ಕೃಷಿಕರಾದ ನನ್ನ ಅಪ್ಪ ನಿಯಮಿತವಾಗಿ ಮನೆಯ ಆದಾಯ ಹಾಗೂವೆಚ್ಚವನ್ನು ಡೈರಿ ಪುಸ್ತಕದಲ್ಲಿ ಇವತ್ತಿಗೂ ದಾಖಲಿಸುತ್ತಾರೆ. ಕೃಷಿ ಕೆಲಸದ ವಿವರ, ಕೆಲಸಗಾರರಿಗೆ ಕೊಡುವ ಸಂಬಳ, ಬಂಧುಗಳ ಫೋನ್ ನಂಬರ್ ಇತ್ಯಾದಿ ಎಲ್ಲವೂ ಆ ಪುಸ್ತಕದಲ್ಲಿ ಲಭ್ಯ. ನನಗೆ ಆ ಶಿಸ್ತು ರೂಢಿಸಿಕೊಳ್ಳಲು ಆಗಿಲ್ಲ ಆ ಮಾತು ಬೇರೆ! ಕೆಲವರುಕಂಪ್ಯೂಟರ್ ಬಂದ ಮೇಲೆ ಎಕ್ಸೆಲ್ ಶೀಟಿನಲ್ಲಿ ದಾಖಲಿಸುವುದನ್ನುಅಭ್ಯಾಸ ಮಾಡಿಕೊಂಡಿದ್ದಾರೆ. ಆದರೆ ಬಹುತೇಕರಿಗೆ ಹಣಕಾಸಿನ ವಿಚಾರದಲ್ಲಿ ಶಿಸ್ತು ಕಡಿಮೆ. ದುಡ್ಡು ಎಲ್ಲಿ ಹೇಗೆ ಸೋರಿ ಹೋಗುತ್ತಿದೆಎನ್ನುವುದು ಗೊತ್ತಾಗುವಷ್ಟರಲ್ಲಿ ತಿಂಗಳ ಕೊನೆ ಬಂದು ಬಿಟ್ಟಿರುತ್ತದೆ!ಈಗಿನ ಪೀಳಿಗೆಯವರಿಗೆ ಈ ರೀತಿಯ ದಾಖಲಾತಿಯೆಲ್ಲಾ ರಗಳೆ.ಅವರಿಗೇನಿದ್ದರೂ ಮೊಬೈಲಿನಲ್ಲೇ ಎಲ್ಲಾ ಆಗಬೇಕು! ಒಂದು ಹೊತ್ತಿನ ಊಟವನ್ನಾದರೂ ಬಿಟ್ಟಾರು. ಮೊಬೈಲ್ ಮಾತ್ರ ಬಿಡಲೊಲ್ಲರು!! ಹಾಗಂತ ಸ್ಮಾರ್ಟ್ ಫೋನ್ ಬಳಸುವ ಮಧ್ಯ ವಯಸ್ಕರೂ ಕಡಿಮೆ ಏನಿಲ್ಲ.
ನಮ್ಮ ನಮ್ಮ ರಂಗದಲ್ಲಿ ಯಶಸ್ವಿಯಾಗಲು ಒಂದು ಮಟ್ಟದ ಹಣಕಾಸಿನ ಶಿಸ್ತು ಅಗತ್ಯ. ಇದಕ್ಕೆ ನಿಖರವಾದ ದಾಖಲಾತಿ ಬೇಕು.ಜೊತೆಗೆ ಕೃಷಿಕರಾದರೆ ತಮ್ಮೆಲ್ಲಾ ಕೃಷಿ ಚಟುವಟಿಕೆಗಳನ್ನು ನಮೂದಿಸಬೇಕಾಗುತ್ತದೆ. ಕೃಷಿಗೆ ಬರುತ್ತಿರುವ ಯುವ ಪೀಳಿಗೆ ಮೊಬೈಲ್ ಬಳಕೆಯಲ್ಲೂ ಹಿಂದೆ ಬಿದ್ದಿಲ್ಲ. ಇವನ್ನು ಗಮನದಲ್ಲಿಟ್ಟುಕೊಂಡು ಕೃಷಿಕರೂ ಸೇರಿದಂತೆ ಎಲ್ಲರಿಗೂ ಸೂಕ್ತವಾಗುವಂತೆ ಮಂಗಳೂರಿನ ನವೋದ್ಯಮ ‘ಮೈಂಡ್‌ಸ್ಟ್ಯಾಕ್ ಟೆಕ್ನೊಲಜೀಸ್’ ಹಾಗೂ ‘ಕೃಷಿ ಕನ್ನಡ ಜಾಲತಾಣ’ ಬಳಗದವರು ಸೇರಿ ಫಾರ್ಮನಿ (FARMONEY) ಎಂಬ ಆಂಡ್ರಾಯ್ಡ್ ಆಪ್‌ನ್ನುರೂಪಿಸಿದ್ದಾರೆ. ಇದು ಉಚಿತವಾಗಿ ಗೂಗಲ್ ಪ್ಲೇಸ್ಟೋರಿನಲ್ಲಿ ಲಭ್ಯ.ಕೊಂಡಿ ಇಲ್ಲಿದೆ.
(https://play.google.com/store/apps/details?id=com.mindstack.farmoney).
ಕೃಷಿ ಕನ್ನಡ ಜಾಲತಾಣದಲ್ಲೂ(www.krishikannada.com)ಇದರ ಕೊಂಡಿ ಸಿಗುತ್ತದೆ. ಈಗಲೇ ಇಳಿಸಿ ಸ್ಥಾಪಿಸಿಕೊಳ್ಳಿ! ಇದುಕರ್ನಾಟಕ, ಭಾರತ, ಹೆಚ್ಚೇಕೆ ಇಡೀ ವಿಶ್ವದೆಲ್ಲೆಡೆಯವರು ಹಾಗೂಕೃಷಿಕರು ಬಳಸಬಹುದಾದ ಆಪ್. ಎಲ್ಲವೂ ಪಾಶ್ಚಿಮಾತ್ಯದೇಶಗಳಿಂದಲೇ ಬರಬೇಕೆಂದಿಲ್ಲ. ನಮ್ಮಲ್ಲೂ ಬೇರೆಯವರಿಗೆಕೊಡಬಹುದಾದಷ್ಟು ಐಡಿಯಾ ಇದೆ ಎನ್ನಲು ಸಾಕ್ಷಿ ಎನ್ನುವಂತಿದೆ ಈಆಪ್. ಕನ್ನಡದ ನೆಲದಲ್ಲಿ ಇಂತಹದ್ದೊಂದು ಆಪ್ ರೂಪಿತವಾದದ್ದು ಹೆಮ್ಮೆಯ ವಿಷಯವೇ.
ಅಂಥಾದ್ದೇನಿದೆ ಇದರಲ್ಲಿ?
ಇಲ್ಲಿ ಮೂರು ಪ್ರಮುಖ ವಿಭಾಗಗಳಿವೆ. ನೀವು ಕೃಷಿಕರಲ್ಲದಿದ್ದರೆಒಂದು ಮತ್ತು ಮೂರನೇ ವಿಭಾಗಗಳನ್ನು ಬಳಸಬಹುದು.
೧) ಹಣಕಾಸು ವಹಿವಾಟಿನ ದಾಖಲಾತಿ: ಇಲ್ಲಿ ದಿನವಹಿ ಖರ್ಚು,ಬ್ಯಾಂಕಿನ ಹಾಗೂ ಇತರ ಸಾಲದ ವಿವರ, ಷೇರು ಮಾರುಕಟ್ಟೆ ಹಾಗೂ ಜೀವವಿಮಾ ಪಾಲಿಸಿಗಳ ವಿವರ ಮಾಹಿತಿಯನ್ನು ದಾಖಲಿಸಬಹುದು. ನಿಮಗೆ ಬೇಕಾದ ಅವಧಿಗೆ ರಿಪೋರ್ಟ್‌ಗಳನ್ನೂಪಡೆಯಬಹುದು.
೨) ಕೃಷಿ ಚಟುವಟಿಕೆಗಳ ದಾಖಲಾತಿ: ಕೆಲಸಗಾರರ ವಿವರ, ವಿಶಿಷ್ಟರೀತಿಯಲ್ಲಿ ಗೂಗಲ್ ನಕ್ಷೆಯ ಮೂಲಕ ನಿಮ್ಮ ಹೊಲದ ಬೆಳೆ ಇತಿಹಾಸದ ದಾಖಲಾತಿ, ಪ್ರತಿಯೊಂದು ಬೆಳೆ ಸಂಬಂಧೀ ಖರ್ಚು-ವೆಚ್ಚಗಳು, ಬೆಳೆಯ ಛಾಯಾಚಿತ್ರಗಳು, ಮಳೆ ದಾಖಲಾತಿ, ನಿಮ್ಮಕೊಟ್ಟಿಗೆಯ ಸದಸ್ಯರ ಸಂಪೂರ್ಣ ವಿವರ, ಹಾಲಿನ ಡೈರಿಯ ಲೆಕ್ಕ ವಿವರಗಳನ್ನು ಅತ್ಯಂತ ಸುಲಭದಲ್ಲಿ ದಾಖಲು ಮಾಡಲು ಸಾಧ್ಯ ನಿರ್ದಿಷ್ಟ ಅವಧಿಯ ರಿಪೋರ್ಟ್ ಗಳೂ ಲಭ್ಯ. ಜೊತೆಗೆ ಕೃಷಿ ಮಾರುಕಟ್ಟೆಯ ವಿವರ ಹಾಗೂ ನಿಮ್ಮ ಪ್ರದೇಶದ ಹವಾಮಾನಮುನ್ಸೂಚನೆ ಹಾಗು ವರದಿಯನ್ನೂ ಪಡೆಯಬಹುದು. ಹವಾಮಾನವರದಿ, ಮಾರುಕಟ್ಟೆ ಮಾಹಿತಿ, ಬೆಳೆ ಇತಿಹಾಸದ ನಕ್ಷೆ ಮುಂತಾದವನ್ನು ಬಳಸಿಕೊಳ್ಳಲು ಮಾತ್ರ ಅಂತರ್ಜಾಲದ ಸಂಪರ್ಕ ಬೇಕಾಗುತ್ತದೆ.ಉಳಿದೆಲ್ಲಾ ಸೌಲಭ್ಯಗಳನ್ನು ಹಾಗೇ ಬಳಸಲು ಸಾಧ್ಯ.
೩) ಇತರ ಮಾಹಿತಿ: ಈ ವಿಭಾಗದಲ್ಲಿ ವಿಶೇಷ ದಿನಗಳು,ಮಾಡಬೇಕಾದ ಕೆಲಸಗಳ ಪಟ್ಟಿ, ನಿಮ್ಮ/ಕುಟುಂಬದ ಸದಸ್ಯರ ವೈಯಕ್ತಿಕ ವಿವರಗಳು (ಆಧಾರ್ ನಂಬರ್, ವೋಟರ್ ಐಡಿ, ರಕ್ತದ ಗುಂಪು, ಪ್ಯಾನ್ ನಂಬರ್ ಇತ್ಯಾದಿ), ಬ್ಯಾಂಕ್ ಅಕೌಂಟ್ ನಂಬರ್ಹಾಗೂ ಐಎಫ್‌ಎಸ್ಸಿ ಕೋಡ್, ಪಹಣಿಯ ಸಂಕ್ಷಿಪ್ತ ವಿವರಗಳನ್ನುದಾಖಲಿಸಿಡಬಹುದು.
ಪಾಸ್ವರ್ಡ್ ಮೂಲಕ ಎಲ್ಲಾ ಮಾಹಿತಿಯನ್ನು ಕಾಪಿಡುವ ವ್ಯವಸ್ಥೆಇಲ್ಲಿದೆ. ಮೊಬೈಲ್ ಕಳೆದು ಹೋದಾಗ ಅಥವಾ ಬದಲಾಯಿಸಿದಾಗ ದಾಖಲಿಸಿದ ವಿವರಗಳು ಸಿಗುವಂತೆ ‘ಬ್ಯಾಕಪ್’ ಮತ್ತು ‘ರಿಸ್ಟೋರ್’ಆಯ್ಕೆಗಳಿಲ್ಲಿವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಒದಗಿಸುವ ಆಲೋಚನೆ ಇದೆ ಎನ್ನುತ್ತಾರೆ ಇದರ ನಿರ್ಮಾತೃಗಳು.
ಒಮ್ಮೆ ಬಳಸಿ ನೋಡಿ. ನಿಮ್ಮ ಹಣಕಾಸಿನ ದಕ್ಷತೆ ಹೆಚ್ಚುವುದರಲ್ಲಿ ಸಂದೇಹವಿಲ್ಲ !!