೧.ಅವನು….
ಅವನು..
ನಾ ನೆಟ್ಟ ಬಳ್ಳಿಯಲಿ
ಹೂವಾಗಿ ಅರಳಿದನು..
ನಾ ಮುಡಿಯುವ ಮುನ್ನ
ಇನ್ಯಾರದೋ ಮುಡಿಗೇರಿದನು …
೨.ಮಲ್ಲಿಗೆ
ನಲ್ಲೆ ಕೇಳಿದಳು
“ನಲ್ಲ ನನ್ನ ಜಡೆಗೆ
ಮುಡಿಸುವೆಯಾ ಮಲ್ಲಿಗೆ?”
ನಲ್ಲ ನುಡಿದನು
“ನಲ್ಲೆ ನಿನಗೇಕೆ ಮಲ್ಲಿಗೆ?
ನಿನ್ನ ಜಡೆಯೇ ಇದೆ
ಮಲ್ಲಿಗೆಯಂತೆ ಬೆಳ್ಳಗೆ….”
೩.ನೀನು..
ನಾವಿಬ್ಬರೂ ಓಡಾಡಿದ
ಸಾಗರದ ದಡದಲ್ಲಿ
ಒಂಟಿಯಾದ ಮೌನಿ ನಾನು..
ನನ್ನ ಹೃದಯದಿಂದ ಸಾಗರಕೆ
ಜಾರಿದ ಮುತ್ತು ನೀನು…
ಯಾರ ಹೃದಯದ ಕಪ್ಪೆ ಚಿಪ್ಪಿನಲ್ಲಿ
ಬಂಧಿಯಾಗುವೆಯೋ ನೀನು..
ಸಾಗರವ ಬಗೆ-ಬಗೆದು
ಹುಡುಕುತಲಿರುವೆ ನಿನ್ನ ನಾನು..
೪.ಜ್ವಾಲಾಮುಖಿ
ನನ್ನೆದೆಯಲ್ಲಿ
ಅಡಗಿದೆ ಜ್ವಾಲಾಮುಖಿ…
ಕಾಯುತಿದೆ..
ನಿನ್ನದೇ ಮುಖಾಮುಖಿ…
೫ ನೆನಪುಗಳು
ನೀ ನನಗೆಂದು
ಬಿಟ್ಟು ಹೋದ ಒಂಟಿತನಕ್ಕೆ
ಜೊತೆಯಾಗಿವೆ ನಿನ್ನ ನೆನಪುಗಳು…
ನಿನ್ನಂತೆ ಚಂಚಲವಲ್ಲ ಅವು
ಹೃದಯದಿ ಅಚ್ಚುಕಟ್ಟಾಗಿ
ಅಚ್ಚೊತ್ತಿದ ಗಟ್ಟಿ ಮುದ್ರೆಗಳು…
೬.ಕಣ್ಣೋಟ
ಅವನದೋ ಬರೀ
ಕಣ್ಣೋಟ..
ಅವಳ ಹೃದಯದಿ
ಜೋರಾಗಿ ಕೇಳಿದೆ
ಲಬ್ -ಡಬ್ ಗಳ ಸ್ಫೋಟ..