ಅಂಕಣ

ಅಮರ ಮಧುರ ಪ್ರೇಮ..

ಅವನ ಕಣ್ಣಲ್ಲಿ ನೀರಿತ್ತು, ಆಕಾಶವೇ ಮೈಮೇಲೆ ಬಿದ್ದ ಸೋಲಿತ್ತು.ಅದೇನಾಯಿತೋ ಅವತ್ತು ಸಪ್ತ ಸಾಗರ ಜೊತೆಗೂಡಿ ನಡೆಯೋಣವೆಂದು ಹೇಳಿದವಳು ಭಾವಗಳ ಸಮುದ್ರದಲ್ಲಿ ಇವನನ್ನು ಬಿಟ್ಟು ಹೋಗಿಬಿಟ್ಟಿದ್ದಳು…. ಗಾಢವಾಗಿ ಅವಳನ್ನ ಹಚ್ಚಿಕೊಂಡಿದ್ದ ಆತ ಮರು ಮಾತಾಡದೆ ಬಂದಿದ್ದ. ಅವನ Whats app ಸ್ಟೇಟಸ್ ಅವನ ಎಲ್ಲ ನೋವನ್ನು ವಿವರಿಸುಂತಿತ್ತು   ”  All my life, I have dreamt of walking on the beach, holding your hands, watching the waves pass by and now, when I am finally standing on a beach, watching the waves. All I have to do is ” ” WALK ALONE” …….

 ಅವರ ನಡುವೆ ಅದೇನಾಯಿತೋ ….ಅವಳು ಸಾಗರ ದಡದಲ್ಲಿ ತಾವಿಬ್ಬರೂ ಕೂಡಿ ಕಟ್ಟಿದ್ದ ಮರಳಿನ ಮನೆಗೆ ಸುನಾಮಿಯಾಗಿ ಅಪ್ಪಳಿಸಿದ್ದಳು.. “ನಿನ್ನ ಬದುಕಿನಿಂದ ದೂರ ಹೋಗುತ್ತಿದ್ದೇನೆ “ಎಂದು ಒಂದಿನಿತೂ ಭಾವನೆಯಿಲ್ಲದೆ ಅವನಿಗೆ ಹೇಳಿ ಅಷ್ಟು ವರ್ಷದ ಪ್ರೀತಿಗೆ ಅಂತ್ಯ ಹಾಡಿದ್ದಳು…

“ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತೇನೆ “ಎಂದು ಆಣೆ ಪ್ರಮಾಣ ಮಾಡಿಕೊಂಡವರು ಅದ್ಹೇಗೆ ದೂರವಾಗುತ್ತಾರೋ…ಭಾವನೆಗಳ ಕೊರತೆಯೋ….ಆಯ್ಕೆ  ತಪ್ಪಾಯಿತೇನೋ ಎನ್ನುವ ಕೊರಗೋ…ಅಥವಾ ಇಬ್ಬರಲ್ಲಿ ಹೊಂದಾಣಿಕೆಯಾಗುವುದಿಲ್ಲ ಎನ್ನುವ ಕಾರಣವೋ…ಅಥವಾ ಪರಸ್ಪರ ವಿರುದ್ಧ ಗುಣಗಳೋ….ಅಥವಾ ಈಗೋ ಸಮಸ್ಯೆ…..ಅವನು ಅಥವಾ ಅವಳು ತಾನು ಹೇಳಿದ ಹಾಗೆಯೇ ನಡೆಯಬೇಕು ಎನ್ನುವ ಕೆಟ್ಟ ಹಠವೋ… ಹೀಗೇ ಏನಾದರೊಂದು ನೆಪ….ಬೇರೆಯಾಗಲು..ಆದರೆ ಇದು ಅವರಿಬ್ಬರ ಕಥೆಯಲ್ಲ ಅದು ನಮ್ಮ ನಿಮ್ಮೆಲ್ಲರ ಬಾಳಿನ ಕನ್ನಡಿಯು ಹೌದು.ಇಲ್ಲಿ ಹುಡುಗಿ ಹಾಗೆ ಮಾಡುತ್ತಾಳೆ….ಅಥವಾ ಹುಡುಗ ಹಾಗೆ ಮಾಡುತ್ತಾನೆ ಅಂತ ಹೇಳಲಾಗದು…ಇಬ್ಬರೂ ಮಾಡಬಹುದು…

  ಇಂದಿನ ದಿನಗಳಲ್ಲಿ ತಮ್ಮ ಪ್ರೀತಿ ಪಾತ್ರರನ್ನು , ಜೀವನ ಸಂಗಾತಿಗಳನ್ನು ಸಮಾನ ವಯಸ್ಕರಲ್ಲಿ ಹುಡುಕುವ ಪ್ರಯತ್ನ ನಡೆಯುತ್ತಲಿದೆ…. ತಪ್ಪಿಲ್ಲ ಒಳ್ಳೆಯದೆ, ಆದರೇ ಇಂತಹ ಪ್ರೀತಿ-ಪ್ರೇಮ, ಸುತ್ತಾಟ ಮತ್ತೊಬ್ಬರ ಮೇಲಿನ ಸೇಡಿಗೂ, ಇನ್ನೊಬ್ಬರ ತೋರುತನಕ್ಕೋ, ವಯಸ್ಸಿನ ಜೂಜಾಟಕ್ಕೋ ಸಿಮಿತವಾಗುತ್ತಿರುವ  ನಿದರ್ಶನಗಳು ಹೆಚ್ಚಾಗುತ್ತಿವೆ.

  ಸಂಬಂಧಗಳು ಹೊಸದಿರಲಿ-ಹಳೆಯದಿರಲಿ, ಸುಖ-ದುಖಗಳು ಬಂದು ಹೋಗುತ್ತವೆ… ಆದರೆ  ನಾವು ಅಹಿತದ ಸನ್ನಿವೇಶಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದೇವೆ , ಇದೆ ಸ್ವಭಾವವೇ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ.

    ಪ್ರೀತಿ-ಪ್ರೇಮ,ಸಂಬಂಧಗಳಲ್ಲಿ ತೊಂದರೆಗಳು ಬರುವುದು ಸಾಮಾನ್ಯ… ಅದನ್ನು ಎದುರಿಸಲು ಬೇಕಾಗಿರುವುದು ತಾಳ್ಮೆ, ನಂಬಿಕೆ, ಮನೋಶಕ್ತಿ. ಇವಕ್ಕೆಲ್ಲ ಮಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಡುವಂತ ಸಿದ್ದತೆ ಬೇಡ, ಬಹಳಷ್ಟು ಸಲ ಕೊರತೆಗಳು, ತೊಂದರೆಗಳು, ಸಂಬಂಧಗಳಲ್ಲಿ ತಪ್ಪು ತಿಳುವಳಿಕೆ ಕಾಣಿಸಿಕೊಳ್ಳೋದು ಇಂತಹ ಮಾನಸಿಕ ಸ್ಥಿತಿಗಳು ಕ್ಷೀಣಿಸಿದಾಗ.

  ವ್ಯಕ್ತಿಗಳ ನಡುವೆ ಬಗೆಹರಿಸಲಾಗದಂತಹ  ಭಿನ್ನಾಭಿಪ್ರಾಯಗಳು, ಸಿಟ್ಟು ಇರುವುದಕ್ಕೆ ನಿಜ ಕಾರಣಗಳಿರಬಹುದು… ಆದರೆ ಅಂತಹ ಸಮಯದಲ್ಲಿ ಪ್ರೀತಿ – ವಾತ್ಸಲ್ಯ, ಮನೋಬಲ ಬಳಕೆಯಾಗುತ್ತಿಲ್ಲ….ಅಲ್ಲಿ ತಾಂಡವ ಆಡುತ್ತಿರುವುದು ಸ್ವಭಾವ ಮತ್ತು ಸ್ವಾಭಿಮಾನ, ಸೇಡುಗಳ ಗದ್ದಲವಷ್ಟೇ..

ಜೊತೆಗಿದ್ದ ತಕ್ಷಣ ಎಲ್ಲವೂ ಸರಿ ಇದೆ ಅಥವಾ ಸರಿ ಹೋಗುತ್ತೆ ಅನ್ನೋದು ಶುದ್ದ ತಪ್ಪು, ಸಂಬಂಧಗಳನ್ನು ಪೋಷಿಸದಿದ್ದರೆ ಅವಸಾನ ಖಂಡಿತ. ಮುಖ್ಯವಾಗಿ ಇಂದಿನ ಯುವ ಜನರು ತಮ್ಮ ಆಸೆ, ಆಸಕ್ತಿ, ಜೀವನ,

ಹಣ ಗಳಿಕೆಗೆ ಮಹತ್ವ ನೀಡುತ್ತಿರುವುದು ಎಳೆಯಂತಹ ತೊಂದರೆಗಳನ್ನು ಬೆಟ್ಟವಾಗಿ ಮಾರ್ಪಡಿಸುತ್ತಿವೆ…

 ಸರಳವಾಗಿ ಹೇಳಬೇಕೆಂದರೆ ನಾವು ಪ್ರತಿಯೊಂದು ವಿಷಯದಲ್ಲೂ  ಸ್ಪರ್ಧೆ, ಪೈಪೋಟಿ, ಸೋಲು ಗೆಲುವಿನ ಮೂಲಕ ವ್ಯಕ್ತಿ, ವಿಶ್ವಾಸಗಳನ್ನು ಅಳೆಯುವಂತಹ ಒಂದು ದುರ್ಗುಣ ನಮ್ಮೆಲ್ಲರಲ್ಲಿಯೂ ಬೇರೂರಿ ಎಲ್ಲ ಸಂಬಂಧಗಳನ್ನು ಹಾಳುಮಾಡಿಬಿಟ್ಟಿದೆ

ನಾ ಕಂಡುಕೊಂಡಂತೆ ಸಂಬಂಧಗಳಲ್ಲಿ ಕೆಲವೊಂದು ಉತ್ತಮ ವಿಷಯಗಳನ್ನು ನೆನಪಿಟ್ಟರೆ ಸಾಕು…..ಪ್ರೀತಿ ಎಂಬುದು ತುಂಬಾ ಆಹ್ಲಾದಕರವಾಗಿರಬೇಕೇ ಹೊರತು ಯಾವತ್ತೂ ಅದು ಹೊರೆಯಾಗಬಾರದು. ಪ್ರೀತಿಲಿ ಯಾವತ್ತು ಉಸಿರುಗಟ್ಟುವಂತಹ ವಾತಾವರಣ ಸೃಷ್ಟಿಯಾಗಬಾರದು, ಪ್ರೀತಿ ಎರಡು ಹಕ್ಕಿಗಳು ನೀಲಿ ಆಕಾಶದಲ್ಲಿ ಸ್ವಚ್ಚಂದವಾಗಿ ಜೊತೆಗೆ ಹಾರಡುವಂತಿರಬೇಕು.

ಗೆಳೆಯ ಗೆಳತಿಯರೆ  ನಾವು ಬದುಕಿರುವುದೇ ಖುಷಿಯಿಂದ ಜೀವಸಲಿಕ್ಕೆ. ನೀವು ಖುಷಿಯಿಂದ ಇರಿ , ನಿಮ್ಮ ಸಂಗಾತಿಗಳನ್ನು ಖುಷಿಯಿಂದ ಇರಲು ಬಿಡಿ. ನೆನಪಿರಲಿ girlfriend /boyfriend ಸಿಕ್ಕ ತಕ್ಷಣ ಇಡಿ ಜಗತ್ತಿನ ಸಂಪರ್ಕ ಬಿಟ್ಟು  “ಆಡಂ-ಈವ್” ಇಬ್ಬರೇ ಇದ್ದೇವೆಂದು ಜೀವಿಸುವುದು ತಪ್ಪು, ಹಾಗೆ ಜೀವಿಸು ಅಂತ ನಿಮ್ಮ ಸಂಗಾತಿಯನ್ನು ಪೀಡಿಸುವುದು ಶುದ್ದ ತಪ್ಪು. ನೀವಿಬ್ಬರು ಜೊತೆಗೂಡುವ ಮೊದಲು ನಿಮಗೊಂದು “friends circle ” ಹಾಗೂ ನಿಮ್ಮದೇ ಆದ ಖುಷಿಯ ಸಾಮ್ರಾಜ್ಯವಿತ್ತು  ಅದನ್ನು ಕಳೆದುಕೊಳ್ಳಲು ಯಾವತ್ತೂ ಪ್ರಯತ್ನಿಸಬೇಡಿ.

 ಸಂಗಾತಿಯ ಹೊರತುಪಡಿಸಿ ನಿಮಗೆ ಇನ್ನೂಂದು ಜಗತ್ತಿದೆ ನಿಮ್ಮದೇ ಸ್ನೇಹಿತರ, ಪಾಲಕರ ಜೊತೆಗೂ ಕಾಲ ಕಳೆದರೆ ಅದೂ ಒಂದು ರೀತಿಯ ಖುಷಿ. ನಾವು ಬೆಳೆಯುತ್ತ ಪರಿಸ್ಥಿತಿಯ ಪಾಲನೆಗೂ, ಕೆಲಸದ ಒತ್ತಡಕ್ಕೊ ನಾವು  ನಮ್ಮ parents ಜೊತೆ ಕಾಲ ಕಳೆಯುದನ್ನೇ ಕಡಿಮೆ ಮಾಡಿ ಬಿಟ್ಟಿದ್ದೇವೆ.ಇದನ್ನು ನೆನಪಿಡಿ… ”We are so busy in growing up, we often forget they are also growing old.”

  ಒಂದಂತೂ ಸತ್ಯ … ನಾವು ಖುಷಿಯಾಗಿದ್ದರೆ ನಮ್ಮ ಸಂಬಂಧಗಳು ಗಟ್ಟಿಯಾಗುತ್ತಾ ಹೋಗುತ್ತವೆ. ನಾನು ಎಷ್ಟೋ ಸನ್ನಿವೇಶಗಳನ್ನು ನೋಡಿದ್ದೇನೆ ಹುಡುಗ/ಹುಡುಗಿ ಸಿಕ್ಕ ತಕ್ಷಣ ಎಷ್ಟೋ ಫ್ರೆಂಡ್’ಗಳು ನಮ್ಮನ್ನ ಅವರ contact list ನಿಂದ ಡಿಲೀಟ್ ಮಾಡೋವಷ್ಟು ಲೆವೆಲ್’ಗೆ ಹೋಗಿದ್ದು. ನೆನೆಪಿರಲಿ ಸಂಬಂಧಗಳು ಮರದ ಕೊಂಬೆಗಳಿದ್ದಂತೆ ಒಂದು ಕೊಂಬೆ ಕಡಿದು ಇನ್ನೊಂದು ಕೊಂಬೆ ಬೆಳೆಸಲು ಪ್ರಯತ್ನಿಸುವುದು ಮರಕ್ಕೆ ಮಾರಕ.

  ಜೀವನದಲ್ಲಿ ಯಾವುದು 1೦೦% perfect ಇರುವುದಿಲ್ಲ. ದೂರದರ್ಶನದಲ್ಲಿ ಬರುವ “Dettol hand wash “ಸಹ 99.99 % ಕೀಟಾಣುಗಳನ್ನು ಮಾತ್ರ ತೆಗೆಯಿತ್ತೆ. ಹಾಗೆಯೇ ನಾವು ನಮ್ಮ ಬಳಸಂಗಾತಿಯಲ್ಲಿ ಎಲ್ಲವೂ 1೦೦% ಇರಬೇಕೆಂದು ನಿರೀಕ್ಷಿಸುವುದು ತಪ್ಪು. “Mostly we will get 100% only in school exam not in any other phase of our life” ಈ ಸತ್ಯ ನೆನಪಿದ್ದರೆ ಸಾಕು ..ಜೀವನವೆಂಬ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ಪಡೆದಂತೆ.

  ಒಂದು ಮುಖ್ಯವಾದ ವಿಷಯ…”  Not all the people in the world are same, people are different, everyone live in their own world” ಅವರಿಗೆ ಅವರದೇ ಆದ ನ್ಯೂನತೆಗಳು, ಅವರದೆ ಆದ ಆಲೋಚನೆಗಳಿರುತ್ತವೆ , ಎಲ್ಲರೂ ನಾವು ಇದ್ದ ಹಾಗೆ ಇರಬೇಕೆಂದರೆ ಸಂಬಂಧ ಉಸಿರುಗಟ್ಟಿ ಕೊಳೆತು ಹೋಗುತ್ತದೆ. ಈ ಜಗತ್ತಿನಲ್ಲಿ ಪರಿಪೂರ್ಣವಾದುದು ಏನು ಇಲ್ಲ.. ಇರುವ ಅಪೂರ್ಣತೆಯಲ್ಲೇ ಪರಿಪೂರ್ಣತೆ ಹುಡುಕುವುದೇ” ನಿಜವಾದ Love & ನಿಜವಾದ relationship “

ಹಾಗೆಯೇ ಸಂಬಂಧದಲ್ಲಿ ನಟನೆ ಬೇಡ…”ನಾನು ಹಾಗೆ…ನಾನು ಹೀಗೆ..ನಾನು ಹಣವಂತ/ತೆ…..ನನ್ನ ಗುಣ ಹೀಗೆ…ಯಾವ ಕೆಟ್ಟ ದುರಭ್ಯಾಸ ಇಲ್ಲ….”ಹೀಗೇ ಇಲ್ಲದಿರುವುದನ್ನು ಹೇಳಿಕೊಳ್ಳುವ ನಾಟಕ ಬೇಡ…ಅದು ನಿಜವಿದ್ದರೆ ಉತ್ತಮ…ಒಂದು ವೇಳೆ ನೀವು ಸುಳ್ಳು  ಹೇಳಿದ್ದೀರಿ ಎಂದು ನಿಮ್ಮ ಸಂಗಾತಿಗೆ ತಿಳಿದರೆ ಅವರು ನಿಮ್ಮ ಮೇಲೆ ಕೊನೆಯ ತನಕ ನಂಬಿಕೆ ಕಳೆದುಕೊಂಡುಬಿಡುವ ಸಾಧ್ಯತೆ ಇದೆ..ನಿಜವನ್ನೇ ಹೇಳಿ…ನಿಮ್ಮಲ್ಲಿ ಕೆಟ್ಟ ಗುಣಗಳಿದ್ದರೆ ತಿದ್ದಿಕೊಳ್ಳಿ..ಈ ಮೊದಲು ಸುಳ್ಳು  ಹೇಳಿದ್ದರೆ ಅವರಿಗೆ ತಿಳಿಯುವ ಮೊದಲೇ ಸುಳ್ಳು ಹೇಳಿದ್ದೆ ಎಂದು ಒಪ್ಪಿಕೊಂಡುಬಿಡುವುದು ಉತ್ತಮ…ಸಂಬಂಧವೊಂದರ ಮೂಲ ಬುನಾದಿ “ರಿಯಾಲಿಟಿ “, ಏನಿದೆಯೋ ಅದನ್ನೇ ಹೇಳುವುದು ಮತ್ತು ಒಪ್ಪಿಕೊಳ್ಳುವುದು. Be yourself…

 ಸಂಬಂಧದಲ್ಲಿ ನಂಬಿಕೆ ಮತ್ತು ತಾಳ್ಮೆ  ಬಹು ಮುಖ್ಯವಾಗಿರುತ್ತವೆ.” ನಂಬಿ ಕೆಟ್ಟವರಿಲ್ಲವೋ ಮನುಜ “ಎಂದು ಹಿರಿಯರು ಹೇಳಿರುವುದು ನಿಜವೇ. ನಿಮ್ಮ ಸಂಗಾತಿಯನ್ನು  ಪ್ರತಿಯೊಂದು ವಿಷಯದಲ್ಲೂ ಅನುಮಾನಿಸುವುದು ಬೇಡ , ಒಮ್ಮೆ ಸಂಪೂರ್ಣ ನಂಬಿ ನೋಡಿ ಜಗತ್ತು ಎಷ್ಟೂ ಚೆಂದವಾಗಿ ಕಾಣುತ್ತೆ ಅಂತ. ಯಾರಿಗೆ ಗೊತ್ತು… ನಾಳೆ ಏನಾಗುತ್ತೋ ಅಂತ, ಆದರೂ ದಿನ ಮಲಗುವಾಗ ನಾಳೆ ಎದ್ದೇ ಏಳುತ್ತೇವೆ ಎಂದು ಜೀವನೋತ್ಸಾಹದಿಂದಿರುವುದು ಆ ದೇವರ ಮೇಲಿನ ಒಂದು ಸಣ್ಣ ನಂಬಿಕೆಯಿಂದಷ್ಟೇ. ತಾಳ್ಮೆ ಇರಲಿ….ಏನೋ ಒಂದು ಮನಸ್ತಾಪವಾದಾಗ, ಜಗಳವಾದಾಗ ದಿಢಿರ್ ನಿರ್ಧಾರ ಬೇಡಾ, ಕಾಯಿರಿ….ಜೀವನ ಇಂದೋ-ನಾಳೆನೋ ಸರಿ ಹೋಗುತ್ತೆ ಅನ್ನೋ ಆಶಾಭಾವ ಇರಲಿ. ನೆನಪಿರಲಿ ಅದೇ ಸಂಗಾತಿಯನ್ನು ಪಡೆಯಲು ಹಿಂದೆ ನೀವು  ಎಷ್ಟು ತಾಳ್ಮೆಯಿಂದ, ಪ್ರೀತಿಯಿಂದ ಕಾದಿದ್ದಿರಿ ಅಂತ. ಯಾವತ್ತು ಸಿಟ್ಟಿನ ಕೈಗೆ ಬುದ್ದಿ ಕೊಡದಿರಿ, ನೀವು ಆ ಕ್ಷಣದಲ್ಲಿ ಏನೇ ಮಾಡಿದರು ಹಾನಿಯಾಗುವದು ನಿಮಗೆ…ಹಾಗೆಯೇ ಒಂದು ಪ್ರೀತಿಯನ್ನು ನನ್ನದು ಎಂದುಕೊಳ್ಳುವುದಕ್ಕೆ ಮುಂಚೆ ಯೋಚಿಸುವುದು ಉತ್ತಮ…ಆ ಪ್ರೀತಿಯನ್ನು ನನ್ನ ಕೊನೆಯ ಗಳಿಗೆಯವರೆಗೂ ಉತ್ತಮವಾಗಿ ನಾನು ಬಾಳಿಸಬಲ್ಲೆನೇ…? ಎಂದೊಮ್ಮೆ  ಪ್ರಶ್ನಿಸಿಕೊಳ್ಳುದು ಉತ್ತಮ..ಹೇಗೋ ನನಗೆ ಅವನು ಅಥವಾ ಅವಳು ನನಗೆ ಸಿಕ್ಕರೆ ಸಾಕು ಎನ್ನುವ ಮನೋಭಾವನೆ ಬೇಡ..ನಾಳೆ ವ್ಯಕ್ತಿತ್ವಗಳು ಹೊಂದಾಣಿಕೆಯಾಗದೇ ಇರಬಹುದು…ಆಗ ಈ ಬ್ರೇಕ್’ಅಪ್ ಎನ್ನುವ ತಲೆನೋವು ಶುರುವಾಗಬಹುದು..ಹೃದಯದ ಭಾವನೆಗಳು ಚಿಲ್ಲಾಪಿಲ್ಲಿಯಾದರೆ ಒಂದುಗೂಡಿಸುವುದು ಕಷ್ಟ..ಒಂದು ಉತ್ತಮ ಬಾಂಧವ್ಯ ನಮ್ಮದಾಗಲು ಅದನ್ನೊಪ್ಪಿ ಅಪ್ಪಿಕೊಳ್ಳುವ  ಮುನ್ನ ಒಂದು ಮುಂದಾಲೋಚನೆ ಇರಲಿ …ಆಗ ಜೀವನ ಪರ್ಯಂತ ಮನಮೆಚ್ಚಿದ ಸಂಗಾತಿಯೊಡನೆ “ಅಮರ ಮಧುರ ಪ್ರೇಮ…” ಎಂದು ಪ್ರೇಮಗೀತೆ ಹಾಡಬಹುದು ಎನ್ನುವುದು ನನ್ನ ಅಭಿಪ್ರಾಯ …

ಮಾಲತೇಶ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!