ಅಂಕಣ

ಬ್ರಾಹ್ಮಣ ಸುಮ್ನಿದ್ರೆ ಸಾದಾರಣ – ಆಕ್ರಮಣಕಾರಿ ಆದ್ರೆ ದಾರುಣ

ವಿಶ್ವವಾಣಿಯಲ್ಲಿ ಪ್ರಕಟವಾದ ರೋಹಿತ್ ಚಕ್ರತೀರ್ತರ ‘ನೀನ್ಯಾರಿಗಾದೆಯೋ ಎಲೆ ಬ್ರಾಹ್ಮಣಅಂಕಣ ಓದಿದೆ. ಅದಕ್ಕೆ, ಈ ವಿಷಯದ ಪೂರಕವಾಗಿಯೇ ಅಧ್ಯಯನ ಮಾಡುತ್ತಿರುವುದರಿಂದ ಹೇಳಲೇಬೇಕಾದ ಮಾತುಗಳನ್ನು ಹೇಳ ಬಯಸುತ್ತೇನೆ.

ಬ್ರಾಹ್ಮಣ ಸಮುದಾಯ ವಂಚಿತವಾಗಿದೆ, ಹೌದು! ಈ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಬ್ರಾಹ್ಮಣರಿಗೆ ಸೌಲಭ್ಯಗಳ ಮಾತು ಇರಲಿ, ಕನಿಷ್ಠ ಮರ್ಯಾದೆಯೂ ಇಲ್ಲವಾದಂತಿದೆ. ತೀರ Minority ನಲ್ಲಿರುವ ಈ ಜನತೆ ಪರಿಗಣಿಸುವ ಯಾವ ಅನುಭೂತಿಯೂ ಇಂದಿನ ನಾಯಕರಿಗಿಲ್ಲ. ಬ್ರಾಹ್ಮಣರಿಗೆ ಈ ಸರಕಾರ ಖರ್ಚು ಮಾಡುವ ದುಡ್ಡೆಷ್ಟು? ಬಹಳ ಕಡಿಮೆ, ಬೇರೆ ಧರ್ಮದ ಸವಲತ್ತುಗಳೊಡನೆ ಹೋಲಿಕೆ ಕೂಡ ಮಾಡಕ್ಕಾಗಲ್ಲ . ಜಾತಿಗಳ ಸಂಖ್ಯಾಬಲದ ಪಟ್ಟಿಯಲ್ಲಿ ಕಟ್ಟ ಕಡೆಗಿರುವವರು ಬ್ರಾಹ್ಮಣರು, ಆದರೆ ಅವರ ಪ್ರತಿಭೆಯಿಂದಲೇ ಸಾಕಷ್ಟು ಮಂದಿ ಅಮೇರಿಕಾ ಲಂಡನ್’ಗಳಲ್ಲಿ ಕೆಲಸ ಮಾಡ್ತಿದ್ಡಾರೆ. ಈ ಬಡ ಬ್ರಾಹ್ಮಣ ಸುಮ್ನಿದ್ರೆ ಸಾದಾರಣ – ಆಕ್ರಮಣಕಾರಿ ಆದ್ರೆ ಅದು ದಾರುಣ!

ಬ್ರಾಹ್ಮಣನ ತೇಜೋವಧೆ ಮಾಡಿದ ವಂಶಗಳೇ ನಿರ್ವಂಶ ಅಗಿರೋ ಪ್ರಸಂಗಗಳೂ ನಾವು ಇತಿಹಾಸದಲ್ಲಿ ನೋಡ್ಬೋದು. ಈಗಂತೂ ಬ್ರಾಹ್ಮಣರ ಆಹಾರ ಕ್ರಮ ಖಂಡಿಸೋದು ಸಾಮಾನ್ಯವಾಗಿದೆ. ಬ್ರಾಹ್ಮಣ ಶಿಖೆ ಅಂತೂ ಪುಂಡ-ಪೊಕರಿಗಳಿಗೆ ಪಿಳ್ಜುಟ್ಟು ಅನ್ನದಿದ್ರೆ ನಿದ್ರೆ ಬರೂಲ್ಲ. ನೆನಪಿರಲಿ! ಅದೇ  ಪುಂಡ-ಪೊಕರಿಗಳಿಗೆ ಹುಟ್ಟಿದಾಗ ಲಗ್ನ  ನೋಡಿ, ಹೆಸರಿಟ್ಟಿದ್ದೊ ಒಬ್ಬ ಬ್ರಾಹ್ಮಣನೇ! ಎಲ್ಲ ಕಾಲಕ್ಕೂ ಬ್ರಾಹ್ಮಣನ ಅಸ್ತಿತ್ವ ಗಮನಾರ್ಹನೇ – ಜನನ, ಅನ್ನ ಪ್ರಾಷನ, ಚೌಲ, ನಾಮಕರಣ, ಮದುವೆ, ಗುದ್ಲಿ ಪೂಜೆ, ಗೃಹಪ್ರವೇಶ, ಮಳೆ ನಕ್ಷತ್ರ ವಿವರಣೆ, ಮರಣ ಸಂಸ್ಕಾರ ಎಲ್ಲಕ್ಕೂ ಯಾವಾಗಲೂ ಬ್ರಾಹ್ಮಣನೇ ಬೇಕಿತ್ತು ಸ್ವಾಮಿ. ಬ್ರಾಹ್ಮಣರು ಎಂದೂ ರಾಜಾಶ್ರಯಿಗಳೇ – ಅಥವ ಊರಿನ ಜನ ಕೇಳೋ ಪ್ರಶ್ನೆಗಳಿಗೆ ಉತ್ತರ ಕೊಡ್ತಾ – ಜನಕ್ಕೆ guide ಮಾಡುತ್ತಲೇ ಬಂದ ಸಮುದಾಯ.

ಭಾರತದ ಯಾವುದೇ ರಾಜ್ಯದಲ್ಲೂ ಬ್ರಾಹ್ಮಣರಿಗೆ ಮೀಸಲು ಇಲ್ಲ! ಮೀಸಲಾತಿ ಹಿಂದೆ ಎಂದೂ ಬಿದ್ದೋರಲ್ಲ ಬ್ರಾಹ್ಮಣರು, ಇನ್ನೂ ಕ್ಷತ್ರಿಯರಿಗೇ ಕ್ಷಾತ್ರ ವೃತ್ತಿ ಕಲಿಸ್ತಿದ್ರು. ಪುರಾಣದ ಮಾತು ಬಿಡಿ, ನಮ್ಮ ಕರ್ನಾಟಕದ ಏಕೀಕರಣದಲ್ಲಿ ಶ್ರಮ ವಹಿಸಿದ ಆಲೂರು ವೆಂಕಟರಾಯರು, ಬಹುಷಃ ಎಷ್ಟೋ ಜನರಿಗೆ ಅವರ ನೆನಪೇ ಇಲ್ಲ ಇವತ್ತು. ಅದು ಕನ್ನಡದ ಜನ ಹಲವಾರು ಆಡಳಿತ ವ್ಯವಸ್ಥೆಗಳಡಿಯಲ್ಲಿ ಚದುರಿ ಹೋಗಿದ್ದ ಕಾಲ, ವೆಂಕಟರಾಯರ ಧೃಡ ಸಂಕಲ್ಪದಿಂದ – ಮಲಗಿದ್ದ ಜನತೆಯನ್ನು ಎಚ್ಚರಗೊಳಿಸಲೆಂದೇ  ಆದದ್ದು ಕರ್ನಾಟಕ ಏಕೀಕರಣ. ಅಂದೇ ಸಂಸ್ಕೃತವಾಯಿತು ‘ಕರ್ನಾಟಕ ಗತ ವೈಭವ’ ಎಂಬ ಬೃಹತ್ ಗ್ರಂಥ. ಭಾರತದ ಸಮೃದ್ದ ಸಂಸ್ಕೃತಿಗೆ ಕರ್ನಾಟಕದ ಎಲ್ಲ ರಾಜವಂಶದ ಕೊಡುಗೆಳು, ಭವ್ಯ ಮಂದಿರಗಳ ಇತಿಹಾಸ, ಬೃಹತ್ ಸ್ಮಾರಕಗಳು, ವ್ಯಾಪಾರ ವಹಿವಾಟುಗಳನ್ನು ಅಂದಿನ Dyansty ಗಳು ನಡೆಸುತ್ತಿದ್ದ ರೀತಿ, ಸಾಹಿತ್ಯ – ಕಲೆ ಪ್ರಚಾರ ಎಲ್ಲವೂ ಒಳಗೊಂಡಿತ್ತು. ಅದು ನಿಜವಾಗಲೂ – ಮಲಗಿದ್ದ ಮಂದಮತಿಗಳಿಗೆ ಕರ್ನಾಟಕ ಕುಲ ಪುರೋಹಿತನ ಎಚ್ಚರ ಘಂಟೆಯ ನಾದ. ಒಂದ್ ವಿಷ್ಯ ಏನೂ ಅಂದ್ರೆ – ನಮ್ಮ ರಾಜ್ಯದ ನಿರ್ಮಾತೃ – ಏಕೀಕರಣ ಸೂತ್ರದಾರ ಕೂಡ ಒಬ್ಬ ಬ್ರಾಹ್ಮಣ ಸ್ವಾಮಿ, ಇವತ್ತಿನ ದಿನ ಅವರ ಪುಸ್ತಕಗಳು ಮಾರ್ಕೆಟ್ ನಲ್ಲಿ ಸಿಗೋದೂ ಕಷ್ಟವಾಗಿದೆ.

ಹಿಂದೆ ನಮ್ಮ ಸಂವಿದಾನ ರಚನೆ ಸಂದರ್ಭದಲ್ಲಿ – ನಮ್ಮ National Language ಆಗಿ ಸಂಸ್ಕೃತಾನೇ ಆಗ್ಬೇಕು ಅಂತ ಪ್ರಸ್ತಾಪಿಸಿದ್ದು ಇಬ್ಬರೇ – ಅಂಬೇಡ್ಕರರು ಮತ್ತು ತಾಜುದೀನ್’ರವರು. ಸಂಸ್ಕೃತ National Language ಆಗಿದ್ದಿದ್ರೆ ಇಷ್ಟೆಲ್ಲಾ ಸಮಸ್ಯೆಗಳು ಇರ್ತಾನೆ ಇರ್ಲಿಲ್ವೇನೋ. ಆಗ decision time ನಲ್ಲಿ ಬೇರೊಂದು ಪರಕೀಯ ಭಾಷೇನ ಸ್ವೀಕರಿಸಿ, ಈಗ ಸಂಸ್ಕೃತ ಕಲಿತ ಬ್ರಾಹ್ಮಣರಿಗೆ ಪೀಡೆ ಕಟ್ಟಿದರೆ ಏನ್ ಅರ್ಥ? ವೇದಗಳೂ ಎಂದೂ unreachable ಇರ್ಲಿಲ್ಲ, ಬರೇ ಅದರ Recitation ಮಾತ್ರ ವರ್ಜ್ಯ ಇತ್ತು. ಇವತ್ತಿನ ದಿನ ಸಮಗ್ರ ವೇದಗಳ ಕೈಪಿಡಿ ೨೩- ೩೦ ರುಪಾಯಿಗಳಿಗೆ ಸಿಗತ್ತೆ . ಆದ್ರೆ ಇನ್ನೂ ಯಾಕೆ ಯಾರೂ ಅದನ್ನ ಬಹುಸಂಖ್ಯೆಲಿ ಓದ್ತಾ ಇಲ್ಲ? ಸೆರೆಮನೆವಾಸಿ ಆಗಿದ್ದಾಗಲೇ  ಸಾವರ್ಕರರು ಹಿಂದುತ್ವ ಗ್ರಂಥ ರಚನೆ ಮಾಡಿದ್ದು,  ಸಂಕಲ್ಪ ಇಲ್ದಿದ್ರೆ ಸಂಕರ್ಷಣ ಬಂದರೂ ಕಾರ್ಯ ಸಿದ್ದಿಸೋಲ್ಲ.

ವೇದಗಳು – ಉಪನಿಷತ್ತುಗಳು ವೈಜ್ಞಾನಿಕವಾದದ್ದೇ, ಒಂದೊಂದಾಗಿ ನಮಗೆ ಈಗ ಗೋಚರ ಆಗ್ತಾ ಇದೆ ಅಷ್ಟೇ ನ್ಯೂಟನನ  law of gravitation prove ಅಗೋದಕ್ಕೆ ಮುಂಚೆಯಿಂದಾನೂ ಗುರುತ್ವಾಕರ್ಷಣ ಶಕ್ತಿ ಇರ್ಲಿಲ್ವೇ? ಹಾಗೆ. ವೇದಗಳು ಸಾರ್ವಕಲಿಕ ಸತ್ಯ, ಅನುಭವಗಳು ಮಾತ್ರ ಅವರವರ ಸಾಮರ್ಥ್ಯಕ್ಕೆ ಬಿಟ್ಟದ್ದು. ಇಂದು ನಮಗೆ ಹಲವಾರು ಸಂಶೋದನೆಗಳಿಂದ ತಿಳೀತ ಇದೆ, ಅರಳಿ-ಪಾಲಾಶ ಸಮಿತ್ತುಗಳನ್ನ ದಹಿಸಿದ್ರೆ ಪರಿಸರಕ್ಕೆ ಪೂರಕವಾಗತ್ತೇ ಅಂತ, ಅದೇ ಬ್ರಾಹ್ಮಣರು ಮಾಡೊ ಅಜ್ಞಿ ಕಾರ್ಯ ಅಲ್ಲವೇ? ಶವ ಸಂಸ್ಕಾರಕ್ಕೆ ಶವದ ತೂಕದಷ್ಟು ಶುದ್ಧ ತುಪ್ಪ  ಇಟ್ಟು ಸುಡಬೇಕು ಅಂತಾರೆ, ಅದ್ರಿಂದಾನೂ ಕೂಡ ಅಷ್ಟೇ ಪರಿಸರಕ್ಕೆ ಹಾಳಗಿರೋ ಚೈತನ್ಯ, ಆಮ್ಲಜನಕದ ಸರಬರಾಜು ಹೆಚ್ಚತ್ತೆ. Afforestation ಗಾಗಿ ಜೀವನ ವಿಧಾನಗಳನ್ನೇ ರೂಪಿಸುವ ವರ್ಣ  ಇದು.

ಭಾ-ರತ ಅಂದ್ರೆ, ಬೆಳಕಿನೆಡೆಗೆ ಪಯಣ ಅಂತ – ಇದು ರೂಢ ನಾಮ ಅಲ್ಲ ಅನ್ವರ್ಥ ನಾಮ, ಎಷ್ಟೋ ಜನ Foreign Nationals ಮೈಸೂರ್ – ಬೆಂಗಳೊರ್ಗೆ ಬಂದು ಯೋಗ, ಆಯುರ್ವೇದ, ಶಾಸ್ತ್ರಗಳು, Astrology ಕಲಿತಿದಾರೆ, ಆಮೇಲೆ ಆ ದೇಶಕ್ಕೇ ಹೋಗಿ ಕ್ಲಾಸ್ ಶುರು ಮಾಡಿದರೂ recession-free ಹುದ್ದೆ ಹಿಡೀಬೊದು. ಅಷ್ಟೇ ಯಾಕೆ ಬ್ರಿಟಿಷ್ ಆಡಳಿತದ ಸಮಯದಲ್ಲೇ ಎಷ್ಟೋ ಕೃತಿಗಳ ಅನುವಾದಗಳಾಗಿರೋದು.  ಬೇರೆ ದೇಶದೋರ್ಗೆ ನಮ್ಮ ಸಂಸ್ಕೃತಿ ಬಗ್ಗೆ ಇದ್ದಷ್ಟು ಗೌರವ ಕೂಡ ನಮಗೆ ನಮ್ಮ ಪರಂಪರೆಮೇಲೆ ಇಲ್ಲದಿರೋದು ಸಂಕಷ್ಟದ ಸಂಗತಿ.

ಇಷ್ಟೆಲ್ಲಾ ಸಂಸ್ಕೃತಿ, ಪರಂಪರೆ, ಶಾಸ್ತ್ರಗಳು, ವೇದ, ವಾಗ್ಮಯಗಳು ಲಿಪಿಯಿಲ್ಲದೆ ಸಹಸ್ರಾರು ಶತಮಾನಗಳು ಚಿರಂಜೀವವಾಗಿ ನಿಲ್ಲಬೇಕಿದ್ದರೆ ಅದಕ್ಕ ಏಕಮಾತ್ರ ಕರಣ ಅದರ ಆರಾಧಕರು, ಕೇವಲ ಸ್ಮೃತಿಯಿಂದ ಮಾತ್ರವೇ ನಮಗೆ ವೇದಗಳು ಲಭ್ಯವಿದ್ದ ಕಾಲವದು, ಎಷ್ಟು ಚೆನ್ನ ಅಲ್ಲವ ನಮ್ಮ ಸಂಸ್ಕೃತಿ?

ಪುಸ್ತಕಾಸ್ತು ಯಾ ವಿದ್ಯಾ, ಪರಹಸ್ತಗತಂ ಧನಂ,

ಕಾರ್ಯಕಾಲೇ ಸಮುತ್ಪನ್ನೇ, ನ ಸಾ ವಿದ್ಯಾ ನ ತದ್ದನಂ!

ಪುಸ್ತಕದಲ್ಲಿರೋ ವಿದ್ಯೇ, ಬೇರೊಬ್ಬ ವ್ಯಕ್ತಿಯ ಬಳಿಯಿರೋ ನಮ್ಮ ಹಣ, ಕಾರ್ಯ ಬಂದಾಗ ಪುಸ್ತಕದಲ್ಲಿರೋ ವಿದ್ಯೆ – ಖರ್ಚು ಮಾಡಲು ಬೇಕಿದ್ದಾಗ ಪರಹಸ್ತ ಧನ ಎರಡೂ ನಿಷ್ಪ್ರಯೋಜಕ. ವೇದ, ವಾಗ್ಮಯಗಳು ರೂಪುಗೊಂಡದ್ದೆ ಹಾಗೆ – ಎಲ್ಲ ಜ್ಞಾಪಕ ಶಕ್ತಿಯಿಂದಲೇ! ಗುರುಮುಖೇನ ಶಿಷ್ಯ ಪರಂಪರೆಗೆ ಅವಿರತವಾಗಿ ರಸಧಾರೆಯಾಗಿ ಹರಿದ ಅಮೃತ ಬಿಂದುಗಳವು. ಅದನ್ನ ಕರ್ಣರೀತ್ಯ  ಮನದೊಡಲು ತುಂಬಿಕೊಂಡವರು ಮುಂದೆ ಪಸರಿಸಿದೋರು ಬ್ರಾಹ್ಮಣರು.

ಇಂದು ಬ್ರಾಹ್ಮಣ ಅಂತ ಹೇಳೋದೇ ಒಂದು ಅವಮಾನಕ್ಕೆ ಆಸ್ಪದ ಆಗಿದೆ, ಕೋಮುವಾದಿ, ಮೂಲಭೂತವಾದಿ ಎಂದೆಲ್ಲ ಜಾತಿವಾದದ ಮಾತುಗಳು – ಆದರೆ ಬೇರೆ ವರ್ಗಗಳು, ಧರ್ಮಗಳು ಗತ್ತಿನಿಂದ ಹೇಳುವಂತೆ ಬ್ರಾಹ್ಮಣ ಎಂದೂ ತನ್ನತನವನ್ನು ಕೂಗಲಾರ, ನಮ್ಮವರೇ ಆದ ಬುದ್ದಿಜೇವಿಗಳೂ ಅಷ್ಟೇ, ತಮ್ಮ ಕೃತಿಯಲ್ಲಿ ಬ್ರಾಹ್ಮಣ ಆಚರಣೆ ಅನುಷ್ಠಾನನಗಳನ್ನು ಹಳಿದು, ಅಂತಿಮ ಇಚ್ಚೆಯಲ್ಲಿ ಬ್ರಾಹ್ಮಣ ರೀತ್ಯಾ ಸಂಸ್ಕಾರಗಳು ಆಗಬೇಕು ಎಂದು ಬರೆದಿಡೋದು, ಇದರಿಂದ ಏನು ಅರ್ಥವಾಗೋದು ಅಂದ್ರೆ ತಂತಮ್ಮ ಏಳಿಗೆಗಾಗೆ ಎಲ್ಲರೂ ಏನು ಹೇಳಿದರೂ ಸುಮ್ಮನಿರುವ ಬ್ರಾಹ್ಮಣನನ್ನೆ ಟಾರ್ಗೆಟ್ ಮಾಡೂದು.

ಇಂದು ಯಾವ ಮೀಸಲಾತಿಯೂ ಇಲ್ಲದೆ ಎಲ್ಲ ಸಾಧಕರ ಪಟ್ಟಿಯಲ್ಲೊ ಕನಿಷ್ಠ ಒಬ್ಬ ಬ್ರಾಹ್ಮಣ ಇದ್ದೆ ಇರುತ್ತಾನೆ, ಆತ್ಮಗೌರವವೆಂಬ ಒಂದೇ ಶಕ್ತಿಯನ್ನು ಹೊಟ್ಟೆಯೊಳಗಿಟ್ಟುಕೊಂಡು ಛಲದಿಂದ ಬದುಕುತ್ತಿದ್ದಾನೆ. ಈಗೇನೂ ಇಲ್ಲ, ನನಗೂ ಮೀಸಲಾತಿ  ಬೇಕೆಂದು ಆತ ಕೇಳುವುದರಲ್ಲಿ ಅರ್ಥವಿಲ್ಲ, ಪರಾವಲಂಭಿಯಾಗುವ ದುರ್ಲಕ್ಷಣ. ತನ್ನ ಕಾರ್ಯಕ್ಷಮತೆಯ ಮೇಲೆ ಅಪನಂಬಿಕೆ – ನಮ್ಮ ಸಂಸ್ಕೃತಿಯಲ್ಲೇ ಇಲ್ಲದ್ದು ಬೇಡ! ಮೀಸಲಾತಿ ಬೇಡ!. ಒಗ್ಗಟ್ಟಿದ್ದರೆ ಸಾಕು, ಅದೇ ಇಂದು ಕಷ್ಟವಾಗಿದೆ. ಧಾರ್ಮಿಕ ಸಂಸ್ಥೆಗಳೇ ಒಬ್ಬೊಬ್ಬರ ಮೇಲೆ ಹಳಿಯುತ್ತಿದೆ, ಅಲ್ಲೇ ನೂರೆಂಟು ಬಿನ್ನಾಭಿಪ್ರಾಯಗಳು. ಇಲ್ಲಿ ಪೂರ್ವಾಶ್ರಮದ ಮೊಮ್ಮಗನಿಗೆ ಪೀಠ ಬಿಟ್ಟು ಕೊಟ್ಟರೆ  ಅಲ್ಲಿ ಪೂಜೆ ಮಾಡಲು ಅನುಮತಿ ಇಲ್ಲ ಎಂದು ಉಪವಾಸ ಸತ್ಯಾಗ್ರಹ. ಇನ್ನೊಂದ್ ಕಡೆ ಸೋಮಯಾಗಕ್ಕೆ ಮೇಕೆ ಬಾಲಿ ಕೊಟ್ಟ ಸಂಕೇತಿ ಬ್ರಾಹ್ಮಣ ಸಮುದಾಯ ಅಂತ ಉಪ ಪಂಗಡವನ್ನು  ಟಾರ್ಗೆಟ್ ಮಾಡೂದು. ಸುಮ್ನೆ ಹೇಳ್ತೀನಿ – ಇದೆ ಬೇರೆ ಧರ್ಮದ – ಜಾತಿ ಯವರ ಬಗ್ಗೆ ಹೀಗೆ ಬರ್ದಿದ್ರೆ ಸುಮ್ನೆ ಬಿಡ್ತಿದ್ರ? ಬರೆದ ಲೇಖಕ, ಪ್ರಕಟ ಮಾಡಿದ ಮೀಡಿಯಾ ಹೌಸ್ ಎಲ್ಲಾನೂ ನೆಲಸಮ ಅಗೊಗ್ತಿತ್ತು.

 ಅಜೇಯಕಿರಣ ಅಚಾರ್.

 B.Sc, MA (ಸಂಸ್ಕೃತ)
ಮೈಸೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!