ಅಂಕಣ

ಎರಡು ಮುಖದ ಹಾವುಗಳು

‘ಎರಡು ಮುಖದ’ ಹಾವನ್ನು ನೋಡದೇ ಹೋದರೂ ಅದರ ಹೆಸರನ್ನಾದರೂ ಕೇಳಿರುತ್ತೇವೆ. ಅವುಗಳಿಗೆ ಎರಡು ಮುಖ. ‘ಮಣ್ಣಮುಕ್ಕು’ ಹಾವು ಅಂತಾನೂ ಪ್ರಸಿದ್ಧ ಅವು ಯಾಕೆಂದರೆ ಮಣ್ಣನ್ನು ತಿಂದುಕೊಂಡು ಬದುಕಬಲ್ಲವಂತೆ ಅವು. ಎಲ್ಲಾದರು ನಮ್ಮ ಮೈ ಸುತ್ತಿಕೊಂಡಿತು ಅಂದರೆ ಬಿಡುಸುವುದು ಕಷ್ಟಸಾಧ್ಯ. ನಾರು ಮೈ, ಕೆಟ್ಟ ವಾಸನೆ ಅದು ಎಷ್ಟು ಹೊಡೆದರೂ ಸಾಯುವುದಿಲ್ಲ. ಕೊನೆಗೆ ಸೀಮೆಎಣ್ಣೆ ಸುರಿದು ಅದನ್ನು ಸುಟ್ಟ ಮೇಲೆ ಅದು ಸಾಯುವುದು. ಇದನ್ನು ಹೆಚ್ಚಾಗಿ ವಾಮಾಚಾರಕ್ಕೆ ಬಳಸುತ್ತಾರೆ.

ಮನುಷ್ಯರಲ್ಲೂ ಇಂತಹ ‘ಎರಡು ಮುಖದ ಹಾವುಗಳಿವೆ, ಮಾಧ್ಯಮದಲ್ಲಂತೂ ಅವೇ ತುಂಬಿಕೊಂಡಿದೆಯೋ ಅನಿಸುತ್ತದೆ. ನಿಮಗೆ ಗೊತ್ತಿರಬಹುದು, ಅವು ದೇಶದಲ್ಲಿ ಶಾಂತಿಭಂಗ ಮಾಡಲು ಕಾಯುತ್ತಿರುತ್ತವೆ. ಎಷ್ಟು ಸಲ ಮಣ್ಣುಮುಕ್ಕಿದರೂ ಅವುಗಳಿಗೆ ಸಮಾಧಾನವಿಲ್ಲ. ಇವುಗಳೂ ಹಾವಿನಂತೆ ನಾರುವ ಮೈ, ಹೊಲಸು ವಾಸನೆಯ ಮಾತುಗಳು, ಹಾಗೆಯೇ ವಾಕ್’ಚಾತುರ್ಯದಿಂದ ತಪ್ಪಿಸಿಕೊಳ್ಳುತ್ತವೆ. ಕಾಂಗ್ರೆಸ್ಸು ಆಡಳಿತದಲ್ಲಿ ಇಲ್ಲದ ಕಾಲದಲ್ಲಿ ಇವು ಹೆಚ್ಚಾಗಿ ಟೆಲಿವಿಷನ್ , ಪೇಪರ್ ಹಾಗೂ ಟ್ವೀಟರ್ ಗಳಲ್ಲಿ ಕಾಣಬರುತ್ತವೆ.

ಈ ‘ಎರಡು ಮುಖ’ದ ಮನುಷ್ಯ ರೂಪದ ಹಾವುಗಳ ಧೋರಣೆಗಳೇನು? ಧ್ಯೇಯವೇನು? ಏನೂ ಇಲ್ಲ. ಬಹುಸಂಖ್ಯಾತರ ವಿರೋಧ, ಸಮಾಜದಲ್ಲಿ ಶಾಂತಿಭಂಗ, ಹಿಂದುಗಳು ಹಾಗೂ ಮುಸಲ್ಮಾನರು ಸೌಹಾರ್ದತೆಯಿಂದ ಇರಲು ನೋಡಲಾಗದೆ ಮೈ ಪರಚಿಕೊಳ್ಳುವುದು. ಇನ್ನು ಇವರ ಗುಣಗಾನ ಮಾಡಿದಷ್ಟು ಕಡಿಮೆ. ಇವರ ಪಂಚರಂಗಿ ಮನೋಧರ್ಮಕ್ಕೆ ಸಾವಿರ ಉದಾಹರಣೆಗಳಿವೆ. ಈ ಹಾವುಗಳು ಎಂತವರು ಅಂದರೆ ಉತ್ತರಾಯಣದಲ್ಲಿ ಗಾಳಿಪಟ ಹಾರಿಸಿಸಿದರೆ ಪಕ್ಷಿ ಸಾಯುತ್ತವೆ ಎಂದು, ಬಕ್ರೀದ ನಲ್ಲಿ ಕುರಿಗಳನ್ನು ಕಡಿದು ಮಾಂಸವನ್ನು ತಿನ್ನುತ್ತಾ ಬರೆಯುವುದು. ಮಹಿಳೆಯರು ಜೀನ್ಸ ಹಾಕಬಾರದು ಎಂಬುದನ್ನು ವಿರೋಧಿಸಲು ಬುರ್ಕಾ ಹಾಕಿಕೊಂಡು ಸ್ಟುಡಿಯೊಕ್ಕೆ ಬರುವವರು. ‘ಕಿಸ್ ಆಫ್ ಲವ್’ ಎಂಬುದು ಪ್ರೀತಿಯ ಪ್ರತೀಕ ಎಂದು ಹೋರಾಟಕ್ಕೆ ಬೆಳಿಗ್ಗೆ ಇಳಿದವರು, ಮುಂಚಿನ ರಾತ್ರಿ ‘ನೀಲಿಚಿತ್ರ’ದ ಶೂಟಿಂಗ್ ಮುಗಿಸಿ ಬಂದವರು. ಸ್ವತಃ ಹಣದ ಆಸೆಗೆ ಧರ್ಮಬದಲಾಯಿಸಿ ನಂತರ ‘ಗರ್ ವಾಪಸಿ’ ವಿಷಯದಲ್ಲಿ ಚಿಂತನ ಮಂಥನ ನಡೆಸುವವರು. ಭೂಪಾಲ್ ವಿಷಾನಿಲ ದುರಂತ, ಸಿಖರ ಹತ್ಯಾಕಂಡ, ಗುಜರಾತ್ ದಂಗೆ, ಮುಂಬಯಿ ಬಾಂಬ್ ಸ್ಫೋಟ ಇಂತಹ ಸಂದರ್ಭದಲ್ಲಿ ಮದ್ಯಪಾನ ಮಾಡುತ್ತಾ ಸರ್ಕಾರಿ ನಿವಾಸದಲ್ಲಿ ವಿಲಾಸಿಯಾಗಿದ್ದವರಿಗೆ ಸರ್ಕಾರಿ ನಿವಾಸವ ತೆರವು ಮಾಡಿಕೊಡಿ ಎಂದಾಗ ಇಲ್ಲದ ಅಸಹಿಷ್ಣುತೆಯನ್ನು ಸೃಷ್ಟಿಮಾಡಿ ‘ಅವಾರ್ಡು ವಾಪಸಿ’ ನಾಟಕ ಮಾಡಿದವರು. ಸಾವಿರಾರು ಮುಗ್ಧ ಜನರನ್ನು ಬಲಿ ತೆಗೆದುಕೊಂಡ ಯಾಕೂಬ್’ನನ್ನು ಗಲ್ಲಿಗೇರಿಬಾರದೆಂದು ಪುಟಗಟ್ಟಲೆ ಬರೆದವರು ಪಠಾನಕೋಟ್ ಸಂದರ್ಭದಲ್ಲಿ ದೇಶಕ್ಕಾಗಿ ಜೀವಕೊಟ್ಟ ಯೋಧರನ್ನು ಪ್ರಶ್ನಿಸಿದರು. ಭಾರತದ ಸೇನೆಯ ಮೇಲೆ ನಂಬಿಕೆಯೇ ಇಲ್ಲ ಆದರೆ ಇವರಿಗೆ ಭಯೋತ್ಪಾದಕರ ಮೇಲೆ ಬಹಳ ಅನುಕಂಪ. ಇವರ ಜೀವನ ಹೇಗೆ ನಡೆಯುತ್ತದೆ ಎಂದರೆ ಬೆಳಿಗ್ಗೆಯೋ ದಲಿತರ ಜೊತೆ ನಿಂತು ಫೋಟೊ ತೆಗೆಸಿಕೊಂಡು ರಾತ್ರಿ ಅದನ್ನೇ ರಾಜಕೀಯ ಪುಡಾರಿಗಳಿಗೆ ತೋರಿಸುತ್ತಾ ಅವರಿಂದ ಮತದ ಬ್ಯಾಂಕು ಸೃಷ್ಟಿಸಿದ್ದಕ್ಕೆ ‘ಭೆಷ್ …ಭೆಷ್’ ಎನಿಸಿಕೊಂಡು ಪ್ರಶಸ್ತಿ ಪಡೆಯುವುದು. ಅದೇತರಹ ಬಡವರ ಪರವಾಗಿ ಹೋರಾಡುತ್ತೇನೆ ಎಂದು ರಾತ್ರೋರಾತ್ರಿ ಶ್ರೀಮಂತವಾಗುವುದು ಈ ‘ಮಣ್ಣುಮುಕ್ಕು’ ಹಾವುಗಳ ಬಯೋಗ್ರಾಫ್.

ಈ ಹಾವುಗಳು ಎಷ್ಟು ವಿಷಕಾರಿ ಎಂದರೆ ವಿದೇಶಗಳಿಗೆ ಕೂಡ ತಮ್ಮ ವಿದ್ಯಾರ್ಹತೆಯ ಬಲದಿಂದ ದ್ವೇಷದ ವಿಷವನ್ನು ಪಸರಿಸುತ್ತವೆ. ನ್ಯೂಯಾರ್ಕ ಟೈಮ್ಸ್, ಬಿಬಿಸಿ, ಟೆಲಿಗ್ರಾಫ್ ಇಂತಹ ಮಾಧ್ಯಮಗಳು ಸುಳ್ಳು ವದಂತಿಯನ್ನು ಸಾರುವ ಅಂಗಡಿಗಳು. ವಾಮಾಚಾರಕ್ಕೆ ಹೇಗೆ ‘ಎರಡುಮುಖ’ದ ಹಾವುಗಳನ್ನು ಬಳಸಲಾಗುತ್ತದೆಯೋ ಹಾಗೆಯೇ ಫೊರ್ಡ ಫೌಂಡೇಷನ್ , ಗ್ರೀನ್ ಪೀಸ್ ನಂತಹ NGO ಗಳು ಇವುಗಳನ್ನು ಬೌದ್ಧಿಕ ವ್ಯಭಿಚಾರಕ್ಕೆ ಬಳಸುತ್ತಾರೆ. ಮೋದಿಯವರು ಇಂತಹ ವ್ಯಭಿಚಾರಕ್ಕೆ ಕಡಿವಾಣ ಹಾಕಿದ್ದೇ ಅಸಹಿಷ್ಣುತೆ ಎಂಬ ಗಾಳಿಗೋಪುರ ಸೃಷ್ಟಿಯಾಗಲು ಕಾರಣ. ಇಂತಹ ಹಾವುಗಳನ್ನು ಕಾಂಗ್ರೆಸ್ ಪಕ್ಷ ಬಹಳ ಬುದ್ಧಿವಂತಿಕೆಯಿಂದ ಸಾಕುತ್ತಿದೆ. ಉದಾಹರಣೆಗೆ ಶೋಭಾ ಡೇ, ರಾಜದೀಪ್ ಸರ್ ದೇಸಾಯಿ, ಶಶಿ ತರೂರ್, ಬರ್ಕಾ ದತ್ತ್, ನಯನತಾರಾ ಸೆಹಗಲ್, ಕ್ರೆಜಿವಾಲ್, ಶಾರುಖ್ ಖಾನ್ ಇಂಥವರು ‘ಎರಡುಮಂಡೆ’ ಮನುಷ್ಯ ರೂಪದ ಹಾವುಗಳು. ಕೆಲವೊಮ್ಮೆ ಯಾವ ತೂತಿನಲ್ಲಿ ಎಷ್ಟು ಮಣ್ಣುಮುಕ್ಕ ಹಾವು ಇದೆ ಎಂದು ಹೇಳುವುದೇ ಕಷ್ಟ. ಇವರು ತೋರಿದ ಎರಡುಮುಖದ ಮಿಥ್ಯಾಚಾರದ ಕೆಲವು ನಿದರ್ಶನಗಳು.

1. ದಾದ್ರಿ ಅಸಹಿಷ್ಣುತೆ – ಮಾಲ್ಡಾ ಕ್ರಾಂತಿ: ರಾಜದೀಪ್ ನಂತಹ ಜವಾಬ್ದಾರಿ ಪತ್ರಕರ್ತರು ದಾದ್ರಿಯ ವಿಷಯವ ಅಸಹಿಷ್ಣುತೆಗೆ ಸೇರಿಸಿ ಎಷ್ಟು ರಂಪ ಮಾಡಿದರೋ? ಅವರ ಟಿ.ವಿ.ಶೋಗಳು, ನೂರಾರು ಟ್ವಿಟರ್ ಗಳು ಸಾಕ್ಷಿ. ಅದೇ ಮಾಲ್ಡಾದಲ್ಲಿ ದಂಗೆ ಆದಾಗ ‘ಎರಡುಮುಖ’ದ ಹಾವಿನ ಇನ್ನೊಂದು ಮುಖಕ್ಕೆ ಮಾತೇ ಹೊರಡಲಿಲ್ಲ. ದಂಗೆ ಮಾಡಿದವರ ಮೇಲೆ ಅನುಕಂಪ ಅದನ್ನು ಕ್ರಾಂತಿಯ ರೂಪದಲ್ಲಿ ಕಾಣುತ್ತದೆ. ಇದು ಮನುಷ್ಯನ ಎರಡನೆಯ ಮುಖ. ಇಂತಹ ಎರಡುಮುಖದ ಹಾವಿನ ಪ್ರಭೇದಕ್ಕೆ ಸಿಕ್ಯುಲರ್ ಎಂಬ ಹೆಸರೂ ಇದೆ.

2. ಭೀಪ್ ತಿನ್ನಬೇಕು , ಜಲ್ಲಿಕಟ್ಟು ಆಡುವುದ ನಿಲ್ಲಿಸಬೇಕು: ಶೋಭಾ ಡೇ ತನ್ನ ಪ್ರಸಿದ್ಧ ಟ್ವೀಟ್’ನಲ್ಲಿ “ಇಂದು ಭೀಪ್ ತಿಂದೆ” ಎಂದು ಹೇಳಿದರೆ, ಅದೇ ಬೆಳಿಗ್ಗೆ ಎದ್ದು “ಜಲ್ಲಿಕಟ್ಟಿ ಕ್ರೀಡೆ ಪ್ರಾಣಿ ಹಿಂಸೆ” ಎನ್ನುತ್ತಾಳೆ. ಎಂತಹ ದ್ವಂದ್ವ! ಇಂತವರು ಮಹಿಳಾವಾದಿಯೂ ಅಲ್ಲ, ಸಾಮಾಜಿಕ ಕಾರ್ಯಕರ್ತೆಯರೂ ಅಲ್ಲ. ಅವಕಾಶವಾದಿಗಳು. ಪರೀಕ್ಷೆಗಳಿಂದ ವಿಷಕಾರಿ ಎಂದು ಪ್ರಮಾಣಿಕರಿಸಲ್ಪಟ್ಟ ಮ್ಯಾಗಿ ನೂಡಲ್ಸ್ ವಿಷವಲ್ಲ ಆದರೆ ಬಿಡುಗಡೆ ಮಾಡುವುದಕ್ಕಿಂತಲೂ ಮುನ್ನವೇ ರಾಮದೇವ ಬಾಬಾರ ನೂಡಲ್ ವಿಷವೆಂದು ಇವರೇ ಸ್ಟ್ಯಾಂಪ್ ಒತ್ತುತ್ತಾರೆ. ಇಂತಹ ಮಣ್ಣುಮುಕ್ಕು ಹಾವುಗಳಿಗೆ ‘ಹಣಮುಕ್ಕು’ ಎಂದು ಕೂಡಾ ಕರೆಯಬಹುದು. ಹೆಣವಾದಾಗಲೂ ಹಣಕ್ಕೆ, ಹೆಸರಿಗೆ ಏನು ಬೇಕಾದರೂ ಹೇಳಬಲ್ಲ ವಿಶಿಷ್ಟವಾದ ಪ್ರತಿಭೆ ಹೊಂದಿದವರು.

3. ಆಮ್ ಆದಮಿ ಆದರೆ ನಾನು ಖಾಸ್ ಆದಮಿ ಕಣ್ರಿ : ಕ್ರೆಜಿವಾಲ್ CBI ಮುಕ್ತವಾಗಿರಬೇಕು ಎಂದು ಒಂದು ಮುಖದಲ್ಲಿ ಹೇಳಿದರೆ, ಇನ್ನೊಂದು ಮುಖದಲ್ಲಿ CBI ತನ್ನ ನಿಯಂತ್ರಣದಲ್ಲಿರಬೇಕು ಎನ್ನುತ್ತಾನೆ. ಭ್ರಷ್ಟಾಚಾರ ಮುಕ್ತ ರಾಜಕೀಯ ಎಂದವರ ಸರ್ಕಾರದ ಐದು ಸಚಿವರು ಇಂದು ಜೈಲಿನಲ್ಲಿ ಇದ್ದಾರೆ! ಅಶುತೋಷ ಎಂಬ ಹಳೆಯ ನ್ಯೂಸುಳೆ ಬೇಕಾದಾಗ ಅಳುತ್ತದೆ…ಬೇಕಾದಗ ಸಿಟ್ಟೂ ಬರುತ್ತದೆ …ಎರಡಕ್ಕೂ ಬೇರೆ ಬೇರೆ ಮುಖ. ತಮಗೆ ಹಣವೇ ಬೇಡ ಎಂದು ಒಂದು ಮುಖದಲ್ಲಿ ಹೇಳಿ ಬಂದ ಆಮ್ ಆದಮಿ ವಿಧಾಯಕರ ಸಂಬಳ ಇಂದು ಸರಾಸರಿ ಸಾಮಾನ್ಯ ಜನರ ಸಂಬಳಕ್ಕಿಂತ ಹತ್ತು ಪಟ್ಟು! ಹೀಗೆ ಎರಡು ಮುಖದಲ್ಲಿ ಮಾತಾಡುವ ಹಾವಿಗಳ ಈ ಪ್ರಬೇಧ ಮೂಲ ಪ್ರಬೇಧದ ತಳಿಗಳು..’ಕಪಟಮುಖಿ’ ಹಾವುಗಳು ಎನ್ನಬಹುದು. ಇವು ಗುಂಪು ಗುಂಪಿನಲ್ಲಿ ಇರುತ್ತವೆ.

4. ಪತ್ನಿ ಕೊಂದು ಸತಿ ಪದ್ಧತಿಯ ಬಗ್ಗೆ ಚಿಂತಿಸುವವರು: ತರೂರ್ ನಂತವರು ಪತ್ನಿ ಕೊಲೆ ಆಗಿ ಎರಡು ವರ್ಷ ಆಯಿತು ಅದರ ಬಗ್ಗೆ ಒಂದು ಮುಖದಲ್ಲಿ ಮೌನ ಆದರೆ ಎಂದೋ ಮುಗಿದು ಹೋದ ಸತಿ ಪದ್ಧತಿಯ ಬಗ್ಗೆ ಟಿಪ್ಪಣಿ ಕೊಡುತ್ತಾರೆ.

5.ಸಿನೆಮಾದಲ್ಲಿ ನಾಯಕ, ದೇಶಕ್ಕೆ ಖಳನಾಯಕ: ಶಹಾರುಖ ಖಾನ್’ಗೆ ವಾಂಖಡೆ ಕ್ರಿಡಾಂಗಣದಲ್ಲಿ ಸಹಿಷ್ಣುತೆ ಇಲ್ಲ ಪೋಲೀಸರಿಗೆ ಹೊಡೆಯಲು ಮುಂದಾದ ಖ್ಯಾತ ನಟ, ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಎನ್ನುತ್ತಾನೆ. ಒಂದು ಬಾಯಲ್ಲಿ ಅಮೀರ್ ಖಾನ್ ಸತ್ಯಮೇವ ಜಯತೆ ಎನ್ನುತ್ತಾ ಇನ್ನೊಂದು ಬಾಯಿಯಲ್ಲಿ ದೇಶ ಸುರಕ್ಷಿತವಲ್ಲ ದೇಶ ಬಿಟ್ಟು ಹೋಗುಬೇಕು ಎನಿಸಿದೆ ಎಂದು ಹೆಂಡತಿಯ ಹೆಸರಿನಲ್ಲಿ ಹೇಳುವುದು. ಪಿಕೆ ಸಿನೆಮಾದಲ್ಲಿ ಮಂದಿರಕ್ಕೆ ಪೂಜಾರಿಗಳಿಗೆ ಬೈದು …ಮಸೀದಿಗೆ ಏನು ಕಳಂಕ ಬರದಂತೆ ಸ್ಕ್ರಿಪ್ಟ್ ಬರೆಸುವುದು. ಈ ತಳಿ ಹೈಬ್ರೀಡ್ ತಳಿಯೇ…ಇದಕ್ಕೆ ‘ದುರ್ಮುಖಿ’ ಹಾವುಗಳು ಎಂದು ವಿಂಗಡಿಸಬಹುದು. ಇವುಗಳಿಗೆ ಒಂದೇ ಮುಕಕ್ಕೆ ಎರಡು ತಲೆ ಮೂರು ಬಾಯಿ ಇದೆ ಅಂದರೂ ತಪ್ಪಾಗಲಾರದು.

6. ಬುರ್ಕಾ ಬಹುಪತ್ನಿತ್ವದ ಬಗ್ಗೆ ಚರ್ಚೆ ಇಲ್ಲ, ಆದರೆ ಪ್ರಶ್ನೆ – ಯಾಕೆ ಮಹಿಳೆಗೆ ದೇವಾಲಯದ ಒಳಗೆ ಪ್ರವೇಶವಿಲ್ಲ?
ಬರ್ಕಾದತ್ತ ಬುರ್ಕಾ ಹಾಕುವ ಬಗ್ಗೆ ಒಂದು ಮುಖದ ಕಣ್ಣು ಕುರುಡು, ಆದರೆ ಲಕ್ಷ ದೇವಾಲಯಗಳಲ್ಲಿ ಒಂದೋ ಎರಡೋ ಕಡೆ ಮಹಿಳೆಯರಿಗೆ ಪ್ರವೇಶವಿಲ್ಲವೆಂದು ದಿನಕ್ಕೆರಡು ಬಾರಿ ಓರಾಟಮಾಡುತ್ತಾಳೆ. ದಾದ್ರಿಗೆ ಹೋಗಿ ನಿಧನರಾದವರ ತಾಯಿ, ಹೆಂಡತಿ, ಅಕ್ಕ ತಂಗಿಯನ್ನು ಸ್ಟುಡಿಯೋದಲ್ಲಿ ಕೂರಿಸಿ ಕಣ್ಣೀರಿಡುವುದ ತೋರಿಸುತ್ತಾಳೆ ಆದರೆ ಅದೇ ಪಠಾಣಕೋಟದಲ್ಲಿ ಭಯೋತ್ಪಾದಕರು ಸೇನೆಯ ನಮ್ಮ ಯುವಕರನ್ನು ಕೊಂದಾಗ ಅವರ ಬಗ್ಗೆ ಗೌರವ ತೋರಿಸುವ ಹೊರಿತಾಗಿ ಇವಳು ಕೇಳುತ್ತಾಳೆ ‘ ಭಯೋತ್ಪಾದಕರು ಆರಿದ್ದರು ಸರ್ಕಾರ ಬರೀ ಮೂರೇ ಹೇಳುತ್ತಿದೆ” ಎಂದು.

ಇಂತಹ ಎರಡುಮುಖದ ಹಾವುಗಳ ಅವಶ್ಯಕತೆ ನಮಗಿದೆಯಾ? ನಮ್ಮ ದೇಶದಲ್ಲಿ ಏನು ಅಸಾಧ್ಯ ಅದೆಲ್ಲ ನಡೆದಿದೆ. ಅಮೇರಿಕಾ ಇಷ್ಟೊಂದು ಮುಂದುವರಿದ ದೇಶ, ಅದರ ಇತಿಹಾಸದಲ್ಲಿ ಒಮ್ಮೆಯೂ ಒಂದು ಮಹಿಳೆ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿಲ್ಲ. ನಮ್ಮ ದೇಶದಲ್ಲಿ ಪ್ರಧಾನಿ, ರಾಷ್ಟ್ರಪತಿ ಮಹಿಳೆಯರು ಆಗಿಲ್ಲವೇ? ಮಹಿಳೆ ಕಲ್ಪನಾ ಚಾವ್ಲಾ ಅಂತರಿಕ್ಷದ ಯಾನವನ್ನೂ ಮಾಡಿಬಂದರು. ಜಾತ್ಯಾತೀತ ರಾಷ್ಟ್ರ ನಮ್ಮದು ಒಂದು ಕ್ರಿಕೆಟ್ ಟೀಮ್ ತಗೆದುಕೊಳ್ಳಿ ನಿಮಗೇ ಅರಿವಾಗುತ್ತದೆ ನಮ್ಮ ಜ್ಯಾತಾತೀತತೆ ಎಷ್ಟು ಬಲವಾಗಿದೆ ಎಂದು. ಸ್ವದೇಶ್ ಎಂದು ಸಿನೆಮಾದಲ್ಲಿ ನಾಯಕ ಮುಸ್ಲಿಂ, ಲಗಾನ್ ಸಿನೆಮಾದ ‘ರಾಧಾ’ ಕೈಸೇ ನ ಜಲೇ …ಹಾಡನ್ನು ಬರೆದವರು, ಸಂಗೀತ ಕೊಟ್ಟವರು, ನಟಿಸಿದವರು ಎಲ್ಲರೂ ಮುಸ್ಲಿಮರು …ಎಲ್ಲಿದೆ ತೊಂದರೆ? ಹೀಗೆ ಹತ್ತು ಕಾರಣಗಳನ್ನು ಕೊಡಬಹುದು! ನಮ್ಮ ಪ್ರಜಾಪ್ರಭುತ್ವವನ್ನು ಕಾಪಾಡಲು ಈ ಎರಡುಮುಖದ ಹಾವುಗಳು ಬೇಡ, ದೇಶದ ರಕ್ಷಣೆಗೆ ವೀರರು ಬೇಕು. ಒಂದು ಮಾತು, ರೋಹಿತ ಎಂಬುವವನ ಹೇಡಿತನದ ಸಾವಿಗೆ ಅನುಕಂಪದ ಮಳೆ ಸುರಿಸುತ್ತಿರುವ ಈ ಹಾವುಗಳು ಯೋಧರು ವೀರರು ದೇಶಕ್ಕಾಗಿ ಜೀವವನ್ನೇ ಕೊಟ್ಟಾಗ ಎಲ್ಲಿ ಹೋಗಿದ್ದರು? ಒಮ್ಮೆ ಎಲ್ಲಾದರು ಸಿಕ್ಕರೆ ಕೇಳಿ.

– ವಿಕ್ರಮ್ ಜೋಷಿ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!