ಕಾಯಕವೇ ಕೈಲಾಸ ಎಂಬ ಮಾತೆಲ್ಲಾ ದುಡಿಮೆಯ ಮಹತ್ವವನ್ನು ಸಾರಿ ಹೇಳುತ್ತದೆ, ಆದರೆ ಆಧುನಿಕ ಯುಗದಲ್ಲಿ ಮನುಷ್ಯನಿಗೆ ಈಗ ಎಷ್ಟು ದುಡಿಯಬೇಕು, ಎಷ್ಟು ಬದುಕಬೇಕು ಎಂಬುವುದನ್ನು ಅವಶ್ಯಕವಾಗಿ ಕಲಿಸಿಕೊಡಬೇಕಾದ ಸಂದರ್ಭ ಬಂದಿದೆ. ದುಡಿಮೆಯ ತಿರುಗಣಿಗೆ ಬಿದ್ದ ಮನುಷ್ಯ ಬದುಕನ್ನು, ಬದುಕುವುದನ್ನು ಆಸ್ವಾದಿಸುವುದನ್ನೆ ಮರೆತಿದ್ದಾನೆ… ಈ ವಿಚಾರಧಾರೆಗಳನ್ನು ಸಹ ಒಂದು ಮನೆಯಿಂದ ಇನ್ನೊಂದು ಮನೆಗೆ ಕನ್ಯೆಯನ್ನು ಧಾರೆಯರೆದು ಕೊಡುವ ಹಾಗೆ ತಮ್ಮ ಮುಂದಿನ ಪೀಳಿಗೆಗೆ ಧಾರೆಯರೆಯುತ್ತಿದ್ದಾರೆ. ಹಾಗಾದರೆ ನಮಗೆ ಯಾಂತ್ರಿಕ ಬದುಕು ಅನಿವಾರ್ಯವೇ? ಅದಕ್ಕೆ ಒಗ್ಗಿಕೊಳ್ಳಬೇಕೆ? ಈ ಯಾಂತ್ರಿಕತೆಯಿಂದ ಹೊರ ಬರುವುದು ಸಾಧ್ಯವಿಲ್ಲವೇ? ಎಂದೆಲ್ಲಾ ಯೋಚಿಸಿದಾಗ ಇಲ್ಲಿಗೆ ಜೀವನ ಕೊನೆಯ ಪುಟವನ್ನು ಹರಿಯಲು ಸಿದ್ಧರಾಗಿದ್ದೇವೆ ಎಂದು ಭಾಸವಾಗುತ್ತದೆ… ಬಿಕಾಜ್ ಇಟ್ ಈಸ್ ರುಟೀನ್ ವರ್ಕ್….. ದುಡಿಬೇಕು…ಗಳಿಸಬೇಕು,… ಮದುವೆಯಾಗಬೇಕು..(.ನಾನು ಒಬ್ಬ ಅನುಭವಿ ವ್ಯಕ್ತಿಯನ್ನ ಕೇಳದೆ ಸರ್ ಈ ಮದುವೆ ದಿನ ಅರಿಶಿನ ಹಚ್ಚುತ್ತಾರೆ ಯಾಕೆ ಅಂದೇ… ಮದುವೆ ಅನ್ನೊದು ಒಂದ ದೊಡ್ಡ ಗಾಯ ಅದಕ್ಕೆ ಮೊದಲು ಅರಿಶಿನ ಹಚ್ಚುತ್ತಾರೆ ಅಂದ್ರು,,,) ನಮ್ಮ ಕುಟುಂಬ ಚೆನ್ನಾಗಿರಬೇಕು ಎಂದು ಇಲ್ಲಿಯವರೆಗೆ ಯೋಚಿಸುವ ನಾವು ಅದೇ ಕುಟುಂಬದ ಜೊತೆ ಸಮಯ ಕಳೆಯೋಕೆ ಯೋಚಿಸಲ್ಲಾ, ಹಾಗಂತ ದುಡಿಯುವ ವರ್ಗವನ್ನ ದೂಷಿಸುತ್ತಿಲ್ಲಾ…ಆದರೆ ಬರಹಗಾರರು ಆದ ರವಿ ಬೆಳೆಗೆರೆ ಹೇಳುತ್ತಾರೆ… ದುಡ್ಡು ಮಾಡಬೇಕು ಅಂತಾ ಹೋದರೆ ದುಡ್ಡು ಮಾತ್ರ ಮಾಡ್ತೀರಾ… ಹೆಸರು ಮಾಡಬೇಕು ಅಂತಾ ಹೋದರೆ ಹೆಸರ ಮಾತ್ರ ಮಾಡ್ತೀರಾ.. ದುಡಿತೀನಿ ಅಂತಾ ಹೇಳಿ ಆಗ ಹೆಸರು ಮತ್ತು ದುಡ್ಡು ತಾನಾಗೆ ಬರುತ್ತೇ.. ಅದರೆ ನಮ್ಮ ಸಮಾಜ ಇದರ ಯಾವುದೇ ಪರಿಭಾವವಿಲ್ಲದೆ.. ಕೆಲಸ ಮಾಡಬೇಕು.. ಕೆಲಸ ಮಾಡಬೇಕು…
ಇದು ಯಾವ ರೀತಿ ರಕ್ತಗತವಾಗಿದೆ ಅಂದರೆ ನಮ್ಮ ಶಿಕ್ಷಣಕ್ಕೂ ಹೇಗೆ ಪ್ರಭಾವ ಬೀರಿದೆ ಅಂದರೆ… ನಾನು ಸಾಹಿತ್ಯಿಕವಾಗಿ ಒಪ್ಪಿಕೊಂಡಂತಹ ನನ್ನ ಗುರುಗಳಾದ ಚರ್ಕವರ್ತಿ ಸೂಲಿಬೆಲೆಯವರು ಯಾವಾಗಲೂ ತಮ್ಮ ಹಲವಾರು ಭಾಷಣಗಳಲ್ಲಿ ಹೇಳ್ತಿರ್ತಾರೆ ಇಂಜಿನಿಯರ್’ಗಳನ್ನ ಮತ್ತು ಅದನ್ನು ಓದುವ ವಿದ್ಯಾರ್ಥಿಗಳನ್ನ ಮಾತಾಡಿಸೋಕೆ ಇಷ್ಟ ಪಡ್ತೀನಿ, ಅವರ ಯಾವಾಗಲೂ ಹೇಳ್ತಿರ್ತಾರಂತೆ. ನಾನು ಇನ್ಪೋಸಿಸ್ನಲ್ಲಿ ಕೆಲಸ ಮಾಡಬೇಕು, ವಿಪ್ರೋದಲ್ಲಿ ಕೆಲಸ ಮಾಡಬೇಕು, ಪ್ಲಿಪ್ಕಾರ್ಟನಲ್ಲಿ ಕೆಲಸ ಮಾಡಬೇಕು, ಜನರಲ್ ಮೋಟರ್ಸ್ನಲ್ಲಿ ಕೆಲಸಮಾಡಬೇಕು ಅಂತಾ ಹತ್ತಾರು ಪ್ರತಿಷ್ಡಿತ ಕಂಪನಿಗಳ ಪಟ್ಟಿನೆ ತಯಾರಿಸ್ತಾರೆ.. ಆದರೆ ಒಂದ ಮಾತು ಕೆಲಸ=ಕೂಲಿ ಒಪ್ತೀರಾ..? ಹಾಗಾದರೆ ಇವರು ಇಂಜಿಯರ್ ಓದಿದ್ದು ಕೂಲಿ ಮಾಡೋಕಾ.. ಕೂಲಿ ಮಾಡೋದ ಬಿಟ್ಟು ಮೇಲೆ ಯಾರು ಯೋಚನೇನೆ ಮಾಡಲ್ವಲ್ಲಾ… ಯಾರಾದ್ರು ಒಬ್ಬ ಇಂಜನಿಯರ್ ನಾನು ಒಂದು ಕಂಪನಿ ಪ್ರಾರಂಭಿಸ್ತೀನಿ ಅನ್ನೋರಿಲ್ಲಾ ಅಂತಾ. ಇದೇ ತರಹ ಬಿ.ಕಾಂ. ಬಿಎ. ಪಿಯುಸಿ, ಎಲ್ಲಾ ಓದಿರೊರು ಬೆಂಗಳೂರು..ಮಂಗಳೂರು ಅಂತಾ ಗುಳೇ ಹೊಗ್ತಾರೆ…ಯಾಕೆ? ಬದುಕು ದಿಕ್ಕು ತಪ್ಪಿದ ಹಾಗೆ ಅನ್ಸಲ್ವಾ…!
ಅಷ್ಟೇ ಯಾಕೆ ಮೇಲೆ ನಾನು ಪ್ರಸ್ಥಾಪಿಸಿದ ಹಾಗೆ ರವಿ ಬೆಳೆಗರೆಯವರೆ ವಿರುದ್ದವಾಗಿದ್ದರು…ಕರ್ನಾಟಕ ಯುನಿರ್ವಸಿಟಿ ಬಿಎ’ಗೆ ಪ್ರವೇಶ ಪಡೆದು ಉತ್ತಮವಾಗಿ ಓದಿ ಅದಕ್ಕಿಂತಾ ವಿಶಿಷ್ಟ ಅಂದರೆ ಅಪ್ರತಿಮ ಕುಸ್ತಿಪಟುವಾಗಿದ್ದ. ಪ್ರಥಮ ಭಾರಿಗೆ ಬಾಗಲಕೋಟೆಯಲ್ಲಿ ನಡೆದ ಇಂಟರ್ ಯೂನಿರ್ವಸಿಟಿ ಸ್ಪರ್ಧೆಯಲ್ಲಿ ಆಕಾಶದಲ್ಲಿ ಮೋಡಗಳಿದ್ದವಾದರೂ ಹಗಲು ಪ್ರಖರವಾಗಿತ್ತು..ಅದರ ಬೆನ್ನಲ್ಲೆ ಕೇಳಿಸಿದ್ದು ರೆಪರಿಯ ವಿಷಲ್ ಎದುರಾಳಿ ಸೊಲ್ಲಾಪೂರ ಯೂನಿರ್ವಸಿಟಿ ಹುಡುಗ ರವಿಯವರೆ ಹೆಳ್ತಾರೆ ಮತ್ತೆ ಕಣಕ್ಕೆ ಜನ್ಮದಲ್ಲೆಂದೂ ಇಳಿಯಬಾರದು ಅಂತಾ..(ಕಣ್ಣ ಬದಿಯಿಂದ ಸೋರಿದ ನೆತ್ತರು ನೆಲ ತೋಯಿಸಿತ್ತಂತೆ ಆ ಹುಡುಗಾ ನಿಶ್ಛಲವಾಗಿ ಮಲಗಿದ್ಧ) ಮುಂದೆ ಶಿವಮೊಗ್ಗದಲ್ಲಿ ಹೀಗೇ ಎಲ್ಲಾ ಪಂದ್ಯಾವಳಿಗಲ್ಲಿ ಗೆದ್ದು ನಗೆಬೀರಿದ್ದುಂಟು..ಅಷ್ಟು ಹೊತ್ತಿಗೆ ದೊಡ್ಡ ಹೆಸರು ಮಾಡಿದ್ದ ರವಿಗೆ ಹಲವಾರು ಸ್ಪೋರ್ಟ್ಸ್ ಕಂಪನಿಗಳು ಕಣ್ಣು ಬಿದ್ದಿದ್ದವು…ನಂತರ ಯೂನಿರ್ವಸಿಟಿ ಪರಿಧಿ ದಾಟಿ ಬ್ರೇಜಿಲ್’ನ ಕೋಚ್’ನಿಂದ ತರಬೇತಿ ಪಡೆದು ಡಾರ್ಜಲಿಂಗ್ ಲೀಗ್ ತಲುಪಿದ ಅಪ್ರತಿಮ ಪ್ರತಿಭೆ ಅದು. ಆದರೆ ದುಷ್ಟಚಟಗಳ ದಾಸನಾಗಿ ಕೊನೆಗೆ ಕೆಲಸ ಹುಡುಕುತ್ತಾ ಬೆಂಗಳೂರಿಗೆ ಬಂದು ಒಂದು ಹಂತದ ಜೀವನ ನಡೆಸಿ ತನ್ನ ಸರ್ವಸ್ವವನ್ನೆ ಕಳಕೊಂಡು ಹೆಂಡತಿ ಮಕ್ಕಳಿಂದ ದೂರಾಗಿ ನಾನು ಸಾಯಬೇಕು ಅಂತಾ ಬೆಂಗಳೂರಿಂದ ತಾನು ಹುಟ್ಟಿದ ಸ್ಥಳ ಬಳ್ಳಾರಿಗೆ ಬರ್ತಾರೆ. ಆ ವ್ಯಕ್ತಿ ಎಷ್ಟು ಬೇಸತ್ತು ಹೋಗಿದ್ದನೆಂದೆರ ಬೆಂಗಳೂರಿಂದ-ಬಳ್ಳಾರಿಗೆ ಹೊರಟೆಯನ್ನುವ ಬದಲು ಜೀವನದಿಂದ-ಸಾವಿನೆಡೆಗೆ ಅಂತಾರಲ್ಲಾ ಹಾಗೆ..ಹ್ಹಾ ಇದೇನಾ ಜೀವನಾ… ಅವರಲ್ಲಿರುವ ಆತ್ಮವಿಶ್ವಾಸ ಒಂದೇ ಮತ್ತೆ ಅವರನ್ನ ಜೀವನದ ಕಡೆಗೆ ಮರಳಿಸಿತು…ಈಗ ಅವರು ಕೆಲಸ ಮಾಡ್ತಿಲ್ಲಾ. ಕೆಲಸ ಕೊಡ್ತಿದ್ಧಾರೆ.
ಆದರೆ ಈ ದುಡಿಮೆ ಅನ್ನೋದೆ ಹಾಗೇನಾ. ಕೋಕಾ-ಕೋಲಾ ಕಂಪನಿಯ ಮಾಜಿ ಸಿ.ಇ.ಒ. ಬ್ರಯಾಸ್ ಡೈಸನ್ ಅವರು ತಮ್ಮ ಒಂದು ಪುಟ್ಟ ಬಾಷಣವೊಂದನ್ನು ನೆನಪಿಸುತ್ತೆನೆ. ಅವರು ಬದುಕುವ ಬಗ್ಗೆ, ಬದುಕನ್ನು ಕಂಡುಕೊಳ್ಳುವ ಬಗ್ಗೆ ತುಂಬಾ ಸೊಗಸಾಗಿ ಹೇಳಿದ್ದಾರೆ… ನಿಮ್ಮ ಬದುಕನ್ನು ಒಂದು ಆಟದಂತೆ ಊಹಿಸಿಕೊಳ್ಳಿ ಆ ಆಟದಲ್ಲಿ ನೀವು ಸರ್ಕಸ್ನಲ್ಲಿ ಮಾಡುವಂತೆ ಐದು ಚೆಂಡಗಳನ್ನು ತೂರುತ್ತಾ ಕೈಯಲ್ಲಿ ಕ್ಯಾಚ್ ಹಿಡಿಯುವಿರಿ ಒಂದೊಂದು ಚೆಂಡನ್ನು ಕೆಲಸ, ಕುಟುಂಬ, ಆರೋಗ್ಯ, ಸ್ನೇಹಿತರು ಮತ್ತು ನಿಮ್ಮ ಚೈತನ್ಯ ಎಂದು ಕಲ್ಪಿಸಿಕೊಳ್ಳಿ.. ಇದರಿಂದ ನೀವು ತಿಳಿದುಕೊಳ್ಳಬೇಕಾದ್ದು ಏನಂದರೆ ನಿಮ್ಮ ಕೆಲಸವೆಂಬ ಚೆಂಡು ಕೆಳಗೆ ಬಿದ್ದರೂ ಮತ್ತೆ ಮತ್ತೆ ಚೈತನ್ಯಯುತವಾಗಿ ಮುಂದುವರೆಯುವಂತೆ ನಿಮ್ಮನ್ನು ನೀವು ಸಿದ್ಧತೆ ಮಾಡಿಕೊಳ್ಳಿ ಆಗ ಮಾತ್ರ ನೀವು ನಿಮ್ಮ ಕೆಲಸದಲ್ಲಿ ತೃಪ್ತಿ, ಯಶಸ್ಸು ಕಾಣಬಲ್ಲಿರಿ. ಈ ದುಡಿಮೆಯ ಮೂಲಕ ತೃಪ್ತಿ ಕಾಣಬಯಸುವುದು ಹೆಚ್ಚು. ಅದೇ ಯಶಸ್ಸು ಕಾಣಬೇಕು ಅನ್ನುವ ವ್ಯಕ್ತಿಗಳು ಈ ಯಾಂತ್ರಿಕತೆಗೆ ಹೊಂದಿಕೊಂಡಿರುವುದಿಲ್ಲಾ ಜೀವನ ಪ್ರತಿ ಕ್ಷಣವನ್ನು ಸಂತೋಷದಿಂದ ಅನುಭವಿಸುವ ಜೀವಿಯಾಗಿರುತ್ತಾರೆ. ಆದರೆ ತೃಪ್ತಿ ಎಂಬ ಪದಕ್ಕೆ ಕೊನೆಯಿಲ್ಲಾ. ಕೆಲಸ ಸಿಕ್ಕರೆ ತೃಪ್ತಿ, ಕೆಲಸ ಸಿಕ್ಕ ಮೇಲೆ ಸಂಬಳ ನಾವು ಅಂದುಕೊಂಡಷ್ಟು ಸಿಕ್ಕರೆ ತೃಪ್ತಿ, ಅದು ಸಿಕ್ಕರೆ ಮತ್ತೆ ಆಸೆಯು ಹೆಚ್ಚಿದಂತೆಲ್ಲಾ ತೃಪ್ತಿಯ ಸಂಖ್ಯೆಗಳು ಹೆಚ್ಚುತ್ತವೆ. ಹೇಗಂದ್ರೆ ಇದು ಕಾಲೇಜಿನಲ್ಲಿ ಲಾಸ್ಟ್ ಬೆಂಚ್ಗೆ ಕುತಗೊಂಡ ಪಾಸ ಆದರೆ ಸಾಕು ಎನ್ನುವ ವಿದ್ಯಾರ್ತಿಗಳಿಗೆ ಇರುವ ಹಾಗೆ ಇರುವಂತಹದ್ದಲ್ಲಾ. ತೃಪ್ತಿ ಒಂಥರಾ ಆಸೆಗೆ ಮಹಾದ್ವಾರವಿದ್ದಂತೆ, ಬದುಕು ಒಂದು ಸುಂದರ ಕಲೆ, ಆ ಕಲೆ ಗೊತ್ತಿರುವ ವ್ಯಕ್ತಿಗೆ ಯಾವ ಸಂದರ್ಭ ಯಾವ ಪಾತ್ರವಹಿಸಬೇಕು ಎಂಬುವುದು ತಿಳಿದಿರುತ್ತದೆ. ಕೆಲ ವಸ್ತು ಮತ್ತು ಸಂಬಂಧಗಳು ನಮ್ಮ ಜೀವನದ ಬೆಳವಣಿಗೆಗೆ ಯಾವ ರೀತಿಯಲ್ಲಿಯೂ ಸಹಾಯಕವಲ್ಲಾ ಎಂದು ಗೊತ್ತಿದ್ದರೂ ಅವನ್ನು ಅತಿಯಾಗಿ ಹಚ್ಚಿಕೊಂಡಿರುತ್ತೇವೆ. ಈ ಯಾಂತ್ರಿಕ ಬದುಕಿನ ಉದ್ದಕ್ಕೂ ನಮಗೆ ತಿಳಿದು ನಮ್ಮನ್ನು ಆವರಿಸಿ ಬಿಟ್ಟಿರುವ ಕೆಲವು ಸಂಗತಿಗಳು ನಮ್ಮ ಜೀವನವನ್ನು ನಾಶ ಮಾಡುವ ಸ್ಥಿತಿಗೆ ತಳ್ಳುತ್ತವೆ.
ಈ ಬದುಕಿನ ಮುಂದೆ ಸ್ವಲ್ಪ ವಿಚಾರಿಸಿ ಒಂದು ಹಜ್ಜೆ ಮುಂದೆ ಇಟ್ಟು ಯೋಚಿಸಿ ಅಲ್ಲಿರುವ ಪ್ರಪಂಚ ನಿಮ್ಮಲ್ಲಿರುವ ದುಃಖ, ದುಗುಡ, ವೇದನೆ, ನೋವು ಎಲ್ಲಾ ಮಾಯವಾಗಿ ಹೊಸ ಆಲೋಚನೆಗಳ ಕಡೆಗೆ ಕರೆಯ್ದ್ಯೊಯುತ್ತದೆ. ಆಂತಕವಿರುವಾಗ ಮೃಷ್ಟಾನ್ನ ಭೋಜನ ಮಾಡುವುದು ನೆಮ್ಮದಿಯಲ್ಲಿರುವ ಒಣರೊಟ್ಟಿ ತಿನ್ನುವುದಕ್ಕೆ ಸಮ, ಹಾಗೆ ಬದುಕನ್ನು ಬದಲಿಸುವ ಬದಲಿಗೆ ಬದುಕುವ ದಿಕ್ಕನ್ನು ಬದಲಿಸಿ ನೋಡಿ ಅದು ನಿಮ್ಮನ್ನು ಬದಲಿಸಿರುತ್ತದೆ…