ನಡುತಿಮಿರ ಪರದೆಯೆಳೆ
ಸುಡುರಂಗ ನಿಗಿನಿಗಿಸೆ
ಹಿಡಿಜೀವವೊಂದಿಲ್ಲಿ ಕುಣಿಯಲೆದ್ದು |
ಜಡ ಮುರಿದು ಬಯಲಲ್ಲಿ
ಅಡಿ ಮೇಲೆ ಹಾರಿರಲು
ಬಡಿದಂತೆ ಮಾರ್ದನಿಸಲದುವೆ ಸದ್ದು ||
ಬಣ್ಣಗಳ ಲೇಪದಲಿ
ಕಣ್ಣುಗಳೆ ದನಿಯಾಗೆ
ತಣ್ಣನೆಯ ಛಳಿಯೆಲ್ಲ ಧೂಳಿಪಟವೆ |
ಬಣ್ಣನೆಗೆ ದಂಡವದು
ಹುಣ್ಣಿಮೆಯೆ ಕಂದಿರಲು
ನುಣ್ಣನೆಯ ಹಾಳೆಯಲಿ ಚಿತ್ರಪಟವೆ ||
ಬಿಳಲುಗಳನಡಗಿಸಿದ
ಪುಳಕಿತವು ಭರಪೂರ
ಗಳಿಸಿರಲು ಸಭೆತುಂಬ ಕರತಾಡನ |
ಹಳೆಹಳಿಯ ಪಯಣಿಗನೊ
ಸುಳುಹಿಂದ ಕಲ್ಪನೆಯೊ
ತಳಪಾಯ ಗುರುತರದೆದೆಯಭಿಯಾನ ||
(ಇದು ಕುಸುಮ ಷಟ್ಪದಿಯಲ್ಲಿದೆ . ಕುಸುಮ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,೨,೪,೫ನೆಯ ಸಾಲುಗಳು ಸಮನಾಗಿದ್ದು, ೫ ಮಾತ್ರೆಯ ಎರಡು ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ೩ ಗಣಗಳಿದ್ದು,ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು.
ಗುರುಬಸವನ(೧೪೩೦)’ಮನೋವಿಜಯ‘ಕಾವ್ಯ