ಉದ್ಯೋಗ ಖಾತ್ರಿ ಕೊಳ್ಳೆ ಹೊಡೆದರು ರಾತ್ರೋ ರಾತ್ರಿ
ಕಂಟ್ರಾಕ್ಟರ್ ಮೆಂಬರ್ ಗಳು ಬಲು ಛತ್ರಿ
ಚೆಂದಿದ್ದ ರೋಡ್ ನ ಕೆರೆದರು ದಿನ ಪೂರ್ತಿ
ಕಾರ್ಯದರ್ಶಿ ಇಂಜಿನಿಯರ್ ಗೆ ಕಾರು ಬಾರು ಖಾತ್ರಿ
ತಹಸಿಲ್ದಾರ್, ಎಂ ಎಲ್ ಎ ಗೊ ಕಳಿಸಿದರು ಬುತ್ತಿ ||
ಶೋ ಕೊಡಲು ಬರ್ತಾರೆ ಜನನಾಯಕರು
ಹೇಳ್ತಾರೆ ರೈತರ ನಾಯಕ ನಾನೆಂದು
ಇವ್ರು ಬರೋದು ಅ ರೈತ ಸತ್ತಾಗ ಮಾತ್ರ
ಅಲ್ಲೂ ಬೊಳ್ಳು ಬರವಸೆಗಳ ಮಹಾಪೂರ
ತಾಕತ್ತಿದ್ದರೆ ಕೊಡಲಿ ಬದುಕಿರುವಾಗಲೇ ಶಕ್ತಿ ||
ಸಣ್ಣ ಸರ್ಟಿಫಿಕೇಟ್ ಗೆ ತಾಲ್ಲೂಕ್ ಆಫೀಸ್ಗೆ ಹೋದ್ರೆ
ಇವರ್ ಮೊದಲು ನೋಡೋದ್ ನಮ್ ಜೇಬು
ಅದರಾದರ ಮೇಲೆ ನಮ್ ಕೆಲಸ, ಜೇಬು ತೂತಿದ್ದರೆ ಕಷ್ಟ
ಸಂಬಳ ತಕೊಳ್ತಾರೆ ತಿಂಗಳಿಗೊಮ್ಮೆ , ಅದ್ ಇವರಿಗ್ ಲೆಕ್ಕಕ್ಕಿಲ್ಲ
ದಿನಾ ದಿನಾ ಬರುತ್ತಲ್ವ ಬಡವರ ಕಾಸು ||
ನೀವ್ ಇವರಲ್ಲ ಬಿಡಿ ನೀವ್ ತುಂಬಾ ಒಳ್ಳೇವ್ರು