ಅಂಕಣ

ಮತಾಂತರವೆಂಬ ಒಂದು ಸದ್ದಿಲ್ಲದ ಭಯೋತ್ಪಾದನೆ..

ನಾನು ಈಗ ಹೇಳುವದನ್ನು ಸ್ವಲ್ಪ ಕಲ್ಪನೆ ಮಾಡಿ ಇದು ನಿಮಗೆ ಹುಚ್ಚಾಟವೆನಿಸಬಹುದು ಆದರೂ ಇದು ಇಲ್ಲಿ ಅಗತ್ಯ.

ದೀಪಾವಳಿಯ ಹಿಂದಿನ ದಿನ ಅಮ್ಮ ಹಬ್ಬಕ್ಕೆ ರುಚಿಯಾದ ತಿನಿಸುಗಳನ್ನು ಮಾಡುತ್ತಿರುತ್ತಾಳೆ, ಅಪ್ಪ ಪೇಟೆಗೆ ಹೋಗಿ ಹಬ್ಬದ ಖರೀದಿಯಲ್ಲಿ ಮುಳುಗಿರುತ್ತಾನೆ, ಅಕ್ಕ ನಾಳೆ ಯಾವ ರಂಗೋಲಿ ಮನೆ ಮುಂದೆ ಹಾಕಬೇಕೆಂದು ಯೋಚಿಸುತ್ತಿರುತ್ತಾಳೆ ಗಂಡು ಮಕ್ಕಳು ಪಟಾಕಿ ಹೊಡೆಯಲು ಕಾಯುತ್ತಿರುತ್ತಾರೆ, ಎಷ್ಟು ಚಂದವಲ್ಲವೇ. ಹೌದು ಇಂತಹ ಸಂಭ್ರಮ ಹಿಂದೂ ಧರ್ಮದಲ್ಲಿ ಮಾತ್ರ ಸಾಧ್ಯ….

ಈಗ ನಿಮ್ಮ ಕಲ್ಪನೆಯನ್ನು ಇನ್ನು ಮುಂದುವರಿಸಿ ಭಾರತ ಕ್ರಿಶ್ಚಿಯನ್ ಇಲ್ಲವೇ ಮುಸ್ಲಿಂ ರಾಷ್ಟ್ರವಾಗಿ, ನಮ್ಮ ಎಲ್ಲ ಗ್ರಂಥಗಳನ್ನು ತಿಪ್ಪೆಗೆಸೆದು, ಕುರಾನ್ ಅಥವಾ ಬೈಬಲ್ ಅನ್ನು ಓದಿಕೊಂಡು, ಇಂಗ್ಲಿಷ್  ಹಾಗು ಉರ್ದು ಭಾಷೆ ಮಾತಾಡಿಕೊಂಡು ನಮ್ಮ ಯುಗಾದಿ, ರಾಮನವಮಿ, ಗಣೇಶ ಚತುರ್ಥಿ, ಸಂಕ್ರಾಂತಿಗಳನ್ನು ಬಿಟ್ಟು ವರ್ಷಕ್ಕೆ ಕೆಲವೇ ಕೆಲವು ಹಬ್ಬಗಳನ್ನು ಆಚರಿಸಿಕೊಂಡು, ಬೇರೆ ಜನಾಂಗದವರಿಗೆ ಬದುಕಲು ಬಿಡದೆ ಮತಾಂತರ ಮಾಡುತ್ತಾ ಬದುಕಿದರೆ ಹೇಗಿರುತ್ತದೆ? ಇಂತಹ ಭಾರತದ ದೇಶ ಊಹಿಸಲು ಕಷ್ಟ ಅಲ್ಲವೇ? ಹೌದು ನಿಮ್ಮ ಊಹೆ ಸರಿಯಾಗಿದೆ. ನಾನು ಹೇಳಹೊರಟಿರುವುದು ಮತಾಂತರ ಮಾಡುತ್ತಿರುವ ಅವಾಂತರ ಬಗ್ಗೆಯೇ.

ಎಲ್ಲರು ನನ್ನಂತಾಗಬೇಕು ಎಂಬ ಮನಸ್ಥಿತಿ ಬಹಳ ಕೆಟ್ಟದ್ದು, ಅದು ದೇಶ ದೇಶಗಳನ್ನೇ ಬದಲಾಯಿಸಿ ಬಿಟ್ಟಿದೆ, ಅಲ್ಲಿಯ ಸಂಸ್ಕೃತಿಗಳನ್ನು ನಾಶ ಮಾಡಿವೆ, ಈ ಮನಸ್ಥಿತಿ ಹೊಂದಿರುವ ಮುಖ್ಯವಾದ  ಎದಡು ಮತಗಳು ಇಸ್ಲಾಂ ಹಾಗು ಕ್ರೈಸ್ತ ಮತಗಳು. ಇವುಗಳು ಎಲ್ಲೆಲ್ಲಿ ಕಾಲಿಟ್ಟಿವೆಯೋ ಆ ದೇಶಗಳ ಸಂಸ್ಕೃತಿ ಉಳಿದಿಲ್ಲ. ಭಾರತಕ್ಕೆ ಮತಾಂತರ ಹೊಸತೇನಲ್ಲ. ಬೌದ್ಧ ಹಾಗು ಜೈನ ಧರ್ಮಗಳು ಮತಾಂತರ ಮಾಡುತ್ತ ಬಂದಿದ್ದವಾದರು ಬಲವಂತದ ಮತಾಂತರ ಶುರುವಾಗಿದ್ದೆ ಮೊಘಲರು ಕಾಲಿಟ್ಟಾಗಿನಿಂದ. ಆಮೇಲೆ ಬಂದ ಪೋರ್ಚುಗೀಸರು ಕಡಿಮೆ ಪ್ರಮಾಣದ ದಾಳಿ ಮಾಡಲಿಲ್ಲ, ಗೋವೆಯಲ್ಲಿ ಲಕ್ಷಾಂತರ ಹಿಂದೂಗಳನ್ನು ಮತಾಂತರ ಮಾಡಿ ಒಪ್ಪದೇ ಇರುವವರನ್ನು ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ್ದು ಇತಿಹಾಸದಲ್ಲಿ ದಾಖಲಾಗಿದೆ.

ನಾನು ಹಳೆಯದನ್ನು ಹೇಳಿ ಬೋರ್ ಹೊಡೆಸುವುದಿಲ್ಲ ಸ್ವಾತಂತ್ರ್ಯ ಬಂದ ಮೇಲೆ ಮತಾಂತರ ಮಾಡುತ್ತಿರುವ ಅವಾಂತರಗಳನ್ನು ತೆರೆದಿಡುವ ಪ್ರಯತ್ನ ಅಷ್ಟೇ. ನಮ್ಮ ಮೊದಲ ಪ್ರಧಾನಿ ನೆಹರು ತಮ್ಮ ಸೆಕ್ಯುಲರ್ ಇಮೇಜ್ ಕಾಪಾಡಿಕೊಳ್ಳುವದಕ್ಕೊಸ್ಕರ ಇತಿಹಾಸವನ್ನು ಕಮ್ಯುನಿಸ್ಟರ ಕೈ ಗೆ ಕೊಟ್ಟರು, ಮತಾಂಧ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಅವರನ್ನು ವಿದ್ಯಾ ಮಂತ್ರಿಯಾಗಿ ನೇಮಿಸಿತಲ್ಲದೆ ಮತಾಂತರ ನಿಷೇಧ ಕಾನೂನನ್ನು ವಿರೋಧಿಸಿ ತಾವೊಬ್ಬ ಭಾರತ ಕಂಡ ಅಪ್ರತಿಮ ಸೆಕ್ಯುಲರ್ ಎಂದು ನಿರೂಪಿಸಿದರು.

ಮತಾಂತರ ಮಾಡಲು ಮುಸ್ಲಿಂರು ಬಳಸುವುದು ಆಕ್ರಮಣಕಾರಿ ವಿಧಾನವಾದರೆ ಕ್ರೈಸ್ತರು ಹಾಗಲ್ಲ ಅವರದು ವಿನಯತೆಯ ದಾರಿ, ನೇರವಾಗಿ ನಂಬಿಕೆಯ ಮೇಲೆ ಹೊಡೆಯುವುದೆ ಇವರ ಕೆಲಸ, ಮಿಷನರಿಗಳು ಭಾರತಕ್ಕೆ ಕಾಲಿಟ್ಟಾಗ ಜೀಸಸ್ ಒಬ್ಬನೇ ದೇವರು ಎಂಬದನ್ನು ನಂಬಿಸಲು ಪ್ರಯತ್ನ ಮಾಡಿದವು, ಈ ಪ್ರಯತ್ನ ಸಫಲವಾಗದ ಕಾರಣ ನಮ್ಮ ಧರ್ಮ ಗ್ರಂಥಗಳನ್ನು ತಿರುಚುವ ಕೆಲಸ ಪ್ರಾರಂಭವಾಯಿತು, ಹಿಂದೂ ದೇವರುಗಳ ಅವಹೇಳನ ಮಾಡಿತು, ಇದು ಅಷ್ಟೊಂದು ಪ್ರಭಾವ ಬಿರದಿದ್ದ ಕಾರಣ ಎಲ್ಲಿ ಬಡತನ, ರೋಗ, ಅಸ್ಪೃಶ್ಯತೆ ಇರುತ್ತದೋ ಅಲ್ಲಿ ಸೇವೆಯ ಅಸ್ತ್ರವನ್ನು ಪ್ರಯೋಗಿಸಿ ಸ್ವಲ್ಪ ಯಶಸ್ಸನ್ನು ಕಂಡಿತು. ಇಂದು ಈ ಪರಿಸ್ಥಿತಿ ಬದಲಾಗಿಲ್ಲ ಕೊಲೆ ಸುಲಿಗೆ, ಧರ್ಮ, ಅಧರ್ಮ ಏನೇ ಆಗಲಿ ತಮ್ಮ ಮತ ವಿಸ್ತರಣೆ ಆಗಬೇಕು ಎನ್ನುವುದೇ ಈ ಧರ್ಮಗಳ ಉದ್ದೇಶ. ಇಷ್ಟೆಲ್ಲ ಆದರೂ ಹಿಂದೂಗಳು ಬದಲಾಗಿಲ್ಲ ಬುದ್ದಿಯನ್ನು ಕಲಿತಿಲ್ಲ.

ಅಷ್ಟಕ್ಕೂ ಮತಾಂತರದಿಂದ ನಿಮಗೇನು ತೊಂದರೆ ಅವರಿಗೆ ಇಷ್ಟವಾದ ಧರ್ಮವನ್ನು ಅವರು ಅನುಸರಿಸಲಿ ಎಂದು ಬುದ್ದಿಜೀವಿಗಳು ಬೊಬ್ಬೆಹೊಡೆಯುತ್ತಾರೆ. ಮತಾಂತರಕ್ಕೆ ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆಯೇ ಕಾರಣ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ನಮ್ಮ ವಿರೋಧವಿರುವುದು ಬಲವಂತ ಹಾಗು ಆಮಿಷ ಮತಾಂತರಕ್ಕೆ ಅಷ್ಟೇ. ಮತಾಂತರದ ಕುರಿತು ಗಾಂಧೀಜಿಯವರು ಹೀಗೆ ಹೇಳುತ್ತಾರೆ ಸತ್ಯವು ಯಾವುದೇ ಒಂದು ಧರ್ಮದ ಸ್ವತ್ತು ಅಲ್ಲ ಬೈಬಲ್ ಹಾಗು ಕುರಾನ್ ಅಷ್ಟೇ ಸತ್ಯ ಹೇಳುತ್ತವೆ ಎನ್ನುವುದು ಸುಳ್ಳು. ಕ್ರಿಶ್ಚಿಯನ್ ಆದ ತಕ್ಶಣ ಭಗವದ್ ಕೃಪೆ ದೊರೆಯುತ್ತದೆ ಎನ್ನುವುದನ್ನು ನಾನು ಒಪ್ಪಲಾರೆ. ಅಷ್ಟೇ ಅಲ್ಲದೇ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಿಶ್ಚಿಯನ್ನರು ದೂರ ಉಳಿದಿದ್ದ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಯಾವುದೇ ಧರ್ಮದವರು ಮತಾಂತರ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳುತ್ತಾರೆ. ಇನ್ನು ಅಸ್ಪೃಶ್ಯತೆ ಕಾರಣಕ್ಕೆ ಮತಾಂತರವಾಗುತ್ತಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಇಂದು ಹಿಂದುಳಿದ ಹಾಗು ಬಡ ವರ್ಗದವರೇ ಹೆಚ್ಚು ಮತಾಂತರವಾಗುತ್ತಿದ್ದಾರೆ.

ಮಿಷನರಿಗಳು ಯುವಕರನ್ನು ಬ್ರೈನ್ ವಾಷ್ ಮಾಡುವುದಷ್ಟೇ ಅಲ್ಲದೆ ಹಲವರನ್ನಾದರು ನೀನು ಕ್ರೈಸ್ತ ಮತಕ್ಕೆ ತಂದರೆ ನೀನು ನಿಜವಾದ ಕ್ರೈಸ್ತ ಎಂದು ತಲೆಗೆ ತುಂಬುತ್ತಿದ್ದಾರೆ ಹೀಗೆ ಬ್ರೈನ್ ವಾಷ್ ಆದ ಯುವಕರು ಹಳ್ಳಿಗಳಿಗೆ ಬುಡಕಟ್ಟು ಪ್ರದೇಶಗಳಿಗೆ ತಿರುಗಾಡಿ ಕ್ರೈಸ್ತ ಮತ ಬೆಳೆಸುತ್ತಿದ್ದಾರೆ. ಇದನ್ನೆನ್ನಾದರು ಹಿಂದೂ ಸಂಘಟನೆಗಳು ವಿರೋಧಿಸಿದರೆ ಇವುಗಳಿಗೆ ಕೋಮುವಾದಿ ಪಟ್ಟ ಬಳಿಯಲಾಗುತ್ತದೆ. ಕ್ರೈಸ್ತರ ಮೇಲೆ ನಡೆಯುವ ಪ್ರತಿ ಘಟನೆಯನ್ನು ಮೀಡಿಯಾಗಳು ಇದು ಕ್ರೈಸ್ತರ ಮೇಲಿನ ದಾಳಿ ಎಂದು ಸುದ್ದಿ ಹಬ್ಬಿಸುತ್ತವೆ ಇದಕ್ಕೆ ಬುದ್ಧಿಜೀವಿಗಳ ಬೆಂಬಲವನ್ನು ಪಡೆದು ಹಿಂದೂಗಳ ಹೋರಾಟವನ್ನು ಕುಗ್ಗಿಸಲಾಗುತ್ತದೆ. ಇತ್ತ ದೊಡ್ಡ ದೊಡ್ಡ ಮಠಗಳನ್ನು ಕಟ್ಟಿರುವ ಸ್ವಾಮೀಜಿಗಳು ಹಿಂದೂಗಳ ಬೆಂಬಲಕ್ಕೆ ನಿಲ್ಲದೆ ತಮ್ಮ ಜಾತಿ ನಾಯಕನಿಗೆ ಬೆಂಬಲ ಕೊಡುವುದೇ  ಇವರ ಕೆಲಸವಾಗಿದೆ.

ಇನ್ನು ಕ್ರೈಸ್ತ ಮಿಷನರಿಗಳು ಸೇವೆಯನ್ನು ತಾವೇ ಗುತ್ತಿಗೆ ಪಡೆದವರಂತೆ ವರ್ತಿಸುತ್ತಿವೆ.  ಹಾಗೆ ನೋಡಿದರೆ ಹಿಂದೂಗಳಲ್ಲಿ ಅನೇಕ ವ್ಯಕ್ತಿಗಳು ಸೇವೆಗಾಗಿಯೆ ತಮ್ಮ ಜೀವನ ಮೂಡುಪಾಗಿಟ್ಟಿ ದ್ದಾರೆ. ಡಾ. ಸುದರ್ಶನ್ ಅವರ ಗಿರಿಜನ ಕಲ್ಯಾಣ ಕೇಂದ್ರ, ರಾಮಕೃಷ್ಣ ಮಿಷನ್, ವಿವೇಕಾನಂದ ಸೇವಾ ಕೇಂದ್ರ, ಆರ್ಟ್ ಆಫ್ ಲಿವಿಂಗ್ ನ ರವಿಶಂಕರ್ ಗುರೂಜಿ, ಧರ್ಮಸ್ಥಳ ಮಂಜುನಾಥ ಸಂಸ್ಥೆ, ಸಿದ್ದಗಂಗಾ ಶ್ರೀಗಳು ಮಾಡಿರುವ ಸಾಧನೆ ಕಡಿಮೆಯಿಲ್ಲ. ಅವರು ಸೇವೆ ಮಾಡುವಾಗ ಯಾರನ್ನು ಮತಾಂತರವು ಮಾಡಿಲ್ಲ,

ಇಷ್ಟಾದರೂ ಮೀಡಿಯಾಗಳು ಒಂದು ಸಾರಿಯಾದರು ನಮ್ಮ ಸ್ವಾಮಿಗಳ ಬಗ್ಗೆ ಒಳ್ಳೆಯದನ್ನು ಮಾತಾಡಿದ್ದಾರಾ?

ಭಾರತ ಈಗಲೂ ಹಿಂದೂ ರಾಷ್ಟ್ರ. ಇದು ಜ್ಯಾತ್ಯಾತಿತ ರಾಷ್ಟ್ರವಲ್ಲ 1947 ರಲ್ಲಿ ಧರ್ಮದ ಹೆಸರಿನಲ್ಲಿ ದೇಶ ವಿಭಜನೆಯಾದ ಬಳಿಕ ಇನ್ನೆಲ್ಲಿಯ ಜ್ಯಾತ್ಯಾತಿಯತೆ. ತುರ್ತುಪರಿಸ್ಥಿತಿಯಲ್ಲಿ ಯಾರೋ ಮಾಡಿದ ಯಡವಟ್ಟಿಗೆ ನಾವೇಕೆ ಬಲಿಪಶುವಾಗಬೇಕು, ತಮ್ಮ ಅನುಕೂಲಕ್ಕಾಗಿ ತುರ್ತು ಪರಿಸ್ಥಿಯನ್ನು ಹೇರಿದ್ದೆ ಅಸಂವಿಧಾನಿಕವಾದಾಗ ಆ ವೇಳೆಯಲ್ಲಿ ಮಾಡಿದ ಎಲ್ಲ ಕಾನೂನುಗಳು ಅಸಂವಿಧಾನಿಕವೇ. ಈ ಸೆಕ್ಯುಲರ್ ಎಂಬ ಪಿಡುಗು ಅನೇಕ ಹಿಂದುಗಳನ್ನು ಆವರಿಸಿದೆ, ಚರ್ಚುಗಳು ಇದನ್ನು ತಮ್ಮ ಸಹಾಯಕ್ಕೆ ಬಳಸಿಕೊಳ್ಳುತ್ತಿದೆ, ಹಿಂದುಗಳನ್ನು ಹಿಂದುತ್ವವನ್ನು ದುರ್ಬಲ ಮಾಡುತ್ತಿವೆ, ಇಂದು ಹಿಂದೂಗಳು ರಾಜಕೀಯವಾಗಿ ಎಷ್ಟು ದುರ್ಬಲರಾಗಿದ್ದಾರೆ ಗೊತ್ತೇನು? ಹೆಚ್ ಡಿ ದೇವೇಗೌಡರು ತಮ್ಮನ್ನು ಮುಂದಿನ ಜನ್ಮದಲ್ಲಿ ತಾನು ಮುಸ್ಲಿಂ ಆಗಿ ಹುಟ್ಟಬೇಕೆಂದು ಹೇಳಿಕೆ ಕೊಡುತ್ತಾರೆ ಆದರೆ ಪಾಪ ಅವರೇ ಪಕ್ಷದ ಜಮೀರ್ ಅಹ್ಮದ್ ಮಸ್ಲಿಮರು ಏನೆಂಬುದನ್ನು ಈ ಜನ್ಮದಲ್ಲಿಯೆ ತೋರಿಸುತ್ತಿದ್ದಾರೆ. ಬಹುತೇಕ ರಾಜಕಾರಣಿಗಳು ತಮ್ಮನ್ನು ತಾವು ಹಿಂದೂಗಳು ಎಂದು ಕರೆದುಕೊಳ್ಳಲು ಹಿಂಜರಿಯುತ್ತಾರೆ, ಹಾಗೇನಾದರು ಕರೆದುಕೊಂಡರೆ ಚರ್ಚಿನ ಕೃಪಾಕಟಾಕ್ಷವಿರುವ ಮೀಡಿಯಾಗಳು ವಿಧ ವಿಧವಾದ ಚರ್ಚೆಯನ್ನೆ ಹುಟ್ಟುಹಾಕಿ ಆ ವ್ಯಕ್ತಿಯನ್ನು ತೇಜೋವಧೆ ಮಾಡುತ್ತವೆ. ಈ ಹಿಂದೂ ವಿರೋಧಿ ಮಾಧ್ಯಮಗಳು ಹಿಂದೂ ಸಂತರನ್ನು ಅವಮಾನಿಸಿದಷ್ಟು ಯಾರನ್ನಾದರೂ ಅವಮಾನ ಮಾಡಿವೆಯೇ? ಎಂದಾದರೂ ಮುಸ್ಲಿಂ, ಕ್ರೈಸ್ತ ಧರ್ಮ ಗುರುಗಳ ವಿರುದ್ಧ ಹರಿಹಾಯ್ದ ಒಂದು ಉದಾಹರಣೆ ತೋರಿಸಿ ನೋಡೋಣ. ಹಿಂದೂ ಹುಡುಗಿ ಮುಸ್ಲಿಂ ಹುಡುಗ ಮದುವೆ ವಿಷಯವನ್ನು ಚರ್ಚೆ ಮಾಡುವ ಮೀಡಿಯಾಗಳು ಎಂದಾದರೂ ಲವ್ ಜಿಹಾದ್ ನಿಂದ ತನ್ನ ಜೀವನ ಹಾಳುಮಾಡಿಕೊಂಡ ಯುವತಿ ಮನೆಗೆ ಭೇಟಿ ಕೋಟ್ಟಿದ್ದಾರೆಯೇ? ಹಿಂದುಗಳೇ ನಿಮಗೆ ರಾಜಕೀಯ ಬೆಂಬಲವಿಲ್ಲ ಮೀಡಿಯಾಗಳು, ನಿಮ್ಮನ್ನು ಗಂಭೀರವಾಗಿ ಪರಿಗಣಿಸಿಲ್ಲ, ಇಷ್ಟಾದರೂ ನೀವು ಜಾತಿಗಳಲ್ಲಿ ಹೊಡೆದಾಡುವುದನ್ನು ಬಿಟ್ಟಿಲ್ಲ.

ಹಾಗಾದರೆ ಇದಕ್ಕೆ ಪರಿಹಾರವೇನು? ಹಿಂದೂಗಳು ಜಾಗೃತರಾಗಬೇಕಿದೆ, ತಮ್ಮ ಧರ್ಮವನ್ನು ಉಳಿಸಲು ಹೋರಾಡಬೇಕಿದೆ, ಬೇರೆ ಧರ್ಮದವರ ವಿರುದ್ಧ ಹೋರಾಡುವ ಬದಲು ಮೊದಲು ನಮ್ಮೊಳಗಿನ ವ್ಯವಸ್ಥೆ ಬದಲಾಯಿಸಬೇಕಿದೆ, ಸದ್ದಿಲ್ಲದೇ ಭಾರತಿಯತೆಯನ್ನು ಜಾಗೃತಗೊಳಿಸಬೇಕಿದೆ, ಧರ್ಮ ಶಿಕ್ಷಣ ಅತ್ಯಗತ್ಯ, ಪ್ರತಿ ಊರಿನಲ್ಲೂ ಎಲ್ಲ ದೇವಾಲಯಗಳು ಸೇರಿ ತಿಂಗಳಿಗೊಮ್ಮೆ ಹಿಂದೂ ಧರ್ಮಕ್ಕೆ ಎದುರಾಗಿತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಿದೆ, ಪ್ರತಿ ದೇವಾಲಯಗಳ ಟ್ರಸ್ಟಿನಲ್ಲಿ ಒಬ್ಬ ದಲಿತನನ್ನಾದರು ನೇಮಕ ಮಾಡಿಕೊಳ್ಳಬೇಕು ಅವನಿಗೆ ದಲಿತ ಸಮುದಾಯ ಕಾಪಾಡುವ ಜವಾಬ್ದಾರಿ ಕೊಡಬೇಕು, ದಲಿತರಿಗೆ ಮತಾಂತರದ ಬಗ್ಗೆ ವಿವರಿಸಬೇಕು, ಹಿಂದೂ ಸ್ವಾಮೀಜಿಗಳು ತಮ್ಮ ತಮ್ಮಲ್ಲೆ ಹೊಡೆದಾಡುವುದನ್ನು ಬಿಟ್ಟು ಒಗ್ಗಟ್ಟಾಗಿ ದಲಿತ ಕೇರಿಗಳಲ್ಲಿ ಸುಧಾರಣೆ ತರಬೇಕಾಗಿದೆ, ಮಿಷನರಿಗಳು ದಲಿತರನ್ನು ಬ್ರಾಹ್ಮಣರ ಹಾಗು ಮೇಲ್ವರ್ಗದವರ ವಿರುದ್ಧ ಎತ್ತಿ ಕಟ್ಟಿ ಹಿಂದೂ ಧರ್ಮವನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ, ಮಿಷನರಿಗಳು ಇನ್ನು ಮುಂದೆ ಹೋಗಿ ಹಣಬಲದಿಂದ ಕೆಲವು ಫೇಕ್ ಸ್ವಾಮೀಜಿಗಳನ್ನು ಹುಟ್ಟುಹಾಕಿದ್ದಾರೆ, ಹಿಂದೂ ಧರ್ಮಗಳ ವಿರುದ್ಧ ಮಾತಾಡುವುದೇ ಇವರ ಕೆಲಸ. ಇದರ ವಿರುದ್ಧ ಹೋರಾಡಬೇಕಿದೆ. ಮೀಡಿಯಾಗಳನ್ನು ಎದುರಿಸಲು ಧರ್ಮ ವಿಚಾರಗಳನ್ನು ಸೂಕ್ತವಾಗಿ ಮಂಡಿಸಬಲ್ಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ಒಂದು ಪ್ಯಾನೆಲ್ ರಚನೆ ಮಾಡಬೇಕಾಗಿದೆ, ಯಾವುದೇ ವ್ಯಕ್ತಿ ಹಿಂದೂ ಧರ್ಮವನ್ನು ತೇಜೋವಧೆ ಮಾಡಿದರೆ ಎದುರಿಸಲು ಈ ಪ್ಯಾನೆಲ್ ಸಿದ್ಧವಾಗಿರಬೇಕು.

ಭಾರತದ ಎಲ್ಲ ಸಮಸ್ಯೆಗಳಿಗೂ ಹಿಂದುತ್ವದಲ್ಲಿ ಉತ್ತರವಿದೆ, ಇಲ್ಲಿಯ ಧರ್ಮ, ಸಂಸ್ಕೃತಿ ದೇಶದ ಜೊತೆ ಒಂದಕ್ಕೊಂದು ಬೆರೆತುಕೊಂಡಿದೆ. ಹೀಗಾಗಿಯೇ ಬೇರೆ ಮತಗಳು ನಮ್ಮ ಸಂಸ್ಕೃತಿಯ ಮೇಲೆ ಪ್ರಹಾರ ಮಾಡುತ್ತಿವೆ. ಎಲ್ಲಿಯವರೆಗೂ ನಮ್ಮ ಸಂಸ್ಕೃತಿಯನ್ನು ನಾವು ಉಳಿಸುತ್ತೆವೆಯೋ ಅಲ್ಲಿಯವರೆಗೂ ಈ ದೇಶ ಭಾರತವಾಗಿ ಉಳಿದಿರುತ್ತದೆ.  ಭಾರತವನ್ನು ಕಾಪಡುವುದೇ ನಮ್ಮೆಲ್ಲರ ಜವಾಬ್ದಾರಿ.

By Prahlad Joshi

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!