ಅಂಕಣ

ವಿಶ್ವಗುರು

ಗುರು ಅಂದರೆ ಮಾರ್ಗದರ್ಶಕ, ಯಶಸ್ಸಿನ ಸರಿಯಾದ ದಾರಿತೋರಿಸುವವನು, ಸಕಲ ಜ್ಞಾನವನ್ನು ಬೋಧಿಸುವವ.

ಗುರುವಿಗೇ ಇಷ್ಟೊಂದು ಅರ್ಥವಿರುವಾಗ ಅಬ್ಬಾ “ವಿಶ್ವ ಗುರು” ಎಂದರೆ…! ವಿಶ್ವವನ್ನೇ ಮುನ್ನೆಡೆಸುವವನು ಹೌದು ವಿಶ್ವವನ್ನ ಸರಿದಾರಿಯಲಿ ಮನುಕುಲದ ಎಲ್ಲೆ ಮೀರದಂತೆ ಸಾಗಿಸುವವನು , ಆದರೆ ಈ ವಿಶ್ವಗುರು ಒಬ್ಬ ವ್ಯಕ್ತಿ ಆಗಿರಲು ಸಾದ್ಯವೇ ಇಲ್ಲ , ಅದು ವಿವಿಧ ಸಂಸ್ಕೃತಿಯ ಸಾಗರ ಜಾತ್ಯಾತೀತತೆಯ ಆಗರ ಸಕಲ ಧರ್ಮಗಳ ಸರೋವರ, ಅದೊಂದು ಸಂಘಟಿತ ದೇಶವಾಗಿದ್ದರೆ ಮಾತ್ರ ಅದು ವಿಶ್ವಗುರುವಿನ ಸ್ಥಾನಕ್ಕೇರಲು ಅರ್ಹ.

ಹಾಗಾದರೆ ಯಾವುದಾದರೂ ದೇಶ “ವಿಶ್ವಗುರು”ವಾಗಲು ಅರ್ಹವಿದೆಯ?

ಹೆಮ್ಮೆಯಿಂದ ಹೇಳುತ್ತೇನೆ ಹೌದು, ಅದು ನನ್ನ ಭಾರತ

ನನ್ನ ಭಾರತ ಎಂದೋ ಸಾವಿರಾರು ಶತಮಾನಗಳ ಹಿಂದೆಯೇ ವಿಶ್ವಗುರುವಿನ ಪಟ್ಟಕ್ಕೇರಿದೆ, ಆದರೆ ಅದು ಬೂದಿ ಮುಚ್ಚಿದ ಕೆಂಡದಂತಿದೆ,ಆ ಬೂದಿ ಮುಕ್ತಗೊಳಿಸಲು ಒಂದು ಅಲೆ ಎದ್ದೇಳಬೇಕಿದೆ.ಬೂದಿ ಇನ್ನೇನು ಅಲ್ಲ ಭಾರತವನ್ನ ಕಾಡುತ್ತಿರುವ ಸಾಮಾಜಿಕ ಪಿಡುಗುಗಳು (ಭ್ರಷ್ಟಾಚಾರ, ಮೂಢನಂಬಿಕೆ,ದೇಶದ ಬಗ್ಗೆ ಕೀಳರಿಮೆ, , , , , , ,)

ಇವೆಲ್ಲದುದರ ವಿರುದ್ದ ಒಂದು ಸಂಘಟಿತ ಅಲೆ ಸುನಾಮಿಯಂತೆ ಎದ್ದೇಳಬೇಕಿದೆ.

ವಿಶ್ವಗುರುವಾಗಲು ಬರೀ ಶಕ್ತಿಶಾಲಿ ಆದರೆ ಸಾಲದು, ಶಕ್ತಿಶಾಲಿ ರಾಷ್ಟ್ರಗಳು ಬಹಳಷ್ಟಿರಬಹುದು ಹಾಗಂತ ನನ್ನ ದೇಶವೇನು ಕಡಿಮೆ ಇಲ್ಲ ಶಕ್ತಿಶಾಲಿ ರಾಷ್ಟ್ರಗಳ ಮಧ್ಯೆ ನಮ್ಮದು ಹೆಸರಿದೆ ಆದರೆ ವಿಶ್ವಗುರುವಾಗಲು ಶಕ್ತಿಗಿಂತ ಜ್ಞಾನದ ಅರಿವಿರಬೇಕು ಹೊಸ ಆಲೋಚನೆಗಳ ಜೊತೆಗೆ ಸಾಮಾಜಿಕ ಕಳಕಳಿ ಇರಬೇಕು, ದುಷ್ಟಶಕ್ತಿಗಳಿಗೆ ಪ್ರಬಲ ವಿರೋಧವಿರಬೇಕು ಒಟ್ಟಾರೆಯಾಗಿ ವಿಶ್ವವೇ ಒಂದು ಕುಟುಂಬವೆಂಬ ಪರಿಕಲ್ಪನೆ ಇರಬೇಕು.ನನ್ನ ದೇಶ ಇವೆಲ್ಲ ಅರ್ಹತೆಯನ್ನೊಳಗೊಂಡಿದೆ. ವಿಶ್ವಕ್ಕೆ ಮೊದಲು ಹೊಸ ಹೊಸ ಆವಿಷ್ಕಾರಗಳನ್ನ ಮಾಡಿದ್ದು ನನ್ನ ದೇಶ ಆದರೆಕೆಲವೊಂದು ದೇಶಗಳು ಅವು ನಮ್ಮವರು ಆವಿಷ್ಕರಿಸಿದರೆಂದು ಬಿಂಬಿಸಿ ಬೀಗುತ್ತಿವೆ. ಆದರೇನು ಈಡೀ ವಿಶ್ವಕ್ಕೆಸೊನ್ನೆಯನ್ನ ಕಂಡುಹಿಡಿದವರು ನಾವು ಬರಿಯ ಸೊನ್ನೆ ಮಾತ್ರವಲ್ಲ ಬೀಜಗಣಿತ, ತ್ರಿಕೋನಮಿತಿ, ರೇಖಾಗಣಿತ ಮತ್ತು ಕ್ಯಾಲ್ಕುಲಸ್ ಭಾರತದಲ್ಲೇ ಮೂಲ ತಳೆಯಿತು, ಕಂಪ್ಯೂಟರ್ಗಳು ಮತ್ತು ಡಿಜಿಟಲ್ ಸಾಧನಗಳಲ್ಲಿ ಬಳಸುವ ದ್ವಿಮಾನ ಸಂಖ್ಯೆಯ ವ್ಯವಸ್ಥೆ ಹುಟ್ಟಿದ್ದು ಭಾರತದಲ್ಲಿ.

>ಮೊದಲು ತಕ್ಷಶಿಲೆಯಲ್ಲಿ ವಿಶ್ವವಿದ್ಯಾನಿಲಯವನ್ನು ಕಟ್ಟಿ ಶಿಕ್ಷಣಕ್ಕೆ ಹೊಸಮಾರ್ಗ ತೋರಿಸಿದುದು ನಮ್ಮ ಕೀರ್ತಿ, ಬಹಳಷ್ಟು ಯುರೋಪಿಯನ್ ಭಾಷೆಗಳು ಸಂಸ್ಕೃತದ ಮೂಲದಿಂದ ಹುಟ್ಟಿಕೊಂಡವು.

>ಹತ್ತಿಬಟ್ಟೆಯಿಂದ ಉಡುಪುಗಳನ್ನ ಮಾಡುವ ಯಂತ್ರವನ್ನು 5ನೇ ಶತಮಾನದಲ್ಲೇ ಆವಿಷ್ಕರಿಸಿದವರು ನಾವು,

>ವಿಮಾನಯಾನದ ಬಗ್ಗೆ ಹಾಗು ತಯಾರಿಕೆಯ ಬಗ್ಗೆ ನಮ್ಮ ಮಹರ್ಷಿಗಳು ಮೊದಲೇ ಬರೆದಿಟ್ಟಿದ್ದಾರೆ ಹಾಗು ವಿಮಾನ ಮೊದಲು ತಯಾರಾಗಿದ್ದು ಭಾರತದಲ್ಲೇ ಎಂದು ಇತ್ತೀಚಿನ ವರದಿಗಳು ತಿಳಿಸಿವೆ,

>ಖಗೋಳವಿಜ್ಞಾನ ಭಾರತದಲ್ಲಿ ಹುಟ್ಟಿಕೊಂಡವು ಗ್ರಹಗಳ ಚಲನವಲನಗಳು ಬಗ್ಗೆ ನಮ್ಮ ಮಹರ್ಷಿಗಳಿಗೆ ಶತಮಾನಗಳ ಹಿಂದೆಯೇ ಅರಿವಿತ್ತು, ಖಗೋಳಶಾಸ್ತ್ರಜ್ಞ ಸ್ಮಾರ್ಟ್’ಗಿಂತ ಅನೇಕ ವರ್ಷಗಳ ಮೊದಲು ಭಾಸ್ಕರಾಚಾರ್ಯ 5 ನೇ ಶತಮಾನದಲ್ಲಿ ಸೂರ್ಯನ ಸುತ್ತ ಸುತ್ತಲು ಭೂಮಿಯು ತೆಗೆದುಕೊಳ್ಳುವ ಸಮಯವನ್ನು ಲೆಕ್ಕಾಚಾರಮಾಡಿದ್ದರು.

>ಯೋಗದ ಮೂಲಕ ಮಾನವ ತನ್ನನು ತಾನು ನಿಯಂತ್ರಿಸಬಹುದೆಂದು ತೋರಿಸಿಕೊಟ್ಟಿರುವುದು,

>ಚದುರಂಗ ಕಬ್ಬಡಿ ಲೂಡೋದಂತಹ ಇನ್ನೂ ಅನೇಕ ಆಟಗಳನ್ನ ಪರಿಚಯಿಸಿದ್ದು,

>ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದ್ದು ಆಯುರ್ವೇದವೆಂಬ ಮಹಾ ಶಕ್ತಿಯನ್ನು ಕೊಟ್ಟಿದ್ದು ನನ್ನ ದೇಶ ವೈದ್ಯಕೀಯ ಕ್ಷೇತ್ರವೆಂದರೆ ನನಗೆ ಮೊದಲು ನೆನಪಿಗೆ ಬರುವುದು ಚಾಣಕ್ಯನ ಸಾಹಸ “ಮಹಾನ್ ಮೇದಾವಿ ಚಾಣಕ್ಯ ಚಂದ್ರಗುಪ್ತನಿಗೆ ಯಾವ ಶತ್ರುವಿನಿಂದಲೂ ತೊಂದರೆಯಾಗಬಾರದೆಂದು ಅವನ ಊಟದಲ್ಲಿ ಸ್ವಲ್ಪ ವಿಷವನ್ನು ಚಿಕ್ಕಂದಿನಿಂದಲೇ ಹಾಕಿಕೊಡುತ್ತಿದ್ದನಂತೆ ಚಂದ್ರಗುಪ್ತ ದೊಡ್ಡವನಾಗುತ್ತಾ ಹೋದಂತೆ ವಿಷದ ಪ್ರಮಾಣವನ್ನೂ ಹೆಚ್ಚಿಸುತ್ತಿದ್ದ ಅದು ಚಂದ್ರಗುಪ್ತನಿಗೂ ಗೊತ್ತಿರಲಿಲ್ಲ, ಒಂದೊಮ್ಮೆ ಚಾಣಕ್ಯ ಅರಮನೆಯಲ್ಲಿ ಇಲ್ಲದಿರುವಾಗ ಚಂದ್ರಗುಪ್ತ ತನ್ನ ರಾಣಿಯೊಂದಿಗೆ ಊಟ ಮಾಡುವಾಗ ರಾಣಿ ಅ ವಿಷವನ್ನು ತಡೆಯಲಾರದೆ ಅಸುನೀಗಿದಳು ಆದರೆ ಆಕೆ ಗರ್ಭಿಣಿಯಾಗಿದ್ದಳು, ಈ ವಿಷಯ ತಿಳಿದ ಚಾಣಕ್ಯ ಆ ಕಾಲದಲ್ಲೇ ಅಪರೇಷನ್ ಮಾಡಿ ಮಗುವನ್ನು ಬದುಕಿಸಿದನು ಅ ಮಗುವೇ ಬಿಂದುಸಾರ “.

> ಜಗತ್ತಿಗೆ ಅರ್ಥಶಾಸ್ತ್ರ ಬೋಧಿಸಿದ್ದು ನಮ್ಮ ದೇಶ ಹೀಗೆ ಆವಿಷ್ಕಾರಗಳ ಬಗ್ಗೆ ಹೇಳುತ್ತಾ ಹೋದರೆ ನಮ್ಮ ದೇಶದ್ದು ಸಾವಿರಾರು,

ಇದಲ್ಲದೆ ಇಡೀ ಪ್ರಪಂಚವೇ ಒಂದು ಕುಟುಂಬವೆಂದು ಅದಕ್ಕೆ ವಸುದೇವ ಕುಟುಂಬವೆಂದು ನಾಮಕರಣ ಮಾಡಿದ ದೇಶ ನನ್ನದು,

ವಿವಿಧತೆಯಲ್ಲಿ ಏಕತೆಯನ್ನ ಹೊಂದಿರುವದೇಶ, ಸಾಂಸ್ಕೃತಿಕ ಕಲಾ ಶ್ರೀಮಂತಿಕೆಯನ್ನು ಹೊಂದಿರುವ ದೇಶ ನಮ್ಮದು,

ಹಿಂದೆಯೂ ಈಗಲೂ ಮುಂದೂ ಯಾವುದೇ ದೇಶಕ್ಕೆ ತೊಂದರೆಯಾದಾಗ ಮೊದಲು ಧಾವಿಸುವುದು ನಮ್ಮ ಭಾರತ

(ನೆನಪಿರಲಿ ವಿಶ್ವದ ದೊಡ್ದಣ್ಣನೆಂದು ಬೀಗುವ ಅಮೇರಿಕಾಕ್ಕೆ ತೊಂದರೆಯಾದಗಲೂ ನನ್ನ ದೇಶ ವಿಮಾನಗಳ ತುಂಬಾ ಆಹಾರ ಹಾಗು ದಿನಬಳಕೆಯ ಸಾಮಗ್ರಿಗಳನ್ನು ದಾನಮಾಡಿತ್ತು )

ಇದೆಲ್ಲಕ್ಕಿಂತ ಮಿಗಿಲಾಗಿ ಮಾತೃ ದೇವೋಭವ,ಪಿತೃ ದೇವೋಭವ,ಆಚಾರ್ಯ ದೇವೋಭವ,ಅಥಿತಿ ದೇವೋಭವಎಂಬ ಮಾನವೀಯತೆಯ ಮೂಲ ಮಂತ್ರವನ್ನು ಅಳವಡಿಸಿಕೊಂಡಿರುವ ಸಂಸ್ಕೃತಿ ನಮ್ಮ ದೇಶದ್ದು.

ಇವೆಲ್ಲವನ್ನ ನೋಡಿದರೆ ಹೇಳಬಹುದು ಹೌದು ನನ್ನ ದೇಶ ವಿಶ್ವಗುರು ಎಂದೋ ಆಗಿದೆ. ಅದು ಬೆಳಕಿಗೆ ಬರಬೇಕಿದೆಯಸ್ಟೇ.

ಮಂಜುನಾಥ್ ರಾಮಚಂದ್ರಪ್ಪ

          ಹುಲಿಕುಂಟೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!