ಕವಿತೆ

ಕಲೆಯ ಮುನ್ನುಡಿ

ನಡುತಿಮಿರ ಪರದೆಯೆಳೆ

ಸುಡುರಂಗ ನಿಗಿನಿಗಿಸೆ

ಹಿಡಿಜೀವವೊಂದಿಲ್ಲಿ ಕುಣಿಯಲೆದ್ದು |

ಜಡ ಮುರಿದು ಬಯಲಲ್ಲಿ

ಅಡಿ ಮೇಲೆ ಹಾರಿರಲು

ಬಡಿದಂತೆ ಮಾರ್ದನಿಸಲದುವೆ ಸದ್ದು ||

ಬಣ್ಣಗಳ ಲೇಪದಲಿ

ಕಣ್ಣುಗಳೆ ದನಿಯಾಗೆ

ತಣ್ಣನೆಯ ಛಳಿಯೆಲ್ಲ ಧೂಳಿಪಟವೆ |

ಬಣ್ಣನೆಗೆ ದಂಡವದು

ಹುಣ್ಣಿಮೆಯೆ ಕಂದಿರಲು

ನುಣ್ಣನೆಯ ಹಾಳೆಯಲಿ ಚಿತ್ರಪಟವೆ ||

ಬಿಳಲುಗಳನಡಗಿಸಿದ

ಪುಳಕಿತವು ಭರಪೂರ

ಗಳಿಸಿರಲು ಸಭೆತುಂಬ ಕರತಾಡನ |

ಹಳೆಹಳಿಯ ಪಯಣಿಗನೊ

ಸುಳುಹಿಂದ ಕಲ್ಪನೆಯೊ

ತಳಪಾಯ ಗುರುತರದೆದೆಯಭಿಯಾನ ||

(ಇದು ಕುಸುಮ ಷಟ್ಪದಿಯಲ್ಲಿದೆ ಕುಸುಮ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,,,೫ನೆಯ ಸಾಲುಗಳು ಸಮನಾಗಿದ್ದು೫ ಮಾತ್ರೆಯ ಎರಡು ಗಣಗಳಿರುತ್ತವೆ೩ ಮತ್ತು ೬ನೆಯ ಪಾದಗಳಲ್ಲಿ ೫ ಮಾತ್ರೆಯ ೩ ಗಣಗಳಿದ್ದು,ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು

ಗುರುಬಸವನ(೧೪೩೦)’ಮನೋವಿಜಯಕಾವ್ಯ   ಕುಸುಮ ಷಟ್ಪದಿಯಲ್ಲಿದೆ_)

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!