ಅಂಕಣ

“ನಾವು” – ಇದು ನಮ್ಮ ಬ್ಯಾಂಡ್

ಉಪೇಂದ್ರ ಅವರ “ನಾನು” ಮತ್ತು “ನೀನು” ಎಂಬ ಕಾನ್ಸೆಪ್ಟ್’ಗಳ ನಡುವೆ ಈಗ ಎಲ್ಲರ ಗಮನ ಸೆಳೆಯುತ್ತಿರುವುದು “ನಾವು”. ಇದು ಉಪೇಂದ್ರ ಅವರ ಮುಂದಿನ ಚಿತ್ರ ಅಂಥ ಅಂದುಕೊಂಡಿದ್ದರೆ, ಅದು ತಪ್ಪು ಕಲ್ಪನೆ. “ನಾವು” ಯಾವುದೇ ಚಲನಚಿತ್ರ ಅಲ್ಲ. “ನಾವು” – ನಮ್ಮ ಮೈಸೂರ ಹುಡುಗರ ಮ್ಯೂಸಿಕ್ ಬ್ಯಾಂಡ್. ಕನ್ನಡ ಹಾಡುಗಳನ್ನು ಫ್ಯೂಶನ್ ಮತ್ತು ರಾಕ್ ಶೈಲಿಯಲ್ಲಿ ಹಾಡುವುದು ಇವರ ವಿಶೇಷತೆ. ಕನ್ನಡದ ಬಗ್ಗೆ ಅಪಾರ ಪ್ರೀತಿ ಹೊಂದಿರುವ “ನಾವು” ತಮ್ಮದೇ ಆದ ಹಾಡುಗಳನ್ನು ಬರೆಯುತ್ತಾರೆ ಮತ್ತು ಅವುಗಳನ್ನು ಕಂಪೋಸ್ ಮಾಡಿ ಹಾಡುವುದರಲ್ಲಿ ನಿಸ್ಸೀಮರು ಇವರು.

ನಾವು ಬ್ಯಾಂಡ್ ನ ಪ್ರೋಮೋ

https://www.youtube.com/watch?v=JW3GqSCsg-I

ಸದ್ಯ ಒಂಬತ್ತು ಜನಗಳ ತಂಡ ಇದು. ಇನ್ನು ಕೆಲವರು ಆಫ್ ಸ್ಟೇಜ್ನಲ್ಲಿ ಇರುತ್ತಾರೆ. ಎಲ್ಲರೂ ಬೇರೆ ಬೇರೆ ವೃತ್ತಿಯವರಾದರೂ, ಸಂಗೀತ, ರಂಗಕಲೆ ಮತ್ತು ಸಾಹಿತ್ಯದ ಮೇಲಿನ ಆಸಕ್ತಿ ಇವರನ್ನು ಒಂದು ಗೂಡಿಸಿದೆ. ಉಪನ್ಯಾಸಕರು, ಮಾಧ್ಯಮ ವರದಿಗಾರರು, ಕಾಮರ್ಸ್ ವಿದ್ಯಾರ್ಥಿಗಳು, ರಂಗಭೂಮಿಯ ಕಲಾವಿದರನ್ನು ಒಳಗೊಂಡ ತಂಡ ಒಂದು ಸಾರಿ ಗಿಟಾರ್, ಮೈಕ್, ಡ್ರಮ್ಸ್ ಜೊತೆ ಸ್ಟೇಜ್ ಏರಿದರೆ ಕಾಣೋದು ಮಾತ್ರ ಅಪ್ಪಟ ಕರುನಾಡ ರಾಕ್ ಬ್ಯಾಂಡ್. ಕೇಳುವುದು ಕನ್ನಡದ ಜಾನಪದ ಲೋಕದ ಕಂಪು. ನಾವು” ಎಂಬ ಕನ್ನಡ ಪದವನ್ನೇ ತಮ್ಮ ಗುರುತು ಮಾಡಿಕೊಂಡು ದೇಶ ವಿದೇಶದ ತುಂಬೆಲ್ಲಾ ಸಿರಿಗನ್ನಡವನ್ನು ತಮ್ಮ ಹಾಡು ಸಂಗೀತದ ಮೂಲಕ ಪಸರಿಸಬೇಕು ಎನ್ನುವ ಹಂಬಲ ಇವರದು.

ನಾವು ಬ್ಯಾಂಡ್ ನ ಸದಸ್ಯರ ಪರಿಚಯ

https://www.youtube.com/watch?v=otWoOhxbgOs)

ಸುಂದರೇಶ್ ದೇವಪ್ರಿಯಂ (ಗಿಟಾರ್, ವೋಕಲ್), ಶಾಲೋಮ್ ಸನ್ನುತಾ (ವೋಕಲ್), ಶೃತಿ ರಂಜಿನಿ (ವಯಲಿನ್, ವೋಕಲ್), ಪ್ರಗಾಥ ಮೋಹನ (ಬೇಸ್ ಗೀಟಾರ್, ಸಾಹಿತ್ಯ), ಅನುಷ್ ಎ. ಶೆಟ್ಟಿ (ವೋಕಲ್, ಪರ್ಕಷನ್, ಸಾಹಿತ್ಯ), ಶ್ರೀಕಂಠಸ್ವಾಮಿ (ಡ್ರಮ್ಸ್), ಶ್ರೀರಂಗ ಪ್ರಸಾದ್ (ಕೀಬೋರ್ಡ್), ರೋಹಿತ್ (ಧ್ವನಿ), ಕಿರಣ್ (ಬೆಳಕು). ಇದು “ನಾವು” ತಂಡ. ಕಾಲೇಜು ದಿನಗಳಿಂದಲೇ ಒಟ್ಟಿಗೆ ಇರುವ ತಂಡ ಮೈಸೂರು, ಹುಣಸೂರು, ಬಳ್ಳಾರಿ ಸೇರಿದಂತೆ ಕರ್ನಾಟಕದ ಹಲವಾರು ಕಡೆ ಪ್ರದರ್ಶನ ನೀಡಿದೆ. ತಮ್ಮ ತಂಡದ ಗಾಯಕರ ಜೊತೆಗೆ ಕಾರ್ಯಕ್ರಮದಲ್ಲಿರುವ ಪ್ರೇಕ್ಷಕರು ಹಾಡುವ ಹಾಗೆ ಮಾಡುವುದೇ ಈ ಮ್ಯೂಸಿಕ್ ಬ್ಯಾಂಡ್ ನ ಮತ್ತೊಂದು ವಿಶೇಷ.

ಮ್ಯೂಸಿಕ್ ಅಂದ್ರೆ ರಾಪ್, ರಾಕ್ ಅಂಥ, ಇಂಗ್ಲೀಷ್ ಹಾಡುಗಳನ್ನ ಕಂಠಪಾಠ ಮಾಡಿ ಸಿಕ್ಕ ಸಿಕ್ಕಲ್ಲಿ ಗುನುಗುವ ಯುವಕರ ಗುಂಪಿನಿಂದ “ನಾವು” ತಂಡ ವಿಭಿನ್ನ ಅನಿಸುವುದೇ ಅವರ ಹಾಡುಗಳು ಮತ್ತು ಸಂಗೀತವನ್ನು ಕಂಪೋಸ್ ಮಾಡುವ ಶೈಲಿಯಿಂದ. ಪಕ್ಕಾ ಕನ್ನಡ ಗೀತೆಗಳನ್ನು ರಚಿಸಿ ಅದಕ್ಕೆ ಸೂಕ್ತವಾದ ಹಗುರ ರಾಕ್ ಮತ್ತು ಫ್ಯೂಶನ್ ಶೈಲಿಯ ಸಂಗೀತ ಅಳವಡಿಸಿ, ಸ್ಟೇಜ್ ಮೇಲೆ ಪ್ರದರ್ಶನ ಮಾಡುವಾಗ ಯಾವುದೋ ರಾಕ್ ಬ್ಯಾಂಡ್ ನಮ್ಮ ಕನ್ನಡ ಹಾಡನ್ನು ಎಷ್ಟು ಸಹಜವಾಗಿ ಹಾಡುತ್ತಿದ್ದಾರೆ ಎನಿಸುವ ಭಾವನೆಗೆ ಬೆಲೆ ಕಟ್ಟಲು ಆಗದು.

ಪ್ರಸ್ತುತ ತಮ್ಮದೇ ಸ್ವಂತ ವೀಡಿಯೊ ಸಂಪುಟವನ್ನು(ಆಲ್ಬಮ್) ಹೊರತರುವ ತಯಾರಿಯಲ್ಲಿ ಇರುವ “ನಾವು” ತಂಡ, ಭಾರತದಾದ್ಯಂತ ತಮ್ಮ ಸಂಗೀತ ಪ್ರದರ್ಶನವನ್ನು ನೀಡುವ ತವಕದಲ್ಲಿದೆ. ನಮ್ಮ ಕನ್ನಡ ಮತ್ತು ಕರ್ನಾಟಕದ ಜಾನಪದ, ಸಂಗೀತ ಪ್ರಕಾರಗಳನ್ನು ಆಧಾರವಾಗಿ ಇಟ್ಟುಕೊಂಡು, ತಮ್ಮ ಹೆಸರಿನಲ್ಲಿಯೂ ಸಹ ಸಂಪೂರ್ಣ ಕನ್ನಡಮಯ ತೋರುವ ಈ ತಂಡಕ್ಕೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುತಿಸಿ ಅವಕಾಶಗಳನ್ನು ಒದಗಿಸಿದರೆ “ನಾವು” ಮ್ಯೂಸಿಕ್ ಬ್ಯಾಂಡ್ ರಾಷ್ಟ್ರ ಹಾಗೂ ಅಂತರ ರಾಷ್ಟೀಯ ಮಟ್ಟದಲ್ಲಿ ಸಾಧನೆ ಮಾಡುವ ಎಲ್ಲಾ ಸಾಮರ್ಥ್ಯವನ್ನು ಹೊಂದಿದೆ.

ಈ ತಂಡಕ್ಕೆ ನಮ್ಮ ಕಡೆಯಿಂದ ಹೃದಯ ತುಂಬು ಅಭಿನಂದನೆಗಳು. ಇದೇ ರೀತಿ “ನಾವು” ತಂಡಕ್ಕೆ ಅವಕಾಶಗಳು ಒದಗಿ ಬರಲಿ ಎಂದು ಆಶಿಸುತ್ತೇವೆ.

ಸಂಪರ್ಕ: ಸುಂದರೇಶ್ (ಮುನ್ನಾ) 9844552313

ವಿಳಾಸ: ನಂ 119, 4ನೇ ಮುಖ್ಯ ರಸ್ತೆ, 13ನೇ ಕ್ರಾಸ್,ವಿದ್ಯಾರಣ್ಯಪುರಂ, ಮೈಸೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Anand Rc

ಹವ್ಯಾಸಿ ಬರಹಗಾರ,ಎಂ,ಸಿ,ಎ ಓದಿ,ಪ್ರಸ್ತುತ ಗದಗ ಜಿಲ್ಲೆಯಲ್ಲಿ ಸರಕಾರಿ ಯೋಜನೆಗಳಿಗೆ
ಸಲಹೆಗಾರರ ವೃತ್ತಿ.ಕಂಪ್ಯೂಟರ್,ಮಾಹಿತಿ ತಂತ್ರಜ್ಞಾನ ಮತ್ತು ಪುಸ್ತಕಗಳ ಆಸಕ್ತಿ ಬರೆಯುವದನ್ನು
ಕಲಿಸಿದ್ದು,Aarsi.org ಎಂಬ ಸ್ವಂತ ವೆಬ್ಸೈಟ್ ಹೊಂದಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!