ಸಿಯಾಚಿನ್ ಎಂಬ ಹೂವು ಬಿಡದ , ಇರುವೆಯು ಜೀವಿಸಲು ಅಸಾಧ್ಯವಾದ -40 ಡಿಗ್ರಿಯ ಹುಲ್ಲು ಬೆಳೆಯದ ಜಾಗವನ್ನು ಪ್ರತಿ ದಿನ ತಮ್ಮ ಜೀವವನ್ನು ಒತ್ತೆ ಇಟ್ಟು ಕಾಯುತ್ತಿರುವ ಸಂದರ್ಭದಲ್ಲಿ ಜರುಗಿದ ಪ್ರಕೃತಿಯ ವಿಕೋಪದಲ್ಲಿ ಹಿಮದಡಿ 6 ದಿನದ ಕಾಲ ತಮ್ಮ ಉಸಿರನ್ನು ಬಿಗಿ ಹಿಡಿದು ತಾಯಿ ಭಾರತೀಯ ಸೇವೆಯಲ್ಲಿ ಮತ್ತೆ ಮರಳಲು ಹಪಹಪಿಸುತ್ತಿದ್ದ ಯೋಗ ಪಟು ಆಧ್ಯಾತ್ಮ ಜೀವಿಯ ಜೀವನವನ್ನ ಒಮ್ಮೆ ಅಧ್ಯಯನವನ್ನ ಮಾಡಿದರೆ ನೆಡೆದಿರುವ ಒಂದೊಂದು ಘಟನೆಯು ರೋಮಾಂಚನ. ಸತ್ತಂತಿಹರನು ಬಡಿದೆಚ್ಚರಿಸುವಂತಹ, 13 ವರ್ಷದ ಸೈನ್ಯ ಜೀವನದಲ್ಲಿ 10 ವರ್ಷಗಳ ಕಾಲ ಸಿಯಾಚಿನ್’ನಂತಹ ಹಲವಾರು ದುರ್ಗಮ ಪ್ರದೇಶದಲ್ಲೇ ಸೇವೆ ಸಲ್ಲಿಸಿ ಭಾರತ ಮಾತೆಯನ್ನ ತಮ್ಮ ಹೃದಯ ಸಿಂಹಾಸನದಲ್ಲಿ ಆರಾಧಿಸುತ್ತಿದ್ದ ವ್ಯಕ್ತಿ ತಮ್ಮ ಶಾಲಾ ಜೀವನವನ್ನ ಸ್ವಗ್ರಾಮದಿಂದ 6 ಕಿ.ಮೀ ದೂರ ನಡಿಗಡೆಯಲ್ಲಿ ಸಾಗಿ ಅಧ್ಯಯನವನ್ನ ಮಾಡಿ ಕಷ್ಟಗಳ ನಡುವೆಯು ತಾಯಿ ಭಾರತೀಯ ಕಾರ್ಯ ಮಾಡಲು ಸನ್ನದ್ದರಾಗಿ ಮೂರು ಬಾರಿ ಹಲವಾರು ಕಾರಣಗಳಿಂದ ಸೈನ್ಯದ ನೇಮಕಾತಿಯಲ್ಲಿ ನಪಾಸ್ ಅದ ನಂತರವೂ ಛಲ ಬಿಡದ ಚಲದಂಕನಂತೆ 2002ರಲ್ಲಿ ಮದ್ರಾಸ್ ರೇಜಮಂಟನ 19ನೇ ಬಟಾಲಿಯನ ಮೂಲಕ ಸೈನ್ಯಕ್ಕೆ ಪಾದಾರ್ಪಣೆ ಮಾಡಿದ ಆ ಸಿಂಹ ಸದೃಶಿಯ ಜೀವನ ಪ್ರಕೃತಿಯ ವಿಕೊಪದಲ್ಲಿ ಅಂತ್ಯವಾಗಿದ್ದು ನಿಜಕ್ಕು ವಿಷಾದನೀಯ. ಈ ವಿಷಯವನ್ನು ಹೇಳುವಾಗ ಅವರ ಸಾಧನೇ ಏನು?? ಎಂಬ ಪ್ರಶ್ನೆ ಮೂಡುವುದು ನಿಜಕ್ಕು ಸಹಜ, ಈ ಪ್ರಶ್ನೆಗೆ ಉತ್ತರ ಇಷ್ಟೇ ಮೊದಲಿಗೆ ಸಿಯಾಚಿನ್ ಎಂಬ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದೆ ಮೊದಲ ಸಾಧನೆಯಾದರೆ , -45 ಡಿಗ್ರಿ ಯ ಹಿಮದಡಿ ಸಿಲುಕಿ ಆರು ದಿನಗಳ ಕಾಲ ಜೀವಂತವಾಗಿಯೆ ಇದ್ದರು ಎನ್ನುವುದಾದರೆ ಇನ್ನೂ ಶತ್ರುವಿನ ಗುಂಡಿಗೆ ಎದೆ ಕೊಟ್ಟು ನಿಂತಾಗ ಎಷ್ಟು ತಲೆಗಳು ಉರುಳುತ್ತಿತ್ತು ಎಂಬುದು ನಿಜಕ್ಕು ಉಹಿಸಲು ಅಸಾಧ್ಯವಾದ ಸಂಗತಿ. ಯಾವುದೇ ಸಮಾನ್ಯ ವ್ಯಕ್ತಿಯ ಕೈಯಲ್ಲಿ ಸಾಧ್ಯವಾಗುವಂತಹ ಸಂಗತಿಯಲ್ಲ ಇದು. ಈ ಸಾಧನೆಯನ್ನು ಮಾಡಬೇಕಾದರೆ ತ್ರಿವಿಕ್ರಮ ರಾಮಧೂತ ಹನುಮಂತನ ಶಕ್ತಿಗೂ ಮೀರಿದ ಶಕ್ತಿಯ ಅವಶ್ಯಕತೆ ಇದೆ , ಅದಕ್ಕಾಗಿಯೆ ಅವರ ತಂದೆ ಅವರಿಗೆ ಆ ಹನುಮಂತನ ಹೆಸರನ್ನೆ ಇಟ್ಟಿದ್ದು ಎಂದೇನಿಸುತ್ತದೆ.
ಹೌದು ನಿಮ್ಮ ಊಹೆ ಸರಿಯಾಗಿದೆ ನಾನು ಇಲ್ಲಿ ಹೇಳುತ್ತಿರುವುದು ಕರ್ನಾಟಕದ ಬೆಟ್ಟದೂರಿನ ಅದೇ ಲಾನ್ಸ್ ನಾಯಕ ಹನುಮಂತಪ್ಪ ಕೊಪ್ಪದ್ ಅವರ ಬಗ್ಗೆ. ಮೃತ್ಯುವನ್ನು ಬೆದಿಸಲು ಎದೆ ಉಬ್ಬಿಸಿನಿಂತ ಆ ಸಾಹಸಿಯ ಬಗ್ಗೆಯೇ…. ಕೇವಲ ಈ ವ್ಯಕ್ತಿಯ ಸಾಹಸವನ್ನ ನಿಮ್ಮ ಮುಂದೆ ತಿಳಿಸಿದರೆ ಸಾಲದು, ಸ್ವಲ್ಪ ದಿನಗಳ ಮುಂಚೆ ಅವರ ಪತ್ನಿಯೊಂದಿಗೆ ಮಾತಾಡುವ ಅವಕಾಶ ನನಗೆ ಸಿಕ್ಕಿತ್ತು. ಹೆಚ್ಚು ವಿದ್ಯಾವಂತೆ ಅಲ್ಲದಿದ್ದರು ಆ ತಾಯಿ ನೀಡಿದ ಉತ್ತರಗಳು ವಿದ್ಯಾವಂತ ಸಮಾಜವನ್ನು ನಾಚಿಸುವಂತಿತ್ತು. ಸಮಾಜ ನಮಗೇನು ನೀಡಿದೆ ಎಂದು ಯೋಚಿಸುವುದಕ್ಕಿಂತ ಸಮಾಜಕ್ಕೆ ನಾವೇನು ನೀಡಿದ್ದೇವೆ ಎಂಬುದು ಅತೀ ಮುಖ್ಯ ಎಂದು ಭಾವನೇ ತುಂಬಿದ ನುಡಿಗಳನ್ನಾಡುವಾಗ ಮನಸ್ಸು ಒಂದು ಕ್ಷಣ ಮೌನಕ್ಕೆ ಜಾರಿ ಕಣ್ಣಂಚು ಅರೇ ಕ್ಷಣ ಒದ್ದೆಯಾಗಿದ್ದು ಸುಳ್ಳಲ್ಲ. ಇಂತಹ ಮಕ್ಕಳನ್ನ ಪಡೆದ ಆ ತಾಯಿ ಭಾರತೀ ನಿಜವಾಗಿಯು ಪುಣ್ಯವಂತಳು ಗಂಡನನ್ನು ಕಳೆದುಕೊಂಡು ವೀರೊಚಿತವಾದ ನುಡಿಯನ್ನ ಆ ತಾಯಿ ನುಡಿಯ ಬೇಕಾದರೇ , ಜೀವವೇ ಹೋಗುವಂತಿದ್ದರೂ ದೇಶಕ್ಕಾಗಿ ಬದುಕ ಬೇಕು ಎಂದು ಚಲ ಹಿಡಿದು ಕೂರಬೇಕಾದರೆ….. ಆ ಗುಂಡಿಗೆಗಳ ಒಳಗೆ ಅಡಗಿರುವ ಸತ್ವ ಎಂತದ್ದು ಎಂದು ನಾವು ಒಮ್ಮೆ ಯೋಚಿಸಬೇಕು. ತಾಯಿ ಭಾರತೀಯ ಸೇವೆ ಮತ್ತಷ್ಟು ಇಂತಹ ಹೃದಯ ವಿಶಾಲವಾದ ಗಂಡುಗಲಿಗಳ ಅವಶ್ಯಕತೆಯಿದೆ. ಮಿತ್ರರೇ ಮಲಗಿದ್ದು ಸಾಕು ಇನ್ನಾದರು ಎಚ್ಚೆತ್ತು ತಾಯಿ ಭಾರತೀಗೆ ನಮ್ಮ ಸೇವೆಯನ್ನು ಸಮರ್ಪಿಸೋಣ. ತಾಯಿ ಹಾಗೂ ತಾಯಿನಾಡು ಸ್ವರ್ಗಕ್ಕಿಂತಲು ಮಿಗಿಲು ಎಂದು ನಿರೂಪಿಸೋಣ.