ಅಂಕಣ

ಸಮಸ್ಯೆಗಳನ್ನು ಎದುರಿಸಿ ಉತ್ತಮನಾಗು

ನಮ್ಮ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಮೊನ್ನೆ ಒಬ್ಬ ಹುಡಗ ಆತ್ಮಹತ್ಯೆಗೆ ಶರಣಾದ. ನನ್ನ ಗೆಳೆಯ ಬಂದು ಅವನು ಡೆತ್ ನೋಟ್ ನಲ್ಲಿ ಏನು ಬರದಿದ್ದ ಅಂತ ಹೇಳಿದ ” ಸಾರೀ ಅಪ್ಪಾ ಅಮ್ಮ ನಾನು ಜೀವನದಲ್ಲಿ ಸೋತು ಹೋಗಿದ್ದೇನೆ,ನಾಲ್ಕು ವಿಷಯದಲ್ಲಿ ಫೇಲ್ ಆಗಿದ್ದೇನೆ, ಪ್ರೀತಿಸಿದ ಹುಡಗಿ ನನನ್ನು ಬಿಟ್ಟು ಹೋಗಿದಾಳೆ. ಈ ಹೋರಾಟದ್ದ್ಡ್ ಬದುಕಿನಿಂದ ನಾನು ಮುಕ್ತಿ ಪಡಿಯುತಿದೆನೆ. GOODBYE”. ಇದನ್ನೂ ಕೇಳಿದ ಮೇಲೆ ನನಗೆ ನೋವು, ಗಾಬರೀ, ಆಶ್ಚರ್ಯ ಎಲವು ಒಟ್ಟೂ ಒಟ್ಟಿಗೆ ಆಯ್ತು . ಅವತ್ತು ರಾತ್ರಿ ನನಗೆ ಅಮ್ಮ ಹೇಳಿದ ಒಂದು ಕಥೆ ತುಂಬಾ ನೆನಪು ಆಗ್ತಾ ಇತ್ತು, ಅದನ್ನು ನಿಮಗೆ ಹೇಳ್ತೀನಿ ಕೇಳಿ

ಅಪ್ಪ ಅಡುಗೆ ಮನೆಯಲ್ಲಿ ಕೂತಿದ್ದ,ದಡ್ದರ್ ಅಂತ ಬಾಗಿಲ ತೆಗೆದು ಅವನ ಮಗಳು ಬಂದು ಒಂದೇ ಸಮನೆ ಅಳಲು ಪ್ರಾರಂಬಿಸುತಾಲೆ. ಅಪ್ಪ ಅವಳ ಹತ್ರ ಹೋಗಿ ತುಂಬಾ ಸಮಾಧಾನದಿಂದ ಯಾಕಮ್ಮ ಮಗಳೆ ಎನ್ ಆಯ್ತು? ಅಂತ ಕೇಳ್ತಾನೆ. ಮಗಳು ಹೇಳ್ತಾಳೆ “ಅಪ್ಪ ನನಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿಬಿಟ್ಟಿದೆ, ನಾನು ಸೋತು ಹೋಗಿಬಿಟ್ಟಿದೆನೆ, ಒಂದು ಆದ ಮೇಲೆ ಒಂದು ಸಮಸ್ಯೆಗಳು ಬಂದು ನನ್ನ ಪ್ರಾಣ ಹಿಂಡತಾ ಇವೆ ಬೇಡ ಅಪ್ಪ ನನಗೆ ಈ ಬದಕು ಬೇಡ” ಅಂತ ಅಂದಳು.

ಅಪ್ಪಾ ತುಂಬಾ ಸಮಾಧಾನ ದಿಂದ ಮಗಳನ್ನು ಅಡುಗೆ ಮನೆಗೆ ಕರೆದುಕೊಂಡು ಹೋದ, ಅಲ್ಲಿ ಮೂರು ಜಾರ್ ಅನ್ನು ತೆಗೆದುಕೊಂಡ ಮೊದಲನೆಯದರಲ್ಲಿ ಆಲೂಗಡ್ಡೆಗಳನ್ನು ಹಾಕಿದ, ಎರಡನೆಯದರಲ್ಲಿ ಮೊಟ್ಟೆ ಹಾಕಿದ, ಮೂರನೆಯದರಲ್ಲಿ ಕಾಫೀ ಬೀಜಗಳನ್ನು ಹಾಕಿ ಮೂರರಲ್ಲಿಯೂ ಸ್ವಲ್ಪ ನೀರು ಹಾಕಿ ಒಲೆ ಮೇಲೆ ಇಟ್ಟ. ಮುಂದೆ ೧೫ನಿಮಿಷ ನೀಶಬ್ದ ಮೌನ,ಮಗಳು ಸಹನೆ ಕಳೆದುಕೊಂಡ್ದು ” ಅಪ್ಪಾ ಏನು ಮಾಡ್ತಾ ಇದ್ದೀಯಾ, ನಾನು ಅಳ್ತಾ ಇದ್ದ್ರೆ ನೇನು ಅಡುಗೆ ಮಾಡ್ತ ಇದೀಯಲ್ಲಾ”. ಸ್ವಲ್ಪ ತಾಳ್ಮೆ ಇರಲೇ ಮಗಳೆ ಎಂದವನೇ ಒಂದು ಎರಡು ನಿಮಿಷ ಆದ ಮೇಲೆ ಆ ಮೂರು ಜಾರ್ ನಲ್ಲಿ ಇದ್ದ ಆಲೂಗಡ್ಡೆ, ಮೊಟ್ಟೆ ಮತ್ತು ಕಾಫೀ ತೆಗೆದು ಒಂದು ಪಾತ್ರೆ ಯಲ್ಲಿ ಹಾಕಿದ. ಮಗಳೆ ಈಗ ನಾನು ಏನು ಹೇಳ್ತೀನಿ ಸರಿಯಾಗಿ ಕೇಳು, ಮೊದಲನೆಯದರಲ್ಲಿ ಅಲ್ಲುಗಡ್ದೆ ಬಿಸಿ ನೀರಿನಲ್ಲಿ ಕುದಿಸುವ ಮುಂಚೆ ಅದು ತುಂಬಾ hard ಆಗಿತ್ತು,ಈಗ ನೋಡು ಹೇಗೆ ಮೆತೆಗೆ,ತಿನಲ್ಲು ಅರ್ಹವಾಗಿದೆ,ಇನ್ನೂ ಮೊಟ್ಟೆ ಇನ್ನಸ್ಟು ರುಚಿಕಾರವಾಗಿದೆ,ಕಾಫೀ ಬೀಜಗಳು ನೀರನ್ನು ಕಾಫೀ ಆಗಿ ಪರಿವರ್ತಿಸಿದೆ. ಈಗ ನೋಡು ಮಗಳೆ ಇವುಗಳು ಎಲ್ಲಾ ಮೊದಲು ಎದರಿಸಿದ್ದು ಕುದಿಯುವ ಬಿಸಿ ನೀರು, ಆದ್ರೆ ಇವು ಕುದಿಯವ ಬಿಸಿ ನೀರನ್ನೇ opportunity ಆಗಿ ಬದಲಿಸಿಕೊಂಡ್ದು ಅವು ಉತ್ತಮ ಆದವು. ಹಾಗೆ ಮಗಳೆ ನಿನ್ನ ಸಮಸ್ಯೆ ಗಳು ಕೂಡ ಆ ಕುದಿಯುವ ಬಿಸಿ ನೀರು ಎಲ್ಲರ ಜೀವನದಲ್ಲೂ ಇರುವುದೇ. ಆ ಕುದಿಯುವ ನೀರಿನಲ್ಲಿ ಬೆಂದು ಎದಾಗೆ ನಮ್ಮ ಜೀವನ ಉತ್ತಮವಾಗುವುದು,ಮಗಳೆ ನಿನಗೆ ಕಷ್ಟಗಳು ಬಂದಾಗ ಅಥವಾ ಸಮಸ್ಯೆ ಗಳು ಎದುರಾದಾಗ ಅದರ ಜೊತೆ ಹೋರಾಡುವ “fighting spirit” ಇರಲಿ. ನಿನ್ನ ಮನಸಿನಲ್ಲಿ ಸದಾ ಮಾಡಬೇಕು ಎಂಬ ಛಲ, ಸಾದಿಸುತನೆ ಎಂಬ ನಂಬಿಕೆ,ದೃಡ ನಿರ್ಧಾರ ಇದ್ದರೆ ನೀನು ಜೀವನದಲ್ಲಿ ಗೇದ್ದ ಗೇಲ್ತೀಯಾ……..

ಈ ಮಾತು ಕೇಳಿ ಮಗಳ ಕಣ್ಣಿನಲ್ಲಿ ಹೊಸ ಹುರುಪು, ಉತ್ಸಹಾ ಕಂಡಿಬಂದಿತು….

By- Sharan Patil

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!