ಅಂಕಣ

ಕಿರಣ್ ಕಾನೋಜಿ ಎನ್ನುವ ಸ್ಪೂರ್ತಿಯ ಕಿರಣ

ಕಿರಣ್ ಕಾನೋಜಿ ಅವರ ಅಪ್ಪ ಒಬ್ಬ ಬಡ ರೈತ, ಆದ್ರೂ ಅವರ ಮಕ್ಕಳಿಗೆ ಒಳ್ಳೆಯ ವಿದ್ಯಾಬ್ಯಾಸವನ್ನು ಕೊಟ್ಟಿದ್ದರು. ಅಂದು ಡಿಸೆಂಬರ್24 2011 ಕಿರಣ್ ಕಾನೋಜಿ ಎಂಬ ಹುಡಗಿ ಬಾಳಲ್ಲಿ ಬಿರುಗಾಳಿ ಬಂದ ದಿನ. ಕೆಲಸಕ್ಕೆ ರಜೆ ಇದ್ದ ಕಾರಣ ಕಿರಣ್ ಹೈದರಾಬಾದ್ದಿಂದ ತನ್ನ ಉರೂ ಫರಿದಾಬಾದ್’ಗೆ ಹೋಗ್ತಾ ಇದ್ದಳು . ಟ್ರೈನ್ ಪನ್’ವೇಲ್ ಸ್ಟೇಶನ್ ದಾಟಿತ್ತು . ಇನ್ನೂ ಕೇವಲ ಅರ್ಧ ಗಂಟೆ ಆದ್ರೆ ಅವಳು ಅವಳ ಮನೆಗೆ ತಲುಪಿ ಬಿಟ್ಟಿರುತ್ತಿದ್ದಳು .

ಕಿರಣ್ ನೆನಪಿಸಿಕೊಳ್ಳುತ್ತಾಳೆ. ಆ ಸಂಜೆ ನನ್ನ ೨೬ನೇ ಹುಟ್ಟುಹಬ್ಬದ ಹಿಂದಿನ ಸಂಜೆ. ನಾನು ತುಂಬಾ ಕಾತುರದಿಂದ ಕುಟಂಬದ ಜೊತೆ ಸಮಯ ಕಳೆಯಬೇಕು ಎಂದುಕೊಂಡಿದ್ದೆ . ಆದರೆ ವಿಧಿಯ ಬೇರೆಯದೆ ನಿರ್ಧಾರ ಮಾಡಿತ್ತೇನೊ . ಅವಳು lower birth ನಲ್ಲಿ ಮಲಗಿಕೊಂಡಿದ್ದಳು. ಅವಳ ಬರ್ತ್ Exit door ಪಕ್ಕಕ್ಕೆ ಇತ್ತು .ಯಾರೋ ಇಬ್ಬರು ಕಳ್ಳರು ಬಂದು ಅವಳ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ , ಆದರೆ ಆ ಬ್ಯಾಗ್ ಅವಳು ಟೊಂಕಕ್ಕೆ ಕಟ್ಟಿಕೊಂಡಿದ್ದ ಕಾರಣದಿಂದ ಅವರ ಎಳತಕ್ಕೆ ಬ್ಯಾಗಿನ ಸಮೇತ ಅವಳು ಹೊರಗೆ ಬೀಳುತ್ತಾಳೆ ಹೀಗೆ ಬೀಳುವಾಗ ಅವಳ ಎಡಗಾಲು ಟ್ರೈನಿನ footstep ನಲ್ಲಿ ಸಿಕ್ಕಿಕೊಳ್ಳುತ್ತದೆ ,ಆ ದಿನ ಅವಳ compartment ನಲ್ಲಿ ಯಾರು ಇಲ್ಲದ ಕಾರಣ ಅವಳ ಚೀರಾಟ ಸ್ವಲ್ಪ ತಡವಾಗಿ ಜನರಿಗೆ ಕೇಳುತ್ತದೆ . ಆಗ ಯಾರೋ ಒಬ್ಬರು chain ಎಳೆದು ಟ್ರೈನ್ನನ್ನು ನಿಲ್ಲಿಸುತ್ತಾರೆ.

ನಂತರ ಅವಳನ್ನು ತುಂಬಾ ಸಂಯಮದಿಂದ ಜನ ಅವಳನ್ನು ಎತ್ತಿ ಬರ್ತ್ ಮೇಲೆ ಮಲಗಿಸುತ್ತಾರೆ .ನೋವಿನ ಮಡಿಲಲ್ಲಿ Semi-consicious stateನಲ್ಲಿ ಕಿರಣ್ ಮಲಗಿರುತ್ತಳೆ . ಹೀಗಿದ್ದಾಗ ಅವರು ನಿಜ಼ಾಮುದ್ದೀನ್ ಸ್ಟೇಶನ್ ತಲಪುತ್ತಾರೆ , ಅಲ್ಲಿ ಅವಳನ್ನು ಅಡ್ಮಿಟ್ ಮಾಡಿಕೊಳ್ಳಲಾಗುತ್ತದೆ . ಕೆಲ ಹೊತ್ತ ನಂತರ ಕಿರಣ್ ಒಂದು ಕಾಗದವನ್ನು ದಿಟ್ಟಿಸುತ್ತಿದ್ದಳು , ಆ ಕಾಗದ ಪತ್ರ ಅವಳ ಸಹಿ ಕೇಳ್ತಾಯಿತ್ತು . “ಅವಳ ಎಡಬಾಗದ ಕಾಲನ್ನು ಕತ್ತರಿಸಲು ಡಾಕ್ಟರ್ಸ್ ಅವಳ ಅನುಮತಿ ಕೇಳುತ್ತಾ ಇದ್ದರು . ಅವಳಿಗೆ ಬೇರೆ ದಾರಿ ಇಲ್ಲದ ಕಾರಣ ಭಾರವಾದ ಮನಸ್ಸು ಮತ್ತು ಕಂಬನಿ ಇಡುತ್ತಿರುವ ಮನಸ್ಸಿಂದ ಆ ಪತ್ರದ ಮೇಲೆ ಸಹಿ ಹಾಕುತ್ತಾಳೆ .

ಎಲ್ಲರೂ ಇವಳ ಭವಿಷ್ಯ ಮುಗಿಯಿತು ಎಂದು ಆಡಿಕೊಳ್ಳುತ್ತಾರೆ . ಆದ್ರೆ ಅವಳ ನಿಜವಾದ ಜೀವನ ಶುರುವಾಗಿದ್ದೆ ಆಗ.

ಕಿರಣ್ ಆ ಅಪಘಾತದಿಂದ depression ಗೆ ಹೋಗ್ತಾಳೆ. ಒಂದು ವರ್ಷ depression ಜೊತೆ ಹೋರಾಟ ನಡಸಿ ಅದನ್ನು ಗೆದ್ದು ಬರುತ್ತಾಳೆ,ಮೆಟ್ಟಿ ನಿಲ್ಲುತ್ತಾಳೆ. ಈ ಅಪಘಾತ ಆದ ಮೇಲೆ ಕಿರಣ್ ಮನಸ್ಸಿನಲ್ಲಿ ಹಾದು ಹೋದ ಪ್ರಶ್ನೆ ಗಳು ಹಲವಾರು. ನಾನು ಕೆಲಸಕ್ಕೆ ಮತ್ತೆ ಹೋಗಬಹುದು ಅಂತ ಒಂದು ಸಣ್ಣ ನಂಬಿಕೆ ಅವಳಿಗೆ ಇರಲಿಲ್ಲ..ನನನ್ನು ಯಾರು ಮದುವೆ ಆಗುವುದಿಲ್ಲ ಅಂತ ಚಿಂತೆ ಬೇರೆ ಅವಳನ್ನು ಕಾಡಲಾರಂಬಿಸಿತು . ತನ್ನ ಜೀವನಕ್ಕೆ ಒಂದು ಉದ್ದೇಶ ಕೊಡಬೇಕೆನಿಸಿತು .

ಕೊನೆಗೆ ನಿರ್ಧಾರ ಮಾಡೇ ಬಿಟ್ಟಳು ಅವಳ ತಂಗಿಯ ಜೊತೆ ಹೈದರಾಬಾದ್‌ಗೆ ಬಂದಳು .ಆಗಲೇ ಕಿರಣ್ ಮುಂದೆ ಒಂದು ಸ್ಪಷ್ಟ ಗುರಿ ಮೂಡಿತ್ತು .ಆ ಗುರಿಯ ಬೆನ್ನತ್ತಿ ಅವಳು ಓಡಲು ಶುರು ಮಾಡುತ್ತಾಳೆ . ಮೊದಮೊದಲು ಅವ್ಳಿಗೆ ತುಂಬಾ ಕಷ್ಟ ಆಗ್ತಿತ್ತು. ಆದರೆ ಅವಳ ಸತತ ಪರಿಶ್ರಮದಿಂದ ೫-೭km ಓಡಲು ಶುರು ಮಾಡಿದಳು . ಆಮೇಲೆ ಅವಳ ತರ ಇದ್ದವರ ಜೊತೆ ಓಡಿ confidence ಮತ್ತು strength ಅನ್ನು ಗಳಿಸಿಕೊಂಡಳು . ಅವಳ ಮಾನಸ್ಸು ಆಗ ತುಂಬಾ ಚೈತನ್ಯದಿಂದ ಇತ್ತು .

ಅವಳ ಮೊದಲು ಕನಸಿನ ಓಟ ೨೦೧೪ ಮುಂಬೈನಲ್ಲಿ ನಡೆಯಿತು . ಈ marathon ಆದ ಮೇಲೆ ಅವಳ ಗುರಿ ಇನ್ನೂ ದೊಡ್ಡದಾಯಿತು. ಇನ್ನೂ ಹೆಚ್ಚು ದೂರ ಮತ್ತು ವೇಗವಾಗಿ ಓಡಲು ತಯಾರಿ ನಡಸಿದಳು . ನೋಡ ನೋಡುತ್ತಲೇ ” She was the first BLADE runner to complete Hyderabad half marathon ” ಅನ್ನೋ ಗರಿ ಆಕೆಯ ಸಾಧನೆಗೆ ಕಿರೀಟಪ್ರಾಯವಾಯಿತು . ಮುಂದೆ CRPF ಮತ್ತು ಡೆಲ್ಲಿ ಹಾಗೆ ಮುಂಬೈ . marathon ನಲ್ಲಿ ಓಡಿದಳು . ಅವಳ ಸಾಧನೆ ಕಂಡು media ಮತ್ತು magazine ಅವಳ ಬಗ್ಗೆ ಜನರಿಗೆ ತಿಳಿಸಿದವು .

ಈಗ ಕಿರಣ್ Motivational lectures ಕೊಡುತ್ತಾಳೆ . ತನ್ನಂತೆ ಕಾಲು ಕಳೆದುಕೊಂಡವರು ಜೀವನವೇ ಮುಗಿದು ಹೋಯ್ತು ಎಂದಂದುಕೊಳ್ಳಬಾರದೆಂಬ ಕಾರಣಕ್ಕೆ ಜನರಲ್ಲಿ ಸ್ಪೂರ್ತಿ ತುಂಬುತ್ತಾಳೆ. ಅವಳ ಉದ್ದೇಶ ಏನಂದರೆ ಅವಳ ಹಾಗೆ ಕಾಲು ಕಳೆದುಕೊಂಡವರು ಆಶಾವಾದಿಗಳಾಗಿರಬೇಕು . ಆತ್ಮವಿಶ್ವಾಸ ಕಳೆದುಕೊಳ್ಳಬಾರದು ಎಂಬುದು ಅವಳ ವಾದ. .

Artificial limb ಅಥವಾ blade ಹಾಕಿಕೊಂಡರೆ ಓಡುವುದು ಅಷ್ಟು ಸುಲಭದ ಮಾತಲ್ಲ , ಕೆಲ ಹೊತ್ತು ಓಡಿದ ನಂತರ ದೇಹದ ಸಂಪೂರ್ಣ ತೂಕ ನಿಮ್ಮ ಬಲಗಾಲದ ಮೇಲೆ ಬೀಳುತ್ತದೆ . ತುಂಬಾ ಸಲ ಓಡುವಾಗ ಕಾಲಿಗೆ ರಕ್ತ ಬರುತ್ತದೆ . ಆದ್ರೆ ಕಿರಣ್ ಹೇಳುವ ಹಾಗೆ ” IT’s ALL WORTH “.

ಕಿರಣ್ ನಿಮ್ಮ ಆತ್ಮಶಕ್ತಿ, ಸಾಧಿಸಬೇಕು ಎನ್ನುವ ಹಂಬಲ , ದೃಢವಾದ ನಿರ್ಧಾರ ನಿಜವಾಗಿಯೂ ನಮ್ಮೆಲ್ಲರಿಗೂ ಸ್ಪೂರ್ತಿ ತುಂಬುತ್ತದೆ . ಆದ್ದರಿಂದ ನಿಮ್ಮ ಸಾಧನೆಗಾಗಿ ನಮ್ಮ ಕಡೆಯಿಂದ ಒಂದು salute …..

 -Sharanu Patil

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!