ಅಂಕಣ

ಸಾವರ್ಕರ್ ಎಂಬ ಸಾಹಸಿಗನ ಎದುರು ಹೇಡಿಯೆಂಬ ಶಬ್ದ ಹತ್ತಿರವೂ ಸುಳಿದಿರಲಿಲ್ಲ!

 

ಕಳೆದ ಭಾನುವಾರ ಭಾರತೀಯ ನ್ಯಾಷನಲ್ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಫೇಸ್ಬುಕ್ ಪೇಜಿನಲ್ಲಿ ಒಂದು ಪೋಸ್ಟ್ ಪ್ರಕಟಿಸಿತ್ತು. ಆ ಪೋಸ್ಟ್’ನಲ್ಲಿ ಈ ರೀತಿ ಬರೆಯಲಾಗಿತ್ತು. “ When Chandra Shekhar Azad was fighting against

the British for our freedom, BJP ideologue Savarkar was begging for mercy from the British.” ಅಂದರೆ ಚಂದ್ರಶೇಖರ್ ಆಜಾದ್ ಬ್ರಿಟಿಷರ ವಿರುದ್ದ ಹೋರಾಟ ನಡೆಸುತ್ತಿರುವಾಗ ಬಿಜೆಪಿ ಸಿದ್ದಾಂತದ ಸಾವರ್ಕರ್ ಕ್ಷಮೆಗಾಗಿ ಬ್ರಿಟಿಷರ ಬಳಿ ಭಿಕ್ಷೆ ಬೇಡುತ್ತಿದ್ದರು ಎಂದು ಈ ದೇಶದ ರಾಷ್ಟೀಯ ಪಕ್ಷ ಕಾಂಗ್ರೆಸ್ ಮಹಾನ್ ವೀರ ಸಾವರ್ಕರ್’ಗೆ ಅವಮಾನಿಸಿ ಬರೆದಿತ್ತು. ಕಾಂಗ್ರೆಸ್ಸಿಗರೇ ಅವರರನ್ನು ಹೇಡಿ ಎನ್ನುವ ಮುನ್ನ ಅವರ ಜೀವನಗಾಥೆಯನ್ನು ಒಮ್ಮೆ ಕೇಳಿ..

• ದೇಶಭಕ್ತಿಯ ಅಪರಾಧಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟ ಮೊದಲ ವಿದ್ಯಾರ್ಥಿ.

• ಭಾರತದಲ್ಲಿ ವಿದೇಶೀ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿ ಆಚರಿಸಿದ ಮೊಟ್ಟಮೊದಲ ಸ್ವದೇಶಾಭಿಮಾನಿ.

• ಸ್ವರಾಜ್ಯ ಎಂದು ಉಚ್ಚರಿಸುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ‘ಸಂಪೂರ್ಣ ಸ್ವಾತಂತ್ರ್ಯವೇ ಭಾರತದ ಧ್ಯೇಯ’ ಎಂದು ಘೋಷಿಸಿದ ಮೊಟ್ಟಮೊದಲ ರಾಜಕೀಯ ಮುಂದಾಳು.

• ದಾಸ್ಯರಕ್ಕಸನ ಎದೆ ಮೆಟ್ಟಲು ಪ್ರಯತ್ನಪಟ್ಟುದ್ದಕ್ಕಾಗಿ ತಾನು ಗಳಿಸಿದ ಬಿ.ಎ. ಪದವಿಯನ್ನು ಕಳೆದುಕೊಂಡ ಮೊಟ್ಟ ಮೊದಲ ಭಾರತೀಯ ಪದವೀಧರ.

• ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ ಕಾರಣಕ್ಕಾಗಿ ಬ್ರಿಟಿಷರಿಂದ ಬ್ಯಾರಿಸ್ಟರ್ ಪದವಿ ನಿರಾಕರಿಸಲ್ಪಟ್ಟ ಮೊಟ್ಟಮೊದಲ ಬ್ಯಾರಿಸ್ಟರ್. ಹಿಂದುಸ್ಥಾನದ ಸ್ವಾತಂತ್ರ್ಯದ ಪ್ರಶ್ನೆ ಪರ ರಾಷ್ಟ್ರಗಳಲ್ಲೂ ಮಹತ್ವ ಗಳಿಸುವಂತೆ ಮಾಡಿದ ಮೊಟ್ಟಮೊದಲ ಭಾರತೀಯ ತರುಣ.

• ಪ್ರಕಟಣೆಗೆ ಮೊದಲೇ ಎರಡು ರಾಷ್ಟ್ರಗಳಲ್ಲಿ ನಿಷೇಧಿಸಲ್ಪಟ್ಟ ಗ್ರಂಥ ರಚಿಸಿದಂತ ಜಗತ್ತಿನ ಮೊಟ್ಟಮೊದಲ ಮೊದಲ ಲೇಖಕ.

• ಬ್ರಿಟಿಷರ ನ್ಯಾಯಾಲಯವನ್ನು ತಾನು ಪುರಸ್ಕರಿಸುವುದಿಲ್ಲವೆಂದು ಸಾರಿದ ಮೊಟ್ಟಮೊದಲ ರಾಜಕೀಯ ಆರೋಪಿ.

• ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಅಂತಾರಾಷ್ಟ್ರೀಯ ನ್ಯಾಯಾಲಯದೆದುರು ತನ್ನ ಬಗ್ಗೆ ಮೊಕದ್ದಮೆ ನಡೆಯುವಂತೆ ಮಾಡಿದ ಮೊಟ್ಟಮೊದಲ ರಾಜಕೀಯ ಕೈದಿ.

• ವಿಶ್ವದ ರಾಜಕೀಯ ಚರಿತ್ರೆಯಲ್ಲೇ, ಐವತ್ತು ವರ್ಷಗಳ ಕರಿ ನೀರಿನ ಶಿಕ್ಷೆಗೆ ಗುರಿಯಾದ ಮೊಟ್ಟಮೊದಲ ರಾಜಕೀಯ ಸೆರೆಯಾಳು.

• ಬರವಣಿಗೆಗೆ ಅಗತ್ಯವಾದ ಸಾಮಗ್ರಿಗಳಾಗಲೀ, ಸೌಲಭ್ಯಗಳಾಗಲೀ, ಇಲ್ಲದಿದ್ದರೂ ಬರೆಯುವುದನ್ನು ನಿಷೇಧಿಸಲಾಗಿದ್ದರೂ ಜೈಲುಖಾನೆಯ ಗೋಡೆಗಳ ಮೇಲೆ ಮೊಳೆಯಿಂದಲೇ ಹತ್ತು ಸಹಸ್ರ ಸಾಲುಗಳಷ್ಟು ಕಾವ್ಯ ರಚಿಸಿ, ಬಾಯಿ ಪಾಠ ಮಾಡಿ 14 ವರ್ಷಗಳ ಸೆರೆವಾಸದ ನಂತರ ಅದನ್ನು ಸುರಕ್ಷಿತವಾಗಿ ದೇಶಕ್ಕೆ ಒಪ್ಪಿಸಿದ ವಿಶ್ವದ ಮೊಟ್ಟಮೊದಲ ಮಹಾಕವಿ. (ಕೃಪೆ: ಆತ್ಮಾಹುತಿ ಕೃತಿ)

ಇಂತಹ ಸಾವರ್ಕರ್ ಹೇಡಿಯಾಗಿದ್ದರೆ? ಸಾವರ್ಕರ್ ತನಗೆ ಕ್ಷಮದಾನ ನೀಡಿ ಎಂದು ಅರ್ಜಿ ಸಲ್ಲಿಸಿದ್ದು ನಿಜ. ಅದು ಅವರ ತಂತ್ರಗಾರಿಕೆಯಾಗಿತ್ತು. ತಿಲಕರು ತೀರಿ ಹೋದ ನಂತರ ಭಾರತದಲ್ಲಿ ತಮ್ಮ ಅವಶ್ಯಕತೆ ಬೇಕೆಂದು ಮನಗಂಡು ಸಾವರ್ಕರ್ ಕ್ಷಮದಾನ ನೀಡಿ ಎಂದು ಪತ್ರ ಬರೆದಿದ್ದರು. ಸಾವರ್ಕರ್ ಅವರ ಕ್ಷಮದಾನ ಅರ್ಜಿಯನ್ನು ತಿರಸ್ಕರಿಸಿ, ಅಂದಿನ ಬ್ರಿಟಿಷ್ ಸರ್ಕಾರ ಗೃಹ ಕಾರ್ಯದರ್ಶಿ ಸಾವರ್ಕರ್ ಅವರನ್ನು ಬಿಡುಗಡೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸರ್ಕಾರವನ್ನು ಎಚ್ಚರಿಸಿದ್ದರು. ಬ್ರಿಟಿಷರಿಗೆ ಗೊತ್ತಿದ್ದ ವಿಚಾರ ನಮ್ಮ ಕಾಂಗ್ರೆಸ್ ನಾಯಕರಿಗೆ ತಿಳಿಯದಿರುವುದು ಎಂತಹ ದೌರ್ಭಾಗ್ಯವಲ್ಲವೇ?

ತಾರುಣ್ಯದಲ್ಲೇ ಮಿತ್ರಮೇಳ ಎಂಬ ತರುಣರ ತಂಡ ಕಟ್ಟಿದ ಸಾವರ್ಕರ್ ನಾಸಿಕ ಜಿಲ್ಲೆ ದೇಶಭಕ್ತರ ಜಿಲ್ಲೆಯನ್ನಾಗಿಸಿದರು. ಅಭಿನವ ಭಾರತ ಎಂಬ ಗುಪ್ತ ಸಂಘಟನೆಯನ್ನು ಆರಂಭಿಸಿ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಕ್ರಾಂತಿಯನ್ನು ಹಬ್ಬಿಸಿದರು. ಮುಂದೆ ಶತ್ರುವನ್ನು ಶತ್ರುವಿನ ನೆಲೆದಲ್ಲೇ ಮಣಿಸಲು ಲಂಡನ್’ಗೆ ಹಾರಿದರು. ಸಾವರ್ಕರ್ ಕಾಲಿಟ್ಟ ಲಂಡನ್’ನ ಭಾರತ ಭವನ ದೇಶಭಕ್ತರ ಭವನವಾಯಿತು. ಮದನ್ ಲಾಲ್ ಧಿಂಗ್ರಾನಂತ ಬಿಸಿರಕ್ತದ ಹುಡುಗರು ಕರ್ಜನ್ ವಾಲಿಯಾ ಎಂಬ ಅಧಿಕಾರಿಯನ್ನು ಸಂಹರಿಸಿ ಬ್ರಿಟಿಷರ ನೆಲೆದಲ್ಲೇ ಆಂಗ್ಲರ ವಿರುದ್ಧ ಸಮರ ಸಾರಿದ್ದ. ಸಾವರ್ಕರ್’ರಿಂದ ಪ್ರೇರಿತನಾದ ಅನಂತ ಕನ್ಹೇರೆ ಎಂಬ ತರುಣ ನಾಸಿಕದ ಜಿಲ್ಲಾ ಕಲೆಕ್ಟರ್ ಜಾಕ್ಸನ್’ನನ್ನು ಹತ್ಯೆಮಾಡಿ ಹುತಾತ್ಮನಾಗಿಬಿಟ್ಟ. ಸಾವರ್ಕರ್ ಎಂಬ ಅಭಿನವ ಕ್ರಾಂತಿಕಾರಿ ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಬ್ರಿಟಿಷರಿಂದ ಬಂಧಿತರಾದ ಸಾವರ್ಕರ್ 50 ವರ್ಷದ ಘೋರ ಕರಿನೀರಿನ ಶಿಕ್ಷೆಗೆ ಗುರಿಯಾದರು. ಯಾವುದಕ್ಕೂ ಸ್ವಲ್ಪವೂ ಭಯಪಡದ ಸಾವರ್ಕರ್ ತಮ್ಮನ್ನು ಭಾರತಕ್ಕೆ ಕರೆದುಕೊಂಡು ಹೋಗುತ್ತಿದ್ದ ಹಡಗಿನ ಶೌಚಗೃಹದ ಕಿಟಕಿಯಿಂದ ತೂರಿ ಸಮುದ್ರಕ್ಕೆ ಹಾರಿ ಅಲ್ಲಿಂದ ಪಾರಾಗಲು ಪ್ರಯತ್ನಿಸಿದರು. ಈ ಸಾಹಸ ಜಗತ್ತು ಕಂಡ ಅಪ್ರತಿಮ ಸಾಹಸವಾಗಿತ್ತು. ಅಂಡಮಾನಿನ ಘೋರ ಶಿಕ್ಷೆಗೆ ಒಳಪಟ್ಟ ಸಾವರ್ಕರ್ ಜೈಲಿನಲ್ಲಿ ನಡೆಯುತ್ತಿದ್ದ ಮತಾಂತರವನ್ನು ತಡೆದು ಶುದ್ದೀ ಚಳುವಳಿಯನ್ನು ಆರಂಭಿಸಿದರು. 13 ವರ್ಷಗಳ ಕಲಾಪಾನಿ ನಂತರ ಸಾವರ್ಕರ್ ಅವರನ್ನು ಬ್ರಿಟಿಷರು ಮಹಾರಾಷ್ಟ್ರದ ರತ್ನಗಿರಿಯಲ್ಲಿ ಗೃಹಬಂಧನದಲ್ಲಿಟ್ಟರು. ರತ್ನಗಿರಿಯನ್ನೇ ಸಂಪೂರ್ಣ ಬದಲಿಸಿದ ಸಾವರ್ಕರ್ ಅಸ್ಪೃಶ್ಯತೆಯ ವಿರುದ್ದ ಹೋರಾಡಿ ಪತಿತಪಾವನ ಮಂದಿರವನ್ನು ನಿರ್ಮಿಸಿದರು. ಬಂಧನದಿಂದ ಬಿಡುಗಡೆಯಾದ ಮೇಲೆ ಸುಮ್ಮನೆ ಕೂರದ ಸಾವರ್ಕರ್ ಹಿಂದೂ ಮಹಾಸಭಾ ಎಂಬ ಪಕ್ಷವನ್ನು ಸಂಘಟಿಸಿ ತಮ್ಮ ಹೋರಾಟವನ್ನು ಮುಂದುವರೆಸಿದರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಯುವಕರಿಗೆ ಸೇನೆಗೆ ಸೇರಲು ಪ್ರೇರಣೆ ನೀಡಿ ಬ್ರಿಟಿಷ್ ಸೈನ್ಯದಲ್ಲಿ ಭಾರತೀಯರು ಹೆಚ್ಚಾಗುವಂತೆ ಮಾಡಿದರು. ಸುಭಾಷ್ ಚಂದ್ರ ಬೋಸರಿಗೆ ಸೇನೆಕಟ್ಟಲು ಪ್ರೇರೇಪಣೆ ನೀಡಿ ಭಾರತಕ್ಕೆ ಸ್ವಾತಂತ್ರ್ಯ ಬರಲು ಪರೋಕ್ಷವಾಗಿ ಸಾವರ್ಕರ್ ಕಾರಣರಾದರು ಎಂದರೆ ಯಾವ ಅತಿಶಯೋಕ್ತಿಯೂ ಇಲ್ಲ. ತಮ್ಮ ಜೀವನದ ಉದ್ದಕ್ಕೂ ಹೋರಾಟವನ್ನು ಮಾಡುತ್ತಾ ಬಂದ ಸಾವರ್ಕರ್ ಬಳಿ ಹೇಡಿ ಎಂಬ ಶಬ್ದ ಸುಳಿದಿರಲಿಲ್ಲ.

ಮಹಾನ್ ನಾಯಕ ಸಾವರ್ಕರ್’ಗೆ ಭಾರತ ಸರ್ಕಾರ ಭಾರತರತ್ನ ನೀಡಬೇಕಿತ್ತು. ಆದರೆ ನಮ್ಮ ಮೊದಲ ಪ್ರಧಾನಿ ನೆಹರೂ ಸಾವರ್ಕರ್ ಅವರನ್ನು ಗಾಂಧಿ ಹತ್ಯೆಯಲ್ಲಿ ಸಿಲುಕಿಸಿದರು. ಸಾವರ್ಕರ್ ಅವರ ತಮ್ನ ನಾರಾಯಣ ಸಾವರ್ಕರ್ ಅವರನ್ನು ಅಹಿಂಸಾತ್ಮಕ ಹೋರಾಟದ ನಾಯಕರಾದ ಕಾಂಗ್ರೆಸ್ಸಿಗರೇ ಕಲ್ಲು ಹೊಡೆದು ಸಾಯಿಸಿದರು. ಸಾವರ್ಕರ್ ಎಲ್ಲಾ ಆರೋಪಗಳಿಂದ ಮುಕ್ತರಾದರು. ತಮ್ಮನ್ನು ಅವಮಾನಿಸಿದ ನೆಹರೂ ಮೇಲೆ ಸಾವರ್ಕರ್ ಮೊಕದ್ದಮೆ ಹೂಡಬಹುದಿತ್ತು. ಆದರೆ ಸಾವರ್ಕರ್ ಹಾಗೇ ಮಾಡಲಿಲ್ಲ. ನನ್ನ ದೇಶದ ಪ್ರಧಾನಿಯ ವಿರುದ್ಧ ನಾನು ಕೇಸು ಹಾಕುವುದಿಲ್ಲ ಎಂದರು. ಮುಂದೆ ನೆಹರೂ ತೀರಿಕೊಂಡಾಗ ಗೌರವದಿಂದ ನಡೆದುಕೊಂಡ ಸಾವರ್ಕರ್ ಅವರ ಅಂತಿಮ ದರ್ಶನ ಮಾಡಿ ಶ್ರದ್ದಾಂಜಲಿ ಸಲ್ಲಿಸಿದರು.ಇಂತಹ ಶ್ರೇಷ್ಠ ವ್ಯಕ್ತಿಯ ಕುರಿತು ಇಂದು ಕಾಂಗ್ರೆಸ್ಸಿಗರು ಆಧಾರವಿಲ್ಲದ ಆರೋಪ ಮಾಡುತ್ತಿದ್ದಾರೆ.

ಸಾವರ್ಕರ್ ಅವರಿಗೆ 50 ವರ್ಷಗಳ ಕಾಲ ಶಿಕ್ಷೆ ನೀಡಿದ ಬ್ರಿಟಿಷರೇ ಸಾವರ್ಕರ್ ಅವರನ್ನು ಗೌರವಿಸಿ ಲಂಡನ್ನಿನಲ್ಲಿ ಭಾರತ ಭವನವಿದ್ದ ರಸ್ತೆಗೆ ಸಾವರ್ಕರ್ ಮ್ಯಾನ್’ಷನ್ ಎಂದು ಹೆಸರಿಟ್ಟಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಸದನದಲ್ಲಿ ಸಾವರ್ಕರ್ ಪುತ್ಥಳಿಯನ್ನು ಅನಾವರಣಗೊಳಿಸುವ ಸಮಾರಂಭಕ್ಕೆ ಹಾಜರಾಗದೇ ಸಾವರ್ಕರ್ ಅವರಿಗೆ ಅಗೌರವ ತೋರಿಸಿತು. ಇಂದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಜನ್ಮ ನೀಡಿದ ಇಟಲಿಗೆ ಆಸ್ಟ್ರಿಯಾದಿಂದ ಸ್ವಾತಂತ್ರ್ಯ ಕೊಡಿಸಿದ ಜೋಸೆಫ್ ಮ್ಯಾಜಿನಿಯ ಕುರಿತು ಸಾವರ್ಕರ್ ತಾರುಣ್ಯದಲ್ಲೇ ಉತ್ಕೃಷ್ಟ ಗ್ರಂಥವನ್ನು ರಚಿಸಿದ್ದರು. ಈ ಕಾರಣಕ್ಕಾದರೂ ಮೇಡಂ ಭಕ್ತರಾದ ಕಾಂಗ್ರೆಸ್ ನಾಯಕರು ಸಾವರ್ಕರ್ ಅವರಿಗೆ ಗೌರವ ನೀಡಲಿ.

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!