ಛೆ!! ಮುಸ್ಲಿಂ ಜಗತ್ತು ಎತ್ತ ಸಾಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ. ಇರಾಕ್-ಸಿರಿಯಾಗಳಲ್ಲಿ ತಮ್ಮದೇ ಜನರ ಉಪಟಳದಿಂದ ಬೇಸತ್ತು ಇನ್ನಿತರೇ ದೇಶಗಳೆಡೆಗೆ ಲಕ್ಷಾಂತರ ಜನ ಯೂರೋಪಿನ ಇತರೆ ರಾಷ್ಟ್ರಗಳೆಡೆಗೆ ಹೊರಡುತ್ತಿದ್ದರೆ, ಇದಕ್ಕೆ ವ್ಯತಿರಿಕ್ತವಾಗಿ ಡೆನ್ಮಾರ್ಕ್’ನಲ್ಲಿ ಮುಸ್ಲಿಂ ಸಮುದಾಯ ಕುರಾನ್’ನ್ನು ಮೂಲವಾಗಿಟ್ಟುಕೊಂಡು ಸಂವಿಧಾನ ರಚನೆಯಾಗಬೇಕೆಂದು ಹಠ ಹಿಡಿದು ಕೂತಿದ್ದಾರಲ್ಲಾ? ಏನೆನ್ನಬೇಕು ಇದಕ್ಕೆ. ನಾರ್ವೆನಲ್ಲಿ ಇನ್ನೂ ಮುಂದುವರೆದು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟಿದ್ದಾರಂತೆ!!
ಇತ್ತೀಚಿನ ಸಮೀಕ್ಷೆಯೊಂದರ ಪ್ರಕಾರ ಡೆನ್ಮಾರ್ಕ್’ನ ೪೦ ಪ್ರತಿಶತದಷ್ಟು ಮುಸ್ಲಿಂ ಜನ ಕುರಾನ್ ಅನ್ನು ಆದರಿಸಿ ಸಂವಿಧಾನ ಮರುರಚನೆಯಾಗಬೇಕು ಎಂದು ಬೇಡಿಕೆ ಇಟ್ಟಿದ್ದಾರಂತೆ (ಮೂಲ:). ಇದರರ್ಥ ಶರಿಯಾ ಕಾನೂನು ಬರಬೇಕು ಎಂದಲ್ಲವೇ? ಹಾಗೆಯೇ ಬ್ರಿಟನ್’ನ ಯುವ ಮುಸ್ಲಿಂ ಯುವಕರು ಕೂಡ ಶರಿಯಾ ಕಾನೂನಿನೆಡೆಗೆ ಒಲವು ವ್ಯಕ್ತಪಡಿಸಿರುವುದು ಕಳವಳದ ವಿಚಾರವಾಗಿದೆ . ಇತಿಹಾಸದಿಂದ ಜನ ಪಾಠ ಕಲಿಯಬೇಕಾಗಿರುವ ಈ ಹೊತ್ತಿನಲ್ಲಿ, ತಮ್ಮ ಕಣ್ಣ ಮುಂದೆಯೇ ಆಗುತ್ತಿರುವ ಇಸ್ಲಾಂ ಮೂಲಭೂತವಾದದಿಂದ ಪಾಠ ಕಲಿಯದೇ ಇರುವುದು ಶೋಚನೀಯ. ಇವತ್ತು ತಾಲಿಬಾನ್, IS ನಂತಹ ಮೂಲಭೂತವಾದಿ ಸಂಘಟನೆಗಳು ಶರಿಯಾದಂತಹ ಅಸಂಬದ್ಧ ಕಾನೂನುಗಳನ್ನ ಹೇರಿ, ಮಧ್ಯಪ್ರಾಚ್ಯದ ಹಲವರು ಜನರ ನೆಮ್ಮದಿಗೆಡಿಸಿರುವುದು ಕಣ್ಣಿಗೆ ರಾಚುತ್ತಿದ್ದರೂ ಕೆಲವೊಬ್ಬರು ಯಾಕೆ ಅದರೆಡೆಗೆ ವಾಲುತ್ತಿದ್ದಾರೆ ಎಂದು ಅರ್ಥವೇ ಆಗುತ್ತಿಲ್ಲ!! ಗಂಭೀರವಾದ ವಿಷಯವೇನೆಂದರೆ ಇಂಥಹ ಕ್ಷುದ್ರಶಕ್ತಿಗಳ ಪ್ರಾಬಲ್ಯ ಅತಿಯಾಗುತ್ತಿರುವುದು.
ಸಿರಿಯಾ-ಇರಾಕ್’ನಿಂದ ಕಾಲ್ಕಿತ್ತಿರುವ ಅಮಾಯಕರ ಜನರ ಕಷ್ಟವೊಂದೇ ಸಾಕು ಇವತ್ತು ಮಧ್ಯಪ್ರಾಚ್ಯದಲ್ಲಿ ಆಗುತ್ತಿರುವ ಅನಾಹುತವನ್ನು ತಿಳಿದುಕೊಳ್ಳಲಿಕ್ಕೆ. ಒಂದು ಮೂಲದ ಪ್ರಕಾರ ೨೦೧೫ರೊಂದರಲ್ಲೇ 4,64,000ದಷ್ಟು ಜನ ಮೆಡಿಟರೆನಿಯನ್ ಸಾಗರವನ್ನು ದಾಟಿ ಯುರೋಪಿನಡೆಗೆ ಬಂದಿದ್ದಾರಂತೆ. ಸಧ್ಯದ ಪರಿಸ್ಥಿತಿಯಲ್ಲಿ ಯೂರೋಪಿನ ಎಲ್ಲಾ ದೇಶಗಳೂ ಸುಭಿಕ್ಷವಾಗಿಯೇನೂ ಇಲ್ಲ, ಯೂರೋಪಿನ ಕೆಲವೊಂದು ದೇಶಗಳು (ಗ್ರೀಸ್, ಪೋರ್ಚುಗಲ್, ಸ್ಪೇನ್ ) ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿವೆ. ಹಾಗಾಗಿ ಅಲ್ಲಿ ಇವರಿಗೆ ನೆಲೆ ಸಿಗುವುದು ಕಷ್ಟ. ಹಂಗರಿ, ಸೆರ್ಬಿಯ, ಕೃವೇಷಿಯಾ ದಂತಹ ಸಣ್ಣ ಸಣ್ಣ ದೇಶಗಳು ಈಗಾಗಲೇ ತಾವು ಹೆಚ್ಚು ನಿರಾಶ್ರಿತರಿಗೆ ನೆಲೆ ಕೊಡಲು ಸಾಧ್ಯವಿಲ್ಲ ಎಂದಾಗಿದೆ. ಕಳೆದ ಬೇಸಿಗೆಯಲ್ಲೇನೋ ಸಿರಿಯಾ-ಇರಾಕ್ ಗಳಿಂದ ಯುರೋಪಿನತ್ತ ಹೊರಟ ನಿರಾಶ್ರಿತರು ಹ್ಯಾಗೋ ಜೀವ ಉಳಿಸಿಕೊಂಡರು, ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. ಈಗ ಚಳಿಗಾಲ ಶುರುವಾಗುತ್ತಿದೆ, ಆದರೆ ಇನ್ನೂ ಅನೇಕ ನಿರಾಶ್ರಿತರಿಗೆ ಯಾವುದೇ ನೆಲೆಯೂ ಸಿಕ್ಕಿಲ್ಲ. ಹೀಗಿರುವಾಗ ಅನೇಕ ನಿರಾಶ್ರಿತರು ಪ್ರಾಣತೆರುವುದರಲ್ಲಿ ಯಾವುದೇ ಅನುಮಾನವಿಲ್ಲ!! ಇಡೀ ಯುರೋಪಿನಲ್ಲಿ, ಜರ್ಮನಿ ನಿರಾಶ್ರಿತರ ಪರ ನಿಲುವು ತಾಳಿದೆಯಾದರೂ ಎಲ್ಲಾ ನಿರಾಶ್ರಿತರಿಗೂ ನೆಲೆ ಸಿಗುತ್ತೆ ಎಂದು ನಂಬುವ ಹಾಗೂ ಇಲ್ಲ. ಒಂದು ವರದಿಯ ಪ್ರಕಾರ ೮೦ ಪ್ರತಿಶತದಷ್ಟು ನಿರಾಶ್ರಿತರು ಯಾವುದೇ ಸಾಂಪ್ರಾದಾಯಿಕ ಶೈಕ್ಷಣಿಕ ಅರ್ಹತೆ ಹೊಂದಿಲ್ಲದ ಕಾರಣ ಅವರಿಗೆ ಜರ್ಮನಿಯಲ್ಲಿ ಆಶ್ರಯ ದೊರಕುವುದು ಕಷ್ಟ ಎಂದು ಹೇಳಲಾಗಿದೆ. ಒಟ್ಟಿನಲ್ಲಿ, ತಮ್ಮ ಮಾತೃರಾಷ್ಟ್ರದ ಅಸ್ಥಿರತೆಯಿಂದ ಬೇಸತ್ತು ಬೇರೆಡೆ ನೆಲೆ ಕಂಡುಕೊಳ್ಳಲು ಹಾತೊರೆಯುತ್ತಿರುವ ಲಕ್ಷಾಂತರ ನಿರಾಶ್ರಿತರ ಮುಂದಿನ ಹಾದಿ ದುರ್ಗಮವಾಗಿರುವುದಂತೂ ನಿಜ.
ಇಷ್ಟೆಲ್ಲಾ ಅನಾಹುತಕಾರೀ ಘಟನೆಗಳಾಗುತ್ತಿದ್ದರೂ ವಿಶ್ವದ ದೊಡ್ಡಣ್ಣರೆನಿಸಿಕೊಂಡಿರುವ ಅಮೇರಿಕಾ-ರಷಿಯಾಗಳು ಒಬ್ಬರ ಮೇಲೊಬ್ಬರು ಕೆಸರೆರೆಚುತ್ತಾ ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರ ಮಾಡುತ್ತಿದ್ದಾರೆ. ಬಷಾರ್ ಅಲ್ ಅಸ್ಸಾದ್ ಹೋಗಲೇಬೇಕು ಅಂತ ಅಮೇರಿಕಾ ಹೇಳ್ತಾ ಇದ್ರೆ, ರಷಿಯ ಮೊದಲು ISನ್ನು ಮುಗಿಸೋಣ, ಹಾಗೂ ಬಷಾರ್’ನ ಸಹಾಯವಿಲ್ಲದೇ ಇದು ಸಾಧ್ಯವಿಲ್ಲ ಎನ್ನುತ್ತಿದೆ. ಅಮೇರಿಕಾ ಬಷಾರ್ ವಿರೋದಿಗಳಗೆ ತರಬೇತಿಯನ್ನು ಕೊಟ್ಟು, ಶಸ್ತ್ರಾಸ್ತ್ರಗಳನ್ನೂ ಪೂರೈಸುತ್ತಿದೆ. ಅಮೇರಿಕಾದ ಪ್ರಕಾರ ತಾನು ತರಭೇತಿ ಕೊಟ್ಟ ಬಂಡುಕೋರರು IS ಹಾಗೂ ಬಷಾರ್’ನ ವಿರುದ್ಧ ಹೋರಾಡುತ್ತಿದ್ದಾರೆ, ಅಂತಹದ್ದರಲ್ಲಿ ರಷಿಯ ಈಗ ಬಷಾರ್’ನ ಸಹಾಯಕ್ಕಾಗಿ ಬಂಡುಕೋರರನ್ನು ಗುರಿಯಾಗಿಟ್ಟುಕೊಂಡು ವಾಯುದಾಳಿ ನಡೆಸಿದೆ. ಆದ್ರೆ, ಅಮೆರಿಕಾದ ಪ್ರಕಾರವೇ ಈಗ ತರಬೇತಿ ಪಡೆದ ಬಂಡುಕೋರರಲ್ಲಿ ಉಳಿದಿರುವುದು ಬೆರಳಣಿಕೆಯಷ್ಟು ಮಾತ್ರಾ! ಪೂರೈಸಿದ ಶಸ್ತ್ರಾಸ್ತ್ರಗಳೇನಾದವು? ಇತ್ತೀಚಿನ ಬೆಳವಣಿಗೆಗಳಲ್ಲಿ ಅಮೇರಿಕ ಮತ್ತೆ ತನ್ನ ತರಬೇತಿ ಕಾರ್ಯಕ್ರಮವನ್ನು ಪುನರಾರಂಭಿಸಿದೆ. ಅಮೇರಿಕಾದ ಮಾಧ್ಯಮಗಳು ರಶಿಯಾದ ಇತ್ತೀಚಿನ ವಾಯುದಾಳಿಯ ಬಗ್ಗೆ ಇಲ್ಲಸಲ್ಲದನ್ನು ಹಬ್ಬಿಸುತ್ತಿದ್ದರೆ, ರಶಿಯಾದ ಮಾಧ್ಯಮಗಳು ಅದೇ ವಾಯುದಾಳಿಯನ್ನು ಹಾಡಿ ಹೊಗಳುತ್ತಿವೆ. ಯಾರನ್ನು ನಂಬುವುದು ಯಾರನ್ನು ಬಿಡುವುದು ಅನ್ನುವ ಹಾಗಿದೆ ಜನಸಾಮಾನ್ಯನ ಪರಿಸ್ಥಿತಿ. ತಮ್ಮೆಲ್ಲ ಸ್ವಾರ್ಥಗಳನ್ನು ಒಂದೇ ಒಂದು ತಿಂಗಳು ಬದಿಗಿಟ್ಟು, ಆ IS ಅನ್ನೋ ಭೂತದ ಮೇಲೆ ಬಿದ್ದರೆ ಅವರು ಕ್ಷಣಮಾತ್ರದಲ್ಲಿ ನಾಮಾವಶೇಷರಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಅಲ್ಲವೇ!?
ಇದರ ಮೇಲೆ ಹಿಂದೆಂದೋ ಇಂತಹದೇ ಒಂದು ಘಟನೆಯಿಂದ ಬೇಸತ್ತು ಬೇರೆಡೆ ನೆಲೆ ಕಂಡುಕೊಂಡ೦ತಹ ಮುಸ್ಲಿಂ ಸಮುದಾಯಗಳು ಇತಿಹಾಸದಿಂದ ಪಾಠ ಕಲಿಯದೇ, ನಮಗೆ ಪ್ರತ್ಯೇಕ ರಾಷ್ಟ್ರ ಕೊಡಿ, ನಮಗೆ ಶರಿಯ ಕಾನೂನು ಆಧಾರಿತ ಸಂವಿಧಾನ ಕೊಡಿ ಎಂದು ಒತ್ತಾಯಿಸುವುದು, ಪ್ರತಿಭಟನೆ ನಡೆಸುವುದು ಹಾಸ್ಯಾಸ್ಪದ ಎನಿಸುವುದಲ್ಲವೇ? ಇವರಿಗೆ ತೆಲೆ ಸರಿ ಇದೆಯೇ?