂ ಹೆಚ್ಚು ಪ್ರೀತಿ, ಗೌರವ. ಕೆಲವುನಿಷ್ಠಾಂತ/ಬುದ್ಧಿವಂತ SI ಗಳ ಅಡಿಯಲ್ಲಿ ಕೆಲಸ ಮಾಡಿರುವ ಹೆಮ್ಮೆ.

·     ಅದರಲ್ಲಿ ಕೆಲವರು – ಗವಾಂಕರ್,ಧರಣೇಶ್, ಶಣ್ಮುಮುಗಂ (ಈಗ PROMOTEಆಗಿ ಉನ್ನತ ಹುದ್ದೆಯಲ್ಲಿದ್ದಾರೆ, ಅವರಲ್ಲಿ ಧರಣೇಶ್, ಎಸಿಪಿ, ಬೆಂಗಳೂರು ನಮಗೆ ಸೂಕ್ತಸಲಹೆ ನೀಡಿ ಪ್ರೋತ್ಸಾಹಿಸಿದವರು. Dharanesh – A Simple man with high values & ethics, A rare gem in Police Dept)

·    ಅಪ್ಪ ಕೆಲವು ಅನಾಥ ಶವಗಳನ್ನು ಮಣ್ಣಿಗೆ ಸೇರಿಸಿದ್ದೂ ನೆನಪಿದೆ, ಅಮ್ಮನಿಗೆ ಅಂದು ಏಲ್ಲಿಲ್ಲದ ಕೋಪ.

·    ಅಪ್ಪನ ಕೋಪ-ಒತ್ತಡಗಳ ಪ್ರತಿಬಿಂಬ ಮನೆಯಲ್ಲಿ ಆಗಾಗ ನಾನು, ತಂಗಿ, ಅಮ್ಮನೂ ಅನುಭವಿಸಿದ್ದೇವೆ.

·  ಅಪ್ಪ ಕರ್ತವ್ಯದಲ್ಲಿದ್ದಾಗ ಅನಾರೋಗ್ಯಗೊಂಡು 2-3 ಬಾರಿ ಶಿವಮೊಗ್ಗದ Meggan & Nanjappa hospital ಅಲ್ಲಿ admit ಆದಾಗ ಬಿಲ್ ಕಟ್ಟಲು ಹಣವಿಲ್ಲದೇ,ಅವರ Dept ನ ಕೆಲಸಕ್ಕೆ ಬಾರಾದ health Scheme ನೆನೆಸಿಕೊಂಡರೆ ಕಣ್ಣಲ್ಲಿ ನೀರುತುಂಬುತ್ತವೆ. (Delay in getting authorization letter from SP office when my dad was admitted in hospital)

 

ಹಂಚಿಕೊಳ್ಳಲೇಬೇಕಾದ ಕೆಲವು ವಿಷಯಗಳು

·   ಪೊಲೀಸ್ ಪೇದೆಗಳ ಒತ್ತಡ (Duty Hours)ಕಡಿಮೆ ಮಾಡಿ.

·   ಆರೋಗ್ಯ ಯೋಜನೆ, ಯೋಗ ಮತ್ತು ಧ್ಯಾನವನ್ನು   ಕಡ್ಡಾಯ ಮಾಡಿ.

·   ಕಾನ್ಸ್ಟೇಬಲ್’ಗಳಿಗೆ ಮತ್ತವರ ಕುಟುಂಬಕ್ಕೆ ಕೌನ್ಸೆಲಿಂಗ್

·  ಪೊಲೀಸ್ ಮಕ್ಕಳ ವಿದ್ಯಭ್ಯಾಸಕ್ಕೆ ಸೂಕ್ತ ಪ್ರೋತ್ಸಾಹ (ಅಪ್ಪನ ಒಂದೇ ಕನಸು ಅಂದರೆನಾನು & ನನ್ನ ತಂಗಿಗೆ ಶಿಕ್ಷಣದ ಕೊರತೆ ಆಗದಂತೆ ನೋಡಿಕೊಳ್ಳುವುದು – Poor Salary structure in Police Dept)

·  ಆಧುನಿಕ ಶಸ್ತ್ರಾಸ್ತಗಳನ್ನು ನೀಡಿ. ಈಗ ನನ್ನ ತಂದೆಗಿರುವ ಶಸ್ತ್ರಾಸ್ತ ಬ್ರಿಟೀಷರ ಕಾಲದ ಮನಬಾರದ್ದು, ಅದರ ಟ್ರಿಗರ್ ಸರಿಯಾಗಿ ಕೆಲಸ ಮಾಡುತ್ತದೆಂದೂ ನನಗೆ ಧೈರ್ಯವಿಲ್ಲ.

·   ಇಲಾಖೆಯ  ಎಪ್ಪತ್ತು ಶೇಕಡಾ ನೀತಿಗಳು ಬ್ರಿಟೀಷರ ಕಾಲದ್ದು, ಇದನ್ನು ಬದಲಿಸಿ.

·   ರಾಜಕೀಯದವರು ಪೊಲೀಸರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುವುದನ್ನು ಕಂಡಿದ್ದೇನೆ.

·  ನಮ್ಮ ಸಮಾಜ ಮತ್ತು ಮಾಧ್ಯಮದವರು –ಪೊಲೀಸರು ಕಾನೂನು ಸುವ್ಯವಸ್ತೆ ಕಾಪಾಡಲು ಲಾಠಿ ಬೀಸಿದರೂ ತಪ್ಪು, ಬೀಸದಿದ್ದರೆ ಪೊಲೀಸರು ನಾ – ಲಾಯಕ್ ಎಂಬ ಬಿರುದುನೀಡುವುದು.

·  ಅಪ್ಪನಿಗೆ Retirement ಗೆ ಇನ್ನು 4 ವರ್ಷಗಳ ಅವಧಿ ಇದೆ. ಕಳೆದ 25 ವರ್ಷಗಳ ಸೇವೆಯ ಕೊಡುಗೆ ಇತ್ತಿಚೆಗೆ ಅವರ ಕಾಲುನೋವು, ಮಾನಸಿಕ ಮತ್ತು ರಕ್ತದ ಒತ್ತಡ.

·   ಇಂದು ನಾನು ನನ್ನ ತಂಗಿ ಬೆಂಗಳೂರಿನಲ್ಲಿ,ಅಪ್ಪ – ಅಮ್ಮ ಶಿವಮೊಗ್ಗದಲ್ಲಿ ನೆಮ್ಮದಿ-ಸಂತೋಷದಿಂದಿರುವುದಕ್ಕೆ ಕಾರಣ ನಮ್ಮಪೊಲೀಸ್ ಇಲಾಖೆ

·   ಪ್ರತೀ ಬಾರಿ ಅಪ್ಪನ ಠಾಣೆಗೆ ಹೋದಾಗ “Do I Look Smart” / “Am I looking Smart”ಎಂಬ ಠಾಣೆಯಲ್ಲಿರುವ ಕನ್ನಡಿ (Mirror)ಇಂದಿಗೂ ನನಗೆ ಕತೂಹಲ ಹುಟ್ಟಿಸುತ್ತದೆ.

·   ಬೆಂಗಳೂರಿನ ಟ್ರಾಫಿಕ್ ನಲ್ಲಿ, ಬಿಸಿಲು-ಮಳೆಯಲ್ಲಿ/ಗಲಭೆ/ಸಮಾರಂಭಗಳಲ್ಲಿ ಪೊಲೀಸರನ್ನು ನೋಡಿದಾಗ ಅಪ್ಪನ ನೆನಪು. (ನನ್ನ ಮತ್ತು ಸ್ನೇಹಿತರ DL check ಮಾಡಲು ಪೊಲೀಸರು ಹಿಡಿದಾಗಲೆಲ್ಲಾ ನಾನು ಪೊಲೀಸ್ಮಗನೆಂದು ಸ್ವಲ್ಪ ಮರ್ಯಾದೆ ಜೊತೆಗೆ ನಮ್ಮಮಕ್ಕಳೇ ತಪ್ಪು ಮಾಡಿದರೆ ನಾವು ಬೇರೆಯವರಿಗೆ ಏನು ಹೇಳೋದು ಎಂದು ಬುದ್ದಿಮಾತು ಹೇಳಿದಂಡ ಕಟ್ಟದೆ ಬಿಟ್ಟಿರುವುದು ನಿಜ).

·   ಇಷ್ಟೆಲ್ಲದರ ನಡುವೆಯೂ ನನಗೆ ಅಪ್ಪ ಮತ್ತುಅವರ ಇಲಾಖೆಯ ಮೇಲೆ ಗೌರವ. ಏಷ್ಟೇ ಆಗಲಿಪೊಲೀಸ್ ಠಾಣೆ ಎಂಬುದು ನಮಗೆ ಎರಡನೇಮನೆ.

Omkaraiah H M

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!