Featured ಅಂಕಣ

ಇಂಧನ ಕ್ಷೇತ್ರಕ್ಕೆ ಪಿಯುಷ

ಅದು ಕಳೆದ ವರ್ಷದ ಸ್ವಾತಂತ್ರ ದಿನಾಚರಣೆ, ಕೆಂಪುಕೋಟೆಯಲ್ಲಿ ಪ್ರದಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಭಾಷಣ, ಭಾರತದ ಮುಂದಿನ ಯೋಜನೆಗಳ ಮಾತನಾಡುತ್ತಿದ್ದಾಗ ಒಂದು ಅಂಶ ಸ್ವಲ್ಪ ನನ್ನನ್ನೂ ದಂಗು ಬಡಿಸಿತ್ತು.” ಭಾರತ ಸ್ವಾತಂತ್ರಗೊಂಡು 68  ವರ್ಷಗಳು ಕಳೆದೇ ಹೋದರೂ ಇನ್ನು ಸುಮಾರು 18452 ಹಳ್ಳಿಗಳಿಗೆ ವಿದ್ಯುತ್ಶಕ್ತಿ ತಲುಪಿಯೇ ಇಲ್ಲ ” ಮುಂದುವರೆಸುತ್ತ ಶ್ರೀ ನರೇಂದ್ರ ಮೋದಿ ಹೇಳಿದರು 1000 ದಿನಗಳಲಿ ಈ ವಿದ್ಯುತ್ಶಕ್ತಿ ತಲುಪದ ಹಳ್ಳಿಗಳನ್ನು ವಿದ್ಯುತ್ತೀಕರಣ ಮಾಡಲಾಗುವುದು! ಅದು ಸಾಧ್ಯವಾ? 68 ವರ್ಷಗಳಲ್ಲಿ ಮಾಡಲಾಗದನ್ನು ಈ ವ್ಯಕ್ತಿ ಕೇವಲ ಸಾವಿರ ದಿನಗಳಲ್ಲಿ ಮಾಡಿ ಮುಗಿಸುವನೆ ಎಂದೆನಿಸಿತ್ತು ಅವಾಗ. ಮುಂದಿನ ಸ್ವಾತಂತ್ರ ದಿನಾಚರಣೆ ಸಮೀಪಿಸುತ್ತಿದೆ, ಒಂದು ವರ್ಷ ಕಳೆದು ಹೋಯಿತು ನಾವೂ ಮರೆತೇ ಹೋಗಿದ್ದ ವಿದ್ಯುತ್ತೀಕರಣದ ವಿಷಯವನ್ನು ನಾನು ಮತ್ತೆ ನೋಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ, ಮಾಹಿತಿ ಏನೆಂದರೆ ಇನ್ನು ಒಂದು ವರ್ಷ ಸರಿಯಾಗಿ ಪೂರ್ಣಗೊಂಡಿಲ್ಲ ಇದಾಗಲೇ ಸುಮಾರು 7108ಕ್ಕು ಅಧಿಕ ಹಳ್ಳಿಗಳಿಗೆ ಹೊಸದಾಗಿ ವಿದ್ಯುತ್ ತಲುಪಿದೆ. ಯಾರು ಈ ವ್ಯಕ್ತಿ ಶ್ರೀ ನರೇಂದ್ರ ಮೋದಿಯವರ ಕನಸಿನ ಯೋಜನೆಗಳನ್ನು ಸಾಕಾರಗೊಳಿಸಲು ಹೊರಟಿರೋದು? ನಮಗೆ ಕಾಣಸಿಗುವ ವ್ಯಕ್ತಿಯೇ ಶ್ರೀ ಪಿಯುಶ್ ಗೋಯಲ್.

ಪಿಯುಶ್ ಗೋಯಲ್ ಹುಟ್ಟಿದ್ದು 13 ಜೂನ್ 1964 ಮಹಾರಾಷ್ಟ್ರದ  ಮುಂಬೈ ಮಹಾನಗರಿಯಲ್ಲಿ, ತಂದೆ ವೇದ ಪ್ರಕಾಶ್ ಗೋಯಲ್ ಪಕ್ಕಾ ಬಿಜೆಪಿಯ ಹುರಿಯಾಳು. ಅಟಲ್ ಬಿಹಾರಿ ವಾಜಪೇಯೀ ಸರ್ಕಾರದಲ್ಲಿ ಮಂತ್ರಿಯಾಗಿದ್ದವರು. ತಾಯಿ ಚಂದ್ರಕಾಂತಾ ಗೋಯಲ್. ಪಿಯುಶ್ ಗೋಯಲ್ ಎಷ್ಟು ಪ್ರತಿಭಾಶಾಲಿ ಎಂದರೆ CA ಪರೀಕ್ಷೆಯಲ್ಲಿ ದೇಶಕ್ಕೆ ದ್ವಿತೀಯ ಸ್ಥಾನ ಮತ್ತು ಅವರು ಓದುತ್ತಿದ್ದ ಮುಂಬೈ ವಿಶ್ವವಿದ್ಯಾಲಯದಲ್ಲಿಯೂ ದ್ವಿತೀಯ ಸ್ಥಾನದಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರ ಮೂಲ ವೃತ್ತಿ chartered ಅಕೌಂಟೆಂಟ್. ಪಿಯುಶ್ ಗೋಯಲರ ಈ ಬುದ್ದಿವಂತಿಕೆಯನ್ನೇ ನೋಡಿ ನರೇಂದ್ರ ಮೋದಿಯವರು ಇವರನ್ನು 2014ರ ಮಹಾಚುನಾವಣೆಯಲ್ಲಿ ಭಾಜಪ ಪಕ್ಷದ IT cellನ ಮುಖ್ಯಸ್ಥರನ್ನಾಗಿ ಮಾಡಿದ್ದಿರಬಹುದು. ನಾವೂ ಅಂದು ಕಂಡ ನರೇಂದ್ರ ಮೋದಿಯವರ ಆ ಜಾಲತಾಣಗಳ ಪ್ರಚಾರದ ಹಿಂದಿನ ಶಕ್ತಿಗಳಲ್ಲಿ ಪಿಯುಶ್ ಗೊಯಲ ಒಬ್ಬರು.

ಈ ಎಲ್ಲ ಸಾಧನೆಗಳ ಅನುಬವದಿಂದ ಪಿಯುಶ್ ಗೊಯಲರವರಿಗೆ ಭಾರತ ಸರ್ಕಾರದ ಇಂಧನ ಮತ್ತು ಕಲ್ಲಿದ್ದಲು ಖಾತೆಯ (ಸ್ವತಂತ್ರ) ಜವಾಬ್ದಾರಿ ದೊರೆತದ್ದು. ಪಿಯುಶ್ ಗೊಯಲ ಅದಿಕಾರ ಸ್ವೀಕರಿಸಿದ ನಂತರ ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಭಾರತದಾದ್ಯಂತ  24*7 ವಿದ್ಯುತ ನೀಡುವ ನಿಟ್ಟಿನಲ್ಲಿ ಹಗಲು ರಾತ್ರಿಯೆನ್ನದೆ ಶ್ರಮ ವಹಿಸುತ್ತಿದ್ದಾರೆ. ಇವರ ಕೆಲವು ಸಾದನೆಗಳ ಪಟ್ಟಿ ಈ ರೀತಿ ಇದೆ

* ” ಒಂದು ದೇಶ ಒಂದು ಗ್ರಿಡ್ ಒಂದು ಬೆಲೆ “, ದೇಶಾದ್ಯಂತ ಎಲ್ಲ ಗ್ರಿಡ್’ಗಳನ್ನೂ ಒಂದುಗೂಡಿಸಿ ಒಂದೇ ಬೆಲೆಯಲ್ಲಿ ವಿದ್ಯುತ್ ದೊರೆಯುವಂತೆ ಮಾಡುವ ಯೋಜನೆ, ಈ ಯೋಜನೆಯಿಂದ ಹೆಚ್ಚು ವಿದ್ಯುತ್ ಅಭಾವವನ್ನು ಎದುರಿಸುತ್ತಿರುವ ಗ್ರಿಡ್’ಗಳಿಗೆ ಕಾಯಕಲ್ಪ ದೊರೆಯವದು ಹಾಗು ದೇಶದೆಲ್ಲೆಡೆ ಒಂದೇ ಬೆಲೆಯಲ್ಲಿ ವಿದ್ಯುತ್ ದೊರೆಯುವಂತಾಗುವುದು.

* “ಉದಯ್(UDAY) ಯೋಜನೆಯಡಿ ನಷ್ಟದಲ್ಲಿರುವ ಕೆಲವು ರಾಜ್ಯಗಳ ವಿದ್ಯುತ ಪ್ರಸರಣ ಕಂಪನಿಗಳಿಗೆ ಉತ್ತೇಜನ ಸಿಗುವದು. ಈಗಾಗಲೇ ಈ ಯೋಜನೆಯಡಿ ಕೇವಲ ಎರಡುವರೆ ತಿಂಗಳಲ್ಲಿ ಸುಮಾರು ೧ ಲಕ್ಷ UDAY ಬಾಂಡ್ಗಳನ್ನೂ ನೀಡಲಾಗಿದ್ದು,2019 ರಿಂದ ವಾರ್ಷಿಕ ಸುಮಾರು 1.8 ಲಕ್ಷ ಕೋಟಿ ರೂಪಾಯಿಗಳ ಉಳಿತಾಯ ಮಾಡುವ ನಿರೀಕ್ಷೆಯಲಿದ್ದಾರೆ.

* “ವಿದ್ಯುತ್ ಪ್ರವಾಹ “ಎಂಬ app ನಿಂದ ವಿದ್ಯುತ್ ಶಕ್ತಿಗೆ ಸಂಬಂದಿಸಿದ ಮಾಹಿತಿಯನ್ನು ಮತ್ತು ನಿಖರವಾದ ಬೆಲೆಯ ಬಗ್ಗೆ  ತಿಳಿಯಬಹುದು

* 18452 ವಿದ್ಯುತ್ಶಕ್ತಿಯೇ ಕಾಣದ ಹಳ್ಳಿಗಳಲ್ಲಿ ಈಗಾಗಲೇ 7108 ಹಳ್ಳಿಗಳನ್ನು ವಿದ್ಯುತ್ತೀಕರಣ ಮಾಡಲಾಗಿದ್ದು, ಉಳಿದ ಹಳ್ಳಿಗಳಿಗೆ 2018 ರ ಮೇ ತಿಂಗಳ ಒಳಗಾಗಿ ಪೂರೈಸಲಾಗುವದು.

*EESL ನಿಂದ ಈಗಾಗಲೇ 9 ಕೋಟಿಗು ಅದಿಕ LED ಬಲ್ಬ್’ಗಳನ್ನು ವಿತರಿಸಲಾಗಿದೆ, LED ಬಲ್ಬ್’ಗಳು ವಿದ್ಯುತ್ ಉಳಿತಾಯದಲ್ಲಿ ಹೆಚ್ಚು ಸಹಾಯಕರ.

* ಹೊಸ ಸೋಲಾರ್ ಶಕ್ತಿಯ ಉತ್ಪಾದನೆಯಲ್ಲಿ ಕಳೆದ UPA ಸರ್ಕಾರ ಹಾಕಿದ್ದ 20000MW ಗಡಿಯನ್ನು ಶ್ರೀ ನರೇಂದ್ರ ಮೋದಿಯವರ ಸರ್ಕಾರ 100GW ಗೆ ಹೆಚ್ಚಿಸಿತ್ತು, ಅದನ್ನು ತಲುಪಲು 2022ರ ವರೆಗೆ ಗಡುವನ್ನು ನೀಡಿತ್ತು, ಆದರೆ ಪಿಯುಷ ಗೊಯಲರು ಹೋಗುತ್ತಿರುವ ವೇಗವನ್ನು ಗಮನಿಸಿದರೆ 2017 ರಲ್ಲೇ ಈ ಗಡುವನ್ನು ಪೂರ್ಣಗೊಳಿಸುವ ಮಾಹಿತಿಯಿದೆ. ಕಳೆದ ವರ್ಷವೊಂದರಲ್ಲೇ ಪಿಯುಶ್ ಗೊಯಲ ನೇತೃತ್ವದ ಮಂತ್ರಾಲಯ 19000MW ಹೊಸದಾಗಿ ಸೋಲಾರ್ ವಿದ್ಯತ್ ಉತ್ಪಾದಿಸಿ ಸಾದನೆಗೈದಿದೆ.

* 2022 ರ ವೇಳೆಗೆ ಒಟ್ಟು 175GW ವಿದ್ಯುತನ್ನು ನವಿಕರಿಸಬಹುದಾದ ಇಂದನ ಮೂಲಗಳಿಂದ ಉತ್ಪಾದಿಸಲಾಗುವದು, ಅದರಲ್ಲಿ 100GW ಸೋಲಾರ್ ಶಕ್ತಿಯಿಂದ, 60GW ವಾಯು ಶಕ್ತಿಯಿಂದ, 10GW ಜ್ಯವಿಕ ಶಕ್ತಿಯಿಂದ ಮತ್ತು 5GW ಜಲ ಶಕ್ತಿಯಿಂದ ತಯಾರಿಸುವ ಯೋಜನೆಯಿದೆ.

* 2016-2017 ರ ವರ್ಷವನ್ನು ಜಲಶಕ್ತಿ ವಿದ್ಯುತಿಗಾಗಿ ಮೀಸಲಿರಿಸಲಾಗಿದ್ದು 30-40 ವರ್ಷಗಳಿಂದ ಉತ್ತೇಜನ ಸಿಗದೆ ಅಭಿವೃದ್ದಿ ಕಾಣದ ಮೂಲದ ಸಮಸ್ಯೆಗಳನ್ನು ನಿವಾರಿಸಲಾಗುವುದು.

* ದಾಖಲೆಯ 3200MW ವಾಯುಶಕ್ತಿ ವಿದ್ಯುದಾಗರಗಳ ನಿರ್ಮಾಣವಾಗಿದ್ದು ಈ ವರ್ಷದ ಮತ್ತೊಂದು ಸಾಧನೆ.

* ಒಟ್ಟು ಕಳೆದ ಹಣಕಾಸು ವರ್ಷದಲ್ಲಿ 23000MW ವಿದ್ಯುತ್ ಹೊಸದಾಗಿ ಉತ್ಪಾದಿಸಲಾಗಿದೆ.

* ಫ್ರಾನ್ಸಿನ ಪ್ಯಾರಿಸಿನಲ್ಲಿ ನಡೆದ ಜಾಗತಿಕ ತಾಪಮಾನ ಬದಲಾವಣೆ ಸಮ್ಮೇಳನದಲ್ಲಿ ಭಾರತದ ಪ್ರದಾನಿ ನರೇಂದ್ರ ಮೋದಿ ವಿಶ್ವವನ್ನೇ ಮುನ್ನಡೆಸಿದರು, ಆ ಕಾರ್ಯಕ್ರಮದಲ್ಲಿ ಭಾರತದ ಘನತೆಯನ್ನು ಹೆಚ್ಚಿಸುವಲ್ಲಿ ಪಿಯುಶ್ ಗೋಯಲರ ಪಾತ್ರವು ಹೆಚ್ಚಿನದು.  

ಪಟ್ಟಿಮಾಡುತ್ತ ಹೋದರೆ ಮುಗಿಯುವ ಮಾತೇ ಕಾಣಿಸುತ್ತಿಲ್ಲ. ಕೆಲವು ವ್ಯಕ್ತಿಗಳೇ ಹಾಗೆ ಎಲೆಮರೆಯ ಕಾಯಿಯಂತೆ ತಮಗೆ ನೀಡಿರುವ ಕೆಲಸಗಳನ್ನು ಉನ್ನತವಾಗಿ ಮಾಡುತ್ತಾರೆ, ಅವರಲ್ಲಿ ಪಿಯುಶ್ ಗೊಯಲರು ಒಬ್ಬರು. ಎರಡೇ ವರ್ಷಗಳಲ್ಲಿ ಈ ಎಲ್ಲ ಸಾಧನೆಗಳನ್ನು ಮಾಡುವುದೆಂದರೆ ಸಣ್ಣ ಮಾತಲ್ಲ. ಆದರೆ ಕೆಲವು ರಾಜಕೀಯ ನಾಯಕರಿಗೆ, ತಥಾಕಥಿತ ಬುದ್ಧಿಜೀವಿಗಳಿಗೆ ಹಾಗು ಕೆಲವು ಸಣ್ಣತನದ ಮಾಧ್ಯಮಗಳಿಗೆ ಈ ಸಾಧನೆಗಳು ಸುದ್ದಿಯೆ ಅಲ್ಲ. ಏನೇ ಆಗಲಿ ಭಾರತ ಮುಂದುವರೆಯಲಿ, ಪಿಯುಶ್ ಗೊಯಲರಂತಹ ನಾಯಕರು ಬೆಳೆಯಲಿ. ಜೈ ಹಿಂದ್  

– ಸಚಿನ್ ಹಂಚಿನಾಲ್

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!