ನನಗೆ ಈಗ ೨೫ ವರ್ಷ.ಇಷ್ಟು ವರ್ಷದಾಗ ಎಸ್ಟೋ ರಾತ್ರಿ ನಿದ್ರೇ ಇರಲಾರದೆ ರಾತ್ರಿ ಎಲ್ಲಾ ಕಳೆದದ್ದು ಇದೆ.ಆದರೆ ಇಂದು,ಬೆಳಕು ಯಾವಾಗ ಆಗುವದೋ ಅಂತ ಅನಿಸಿತ್ತಿದೆ.ಇನ್ನು ೬ ತಾಸಿಗೆ ಸೂರ್ಯ ಬರತಾನೆ ಬೆಳಕು ಬರುತ್ತೆ ,ಖುಸಿ ಆಗುತ್ತೆ.ಆದರೆ ಎಲ್ಲರೂ ನನ್ನಷ್ಟು ಲಕ್ಕಿ ಇರಲ್ಲ. ಆ ಲಿಸ್ಟ್’ಗೆ ನನ್ನ ಅಳಿಯನು ಸೇರುತ್ತಾನ. ಅವನ ಕಥೆ ನಾ ಹೇಳಲ್ಲ ಅವನೇ ಹೇಳುತಾನೇ ಕೇಳಿ .
ಓವರ್ ಟು ನನ್ನ ಅಳಿಯ……….
ಹಲೋ,
ನನಗೆ ಇನ್ನು ಹೆಸರು ಇಟ್ಟಿಲ್ಲ,ನಾನು ಇನ್ನು ನಮ್ಮ ಅಮ್ಮನ ಹೊಟ್ಟೆ ಒಳಗ ಇರುವ ಪಾಪು. ನನ್ನ ಕಥೆ ಸ್ಟಾರ್ಟ್ ಆಗುವದು ನಮ್ಮ ಅಜ್ಜಿ ಮಾತಿನಿಂದ…
ನನ್ನ ಅಮ್ಮ(ಅಜ್ಜಿ): ಆನಂದ, ಅಕ್ಕ ಡೆಲಿವರಿಗೆ ಅಂಥ ಮನೆ’ಗೆ ಬರುವುದರ ಒಳಗೆ ಗ್ಯಾಸ್ ರೆಪೈರಿ ಮಾಡಿಸಬೇಕು.
ನನ್ನ ಚಿಕ್ಕಮ್ಮ: ನನಗೆ ಆ ಟೈಮ್ನಲ್ಲಿ ರಜೆ ಸಿಗುತ್ತೋ ಇಲ್ಲೋ, ಇವತ್ತಿಂದನೆ ರಜೆನ ಉಳಿಸಬೇಕು.
ನನ್ನ ಅಕ್ಕ : ಆನು ಮಾಮ ನನ್ನ ಪ್ಯಾಂಟ್ ಚಿಕ್ಕದು ಆಗ್ತಾ ಇದೆ, ನಾಳೆ ತಮ್ಮ ಬರುತ್ತಾನಲ್ಲ ಅವನಿಗೆ ಕೊಡ್ತೀನಿ.
ಇವರೆಲ್ಲ ಮಾತಾಡ್ತಿರೋ ಹಾಗೆ ನನ್ನ ಮಾಮನು ಯಾವದೋ ಒಂದ ರೀತಿಯಲ್ಲಿ ನನ್ನ ಇರುವಿಕೆಯನ್ನ ಫೀಲ್ ಮಾಡುತ್ತಿದ್ದ.ಲಾಸ್ಟ್ ಟೈಮ್ ನನ್ನ ಮಾಮ ತಂದಿದ್ದ ಡ್ರೆಸ್ ಅಕ್ಕನಿಗೆ ಚಿಕ್ಕದಾಗಿತ್ತು. ಈ ಸರಿ ನನಗೆ ಅಳತೆ ನೋಡಿ ಡ್ರೆಸ್ ತರಬೇಕು ಅಂಥ ಡಿಸೈಡ್ ಮಾಡಿದ್ದ.
ಒಂದನೇ ಮಗು ಹೆಣ್ಣು ಆದರೆ ಎರಡನೇ ಮಗು ಗಂಡೇ ಆಗುತ್ತದೆ ಅನ್ನೋ ಭಾವನೆ .ಅದು ನಿಜ ಆದರೆ ಖುಷಿ,ಇಲ್ಲ ಅಂದರೆ ಮೂರನೇಯ ಮಗು ಗಂಡು ಆಗೇ ಆಗುತ್ತದೆ ಅಂಥ ಮತ್ತೆ ಕಾಯುವದು.ಇದು ನಿಮ್ಮ ಅಭ್ಯಾಸ.
ನಾನು ಬರುವ ಮುಂಚೆನೇ ಇವರೆಲ್ಲ ಗೆಸ್ ಮಾಡಿದ್ದರು ಗಂಡು ಮಗುನೇ ಅಂಥ. ನಾನು ನಮ್ಮ ಅಮ್ಮನ ಹೊಟ್ಟೆಯ ಒಳಗಿಂದಲೇ ಎಲ್ಲವನ್ನು ನೋಡುತ್ತಾ ಸುಮ್ಮನೆ ನಗುತ್ತಿದ್ದೆ.ನಾನು ಬರುತ್ತೇನೆ ಅಂಥ ಪ್ರತಿ ಒಬ್ಬರು ತಮ್ಮದೇ ಆದ ತಯಾರಿಯಲ್ಲಿ ಇದ್ದರು. ಅಪ್ಪ,ಅಮ್ಮ,ಅಜ್ಜಿ,ಅಜ್ಜ, ಮಾಮ,ಚಿಕ್ಕಮ್ಮ,ಚಿಕ್ಕಪ್ಪ,ದೊಡ್ಡಮ್
ಅಮ್ಮ ಅವಾಗ ಅವಾಗ ನನ್ನನ್ನ ಚೆಕ್ ಮಾಡುತ್ತಾ ಇದ್ದಳು , ನಾನು ಹೊಟ್ಟೆಯ ಒಳಗಿಂದಲೇ ಚೆನ್ನಾಗಿದ್ದೀನಿ ಮಮ್ಮಿ ಅಂತ ಹೇಳ್ತಿದ್ದೆ.ನನ್ನ ಕೈ,ಕಾಲು,ತಲೆ,ಉಗುರು,ಹೊಟ್ಟೆ ಎಲ್ಲಾ ಬೆಳೆದಿತ್ತು.ಇನ್ನು ಸ್ವಲ್ಪ್ ದಿನ ಮಸ್ತ್ ಮಜಾ ಮಾಡಿ ಇಲ್ಲೇ ಇದ್ದು ಅಕ್ಟೋಬರ್ ಇಲ್ಲವೆ ಸೆಪ್ಟೆಂಬರ್ ಗೆ ಬಂದು ಎಲ್ಲರನ್ನ ನೋಡಬೇಕು ಅಂಥಾ ಇದ್ದೆ.
ಆವತ್ತು,ಏನಾಯಿತೋ ಗೊತ್ತಿಲ್ಲ,ಎಲ್ಲಾ ಸರಿ ಇರಲಿಲ್ಲ.ಒಂಥರಾ ಭಯ,ಬೇಗ ಹೊರಗೆ ಓಡಿ ಹೋಗಬೇಕು ಅನ್ನೋ ತವಕ,ಅಮ್ಮನಿಗೆ ರಕ್ತದ ಒತ್ತಡ ಹೆಚ್ಚಿಗೆ ಆಗಿತ್ತು.ಆಮೇಲೆ ಏನ್ ಆಯ್ತು ಗೊತ್ತಿಲ್ಲ.ಡಾಕ್ಟರ ಆಂಟಿ ಅಮ್ಮನಿಗೆ ರಕ್ತ ಕೊಡಬೇಕು,ಅವರ ರಕ್ತ ಹೆಚ್ಚಿಗೆ ಹೊರಗೆ ಹೋಗುತ್ತಿದೆ ಅಂಥಾ ಹೇಳಿದ್ರು.ಡ್ರಿಪ್ಸ್ ಹಚ್ಚಿದರು.ಡಾಕ್ಟರ್ ಆಂಟಿ ನನ್ ಚೆಕ್ ಮಾಡಿದ್ರು,ಅಮ್ಮಾನು ನನ್ನನ್ನ ಚೆಕ್ ಮಾಡಿದ್ರು “ನಾನ್ ಇಲ್ಲೇ ಇದೀನಿ” ಅಂದೆ,ಆದರೆ ನನ್ನ ಮಾತು ಅವರಿಗೆ ಕೇಳಲೇ ಇಲ್ಲಾ.ಅಮ್ಮನಿಗೆ ನಾನು ಹೊರಗಡೆ ಬರ್ತೀನಿ ಅಂತ ಹೇಳಿದೆ,ಅಜ್ಜ ಅಜ್ಜಿ ಮಾಮ ಚಿಕ್ಕಮ್ಮ ಬಂದಿದ್ರು ನಾನು ಅವರಿಗೂ ಹೇಳಿದೆ.ಯಾರಿಗೂ ನನ್ನ ಮಾತು ಕೇಳಲಿಲ್ಲ.ಒಂದ ದಿನ ಪೂರ್ತಿ ಅಮ್ಮಾ ಏನು ತಿಂದಿರಲಿಲ್ಲ.ಡಾಕ್ಟರ ಆಂಟಿ ಬರಿ ಡ್ರಿಪ್ಸ್ ಮಾತ್ರ ಹಾಕಿದರು.ಹೊಟ್ಟೆ ಹಸಿವಾಗಿತ್ತು.ಅಮ್ಮಾ ನಗೆ ರಕ್ತದೊತ್ತಡ ಹೆಚ್ಚು ಕಡಿಮೆ ಆಗ್ತಿತ್ತು.
ಅಮ್ಮನಿಗೆ ಜೀವಕ್ಕೆ ಅಪಾಯ ಆಗಿತ್ತು.ನನಗೆ ಸಫ್ಫೋಕೆಶನ್ ಫೀಲ್ ಆಗುತ್ತಿತ್ತು.ನಾನೂ ಹೊರಗೆ ಹೋದರು ಬದುಕೋದ ಕಷ್ಟ ಇತ್ತು.ಇಲ್ಲೇ ಇರುವ ಯಾವುದೇ ಲಕ್ಷಣ ಇಲ್ಲಾ.ಅಮ್ಮನಿಗೆ ಲಾಸ್ಟ್ ಟೈಮ್ ಟಾಟಾ ಹೇಳಿದೆ.”ಅಮ್ಮಾ ನಿನ್ನ ರಕ್ತದೊತ್ತಡ ನನ್ನನ್ನ ಇಲ್ಲಿ ಇರೋಕೆ ಬಿಡುತ್ತಿಲ್ಲ, ಇವಾಗಲೇ ಹೊರಗಡೆ ಹೋದರೆ ಏನ್ ಆಗುತ್ತೋ ಗೊತ್ತಿಲ್ಲ.ಎಲ್ಲರನ್ನ ಕೇಳಿದೆ ಅಂತ ಹೇಳಮ್ಮ” ಅಂತ ಹೇಳಿ ಕಣ್ಣ ಮುಚ್ಚಿ ಬಿಟ್ಟೆ.
ಇಷ್ಟೇ ನನ್ನ ಕಥೆ….
ಬೆಳಕು ಹೇಗೆ ಇರುತ್ತದೆ ಅಂತಾನೆ ನೋಡೋಕೆ ಆಗಲಿಲ್ಲ ನನ್ನ ಅಳಿಯನಿಗೆ.ಇದರಲ್ಲಿ ಯಾರದು ತಪ್ಪು ಇರಲಿಲ್ಲ.ನಿಸರ್ಗಕ್ಕೆ ಅವನನ್ನ ಬೆಳಕಿಗೆ ತರುವ ಮನಸು ಇರದಿದ್ರೆ ಆರು ತಿಂಗಳು ಯಾಕೆ ಅವನನ್ನ ಬೆಳೆಸಿತ್ತು?ಅವನಿಗೂ ಆಶೆ ಇತ್ತು, ಹೊರಗಡೆ ಪ್ರಪಂಚ ನೋಡಬೇಕು,ಅಪ್ಪನ ಕಾರ್’ನಲ್ಲಿ ಹತ್ತಬೇಕು,ಅಮ್ಮನ ಜೊತೆ ಸ್ಕೂಲ್’ಗೆ ಹೋಗಬೇಕು ,ಅಕ್ಕಾನ ಜೊತೆ ಜಗಳ ಮಾಡಿ ಪೆನ್ಸಿಲ್ ತಗೋಬೇಕು,ಕಾಲೇಜ್’ಗೆ ಹೋಗಬೇಕು,ಜಾಬ್ ಮಾಡಬೇಕು,ಮದುವೆ ಆಗಬೇಕು.ನಮ್ಮಲ್ಲಿ ಅವನೂ ಒಬ್ಬ ಆಗಬೇಕು.ಸಿಕ್ಕಾಪಟ್ಟೆ ಆಶೆ ಇತ್ತು.
ಅವನಿಗೆ ಯಾಕೆ ಈ ಕ್ಷಣಿಕ ಸುಖ ಕೊಟ್ಟಿದ್ದು?.ಅವನು ಮಾಡಿದ ಮಾಡಿದ ತಪ್ಪಾದರೂ ಏನು?ಅವನು ಅಸ್ತಿತ್ವ ಕ್ರೀಯೆಟ್ ಆಗುವ ಮುಂಚೆಯೇ ಡಿಲೀಟ್ ಮಾಡಿದ್ದು ಯಾಕೇ ?.ಕಣ್ಣ ಮುಚ್ಚಿದರೆ ಅವನು ಬಂದು ಇಂಥಹ ನೂರು ಪ್ರಶ್ನೆ ಕೇಳುತ್ತಾನೆ.
ಎಲ್ಲೋ ಕೇಳಿದ್ದ ನೆನಪು “ಕೆಲವು ಪ್ರಶ್ನೆಗಳಿಗೆ ಉತ್ತರ ಇರಲ್ಲ,ಇನ್ನು ಕೆಲವು ಪ್ರಶ್ನೆಗಳಿಗೆ ಉತ್ತರ ಸತ್ತು ಹೋಗಿರತ್ತೆ.”
ಇದು “ಜೀವನವನ್ನೇ ನೋಡದೆ,ಜೀವ ಬಿಟ್ಟ,ಆ ಎಲ್ಲಾ ಜೀವಿಗಳಿಗೆ” ಸಮರ್ಪಿತ .