ಅಸಹಿಷ್ಣುತೆ ಎಂಬುದು ಅತೃಪ್ತ ಆತ್ಮಗಳ ಬತ್ತಳಿಕೆಯಲ್ಲಿ ಸದಾ ನಲುಗುತ್ತಿರುವ ಗೊತ್ತು ಗುರಿಯಿಲ್ಲದ ವಿಷದ ಬಾಣ. ವ್ಯವಸ್ಥೆ ಎದುರು,ಸತ್ಯದ ಎದುರು,ಶಕ್ತಿಯ ಎದುರು ಸಿಲುಕಿ ಹಾಕಿಕೊಳ್ಳುವಾಗಲೆಲ್ಲಾ ಈ ಆತ್ಮಗಳು ತಮ್ಮ ಬತ್ತಳಿಕೆ ಖಾಲಿ ಮಾಡಲು ಶುರು ಮಾಡುತ್ತವೆ. ಈ ನೆಲದ ಅಗಾಧ ಶಕ್ತಿ ಸಂಪನ್ನತೆಯ ಮುಂದೆ ಈ ಅಸಹಿಷ್ಣುಗಳ ಆಟೋಪ ಅನಿರೀಕ್ಷಿತವೇನಲ್ಲ.ಈ ಸಂದರ್ಭದಲ್ಲಿ ನಾವೆಲ್ಲಾ ಒಂದಾಗಿ ಇದನ್ನು ಎದುರಿಸಿ ದೇಶದ ಸಂಪನ್ನತೆಮತ್ತು ಸಂಯಮಶೀಲತೆಯನ್ನು ಎತ್ತಿ ಹಿಡಿಯಲೇಬೇಕಾಗಿದೆ. ಕಾಲಕಾಲಕ್ಕೆ ನಾವು ಮೌಲ್ಯಗಳ ರಕ್ಷಣೆಗೆ ಮುಂದಾಗದೇ ಇದ್ದರೆ ಅಪಮೌಲ್ಯಗಳೇರಾರಾಜಿಸುವುದು ರೂಢಿಯಾಗುತ್ತದೆ.
ಹೀಗಾಗಿ ಈಗ ಹತ್ತೂರಿನ ಮಂದಿ ಪುತ್ತೂರಿನಲ್ಲಿ ಸೇರಿ ಏಕ ಭಾರತ ಶ್ರೇಷ್ಠ ಭಾರತ, ತೋರಣದಡಿ ಸೇರಿ ದೇಶದಲ್ಲಿ ಇವರು ಹೇಳುವ ಅಸಹಿಷ್ಣುತೆ ಮತ್ತು ನಾವು ಪ್ರತಿಪಾದಿಸುವ ಸಹಿಷ್ಣುತೆ ಕುರಿತು ಸಂವಾದಕ್ಕೆ ಅಡಿಯಿಟ್ಟಿದ್ದೇವೆ.
ಇದು ನಮ್ಮ ವಿನೀತ ಪ್ರಯತ್ನ.
ನಮ್ಮ ಜೊತೆ ನಿಮ್ಮ ಮುಂದಡಿ ಬೇಕು.
ಬನ್ನಿ ಶ್ರೇಷ್ಠ ಭಾರತಕ್ಕಾಗಿ ಸಾಗೋಣ.