ಅಂಕಣ

ನಾನು ಕಂಡಂತೆ ರಾಘವೇಶ್ವರ ಶ್ರೀಗಳು

ಕಳೆದ ಸರಿ ಸುಮಾರು ೨ ವರ್ಷಗಳಿಂದ ಅತ್ಯಾಚಾರದ ಆರೋಪವನ್ನು ಹೊತ್ತಿದ್ದ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಅಗ್ನಿಪರೀಕ್ಷೆಯನ್ನು ಎದುರಿಸಿ, ಕಳಂಕ ಮುಕ್ತರಾಗಿದ್ದಾರೆ. ಸತ್ಯವನ್ನೇ ತನ್ನ ಉಸಿರಾಗಿಸಿಕೊಂಡ ಮಠಕ್ಕೆ ಮತ್ತೊಮ್ಮೆ ಜಯವಾಗಿದೆ. ಅತ್ತೊಮ್ಮೆ ಶ್ರೀಗಳು ಅಪ್ಪಟ ಅಪರಂಜಿ, ಎಂಬುದು ಜಗಜ್ಜಾಹೀರಾಗಿದೆ. ಈ ಸಂದರ್ಭದಲ್ಲಿ ಶ್ರೀಗಳ ಕುರಿತು, ನಾನು ಕಂಡ ಅಂಶವನ್ನು ನಿಮ್ಮಲ್ಲಿ ಹಂಚಿಕೊಳ್ಳುವ ಚಿಕ್ಕ ಪ್ರಯತ್ನ ನನ್ನದು.

ನನಗೆ ಪ್ರಪ್ರಥಮ ಬಾರಿಗೆ ಶ್ರೀಗಳ ದರ್ಶನದ ಭಾಗ್ಯ ದೊರೆತಿದ್ದು ಸುಮಾರು ೧೫ ವರುಷಗಳ ಹಿಂದೆ. ಅಂದು ನಾನು ಶ್ರೀಗಳ ಕನಸಿನ ಕೂಸಾದ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನನ್ನ ಪ್ರಾಥಮಿಕ ಶಿಕ್ಷಣವನ್ನು ಪ್ರಾರಂಭಿಸಿದ್ದೆ. ಶ್ರೀಗಳು ಶಾಲೆಯ ಪ್ರಗತಿಯನ್ನು ವೀಕ್ಷಿಸಿ, ವಿದ್ಯಾರ್ಥಿಗಳನ್ನು ಹರಸುವುದಕ್ಕೋಸ್ಕರವಾಗಿ ಚಿತ್ತೈಸಿದ್ದರು. ಶಿಷ್ಯ ವತ್ಸಲನಾದ ನಮ್ಮ ಗುರುಗಳನ್ನು ಕಂಡು ನಾನು ಪ್ರಾರಂಭದಲ್ಲಿ ಹೆದರಿದ್ದೆ. ಸಂತರ ಉಡುಗೆ, ಗಾಂಭೀರ್ಯ,ಸದಾ ಜತೆಯಿರುವ ಪರಿವಾರ ಎಲ್ಲವೂ ನನಗೆ ಹೊಸದೇ. ನನಗೆ ನೆನಪಿಗೆ, ಬಂದಾಕ್ಷಣದಿಂದ ನನ್ನ ಜೀವನದಲ್ಲಿ ನಾನು ಕಂಡ ಮೊದಲು ಕಂಡ ಸ್ವಾಮೀಜಿಗಳೆಂದರೆ ರಾಘವೇಶ್ವರ ಶ್ರೀಗಳು . ಇದೂ ನನ್ನ ಭಯದ ಕಾರಣವಿರಬಹುದು. ಅಂದು ನನಗೆ ತರಗತಿಯಲ್ಲಿ ಇತರ ವಿದ್ಯಾರ್ಥಿಗಳೊಂದಿಗೆ ಫಲ-ಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದ್ದರು. ಆದಕ್ಕಿಂತ ಹೆಚ್ಚೇನೂ ಅಂದಿನದು ನೆನಪಿಲ್ಲ.

ನಂತರ ಹಲವು ಬಾರಿ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಮನೆಯವರ ಜೊತೆಗೆ ತೆರಳಿದ್ದೆ. ಪ್ರತೀ ಬಾರಿಯೂ ಶ್ರೀಗಳ ತೇಜಸ್ಸಿನ ಮುಖದಿಂದ ನಿರಂತರವಾಗಿ ಹರಿಯುವ ನಿಷ್ಕಲ್ಮಶವಾದ ನಗುವು, ನನ್ನನ್ನು ವಿಶೇಷವಾಗಿ ಆಕರ್ಶಿಸುತ್ತಿತ್ತು. ಮತ್ತೆ, ಮತ್ತೆ ಮನವು ಗುರುಗಳ ದರುಶನದ ಬಯಕೆಯನ್ನ ಆಗ್ರಹಿಸುತ್ತಿತ್ತು. ಪ್ರತೀ ಬಾರಿಯೂ ಮಠದಿಂದ ಹಿಂತಿರುಗುವಾಗ ಏನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಆಗಲೇ ನಾನು ಮಠದೊಡನೆ, ಗುರುಗಳೊಡನೆ ಭಾವನಾತ್ಮಕವಾಗಿ ಬಂಧಿಯಾಗಿದ್ದೆ.

ನಂತರದ ದಿನಗಳಲ್ಲಿ ಗುರುಗಳು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಸಂಘಟನೆಯನ್ನು ರಚಿಸಿ ಹತ್ತಾರು ಯೋಜನೆಗಳನ್ನು ಕೈಗೆತ್ತಿಕೊಂಡು ಹಗಲು,ರಾತ್ರಿ ಎನ್ನದೆ, ಅದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಶ್ರೀಗಳು ಸಂಕಲ್ಪಿಸಿದ ಕಾರ್ಯಗಳೆಲ್ಲಾ “ ನಭೂತೋ ನಭವಿಷ್ಯತಿ “ ಎಂಬಂತೆ ನಡೆದು ಹೋದವು. ಹಲವು ವರ್ಷಗಳಿಂದ ಮಠವನ್ನೇ ಮರೆತಿದ್ದ ಸಾವಿರಾರು ಶಿಷ್ಯರು ಮಠದ ಕಡೆಗೆ ಆಕರ್ಷಿತರಾದರು. ಪುಟ್ಟ, ಪುಟ್ಟ ಮಕ್ಕಳಿಗಂತೂ, ಗುರುಗಳು ಪ್ರೀತಿಯ ಗುರು ಚಾಮಿ(ದೇವರು) ಯಾದರು. ಇದರೊಂದಿಗೆ ಗುರುಗಳು ಗೋವಿನ ಅರಿವನ್ನು ದೇಶವ್ಯಾಪಿಯಾಗಿ ಮೂಡಿಸಿದರು. ಶ್ರೀಮಠದ ಗೋರಕ್ಷಣೆಗೂ ಕೂಡ ಸಮಾಜದಿಂದ ಅಭೂತಪೂರ್ವವಾದ ಬೆಂಬಲವು ಕೂಡಾ ದೊರೆಯಿತು.ಹಲವು ಗೋಶಾಲೆಗಳೂ ಕೂಡಾ ಮಠದ ವತಿಯಿಂದ ವ್ಯವಸ್ಥಿತವಾಗಿ ಪಾರಂಭವಾದವು.

ನಂತರ ಆರಂಭವಾಗಿದ್ದು – ರಾಮಕಥೆ. ರಾಮಕಥೆಯು ಗುರುಗಳ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು. ಜಾತಿ ಭೇದವನ್ನು ಮರೆತು ೫,೦೦೦ ದಿಂದ ೧೦,೦೦೦ ವರೆಗೆ ಜನ ಭಾಗವಹಿಸುತ್ತಿದ್ದರು. ಗುರುಗಳು ಸಾಮಾನ್ಯರಲ್ಲಿ, ಸಾಮಾನ್ಯರಿಗೂ ಅರ್ಥವಾಗುವಂತೆ ಹಲವು ಉದಾಹರಣೆಗಳ, ಉಪಕಥೆಗಳ ಮೂಲಕ ಸ್ಪುಟವಾಗಿ ವಿವರಿಸುತ್ತಿದ್ದರು. ಯಾವುದೇ ಬ್ರೇಕ್’ಗಳಿಲ್ಲದೇ ಗುರುಗಳು ೩-೪ ಗಂಟೆ ಏಕಾಸನದಲ್ಲಿ ಕುಳಿತು ಉಪನ್ಯಾಸವನ್ನು ನೀಡುತ್ತಿದ್ದರು. ವೀಕ್ಷಕರೂ ಕೂಡಾ ಕಿಂಚಿತ್ ಅಲುಗಾಡುತ್ತಿರಲಿಲ್ಲ. ಕೊನೆಯಲ್ಲಂತೂ ವೀಕ್ಷಕರು “ ಜೈ! ಜೈ! ರಾಮಕಥಾ!“ ಹಾಡಿಗೆ ಹೆಜ್ಜೆಯನ್ನು ಹಾಕಿ, ಸಾತ್ವಿಕ ಸಂತೋಷವನ್ನು ಅನುಭವಿಸುತ್ತಿದ್ದರು. ಒಟ್ಟಾಗಿ ಹೇಳಿದರೆ ಗುರುಗಳು ರಾಮಕಥೆಯಲ್ಲಿ ನಮ್ಮನ್ನು ತ್ರೇತಾಯುಗಕ್ಕೇ ಕರೆದೊಯ್ದುಂತೆ ಭಾಸವಾಗುತ್ತಿತ್ತು.ಸಾಮಾನ್ಯವಾಗಿ ಮಠದಿಂದ ದೂರ ಉಳಿಯುತ್ತಿದ್ದ ಯುವಕರೂ ಕೂಡಾ ಮಠಕ್ಕೆ ರಾಮಕಥೆಯಿಂದ ಹತ್ತಿರವಾದರು.

ಇದೆಲ್ಲಾ ಅತ್ಯಂತ ವೈಭವವಾಗಿ ನಡೆಯುತ್ತಿದ್ದ ದಿನಗಳವು. ಆಗ ಇದ್ದಕ್ಕಿದ್ದಂತೇ ಶ್ರೀಗಳಿಗೆ ಎದುರಾಗಿದ್ದು ಅತ್ಯಾಚಾರವೆಂಬ ಘೋರವಾದ ಆರೋಪ. ಈ ಇಕ್ಕಟ್ಟಿನ ಸಂದರ್ಭದಲ್ಲಿಯೂ ಶ್ರೀಗಳು ಸತ್ಯದ, ಧರ್ಮದ ಹಾದಿಯನ್ನು ತೊರೆಯಲಿಲ್ಲ. ಬಂದ ಆಪತ್ತನ್ನು ತಮ್ಮ ತಪಃಶಕ್ತಿಯಿಂದ, ನಂಬಿದ ರಾಮನ ದಯೆಯಿಂದ ಅಚಲವಾಗಿ ಎದುರಿಸಿದರು. “ಧರ್ಮೋ ರಕ್ಷತಿ ರಕ್ಷಿತಃ “ಎಂಬ ಮಾತು ನಿಜವಾಯಿತು. ಗುರುಗಳು ಅಗ್ನಿಪರೀಕ್ಷೆಯಲ್ಲಿ ಗೆದ್ದು, ಚೊಕ್ಕ ಚಿನ್ನವಾಗಿ ಆರೋಪದಿಂದ ಹೊರಬಂದರು. ಇನ್ನಾದರೂ ಶ್ರೀಗಳಿಗೆ, ಶ್ರೀಗಳ ಸಮಾಜಮುಖೀ ಕಾರ್ಯಗಳಿಗೆ ಯಾವ ತಡೆಯೂ ಬಾರದಿರಲಿ, ಶ್ರೀಗಳ ಮುಖದ ಆ ಮುಗ್ಧ ನಗುವು ನಿರಂತರವಾಗಿ ಶೋಭಿಸಲಿ, ಮತ್ತು ಅತ್ಯಾಚಾರದ ಹುಸಿ ಆರೋಪವನ್ನು ಮಾಡುವವರಿಗೆ ಇದೊಂದು ಪಾಠವಾಗಲಿ..ಎಂದು ಭಗವಂತನನ್ನು ಪ್ರಾರ್ಥಿಸೋಣ.

ಚಿತ ಕೃಪೆ: ಎನ್.ಕೆ

Krishna Kumar PG

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!