ಅಂಕಣ

ಹೀಗೊಂದು ಸೊಳ್ಳೆಯ ಸಂದರ್ಶನ

ಕಳೆದ ವರುಷ ಮಳೆಗಾಲದಲ್ಲಿ ನಡೆದ ಸೊಳ್ಳೆಯ ಸಂದರ್ಶನದ ಆಯ್ದ ಭಾಗಗಳು.

ನಾನು: ಮೂರು ವಾರದಿಂದ ಸತತ ಮಳೆಯಾಗುತ್ತಿದೆ…ಎಲ್ಲ ಕಡೆ ಸೊಳ್ಳೆಗಳು ಮೊಟ್ಟೆ ಹಾಕಿವೆ…ಇಂತಹ ಸಂದರ್ಭದಲ್ಲಿ ಶ್ರೀಮತಿ ಸೊಳ್ಳೆಯವರು ನಮಗೆ ಸಿಕ್ಕಿದ್ದು ತುಂಬಾ ಸಂತೋಷ….ಶ್ರೀಮತಿ ಡೆಂಗ್ಯೂ ಅವರಿಗೆ ನಮಸ್ಕಾರಗಳು.

ಸೊಳ್ಳೆ: ಡೆಂಗ್ಯೂ ಅಷ್ಟೇ ಹೇಳಬೇಡಿ, ಡೆಂಗ್ಯೂ ಸೊಳ್ಳೆ ಅಂತ ಹೇಳಿ …

ನಾನು: ಓಕೆ…ಸೊಳ್ಳೆಯವರೆ …ತಮಗೆ ಧನ್ಯವಾದಗಳು…ಸಾಯಂಕಾಲದ ನಿಮ್ಮ ಬ್ಯೂಸಿ ಸಮಯವನ್ನು ನಮಗೆ ಕೊಟ್ಟಿದ್ದಕ್ಕೆ

ಸೊಳ್ಳೆ: ಹಾಗೇನಿಲ್ಲ,  ಇವತ್ತು ಬ್ಲಡ್‌ ಬ್ಯಾಂಕಿಂದಾನೇ ಬರ್ತಾ ಇರೋದು …ನಿಮಗೆ ಯಾರಿಗೂ ತೊಂದರೆ ಕೊಡಬಾರದು ಅಂತ ಅಲ್ಲಿಂದಾನೇ ಹೊಟ್ಟೆ ತುಂಬಿಸಿ ಕೊಂಡು ಬಂದಿದ್ದೇನೆ

ನಾನು: So …ಸೊಳ್ಳೆಯವರೆ …ನೀವು ಹೀಗೆ ಹಗಲು ಹಗಲೇ ಕಡಿಯುತ್ತೀರಾ …ನಿಮಗೆ ಸಾಯಿಸುತ್ತಾರೆ ಎಂಬ ಹೆದರಿಕೆ ಇಲ್ವಾ?

ಸೊಳ್ಳೆ: ಹ್ಹಾ …ಹ್ಹಾ …ಹಗಲಲ್ಲೇ ಎಲ್ಲಾ ನಡೆಯೋದು…ನಮ್ಮ ಮೇನ್ ಬ್ಯುಸಿನೆಸ್ ಆಗೋದು ಪಾರ್ಕಗಳಲ್ಲಿ …ಅದೂ ಎಳೆಯ ಸಾಯಂಕಾಲ…ನಿಮಗೆ ಗೊತ್ತಾ ಅದು? ಬೆಂಗಳೂರ ಪಾರ್ಕ ನಿಮ್ಮ ಹೆಣ್ಣು ಮಕ್ಕಳಿಗೆ ಸೇಫ್ ಇಲ್ಲದೆ ಇರಬಹುದು…ಆದರೆ …ಹೆಣ್ಣು ಸೊಳ್ಳೆಗಳಿಗೆ ಅದು ಜಗತ್ತಿನಲ್ಲೇ ಸೇಫೆಸ್ಟ ಪ್ಲೇಸ್ …

ನಾನು: ಹೇಗದು?

ಸೊಳ್ಳೆ: ಓಕೆ, ಸಿ…ಪಾರ್ಕನಲ್ಲಿ ಪ್ರಣಯಹಕ್ಕಿಗಳು Kissing ಅದು ಇದು ಅಂತ ತಮ್ಮ ಮೈಯನ್ನೇ ಮರೆತಿರುತ್ತಾರೆ …ಆವಾಗಲೇ ನಾವು ಎಟ್ಯಾಕ್ ಮಾಡೋದು …ಹೋಗಿ ಕೂತು …ಆರಾಮಾಗಿ ರಕ್ತ ಹೀರಿ…ಸ್ವಲ್ಪ ರಿಲಾಕ್ಸ ಮಾಡಿ …ಡೆಂಗ್ಯೂ ಗಿಫ್ಟ ಕೊಟ್ಟು ಬಂದರೂ ಅವರಿಗೆ ತಿಳಿಯೊದಿಲ್ಲ…ನಮ್ಮಲ್ಲಿ ಕೆಲವು ಸಾಹಸಿಗಳು ಕಿಸ್ ಮಾಡುತ್ತಿರುವಾಗಲೇ…ಅವರ ಕೆನ್ನೆಯ ಮೇಲೆ ಕೂತು ರಕ್ತ ಹೀರಿ ಬಂದ ಗಿನ್ನಿಸ್ ದಾಖಲೆಗಳಿವೆ ! ನಿಮಗೆ ಇನ್ನೊಂದು ವಿಷಯ ಗೊತ್ತಾ?

ನಾನು: ಏನು?

ಸೊಳ್ಳೆ: ಪ್ರೇಮಪರೀಕ್ಷೆ ನಡೆಯೋದೆ ನಮ್ಮಿಂದ!

ನಾನು: WTF ….!!!

ಸೊಳ್ಳೆ: ಹೌದುರೀ…ಇಲ್ಲಿ ಕೇಳಿ…ಈಗ ಒಂದು ಹುಡುಗಾ ಹುಡುಗಿ …ತುಟಿ ಲೊಕ್ ಮಾಡಿಕೊಂಡು ಕಚ್ಚಾಡುತ್ತಿರುವಾಗ…ಹೋಗಿ ನಾವೂ ಕಡಿಯಲು ಪ್ರಾರಂಭಿಸುತ್ತೀವಿ…ಏನಾದರೂ …ಹುಡುಗನಿಗೆ ಗೊತ್ತಾಗಿ …ಅವಳ ತುಟಿ ಬಿಟ್ಟ ಅಂದರೆ…ಅಲ್ಲೇ ಶುರು …’ಇಷ್ಟೇನಾ ಪ್ರೀತಿ …ಒಂದು ಸೊಳ್ಳೆ ತಡಕೊಳ್ಳೋಕೆ ಆಗಿಲ್ವಾ?” …ಹೀಗೆ ಜಗಳ ನಡೆಯೊತ್ತೆ …ಕೆಲವೊಮ್ಮೆ …ಬ್ರೆಕ-ಅಪ್ ಕೂಡ ಆಗೊತ್ತೆ.

ನಾ: ಅದೇ ಹುಡುಗಿ ಫೇಲ್ ಆದಳು ಅಂದರೆ?

ಸೊ: ಛೇ…ಎನ್ರಿ…ಹುಡುಗಿಯರು ಫೇಲ್ ಆಗೊದೇ ಇಲ್ಲ… ಅವಳಿಗೆನಾದ್ರೂ ಕಚ್ಚಿತು ಅಂದರೆ ..ಅವನು …”ಓ ಹನಿ…ಏ ಹನಿ…ಚಿನ್ನಾ …ಸೊಳ್ಳೆ ಕಡಿತಾ??? ಡಾಕ್ಟರ್ ಹತ್ತಿರ ಹೋಗೋಣ?  …” ಅಂತ ಕೇಳಬೇಕು…ಆಮೇಲೆ ಅವಳು ಜೋರಾಗಿ ಅಳಬೇಕು…ಅವನು ಅವಳ ಸಮಾಧಾನ ಮಾಡಬೇಕು …ಶಾಪಿಂಗ್ ಮಾಡಿಸಬೇಕು…ಹೀಗೆ ಆ ಹುಡುಗನ ಪರೀಕ್ಷೆನೇ ಆಗೋದು….ಕೆಲ ಹುಡುಗಿಯರು ಇನ್ನೂ ಚಾಲೂ…”ಮೊದಲೇ ಹೇಳಿದ್ದೆ…ಪಾರ್ಕ ಬೇಡ ಅಂತ …ನಡೀ ಲಾಡ್ಜಗೆ…” ಅಂತಾರೆ

ನಾ: ಹೌದಾ…ಲಾಡ್ಜ್ ನಲ್ಲೂ ನೀವು ಪ್ರೇಮಪರೀಕ್ಷೆ ಮಾಡುತ್ತೀರಾ?

ಸೊ: ಕಾಮದ ಬೇಗೆಯಲ್ಲಿ ಬೇಯುತ್ತಿರುವ ಬಿಸಿ ಮೈಗಳ ನಾವು ಮುಟ್ಟೋಕೆ ಹೋಗೊಲ್ಲ …

ನಾ: ಓಕೆ…ಹಾಗಿದ್ದರೆ…ನೀವು ಹೆಚ್ಚಾಗಿ ಒಪನ್ ಜಾಗದಲ್ಲೇ …ಜೀವನ ಮಾಡೋದು…ಪಾಪ ಬಡವರ ರಕ್ತ ಹೀರುವುದು ..?

ಸೊ: ನೋಡಿ …ಬಡವರ ಚರ್ಮ ಗಟ್ಟಿ…ಸುಮ್ಮನೆ ನಾವು ನಮ್ಮ ಎನರ್ಜಿ ವೆಸ್ಟ ಮಾಡಿಕೊಳ್ಳೊದಿಲ್ಲ…ಕೆಲವೊಮ್ಮೆ ಅವರ ದೇಹದಲ್ಲಿ ಇಷ್ಟು ರೋಗನಿರೋಧಕ ಶಕ್ತಿ ಇರೊತ್ತೆ ಅಂದರೆ…ನಮ್ಮ ಸ್ಪಾಟ್ ಡೆತ್ ಆಗಬಿಡೊತ್ತೆ…ಅದೇ ಶ್ರೀಮಂತರ ಚರ್ಮ ಸಾಪ್ಟು…ಅಲ್ಲಿ ರೋಗನಿರೋಧಕ ಶಕ್ತಿ ಕಡಿಮೆ…ಅವರು ಹೊಸ ಹೊಸ ಲೆಟೆಸ್ಟ ಮೆಡಿಸಿನ್ ತಿನ್ನೊದರಿಂದ ನಮ್ಮ ಬಾಡಿಗೂ ಹೊಸ ಹೊಸ ರೋಗ ಕಂಡು ಹಿಡಿಯಲು ಅನುಕೂಲ ಆಗೊತ್ತೆ…

ನಾ: ಡೆಂಗ್ಯೂ ಲೆಟೆಸ್ಟ ಅಲ್ವಾ?….

ಸೊ: ಹೌದು…ಮೊದಲು ಮಲೇರಿಯಾ ಇತ್ತು…ಈಗ ಡೆಂಗ್ಯೂ…ನಾಳೆ ನಮ್ಮ ತಂತ್ರಜ್ಞಾನ ಮುಂದುವರಿದ ಹಾಗೇ ಇನ್ನೂ ಹೊಸ ಹೊಸ ಕಾಯಿಲೆಗಳನ್ನು ನಮ್ಮ ಸಂಶೋಧಕರು ಸಂಶೋಧನೆ ಮಾಡಬಹುದು …ನೀವೇ  ಲೇಟು …ನಾವು ಮೊದಲು ರೋಗ ಕಂಡುಹಿಡಿಯಬೇಕು…ಆಮೇಲೆ ನೀವು ಅದಕ್ಕೆ ಮದ್ದು ಕಂಡುಹಿಡಿಯುತ್ತೀರಾ.

ನಾ: ನಿಮಗೆ…ಹಿಟ್ …ಗುಡ್ ನೈಟ್ …ಸೊಳ್ಳೆ ಬತ್ತಿ…ಒಡೊಮೊಸ್ …ಇದರ ಬಗ್ಗೆ ಏನೇನಿಸುತ್ತದೆ?

ಸೊ: ನಿಮಗೆ ISIS, Global warming, Pollution,  AIDS, ಕ್ಯಾನ್ಸರ್ ಇದರ ಬಗ್ಗೆ ಏನೆನಿಸುತ್ತೋ ಹಾಗೆ…ಹೆದರಿಕೆ ಇದ್ದೇ ಇರೊತ್ತೆ…ಆದರೆ…ನೀವು ಜೀವನ ಮಾಡುತ್ತಿಲ್ಲವಾ? ನಾವು ಹಾಗೆ …ಕೆಲವರು ಸಾಯುತ್ತಾರೆ …ಕೆಲವರು ಬದುಕುಳಿಯುತ್ತಾರೆ…ನಮ್ಮ ಪೊಪ್ಯುಲೇಷನ್ ಜಾಸ್ತಿ ಆಗುತ್ತಿದೆಯೇ ಹೊರತು ..ಕಡಿಮೆ ಆಗಿಲ್ಲ….’ ಏಕ ಮಚ್ವರ್ ಆದಮೀ ಕೋ ಹಿಜಡಾ ಬನಾ ಸಕತಾ ಹೇ’ …ನಿಮಗಿಂತ ಹೆಚ್ಚು ಬುದ್ಧಿ ನಾವು ಉಪಯೋಗಿಸುತ್ತೇವೆ…

ನಾ: ನಿಮಗೆ..ರಕ್ತ ಹೀರುವಾಗ ಪಾಪ ಅನಿಸೊಲ್ವಾ?  ಮಕ್ಕಳು ಮುದುಕರು …ಹುಡುಗಿ…ಯಾರನ್ನು ಬಿಡುವುದಿಲ್ಲ!

ಸೊ: (ಸಿಟ್ಟಿನಿಂದ) ನಿಮಗೆ ಪಾಪ ಅನಿಸೊದಿಲ್ವಾ …ಕುರಿ, ಕೋಳಿ…ದನ…ಹಂದಿ…ನೀವು ನೋಡ್ತೀರಾ …ಮಗು, ಮುದುಕರು….ಹೆಣ್ಣು …ಅಂತ…ಟೌನ್ ಹಾಲ್ ಮುಂದೆ ಕೂತು ಮಾಜಾ ಮಾಡ್ತೀರಾ …ನಾವು ಬರೀ ಹೊಟ್ಟೆ ಪಾಡಿಗೆ…ನೀವು ಮಜಾ ಮಾಡಲಿಕ್ಕೆ ….ಹಕ್ಕಿಗಳನ್ನು …ಮೊಲ…ಮೀನುಗಳನ್ನು ಬಂಧಿಸಿ ಇಡುತ್ತಿರಾ? ಊರಲ್ಲಿ ಒಂದು ಹೆಣ್ಣು ನಾಯಿ…ನೂರು ಗಂಡು ನಾಯಿ…ಪಾಪ ಆ ಹೆಣ್ಣು ನಾಯಿಯ ಅವಸ್ಥೆ ನೋಡಿದ್ದೀರಾ…ಅದನ್ನು ಸಾಕಿದವರು ಅದನ್ನ ಬಾಡಿಗೆಗೆ ಕೊಡುತ್ತಾರೆ …ದಿನಕ್ಕೆ ಎಷ್ಟು ಬಾರಿಯೋ? ಶಾಪ ತಟ್ಟಿ …ಬೀಳಬಾರದ ಜಾಗದಲ್ಲಿ …ಹುಳ ಬಿದ್ದು ಸಾಯ್ತೀರ ….(ಕೋಪದ ಮುಖವಾಗಿತ್ತು)

ನಾ: ಸೊಳ್ಳೆಯವರೆ, ಸಿಟ್ಟು ಮಾಡ್ಕೋಬೇಡಿ …ಒಳ್ಳೆಯದು ಕೆಟ್ಟದ್ದು ಎಲ್ಲಾ ಇರೋತ್ತೆ ….

ಸೊ: ಹೌದಾ? ಹೇಲು…ಅನ್ನ ಎರಡೂ ಇದೆ….ಯಾಕೆ ಅನ್ನ ಅಷ್ಟೇ ತಿನ್ನುತ್ತಾರೆ ….?,ಮನುಷ್ಯರಿಗಿಂತ ನಾವು ಎಷ್ಟೋ ಬೇಕು…ಈಗ ಅರ್ಥಾ ಆಯ್ತಾ? ನನ್ನ ಮಗಂದ್ ( ಹುಚ್ಚ ವೆಂಕಟ್ ಸ್ಟೈಲ್‌ನಲ್ಲಿ)

ನಾ: ಸರಿ, ಇನ್ನು ರೆಪಿಡ್ ಫೈರ್ ರೌಂಡ್ …ಓಕೆನಾ

ಸೊ: ಚಚ್ಚಿ (ನಗುತ್ತಾ)

ನಾ: ನಿಮ್ಮ ಫೆವರಿಟ್ ಫುಡ್

ಸೊ: ರಕ್ತ (ಹೆಮ್ಮೆಯಿಂದ)

ನಾ: ನೀವು ಮನುಷ್ಯನಿಗೆ ಏನು ಹೇಳಲು ಬಯಸುತ್ತೀರಾ?

ಸೊ: ನಾವೆಲ್ಲ ಒಂದೇ ರಕ್ತ ಹಂಚಿಕೊಂಡು ಬದುಕುವವರು…ದ್ವೇಷ ಬೇಡ

ನಾ: ನಿಮ್ಮ ಜೀವನದ ಉದ್ದೇಶ

ಸೊ: ಗಿವ್ ರಕ್ತ,  ಟೇಕ್ ರಕ್ತ (ನಗುತ್ತಾ)

ನಾ: ನಿಮ್ಮದು ಬೇರೆ ಸೊಳ್ಳೆ ಜೊತೆ ಎಷ್ಟ್ರಾ ಮರೈಟಲ್ ಅಫೇರ್ಸ ಇದೆಯಾ …?

ಸೊ: ನಮ್ಮದೆಲ್ಲಾ Live-In …ಆದರೂ ವೈಯುಕ್ತಿಕ ಪ್ರಶ್ನೆಗೆ ಆದ್ಯತೆ ಇಲ್ಲ  …ಥ್ಯಾಂಕ್ಸ

ನಾ: ನಿಮ್ಮ ಅವಿಸ್ಮರಣೀಯ ಗಳಿಗೆ ಯಾವುದು?

ಸೊ: ಸನ್ನಿ ಲಿಯಾನ್ ಬೀಚ್ ನಲ್ಲಿ ಶೂಟಿಂಗ್ ಮಾಡುತ್ತಿದ್ದಾಗ …ಅವಳ ಕ್ಯಾಮರಾ ಮೆನ್ ರಕ್ತ ಹೀರಿದ್ದು

ನಾ: ನಿಮ್ಮ ಕನಸು

ಸೊ: ಐಶ್ವರ್ಯ ರೈ ಮೈ ಕಚ್ಚುವುದು

ನಾ: ಈ ಕ್ಷಣ ಏನನಿಸುತಿದೆ ?

ಸೊ: ಕಚ್ಚಿ ಬಿಡೋಣ ಅಂತ

ನಾನು: ನಿಮಗೆ ಜೀವಕ್ಕೆ ಅಪಾಯ ಅನಿಸಿದ್ದು ಯಾವಾಗ?

ಸೊಳ್ಳೆ: ಮೋದಿಜಿಯವರು …ಕೆಂಪುಕೋಟೆಯ ಮೇಲಿಂದ ಇಡೀ ದೇಶಕ್ಕೆ- ಸ್ವಚ್ಛ ಭಾರತ ಅಭಿಯಾನ ಮಾಡಿ ಅಂದಾಗ!

ನಾನು: ತುಂಬಾ ಧನ್ಯವಾದಗಳು ಸೊಳ್ಳೆಯವರೆ…ಇಲ್ಲಿಯವರೆಗೆ ಬಂದು…ಕಚ್ಚದೆ …ನಮ್ಮೊಡನೆ ಮಾತಾನಾಡಿದ್ದಕ್ಕೆ

ಸೊಳ್ಳೆ: ಥ್ಯಾಂಕ್ಯೂ

Vikram Joshi

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!