ಅದೇಕೊ ಏನೊ ಇದೇ ಮೊದಲ ಬಾರಿಗೆ ಭಾರತೀಯ ಪ್ರಜ್ಞಾವಂತರಿಗೆಲ್ಲ ನಮ್ಮ ಸಂಸತ್ತಿನಲ್ಲಿ ಏನು ನಡೆಯುತ್ತಿದೆ ಎನ್ನುವ ಕುತೂಹಲ ಬಂದಿದೆ. ಹಿಂದೆಂದೂ ಕಾಣದಂತಹ ಆಸಕ್ತಿ, watsappನಲ್ಲಿ, facebookನಲ್ಲಿ ಇದರದೇ ವೀಡಿಯೋಗಳು. ಮೊದಲೆಲ್ಲ ಬರೀಯ ಪತ್ರಿಕೆಗಳಲ್ಲಿ ಓದಿ ತಿಳಿದುಕೊಳ್ಳುತ್ತಿದಂತಹ ವಿಚಾರಗಳು ಈಗ social mediaಗಳಿಂದಲೂ ತಿಳಿದುಕೊಳ್ಳಬಹುದಾಗಿದೆ. ಅದರಲ್ಲಿ JNU ಬಗ್ಗೆ ಒಂದಿಷ್ಟು ಚರ್ಚೆ ನಡೆದರೆ, ಇನ್ನೊಂದೆಡೆ ತಮ್ಮ ಅಪರ ಕರ್ಕಶ ಧ್ವನಿಯಿಂದ ( ಕ್ಷಮಿಸಿ, ಇದು ನನ್ನ ನಿಜವಾದ ವೈಯಕ್ತಿಕ ಅಭಿಪ್ರಾಯ) ಮತ್ತು ಅಸಂಬದ್ದ ತರ್ಕಗಳಿಂದ ಕೇಂದ್ರ ಸರಕಾರದ ಕಾಲೆಳೆದ ರಾಹುಲ್ ಗಾಂಧಿ ಬಗ್ಗೆ ಒಂದಿಷ್ಟು ಚರ್ಚೆಗಳು. ಇದರೊಂದಿಗೆ ಮೋದಿ, ಆ ಕನ್ಹಯ್ಯ ಕುಮಾರ್ ಭಾಷಣ, ಈ ಮೂವರಲ್ಲಿ ಯಾರು ಉತ್ತಮರು ಎಂದು ಪ್ರಶ್ನೆ ಕೇಳುವ ಮಾಧ್ಯಮ. ಇವಿಷ್ಟೂ ನಮ್ಮ ಇವತ್ತಿನ ಸ್ಥಿತಿ-ಗತಿಗಳಾಗಿವೆ. ಬಿಡಿ, ಇದ್ಯಾವುದರ ಬಗ್ಗೆಯೂ ನಾನು ಬರೆಯಲು ಹೋಗುತ್ತಿಲ್ಲ. ಅದರಿಂದ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ ಇವೆಲ್ಲದರ ಮೇಲೆ ಇಂದು ಸಾಕಷ್ಟು ಚರ್ಚೆಗಳು ಆಗಿವೆ, ಆಗುತ್ತಿವೆ ಮತ್ತು ಕೆಲವರೂ ತಮ್ಮ “ಅಂತಿಮ ತೀರ್ಪು” ಕೂಡ ನೀಡಿ ಆಗಿದೆ. ರಾಹುಲ್ ಎಂಬ ನಿಷ್ಪ್ರಯೋಜಕನ ಬಗ್ಗೆ ಬರೆದರೆ ಅದೊಂದು ವ್ಯರ್ಥ ಶ್ರಮವೆಂದು ನನಗೆ ತಿಳಿದಿರುವುದರಿಂದ ಆ ಸಾಹಸಕ್ಕೆ ನಾನು ಕೈ ಹಾಕುವುದೂ ಇಲ್ಲ. ಆದರೆ ಮೊನ್ನೆ ಅವರು ಸಂಸತ್ ಅಧಿವೇಶನದಲ್ಲಿ ಮಾತಿನ ಮಧ್ಯೆ “ ಏಕ್ ತರಫ಼್ ಗಾಂಧಿ ದೂಸ್ರೆ ತರಫ಼್ ಸಾವರ್ಕರ್, ಏಕ್ ತರಫ಼್ ಹಿಂಸಾ ದೂಸ್ರೆ ತಫ಼್ ಅಹಿಂಸಾ” ಎಂದು ಸಲೀಸಾಗಿ ಹೇಳಿ ಬಿಟ್ಟರು. ಅದಕ್ಕೆ ಆಕ್ಷೇಪ ವ್ಯಕ್ತವಾದಾಗ ಇನ್ನೂ ಒಂದು ಕೈ ಮುಂದೆ ಹೋಗಿ “ ಕ್ಯೂ ಆಪ್ನೆ ಸಾವರ್ಕರ್ ಕೆ ಫ಼್ಹೆನ್ಕ್ ದಿಯ ಕ್ಯಾ? ಕ್ಯಾ ಆಪ್ನೆ ಸಾವರ್ಕರ್ ಕೊ ಉಟಾಕೆ ಫೆನ್ಕ್ ದಿಯ ಕ್ಯಾ? ಅಗರ್ ಫೆನ್ಕ್ ದಿಯಾ ತೊಹ್ ಅಚ್ಹ ಕಿಯ” ಎಂದು ಬಿಟ್ಟರು!! ಅಬ್ಬಾ, ಎಂತಹ ಘೋರ ದರ್ಪ!! ಆದರೆ ಇದು ಕೇವಲ ರಾಹುಲ್ ಎಂಬ ಬುದ್ದಿಗೇಡಿಯ ಮನಸ್ಥಿತಿಯಲ್ಲ. ಇದು ಕಾಂಗ್ರೆಸ್ಸ್ ಹಾಗೂ ಕಮ್ಯುನಿಷ್ಟ್ ಅವರ ನೀಚತನ ತೋರಿಸುತ್ತದೆ. ಪಾಪ JNU ಸುತ್ತ ಅಲೆಯುವುದರಲ್ಲೆ ಕಾಲ ಕಳೆಯುತ್ತಿರುವ ಮಾಧ್ಯಮ ಲೋಕಕ್ಕೆ ಇದು ಒಂದು ದೊಡ್ದ ಸುದ್ದಿ ಎಂದು ಅನಿಸುವುದಿಲ್ಲ. ಈ ತರಹ ಸಾವರ್ಕರ್ ಅವರನ್ನು ಜರಿಯುವುದು ಇಂದು ನೆನ್ನೆಯ ವಿಚ್ಚಾರವಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಇಂತಹದೊಂದು ವ್ಯವಸ್ಥಿತ ಸಂಚು ನಡೆದುಕೊಂಡು ಬಂದಿದೆ. ಅಲ್ಲ ಸಾವರ್ಕರ್ ಏನು ಆಟದ ವಸ್ತುವೆ ಬೇಕು ಬೇಕಾದ ಹಾಗೆ ಬಳಸಲು?
ಕೆಲವು ದಿನಗಳ ಹಿಂದೆ ನನ್ನ ಸಹೋದ್ಯೊಗಿಯೊಂದಿಗೆ ಮಾತಾನಾಡುತ್ತಿರುವಾಗ ಅಚಾನಕ್ಕಗಿ “ಸಾವರ್ಕರ್”” ಎಂಬ ಮಾತು ನನ್ನ ಬಾಯಿಂದ ಬಂತು. ತಕ್ಷಣ “ಅವರು ಯಾರು?” ಎನ್ನುವ ಪ್ರಶ್ನೆ ಎದುರಾಗಬೇಕೆ ನನಗೆ!! ಇದರಲ್ಲಿ ಅವರ ತಪ್ಪೇನು ಇಲ್ಲ. ಏಕೆಂದರೆ ನಮ್ಮ ಸಮಾಜ ಪುಸ್ತಕದ ಮೂಲೆಯಲ್ಲಿ ಎಲ್ಲೊ ಒಮ್ಮೆ ಹಾಗೆ ಬಂದು ಹೀಗೆ ಹೋಗುತ್ತಾರೆ “ವೀರ್ ಸಾವರ್ಕರ್”. ಅದನ್ನು ಬಿಟ್ಟರೆ ಅವರ ಬಗ್ಗೆ ಎಲ್ಲೂ ಏನೂ ಸುದ್ದಿ ಸಿಗದಂತೆ ನಮ್ಮ ಪಠ್ಯಪುಸ್ತಕ ಪ್ರಾಧಿಕಾರ ಬಹಳ ಎಚ್ಚರಿಕೆ ವಹಿಸಿಕೊಂಡು ಬಂದಿದೆ. ಇನ್ನು ತಮ್ಮ ತಲೆ ತುಂಬಾ ಕಮ್ಯುನಿಷ್ಟ್ ಸಿದ್ಧಾಂತವನ್ನು ತುಂಬಿರುವ ಬುದ್ಧಿಜೀವಿಗಳು. ಕಾಂಗ್ರೆಸ್ಸ್ ಚಮಚಾಗಳು ಸಾವರ್ಕರ್ ಅವರಿಗೆ ಅಪಮಾನ ಮಾಡುವುದರಲ್ಲಿ ತಪ್ಪೇನಿಲ್ಲ ಎನಿಸಿತು ಒಮ್ಮೆ. !! ನಿಜ, BJP/RSS ಸಿದ್ಧಾಂತ “ಸಾವರ್ಕರ್” ಪ್ರತಿಬಿಂಬಿಸುತ್ತದೆ ಮತ್ತು “ಗಾಂಧೀವಾದ” ಕಾಂಗ್ರೆಸ್ಸನ್ನು. ಏಕೆ ಗೊತ್ತೆ?
*ಸಾವರ್ಕರ್ ಅವರು ಇಂಗ್ಲೀಷರಿಂದ 27 ವರ್ಷಗಳ ಕಾಲ ಕರಿನೀರಿನ ಶಿಕ್ಷೆ ಅನುಭವಿಸಿ, ಅದು ಮುಗಿದ ಮೇಲೂ ನಮ್ಮವರಿಂದಲೇ ಕಿರುಕುಳಕ್ಕೊಳಗಾದ ಮಹಾನ್ ದೇಶಭಕ್ತ. ಅವರನ್ನು ಆ ನರಕದಿಂದ ಬಿಡಿಸಲು ದೇಶಭಕ್ತರೆಲ್ಲ ದೇಶದೆಲ್ಲೆಡೆ ಸಹಿ ಸಂಗ್ರಹಿಸುತ್ತಿರುವಾಗ, ಗಾಂಧಿಜಿ ಮಾತ್ರ ತಾವು ಸಹಿ ಮಾಡುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರಂತೆ. ನೆಹರು ಅಂತೂ ಆ ಪತ್ರವನ್ನೆ ಹರಿದು ಬಿಸಾಕಿದ್ದರು. ಅವರನ್ನು ಕಾಡುತ್ತಿದ್ದ ಭಯ ಎಲ್ಲಿ ಈ ಸಾವರ್ಕರ್, ಸುಭಾಷ್ ಚಂದ್ರರಂಥವರು ತಮಗಿಂತ ಮೊದಲೆ ಸ್ವಾತಂತ್ರ್ಯ ದೊರಕಿಸಿ ತಮನ್ನು ಮೂಲೆಗುಂಪು ಮಾಡುತ್ತಾರೋ ಎಂದು. ಅದಕ್ಕೆ ಇವರನ್ನೆಲ್ಲ ದೇಶದ್ರೋಹಿಗಳು ಎಂದು ಹೇಳುತ್ತಾ, ಪಿತೂರಿಯಿಂದ ಜನಮಾನಸದಿಂದ ದೂರ ಮಾಡುತ್ತಾ ತಮ್ಮನ್ನು ತಾವೇ ಭಾರತದ ಉದ್ಧಾರಕರು ಎಂದು ಬಿಂಬಿಸಿದ್ದು
* ಸಾವರ್ಕರ್ ಮಾತಿಗೆ ನಿಂತು ಬಿಟ್ಟರೆಂದರೆ ಅವರ ಮುಂದೆ ವಿಶ್ವದ ಮಹಾನ್ ನಾಯಕರೂ ಕೂಡ ತಲೆ ಬಾಗಲೇ ಬೇಕಿತ್ತು, ಬ್ರಿಟೀಷರು ಕಳಿಸಿದ ಅದಷ್ಟೂ ಶಾಂತಿ ಸಂಧಾನಕಾರರನ್ನು ಸಾವರ್ಕರ್ ಅವರು ಖಾರವಾದ ಮಾತುಗಳಿಂದ ಮಣಿಸಿ ಕಳಿಸಿದ್ದುಂಟು.ಅವರು ತೀರ ೨೧ನೆ ವಯಸ್ಸಿನಲ್ಲಿಯೇ ಲಂಡನ್ನಿನಲ್ಲಿ ಭಾರತ ಸಂಸ್ಕೃತಿಯನ್ನೇ ಮರೆತಿದ್ದ ಯುವಕರನ್ನು ಬಡಿದೆಬ್ಬಿಸಿ ಕ್ರಾಂತಿಯ ಕಹಳೆ ಊದಿದವರು. ಆಗಿನ ಕಾಲಕ್ಕೆ ಲಂಡನ್ನಿನಲ್ಲಿಯೇ ಇದ್ದ ಗಾಂಧೀಜಿಯು ಅಹಿಂಸಾ ವಾದವನ್ನು ಹಿಡಿದು ಬಂದಾಗ ಅದು ನಿಷ್ಪ್ರಯೋಜಕವೆಂದು ತರ್ಕಪೂರ್ಣವಾಗಿ ಝಾಡಿಸಿದ್ದರು.
* ಅವರು ಅಂಡಮಾನಿನಿಂದ ಭಾರತಕ್ಕೆ ಬಂದ ಮೇಲೆ ಅವರನ್ನು ಭೇಟಿಯಾಗಿ ಸ್ಪೂರ್ತಿ ಪಡೆದ ಡಾಕ್ಟರ್ ಹೆಡಗೆವಾರರು RSS ಸಂಸ್ಥೆಯನ್ನು ಕಟ್ಟಿದರು. ಅವರ ಮಾರ್ಗದರ್ಶನವಿಲ್ಲದೇ ಹೋಗಿದ್ದರೆ ಸುಭಾಷ್ ಚಂದ್ರ ಬೋಸರು Germany, Japan ಸುತ್ತಿ ಭಾರತೀಯ ರಾಷ್ತ್ರೀಯ ಸೇನೆಯನ್ನು ಕಟ್ಟಲು ಸಾಧ್ಯವೆ ಇರುತ್ತಿರಲಿಲ್ಲ. ನಿಮಗೆಲ್ಲ ನೆನಪಿರಲಿ ಎಂದು ಮತ್ತೆ ಹೇಳುತ್ತೇನೆ, ನಮಗೆ ಸ್ವಾತಂತ್ರ್ಯ ದೊರಕುವಲ್ಲಿ ಕಾಂಗ್ರೆಸ್ಸ್/ಗಾಂಧೀಜಿಗಿಂತ 100 ಪಾಲು ಹೆಚ್ಚಿನ ಪಾತ್ರ ವಹಿಸಿದವರು ಸುಭಾಶ್ ಚಂದ್ರ ಬೋಸ್ ಹಾಗೂ ರಾಸ್ ಭಿಹಾರಿ ಬೋಸರು. ಅವರಿಗೆ ಬ್ರಿಟೀಷರ ದೌರ್ಬಲ್ಯವನ್ನು ತಿಳಿಸಿ ಇಂತಹುದೇ ದಾರಿಯಲ್ಲಿ ಹೋಗಿ ಎಂದು ತಿಳಿಸಿದವರು ಇದೇ ಸಾವರ್ಕರ್.
* ಅವತ್ತಿನ ಕಾಲಕ್ಕೆ ಭಾರತೀಯ ಸೇನೆ ಸೇರುವುದೆಂದರೆ ಅದು ಹಿಂದೂಗಳಿಗೆ ತೀರಾ ಕೆಳಮಟ್ಟದ ವಿಚಾರವಾಗಿತ್ತು. ಏಕೆಂದರೆ ಅಲ್ಲಿ ಮುಸ್ಲಿಮ್ ಹಾಗೂ ಕ್ರೈಸ್ತರೇ ತುಂಬಿದ್ದರಲ್ಲ. ಅವರೊಂದಿಗೆ ಕೆಲಸ ಮಾಡುವುದೆಂದರೆ ಅದು ಧರ್ಮ ವಿರೋಧಿ ಆಗಿತ್ತು. ಕಾಂಗ್ರೆಸ್ಸ್ ಕೂಡ ತಮ್ಮ ಶಾಂತಿ ಮಂತ್ರ ಜಪಿಸುವುದರಲ್ಲೇ ಮಗ್ನವಾಗಿತ್ತೇ ಹೊರತು ಸೇನೆ ಕಟ್ಟುವುದರಲ್ಲಿ ಅಲ್ಲ. ಇದರಿಂದ ಸ್ವಾತಂತ್ರ್ಯಾ ನಂತರ ಮುಸ್ಲಿಮರೇ ತುಂಬಿದ ಸೇನೆ ದೇಶವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಅಪಾಯವಿತ್ತು. ಇದನ್ನು ಮನಗಂಡ ಸಾವರ್ಕರ್ ನಮ್ಮ ಯುವಕರಿಗೆ ಸೇನೆ ಸೇರುವಂತೆ ಮನ ಒಲಿಸುತ್ತಿದ್ದರು. ಇದರಿಂದ ಜಿನ್ನ , ಅಹ್ಮೆದ್ ಖಾನ್ ಇವರ ಅಖಂಡ ಪಾಕಿಸ್ತಾನದ ಕನಸು ನೆಲಸಮವಾಯ್ತು. ಸಾವರ್ಕರ್ ಅವರ ದೂರದೃಷ್ಟಿಯಿಂದಾಗಿಯೇ ಅವರೆಲ್ಲ ಕೇವಲ ಪಾಕಿಸ್ತಾನಕ್ಕೆ ತ್ತೃಪ್ತಿ ಪಟ್ಟುಕೊಳ್ಳಬೇಕಾಯ್ತು.ಅಲ್ಲದೆ 1948ರ ಯುದ್ಧದಲ್ಲಿ ಇದೇ ಸೈನಿಕರು ಭಾರತ ಮಾತೆಯ ಮಾನ ಕಾಪಾಡಿದವರು.
* ನಮ್ಮ ಸಮಾಜ ಸುಧಾರಕರಲ್ಲಿ ಸಾವರ್ಕರ್ ಹೆಸರಂತು ಕಾಣಸಿಗುವುದೇ ಇಲ್ಲ. ಆದರೆ ಅವತ್ತಿನ ಕಾಲಕ್ಕೆ ನಮ್ಮ ಸಂಪ್ರದಾಯವಾದಿಗಳಿಗೆ ಹಿಂದುಗಳು ಒಗ್ಗಟ್ಟಾಗಿರುವುದರ ಮಹತ್ವ ತಿಳಿಸಿ ಅಸ್ಪೃಶ್ಯತೆ, ಮತಾಂತರಗೊಂಡವರನ್ನು ಹಿಂದುತ್ವಕ್ಕೆ ಮರಳಿ ತಂದ ಧೀಮಂತ ನಾಯಕರು ಇವರು. ಮುಸ್ಲಿಮ್ ದಬ್ಬಾಳಿಕೆಯಿಂದ ನಮ್ಮ ಸಮಾಜವನ್ನು ಮುಕ್ತಗೊಳಿಸಿ, ಸಾಮೂಹಿಕ ಕೆಳ ಜಾತಿಯವರಿಗೆ ಮಂದಿರ ಪ್ರವೇಶ, ಸಾಮೂಹಿಕ ಭೋಜನವನ್ನು ಎಲ್ಲರಿಗಿಂತಲೂ ಸಮರ್ಥವಾಗಿ ಮಾಡಿದ ಏಕಮಾತ್ರ ವೀರ.
* ಇನ್ನು ನಮ್ಮ ಜನರು ತಮ್ಮ ಇತಿಹಾಸವನ್ನು ಮರೆತಿರುವಾಗ, ಕ್ಷಾತ್ರತೇಜಸ್ಸನ್ನು ಬಡಿದೆಬ್ಬಿಸಲು 1857ರ ಯುದ್ಧದ ಬಗ್ಗೆ ಸಮಗ್ರ ಪುಸ್ತಕ ಮೊದಲು ಬರೆದವರೆಂದರೆ ಅದು ಸಾವರ್ಕರ್, ಅದೂ ಕೂಡ ಇಂಗ್ಲೆಡಿಗೇ ಹೋಗಿ ಅವರ ದಾಖಲೆಗಳನ್ನು ಅವರಿಗರಿವಿಲ್ಲದೆ ಪಡೆದುಕೊಂಡಂತಹ ಸಾಹಸಿ. ಇಲ್ಲದೆ ಹೋಗಿದ್ದರೆ ಅದೊಂದು ಸಿಪಾಯಿಗಳ ದಂಗೆ ಎಂಬುದಷ್ಟೆ ದಾಖಲಾಗುತ್ತಿತ್ತೇ ಹೊರತು ಬ್ರಿಟೀಷರು ಭಾರತೀಯರಿಗೆ ಶೌರ್ಯಕ್ಕೆ ಹೆದರಿ ನಡುಗಿದ್ದರೆಂಬ ಸತ್ಯ ಹೊರಬರುತ್ತಿರಲಿಲ್ಲ.
* ಅವತ್ತಿನ ಕಾಲಕ್ಕೆ ಕಾಶ್ಮೀರದಲ್ಲಿ ಹೆಚ್ಚುತ್ತಿದ್ದ ಹಿಂದೂ ವಿರೋಧಿ ಶಕ್ತಿಯ ಬಗ್ಗೆ ಆಗಲೇ ಎಚ್ಚರಿಸಿ, ಗಾಂಧೀಜಿಯವರ ಅತಿಯಾದ ಮುಸ್ಲಿಮ್ ಓಲೈಕೆ ಬಗ್ಗೆ ಟೀಕಿಸಿದ್ದರು. ಆದರೆ ದೂರದೃಷ್ಟಿ ಎಂಬುದೆ ಇಲ್ಲದ ಕಾಂಗ್ರೆಸ್ಸ್ ನಾಯಕರಿಗೆ ಅದು ಅರ್ಥವೇ ಆಗಲಿಲ್ಲ. ಬದಲಾಗಿ ಅವರು ಸಾವರ್ಕರ್ ಅವರಂತಹ ಮಹಾನ್ ನಾಯಕರಿಗೆ ಹಿಂಸಾವಾದಿ. ಕೋಮುವಾದಿ ಎಂಬ ಪಟ್ಟ ಕಟ್ಟಿದರು.
* ಸಾವರ್ಕರ್ ಅವರೇ ಎಲ್ಲರಿಗಿಂತಲೂ ಮೊದಲು ವಿದೇಶಿ ವಸ್ತ್ರಗಳ ಬಹಿಷ್ಕಾರಗಳನ್ನು ಹಮ್ಮಿಕೊಂಡವರು. ಇದನ್ನು ಮೊದಲು ಟೀಕಿಸಿದ ಗಾಂಧೀಜಿ ಸಾವರ್ಕರ್ ಜೈಲು ಪಾಲದ ನಂತರ ಅದು ತಮ್ಮದೆ ಚಿಂತನೆಯಂತೆ ಎಲ್ಲೆಡೆ ಪ್ರೋತ್ಸಾಹಿಸಿದರು.
* ಇವರ ಬಗ್ಗೆ ಅದೆಷ್ಟು ಹೇಳಿದರೂ ಕಡಿಮೆಯೆ. ಇವರಂತಹ ತೀಕ್ಷ್ಣಮತಿ, ಅಪಾರ ಬುದ್ದಿಮತ್ತೆಯ ನಾಯಕ ಜಗತ್ತಿನಲ್ಲಿ ಮತ್ತೆಲ್ಲೂ ಸಿಗಲಿಕ್ಕಿಲ್ಲ. ಆದರೆ ದುರಾದೃಷ್ಟ ನೋಡಿ. ಜನರು ಅವರ ಸೇವೆಯನ್ನು ಮನಗಾಣದೆ ಅವರ ಅಭಿನವ ಭಾರತವನ್ನು ಚುನಾವಣೆಯಲ್ಲಿ ಸೋಲಿಸಿದರು. ಅಖಂಡ ಭಾರತದ ಕನಸನ್ನು ಹಿಡಿದು ಜನರ ಮುಂದೆ ಹಿಡಿದು ಓಟು ಕೇಳಿ ಗೆದ್ದ ಕಾಂಗ್ರೆಸ್ಸ್ ಮುಂದೆ ದೇಶವನ್ನು ಛಿದ್ರ ಛಿದ್ರಗೊಳಿಸಿತು. ಅವರಿಂದ ಆಳಿಸಿಕೊಳ್ಳುವ ಭಾಗ್ಯ ನಮ್ಮ ದೇಶಕ್ಕೆ ಇಲ್ಲದಾಯಿತು. ಅದಕ್ಕೆ 60 ವರ್ಷ ಕಳೆದರೂ ನಾವಿನ್ನೂ ಹೀಗೇ ಇದ್ದೇವೆ.
* ಇದೂ ಸಾಲದೇನೊ ಎಂಬಂತೆ ಗಾಂಧೀಜಿ ಕೊಂದ ಅಪವಾದವನ್ನೂ ಅವರ ಮೇಲೆ ಹಾಕಿ, ಅಭಿನವ ಭಾರತದ ರಾಜಕೀಯ ಜೀವನವನ್ನೇ ಅಂತ್ಯಗೊಳಿಸಲಾಯಿತು. ಅವರ ಮನೆ ಮೇಲೆ ಕಲ್ಲು ತೂರಲಾಯಿತು. ಅವರ ತಮ್ಮನ ಪ್ರಾಣವೇ ಬಲಿ ತೆಗೆದುಕೊಂಡರು ಪಾಪಿಗಳು. ಅಂಡಮಾನಿನಲ್ಲಿ ಕೇವಲ ೨ ಲೋಟ ನೀರನ್ನು ಕುಡಿದು ಇಡೀ ದಿನ ಏಣ್ಣೆಯ ಗಾಣ ತಿರುಗಿಸುವ, ಕೈ ಸೇದುವಷ್ಟು ತೆಂಗಿನ ನಾರು ತೆಗಿಯುವ ಕೆಲಸ, ಅದಕ್ಕೂ ಮಿಗಿಲಾದ ನರಕ ಸದೃಶ ಕಿರುಕುಳ ನೀಡಿದ ಬ್ರೀಟೀಷರಿಗಿಂತ ನಮ್ಮವರೇ ಕ್ರೂರಿಗಳಾದರು. ಎಂಥಾ ಕೃತಘ್ನರು!! ಅವರು ಗೃಹಬಂಧನದಿಂದ ಬಿಡುಗಡೆಯಾದಾಗ ಅವರ ಮೇಲೆ ಕೊಚ್ಚೆ ನೀರು ಎಸೆಯಲಾಯಿತು, ಅವರು ಸತ್ತಾಗ ಅವರಿಗೆ ಶರೀರ ಒಯ್ಯಲು carriage ಸಿಗದಂತೆ ಮಾಡಲಾಯಿತು. ಇದರ ಹಿಂದೆ ಯಾರಿದ್ದರು ಎಂದು ಮತ್ತೆ ಹೇಳಬೇಕೆ?
* ಹೆಜ್ಜೆ ಹೆಜ್ಜೆಗೂ ಕಷ್ಟವನ್ನೆ ಅನುಭವಿಸುತ್ತಾ, ಗಟ್ಟಿಗರಾಗುತ್ತ ಹೋದರೇ ಹೊರತು ದೇಶದ ಬಗ್ಗೆ ಯೋಚಿಸುವುದನ್ನು, ಹಿಂದು ಸಮಾಜಕ್ಕಾಗಿ ಕೆಲಸ ಮಾಡುವುದು ನಿಲ್ಲಿಸಲಿಲ್ಲ. ಅವರ ದಿಟ್ಟ ನಡೆ ಕಂಡು ಅದೆಷ್ಟೊ ಪರದೇಶಿ ನಾಯಕರು ಧಮುಕಿ ಹಾಕಿದಾಗಲು ಅವರನ್ನು ವೀರರಂತೆ ಎದುರಿಸಿ, ತಗ್ಗಿಸಿ ಕಳಿಸಿದರೇ ಹೊರತು ಗಾಂಧೀಜಿ ಮಾಡಿದಂತೆ ಯಾರನೂ ಓಲೈಸಲಿಲ್ಲ.
ತಮ್ಮ ಜೀವನವನ್ನೇ ದೇಶದ ಒಳಿತಿಗಾಗಿ ದೀಪದಂತೆ ಸವೆಸಿದ ಮಹಾನ್ ನಾಯಕನಿಗೆ ಯಾವುದೇ ಕೀರ್ತಿ ಸಿಗಬಾರದೆಂಬುದೇ ಕಾಂಗ್ರೆಸ್ಸ್ ಹಾಗೂ ಅವರಿಂದ ಪೋಷಿತ ಕಮ್ಮ್ಯುನಿಷ್ಟ್ ನಿಲುವು. ಹಾಗಾಗಿಯೇ ದೇಶ ಹಾಳಾದರೂ ಪರವಾಗಿಲ್ಲ ತಮ್ಮ ಜೇಬು ಭರ್ತಿ ಆದರೆ ಸಾಕೆಂದು ಇವತ್ತು ಜನರನ್ನು ದಿಕ್ಕು ತಪ್ಪಿಸುವ, ಸಮಾಜವನ್ನು ಒಡೆಯುವ ಹೊಲಸು ಕೆಲಸ ಮಾಡುತ್ತಿದ್ದಾರೆ. ಹಿಂದುಗಳನ್ನು ಮುಸ್ಲಿಮರಿಂದ, ಉತ್ತರ ಭಾರತವನ್ನು ದಕ್ಷಿಣದಿಂದ, ತಮಿಳರನ್ನು ಕನ್ನಡಿಗರಿಂದ, ಸಾಲದೆಂಬಂತೆ ಹಿಂದುಗಳಲ್ಲೇ ವೈಷ್ಣವ ಹಾಗೂ ಶೈವ, ಬ್ರಾಹ್ಮಣರಿಂದ ದಲಿತರನ್ನು, ಹಿಂದುಗಳಿಂದ ಸಿಖ್ಖರನ್ನು.. ಹೇಗೆ ಸಿಕ್ಕಸಿಕ್ಕ ಹಾಗೆ ಭಾರತವನ್ನು ಒಡೆಯುವ ಪ್ರಯತ್ನ ನಿರಂತರ 60ವರ್ಷಗಳಿಂದ ಮಾಡುತ್ತ ಬಂದಿದ್ದರೆ. ದಲಿತರು ಬ್ರಾಹ್ಮಣರೊಂದಿಗೆ ಬೆರೆತರೆ, ಬಡವರ ಪರಿಸ್ಥಿತಿ ಸುಧಾರಿಸಿದರೆ ಹೊರ ದೇಶದಿಂದ/NG0ಗಳಿಂದ ಬರುವ ಹಣ ಇವರ ಜೇಬು ತುಂಬುವುದಿಲ್ಲವಲ್ಲ. ಇವರ ಮುಸ್ಲಿಮ್ ಓಲೈಕೆ ಅದೆಷ್ಟೆಂದರೆ ಪಾಕ್ ಹಾಗೂ ಚೀನಾಕ್ಕೆ ಸಲಾಮ್ ಹೊಡೆಯುತ್ತಾ ನಮ್ಮ ಸೈನ್ಯಕ್ಕೆ 10 ವರ್ಷ ಅದು ಯಾವ ಪರಿ ಹಳ್ಳ ಹಿಡಿಸಿದ್ದರೆಂದರೆ ಈಗ ಮೋದಿ ಸರಕಾರ ಅದನ್ನು ಸರಿಪಡಿಸಲು ಹೆಣಗಾಡುತ್ತಿದೆ. ಮೋದಿ ಕೂತ್ರೂ ತಪ್ಪು, ನಿಂತ್ರೆ ತಪ್ಪು ಎಂದು ರಚ್ಚೆ ತೆಗೆಯುವ ಇವರು, ದೇಶದ ಇದ್ದ ಬದ್ದ ಸಂಸ್ಥೆಗಳಿಗೆ emergency ಹೇರಿದ ಇಂದಿರ, ಸಿಖ್ಖರನ್ನು ಕೊಂದ ರಾಜೀವ್ ಇಲ್ಲ ಕಾಶ್ಮೀರವನ್ನ ಕಗ್ಗಂಟಾಗಿಸಿದ ನೆಹೆರು ಹೆಸರಿಟ್ಟು ಅಲಂಕರಿಸುತ್ತಾರೆ. ಆದರೆ ವಾಜಪೇಯಿ ಅವರ ನಂತರ ಅಧಿಕಾರ ಪಡೆದುಕೊಂಡ ತಕ್ಷಣ ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ದೇಶದ ಉದ್ದಗಲಕ್ಕೆ ಇದ್ದ ಅವರ ಭಾವಚಿತ್ರವನ್ನು ತೆಗೆಸುತ್ತಾರೆ.
BJP ಅವರಿಗೆ ಒಂದು ಹೊತ್ತೂ ಕೆಲಸ ಮಾಡಲು ಬಿಡದಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕೆಂಬ ಹಠದಿಂದ ಇವರು. ಮೋದಿಯವರ ಯಾವ ಕೆಲಸವೂ ಜನರ ಮನಸಲ್ಲಿ ಶಾಶ್ವತವಾಗಿ ಉಳಿಯಬಾರದೆಂದು JNU,ವೇಮುಲ, ಪಟೇಲ್, ಜಾಠ್, ಕಾಪು, ದೆಹೆಲಿ ಕ್ರಿಕೆಟ್, ರವಿಶಂಕರ್ ಗುರೂಜಿಯ ಕಾರ್ಯಕ್ರಮ ಹೀಗೆ ದಿನಕ್ಕೊಂದು ವರಾತ ತೆಗೆಯುತ್ತಿದ್ದಾರೆ. ಪಾಪ, BJP/RSS’ಗಳಿಗೆ ಇದೆಲ್ಲ ಕಂಡು ಕೇಳರಿಯದ ಸಮಸ್ಯೆ, ಹೇಗೆ ನಿಭಾಯಿಸಬೇಕೆಂಬುದೇ ಗೊತ್ತಿಲ್ಲ. ಇಲ್ಲದಿದ್ದರೆ ಪ್ರತಿ ವರ್ಷವೂ ನಡೆಯುತ್ತಿದ್ದ ಜಾಠರ ಪ್ರಟಿಭಟನೆ ಈ ಸಲ ಮಾತ್ರ ಏಕೆ ಈ ಸ್ವರೂಪ ಪಡೆದಿದೆ? ಬಿಹಾರ್, ಕೇರಳ, ತಮಿಳುನಾಡು, ಕರ್ನಾಟಕ ಹೇಗೆ ಎಲ್ಲಿ BJP ಅಧಿಕಾರವಿಲ್ಲವೋ ಅಲ್ಲಿ RSS ಕಾರ್ಯಕರ್ತರ ಕೊಲೆ ದಿನನಿತ್ಯವೆಂಬಂತೆ ನಡೆಯುತ್ತಿದ್ದರೂ ದಿವ್ಯ ಮೌನ ತಳೆದಿರುವ ಮಾಧ್ಯಮ ಅದ್ಯಾವ ಪರಿ ಮೋದಿ ವಿರೋಧಿ, ದೇಶ ವಿರೋಧಿ ಧೋರಣೆ ತಳೆದಿದೆ ಯೋಚಿಸಿ?
ಇರಲಿ ಇಲ್ಲಿ ಮಾಧ್ಯಮವನ್ನೊ, ಕಾಂಗ್ರೆಸ್ಸ್ಸನ್ನೋ ದೂಷಿಸಿ ಯಾವ ಪ್ರಯೋಜನವೂ ಇಲ್ಲ. ಇಷ್ಟೆಲ್ಲ ಬರೆಯಲು ನನ್ನನ್ನು ಕಾಡುತ್ತಿರುವ ಭಯವೊಂದೇ ಕಾರಣ. ಎಲ್ಲಿ ಸಾವರ್ಕರನ್ನು ಸೋಲಿಸಿದ ಜನ ತಮ್ಮ ತಲೆ ಮೇಲೆ ತಾವೆ ಕಲ್ಲು ಎಳೆದುಕೊಂಡಂತೆ, ಮತ್ತೊಮ್ಮೆ ವಾಜಪೇಯಿಯವರನ್ನು ಸೋಲಿಸಿ ದಡ್ದತನ ತೋರಿಸಿದಂತೆ, ಮುಂದಿನ ಚುನಾವಣೆಯಲ್ಲಿ ಮೋದಿಯವರನ್ನು ಸೋಲಿಸಿ ನಮ್ಮ ಜನ ಈ ದೇಶದ ಕತೆಯನ್ನು ಮುಗಿಸಿಯೇ ಬಿಡುತ್ತಾರೋ ಎಂಬುದು. ಏಕೆಂದರೆ ಪೃಥ್ವಿರಾಜ್ ಚೌಹಾನನಿಂದ ಹಿಡಿದು ಚಂದ್ರಶೇಖರ್ ಆಜ಼ಾದ್’ರ ಸಾವಿನವರೆಗೂ ಅದೆಷ್ಟೊ ವಿದ್ರೋಹಗಳು ನಡೆದರೂ ನಾವಿನ್ನೂ ಇತಿಹಾಸದಿಂದ ಪಾಠ ಕಲಿತಿಲ್ಲ.ಸರಿಯಾಗಿ ಗಮನಿಸಿ, ಅವತ್ತು ಗಾಂಧಿ, ನೆಹೆರು ಸೇರಿ ಸಾವರ್ಕರಿಗೆ ಮಾಡಿದ ದ್ರೋಹ, ದೇಶಕ್ಕೆ ಮಾಡಿದ ನಷ್ಟ ಇಂದು ರಾಹುಲ್/ಸೋನಿಯ ಮತ್ತು ಅವರ ಚಮ್ಚಾ ಕಮ್ಮ್ಯುನಿಷ್ಟ್ ಮೋದಿಜಿಯವರಿಗೆ ಮಾಡುತ್ತಿವೆ.