ಕವಿತೆ

ಹಿಂತಿರುಗಿಸಿ

ನಿಜ ಹೇಳಿ ನೀವೆಷ್ಟು ಕೊಟ್ಟಿದ್ರಿ ಅದನ್ನು ಪಡೆಯಲು?
ನಿಮ್ಮ ಪರಿಶ್ರಮದಲ್ಲಿ ಇತ್ತಾ ರಾಜಕೀಯದ ಪಾಲು?
ನನಗಿನ್ನೂ ತಿಳಿಯದು, ಬಂತೇಕೆ ನಿಮಗೆ ಕೆಟ್ಟ ಬುದ್ಧಿ
ಕೈಬಿಟ್ಟು, ಲೇಖನಿಯಿಂದ ಸಮಾಜದ ಅಂಕು-ಡೊಂಕು ತಿದ್ದಿ.ll

ಕೇವಲ ಈಗಷ್ಟೆ ನಡೆಯುತ್ತಿಲ್ಲ ಅಮಾನವೀಯ ಹತ್ಯೆಗಳು
ನಿರ್ಧಾಕ್ಷಿಣ್ಯವಾಗಿ ಉರುಳಿವೆ ಅದೆಷ್ಟೋ ಮುಗ್ದ ತಲೆಗಳು,
ಭವ್ಯ ಭಾರತದ ಪುಟಗಳ ಹಿಂಸೆಯ ಹಸಿ ರಕ್ತ ನಿನ್ನೆಯದಲ್ಲ
ಹೆಸರಿಗೆ ‘ಜ್ಞಾನಿ’ಗಳಾದರೂ ಇವುಗಳರಿವು ನಿಮಗೆಕಾಗುತಿಲ್ಲ?ll

ದೇಶಕ್ಕಾಗಬೇಕಾದ ಉಪಯುಕ್ತ ಕೆಲಸಗಳು ಇನ್ನೂ ಸಾಕಷ್ಟಿವೆ
ಯುವ ಜನತೆಯು ಹಾದಿ ತಪ್ಪಲು ಕಾರಣಗಳೂ ಸಿದ್ಧವಾಗಿವೆ,
ಅವನ್ನರಿತ ನೀವು ಸೂಕ್ಷ್ಮ ರೀತಿಯಿಂದ ಆಳವಾಗಿ ವಿಚಾರಿಸಿ
ಬೆಂಕಿ ಹತ್ತಿಸುವಂತಹ ನಿಮ್ಮ ತುಪ್ಪದ ವಿಚಾರವ ಬದಿಗಿರಿಸಿ.ll

ಕೊಲೆ, ಸುಲಿಗೆ, ಅತ್ಯಾಚಾರ ದಿನೇ ದಿನೇ ಹೆಚ್ಚಾಗುತ್ತಲೇ ಇವೆ
ಅವೆಲ್ಲ’ಕೊಂದು’ ಕೊಡಲು ನಿಮ್ಮ ಬಳಿ ಅಕಾಡಮೆ ಪ್ರಶಸ್ತಿಗಳೆಷ್ಟಿವೆ?
ಕೇವಲ ಈ ಕಾರಣಕ್ಕೆ ಶುರುವಾದ ನಿಮ್ಮ ಹಾಸ್ಯ ಡೊಂಬರಾಟ
ಪ್ರಶಸ್ತಿ ಹಿಂತಿರುಗಿಸುವುದೇ ಆಗಿದೆ ನಿಮಗೊಂದು ದೊಡ್ಡ ಆಟ.ll

ಹಿಂತಿರುಗಿಸುವುದಾದರೆ…

ಹಿಂತಿರುಗಿಸಿ ನಿಮ್ಮ ಸುಜ್ಞಾನದ ವಿಚಾರಗಳನ್ನು
ಹಿಂತಿರುಗಿಸಿ ನಿಮ್ಮ ಜ್ಞಾನಭಂಡಾರದ ಜ್ಞಾನವನ್ನು,
ಹಿಂತಿರುಗಿಸಿ ಈ ಸಮಾಜಕ್ಕೆ ಅಮೂಲ್ಯ ರೂಪದ ಕೊಡುಗೆಗಳ
ಸುಧಾರಿಸಿ ನಮ್ಮ ಜನರ ಮನಸಿನ ಅನಿಸಿಕೆಗಳ, ಅಭಿಪ್ರಾಯಗಳ.ll

ಬರಹಗಳ ಮೂಲಕ ಮಾಡಿರಿ ಸರ್ಕಾರದೊಂದಿಗೆ ಹೋರಾಟ
ದಯಮಾಡಿ ಸಾಕುಮಾಡಿ ಪ್ರಾಥಮಿಕ ಮಕ್ಕಳಂತಹ ಹಾರಾಟ,
ನನ್ನದೊಂದು ಕೋರಿಕೆ, ನಿಮ್ಮ ಪ್ರಶಸ್ತಿಗಳ ಹಿಂತಿರುಗಿಸಬೇಡಿ
ಬದಲಾಗಿ, ಹೊರಡೋಣ ‘ಸ್ವಚ್ಛ ಭಾರತ’ಕ್ಕಾಗಿ ನಾವೆಲ್ಲಾ ಕೂಡಿ,
ನಾವೆಲ್ಲಾ ಕೂಡಿ, ನಾವೆಲ್ಲಾ ಕೂಡಿ.ll

-ಪ್ರದಿಸಂ

<pdivatar@gmail.com>

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!