ಅಂಕಣ

ಕಲಿತವರೆಲ್ಲ ಜಾಣರಲ್ಲ, ಕಲಿಯದಿರುವವರೆಲ್ಲ ಕೋಣರಲ್ಲ.

ಈ ಹತ್ತು ಜಗತ್ಪ್ರಸಿದ್ಧ ವ್ಯಕ್ತಿಗಳಲ್ಲಿ ಯಾರೂ ಗೋಲ್ಡ್ ಮೆಡಲಿಸ್ಟಗಳೂ ಅಲ್ಲ ಅಥವಾ  ಸ್ನಾತಕೋತ್ತರ ಪದವಿ ಪಡೆದವರಲ್ಲ, ಇವರೆಲ್ಲ ಅರ್ಧಕ್ಕೇ ತಮ್ಮ ಸಾಂಪ್ರದಾಯಿಕ ಶಿಕ್ಷಣಕ್ಕೆ ಅಲ್ವಿದಾ ಎಂದು ಹೇಳಿ,ತಮ್ಮ ಕನಸಿನ ಅರಮನೆಯನ್ನು ಕಟ್ಟಿದವರು !

  1. ಥೊಮಸ್ ಅಲ್ವಾ ಎಡಿಸನ್ :-

ಎಡಿಸನ್ ಎಂದ ಕೋಡಲೇ ತಲೆಯಲ್ಲಿನ ಬಲ್ಬು ಥಟ್ಟನೆ ಬೆಳಗುತ್ತದೆ. ಒಂದು ಪೇಟೆಂಟ್ ಫೈಲ್ ಮಾಡುವುದು ಎಷ್ಟು ಕಷ್ಟ, ಅಂತದ್ದರಲ್ಲಿ ಎಡಿಸನ್ 1093 ಅಮೇರಿಕನ್ ಪೆಟೆಂಟ್ ಹೊಂದಿದ್ದಾರೆ. ಹಾಗಿದ್ದರೆ ಅವರು ಎಷ್ಟು ಕಲಿತಿರಬಹುದು? ಆಶ್ಚರ್ಯದ ವಿಷಯವೆಂದರೆ, ಬಾಲ್ಯದಲ್ಲಿ ಕಲಿಯಲು ಅಸಮರ್ಥ ಎಂದು ಎಡಿಸನರನ್ನು ಶಾಲೆಯಿಂದ ಹೊರಗೆ ಹಾಕಲಾಗಿತ್ತು. ಶಾಲೆಯಲ್ಲಿ ಕಲಿತೇ ಇಲ್ಲ ಅವರು! ಸ್ಕೂಲಿನಿಂದ ಹೊರದಬ್ಬಿದ ಮೇಲೆ, ಮುಂದೆ ಸ್ವತಃ ತಮ್ಮದೇ ಪ್ರಯೋಗಾಲಯವನ್ನು ಮಾಡಿ, ಅಲ್ಲಿ ಹೊಸ ಹೊಸ ಅನ್ವೇಷಣೆ ಮಾಡುತ್ತಾ ಇಪ್ಪತ್ತನೇಯ ಶತಮಾನವನ್ನು ನಿರ್ಮಿಸಿದ ಶ್ರೇಯ ಎಡಿಸನ್ ಗೆ ತಲಪುತ್ತದೆ.

  1. ಬಿಲ್ ಗೇಟ್ಸ್

ಹಾರ್ವರ್ಡ್’ನಿಂದ ಅರ್ಧಕ್ಕೇ ಹೊರಗೆ ಬಿದ್ದ ಗೇಟ್ಸ ಶುರು ಮಾಡಿದ್ದು ಮೈಕ್ರೊಸೊಫ್ಟ್ ಎಂಬ ಕಂಪನಿಯನ್ನು. ಇಂದು ಜಗತ್ತು ಮೈಕ್ರೊಸೊಫ್ಟ್ ಕಂಪನಿಯ ಒಪರೆಟಿಂಗ್ ಸಿಸ್ಟಮ್ ಮೇಲೆ ನಡೆಯುತ್ತಿದೆ.Microsoft is most successful company of all time – ಗೇಟ್ಸ ಅದರ ಮುಖ್ಯ ಮಾಲೀಕ. ಇಷ್ಟೇ ಅಲ್ಲ, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಕೂಡ ಹೌದು. ಅಂದು ಅರ್ಧ ಕಲಿತು ಹೊರಗೆ ಬಂದವನ ಇಂದಿನ ಸಂಪತ್ತು – 79.2 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 52,538 ಲಕ್ಷ ಕೋಟಿ ರೂಪಾಯಿಗಳು!

  1. ರಿಚಾರ್ಡ ಬ್ರಾನ್ಸನ್

ವರ್ಜಿನಿಯಾ ಏರ್ಲೈನ್ಸ, ವರ್ಜಿನ್ ಮೊಬೈಲ್ ಎಲ್ಲೋ ಕೇಳಿದ ಹೆಸರು ಅನಿಸಬಹುದು. ವರ್ಜಿನ್ ಗ್ರೂಪ್ ಜಗತ್ತಿನ ದೊಡ್ಡ ಕಂಪನಿಗಳ ಒಕ್ಕೂಟಗಳಲ್ಲೊಂದು. ಬ್ರಾನ್ಸನ್ ವರ್ಜಿನ್ ಗ್ರೂಪ್’ನ ಅಧಿಪತಿ. ಕಲಿತಿದ್ದು ಬರೀ ಹದಿನಾರರ ತನಕ ಮಾತ್ರ! ಸಂಗೀತ, ಮನರಂಜನೆ, ಪ್ರವಾಸೋದ್ಯಮ ಹಾಗೂ ಮಾಧ್ಯಮದ ರೂಪ ರೇಖೆಗಳನ್ನು ಬದಲಾಗಿಸಿದ್ದು ರಿಚಾರ್ಡ ಮಾಲೀಕತ್ವದ ವರ್ಜಿನ್ ಗ್ರೂಪ್. ಅದೇ ಅಲ್ಲದೆ ಹಾಟ್ ಏರ್ ಬಲೂನಿನಲ್ಲಿ ಮಹಾಸಾಗರವನ್ನು ದಾಟಿದ ಮೊದಲಿಗ ಎಂಬ ಖ್ಯಾತಿಯೂ ಇವರ ಹೆಸರಿನಲ್ಲಿದೆ. ಇಷ್ಟೆಲ್ಲಾ ಸಾಹಸ ಮಾಡಿರುವ ಇವರು ಕಲಿತಿದ್ದು ಬರೀ ಹದಿನಾರನೇ ವಯಸ್ಸಿನವರೆಗೆ, ಡಿಸ್ಲೆಕ್ಸಿಯಾದಿಂದ ಕಲಿಯಲು ತೊಂದರೆಯಾಗಿ ಅವರು ಚಿಕ್ಕ ವಯಸ್ಸಿನಲ್ಲೇ ಶಾಲೆಗೆ ಹೋಗಿ ಕಲಿಯುವುದನ್ನು ನಿಲ್ಲಿಸಿದರು. ಇವತ್ತು ಜನರನ್ನು ಅಂತರಿಕ್ಷಕ್ಕೆ ಪ್ರವಾಸಕ್ಕೆ ಕರೆದೊಯ್ಯುವ ಮಹಾ ಯೋಜನೆ ಹಾಕಿದ್ದಾರೆ.

  1. ಆಲ್ಬರ್ಟ್ ಐನ್‌ಸ್ಟೈನ್

ನೂರು ವರ್ಷಗಳ ಹಿಂದೇ ಹೇಳಿದ್ದರು ಗುರುತ್ವಾಕರ್ಷಣದ ಅಲೆಗಳಿವೆ ಎಂದು. ನ್ಯೂಟನ್ ನಂತರದ ಅತೀ ಬುದ್ಧಿವಂತ ವಿಜ್ಞಾನಿ ಎನ್ನುಲಾಗುವ ಆಲ್ಬರ್ಟ್ ಐನ್‌ಸ್ಟೈನ್. ಅವರನ್ನು ಹೈಸ್ಕೂಲಿನಿಂದ ಕಲಿಯಲು ಅಯೋಗ್ಯ ಎಂದು ಹೊರಗೆ ಹಾಕಲಾಗಿತ್ತು. ಅವರೇ ಮುಂದೆ ಒಂದು ದಿನ ನ್ಯೂಕ್ಲಿಯರ್ ಚೈನ್ ರಿಯಾಕ್ಷನ್, ಸಾಪೇಕ್ಷತಾ ಸಿದ್ಧಾಂತ, ಫೋಟೊ ಎಲೆಕ್ಟ್ರಿಕ್ ಇಫೆಕ್ಟಿನಂತಹ ಹಲವು ಗ್ರೌಂಡ್ ಬ್ರೇಕಿಂಗ್ ಸಂಶೋಧನೆಗೆ ಕಾರಣರಾದರು.  ನಂತರದ ದಿನಗಳಲ್ಲಿ ವಿಜ್ಞಾನ ಹಾಗೂ ಸಂಶೋಧನೆಗೆ ವಿದ್ಯಾಭ್ಯಾಸ ಮುಂದುವರಿಸಿದಾದರೂ, ಒಮ್ಮೆ ಹೈಸ್ಕೂಲಿನಿಂದ ಹೊರಗೆ ಹಾಕಲ್ಪಟ್ಟ ಐನ್‌ಸ್ಟೈನ್ ಅವರ ಸಾಪೇಕ್ಷತಾ ಸಿದ್ಧಾಂತವನ್ನು ಅರ್ಥ ಮಾಡಿಕೊಂಡ ಜನರು ಬೆರಳಣಿಕೆಯಷ್ಟು.

  1. ಸ್ಟೀವ್ ಜಾಬ್ಸ್ :

Apple ಕಂಪನಿಯನ್ನು ಒಂದು ಗ್ಯಾರೇಜಿನಲ್ಲಿ ಶುರು ಮಾಡಿ ಜಗತ್ತಿನ ಅತೀ ಮೌಲ್ಯವಾದ ಕಂಪನಿಯಾಗಿ ಮಾಡಿದವರು ಸ್ಟೀವ್ ಜಾಬ್ಸ್. ಸ್ಟೀವ್ ಕೊನೆಯವರೆಗೂ ಪದವೀಧರರಾಗಲಿಲ್ಲ. ರೀಡ್ ಕಾಲೇಜಿಗೆ ಹೋಗಿದ್ದೇನೋ ನಿಜ, ಆದರೆ ಅರ್ಧಕ್ಕೆ ತಮ್ಮ ಶಿಕ್ಷಣವನ್ನು ನಿಲ್ಲಿಸಿದರು. ಅವರು ಕಂಪ್ಯೂಟರ್,  ಮೊಬೈಲ್,  ಮ್ಯೂಸಿಕ್, ಹಾಗೂ ಎನಿಮೆಷನ್ ಇಂಡಸ್ಟ್ರಿಗಳಲ್ಲಿ ಹೊಸ ಕ್ರಾಂತಿಯನ್ನೇ ತಂದರು! ಇಂದು, ಸ್ಟೀವ್ ಜಾಬ್ಸ್ ಹುಟ್ಟು ಹಾಕಿದ ಕಂಪನಿ ಎಪಲ್ ಕಂಪನಿಯ ಮೌಲ್ಯ 534 ಬಿಲಿಯನ್ ಡಾಲರ್ ಗಳು, ಇದು ಒಂದು ಚಿಕ್ಕ ದೇಶದ GDP ಕ್ಕಿಂತ ಹೆಚ್ಚು!

  1. ಮೈಕೆಲ್ ಡೆಲ್ :

ಡೆಲ್ ಲ್ಯಾಪಟೊಪ್ ಹೆಸರನ್ನು ಕೇಳದವರು ಯಾರಿದ್ದಾರೆ?  ಡೆಲ್ ಕಂಪನಿಯ ಸಂಸ್ಥಾಪಕ ಮೈಕಲ್ ಡೆಲ್ ಅಮೇರಿಕಾದ ಆಸ್ಟಿನ್ ಟೆಕ್ಸಾಸ್ ಮಹಾವಿದ್ಯಾಲಯಕ್ಕೆ ಉನ್ನತ ಶಿಕ್ಷಣಕ್ಕೆ ಹೋಗುತ್ತಾರೆ, ಆದರೆ ಕಲಿಯುವಿಕೆಯಲ್ಲಿ ಒಲವು ತೋರದೆ ಅರ್ಧಕ್ಕೇ ನಿಲ್ಲಿಸಿ ಹೊಸ ಕಂಪನಿಯೊಂದನ್ನು ಪ್ರಾರಂಭಿಸುತ್ತಾರೆ, ಅದೇ ಡೆಲ್. ಜಾಗತಿಕ ಸಪ್ಲೈ ಚೈನ್ ಮ್ಯಾನೇಜಮೆಂಟ್ ನಲ್ಲಿ ಡೆಲ್’ನ ಕಾರ್ಯ ವೈಖರಿ ಹೊಸ ಮಾದರಿಯಾಗಿ ರೂಪಗೊಂಡಿದೆ. ಅಂಗಡಿಗಳಲ್ಲಿ ಕಂಪ್ಯೂಟರ್ ಮಾರದೆ, ಗ್ರಾಹಕ ತನಗೆ ಬೇಕಾದ ಕಾನಫಿಗರೇಷನ್ ಕಂಪ್ಯೂಟರನ್ನು ಮನೆಯಲ್ಲಿಯೇ ಪಡೆಯಬಹುದಾದ ಹೊಸ ವ್ಯವಸ್ಥೆಯನ್ನು ಹುಟ್ಟುಹಾಕಿದ್ದು ಡೆಲ್ ಕಂಪ್ಯೂಟರ್ ಕಂಪನಿ! ಆದರೆ ಮೈಕೆಲ್ ಡೆಲ್ ಪದವಿಯನ್ನು ಪಡೆದಿಲ್ಲ.

  1. ಕೊಕೊ ಚಾನೆಲ್

ಕೊಕೊ ಚಾನೆಲ್ ಫ್ಯಾಶನ್ ಪ್ರಪಂಚದಲ್ಲಿ ಅತೀ ದೊಡ್ಡ ಹೆಸರು. ಕೊಕೊಳಿಂದ ಪ್ರಭಾವಕ್ಕೊಳಗಾದವರು ಹಲವಾರು ಮಂದಿ. ಇಂತಹ ಪ್ರಭಾವನ್ವಿತೆಗೆ ಯಾವುದೇ ಸಾಂಪ್ರದಾಯಿಕ ಶಿಕ್ಷಣ ದೊರಕಿಲ್ಲ. ಅನಾಥಾಶ್ರಮದಲ್ಲಿ ದೊಡ್ಡವಳಾದ ಇವಳಿಗೆ ವಿದ್ಯಾಭ್ಯಾಸ ಕಲಿಯಲು ಅವಕಾಶವೇ ಸಿಗಲಿಲ್ಲ, ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮುಂದೆ ಹೋಗಿ, ಚಾನೆಲ್, ಫ್ಯಾಶನ್ ಕ್ಷೇತ್ರದಲ್ಲಿ ತನ್ನದೇ ಹೆಸರನ್ನು ಮಾಡಿದ್ದಾಳೆ.

  1. ಕಾರ್ನೆಲಿಯಸ್ ವೆಂಡೆರ್ಬಿಲ್ಟ್

ಕೈಗಾರೀಕರಣದ ಹಾಗೆಯೇ ಕ್ರಾಂತಿಯನ್ನು ಹಬ್ಬಿಸಿದ್ದು ಸ್ಟೀಮ್ ಹಡಗುಗಳು ಹಾಗೂ ರೈಲ್ವೆ. ಈ ಎರಡೂ ಕೈಗಾರಿಕೆಯನ್ನು ಬೆಳೆಸಿ ಜಗತ್ತಿನ ಟ್ರಾನ್ಸಪೊರ್ಟ್ ವ್ಯವಸ್ಥೆಯನ್ನು ಬದಲಾಯಿಸಿದ ಕಾರ್ನೆಲಿಯಸ್ ಕಲಿತಿದ್ದು ಬರೀ ಹನ್ನೊಂದು ವರ್ಷದವರೆಗೆ!

  1. ಫ್ರ್ಯಾಂಕ್ ಲ್ಲೊಯ್ಡ್ ರೈಟ್

ಆರ್ಕೆಟೆಕ್ಟ್ ಆಗಿ, ಜಗತ್ತಿಗೇ ಹೊಸ ಹೊಸ ವಿನ್ಯಾಸವನ್ನು ತೋರಿಸಿಕೊಟ್ಟವರು ರೈಟ್. ಸರ್ವಕಾಲಿಕ ಆರ್ಕೆಟೆಕ್ಟ್ ಎಂದು ಇವರನ್ನು ಕರೆಯಲಾಗುತ್ತದೆ. ವಿನ್ಯಾಸ ಎಂದರೆ ಏನು ಎಂಬ ಜಗತ್ತಿನ ಗ್ರಹಿಕೆಯನ್ನು ಬದಲಾಯಿಸಿದವರು ಇವರು. ಇವರು ಒಮ್ಮೆಯಲ್ಲ ಎರಡು ಬಾರಿ ಶಿಕ್ಷಣವನ್ನು ಬಿಟ್ಟು ಬಂದವರು. ಮೊದಲು ಶಾಲೆಯಲ್ಲಿ, ಆಮೇಲೆ ವಿಸ್ಕೊನಸಿನ್ ಮಹಾವಿದ್ಯಾಲಯದಿಂದ ಕೂಡ ಓಡಿ ಬಂದರು. ಇಂದೂ ಆರ್ಕಿಟೆಕ್ಟ್ ಕಲಿಯುವ ಹುಡುಗರು ಇವರ ಡಿಸೈನ್’ಗಳನ್ನು ಪಠ್ಯಪುಸ್ತಕಗಳಲ್ಲಿ ಓದುತ್ತಾರೆ.

  1. ಮಾರ್ಕ್ ಜುಕರಬರ್ಗ್ :

ಇತಿಹಾಸದಲ್ಲಿ ಅತೀ ಕಡಿಮೆ ವಯಸ್ಸಿನಲ್ಲಿ ಬಿಲಿಯನ್ನರ್ ಆದ ಖ್ಯಾತಿ ಜುಕರಬರ್ಗದು. ಹಾರ್ವರ್ಡ್’ನಲ್ಲಿ ಕಲಿಯುವಾಗ ಪ್ರಾರಂಭವಾದ ಫೇಸ್ಬುಕ್ ಇಂದು ಜಗತ್ತಿನ ಅತೀ ದೊಡ್ಡ ಸಾಮಾಜಿಕ ಜಾಲತಾಣವಾಗಿ ನಿರ್ಮಾಣವಾಗಿದೆ.ಇಂದು ಎಷ್ಟೋ ಮಂದಿ ಫೇಸಬುಕ್’ನಲ್ಲಿಯೇ ಕಾಲ ಕಳೆಯುತ್ತಾ ತಮ್ಮ ಶಿಕ್ಷಣವನ್ನು ಕಡೆಗಣಿಸುತ್ತಾರೆ, ಆದರೆ ಈ ಜುಕರಬರ್ಗ್ ಫೇಸ್ಬುಕ್ ಕಟ್ಟಬೇಕು ಅಂತಾನೇ ಹಾರ್ವರ್ಡ್’ನಿಂದ ಅರ್ಧಕ್ಕೇ ವಿದ್ಯಾಭ್ಯಾಸವನ್ನು ಬಿಟ್ಟು ಹೊರಗಡೆ ಬಂದಿದ್ದು.

ಕಲಿತವರೆಲ್ಲ ಜಾಣರಲ್ಲ, ಕಲಿಯದಿರುವವರೆಲ್ಲ ಕೋಣರಲ್ಲ. ಬದುಕಿನಲ್ಲಿ  ಡಿಗ್ರಿ, ಗೋಲ್ಡ್ ಮೆಡಲ್ ಒಂದೇ ಮುಖ್ಯವಲ್ಲ,  ವಿಚಾರಗಳು ಮುಖ್ಯ. ಒಂದು ವಿಚಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು,ಹಗಲು ರಾತ್ರಿ ಅದರಲ್ಲೇ ಬದುಕಿ ಅದರಲ್ಲೇ ಉಸಿರಾಡಿ ಅದರಲ್ಲೇ ಜೀವವನ್ನು ಇಟ್ಟುಕೊಂಡು ನಡೆಯುವುದೇ ಗೆಲುವು …ಬರೀ ಡಿಗ್ರಿಯೋ ಅಥವಾ ಗೋಲ್ಡ್ ಮೆಡಲ್ ಅಲ್ಲ. ಈ ಹತ್ತು ಮಂದಿ ಇಲ್ಲಿ ಬರೆದಿದ್ದು, ಹುಡುಕಿದರೆ ನಮ್ಮ ಸುತ್ತ ಮುತ್ತವೇ ಹತ್ತು ಉದಾಹರಣೆ ಸಿಗುತ್ತದೆ.

 -Vikram Joshi

Facebook ಕಾಮೆಂಟ್ಸ್

ಲೇಖಕರ ಕುರಿತು

Vikram Joshi

ಬೆಳೆದಿದ್ದು ಕರ್ನಾಟಕದ ಕರಾವಳಿಯಲ್ಲಿ, ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ. ಮಿಷಿಗನ್ ಯುನಿವರ್ಸಿಟಿಯಿಂದ ಆಟೊಮೊಬೈಲ್ ಇಂಜಿನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ. ಉದ್ಯೋಗ ಹಾಗೂ ಸಂಸಾರದಿಂದ ಬಿಡುವು ಸಿಕ್ಕಾಗ ಬರೆವಣಿಗೆ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!