ಅಂಕಣ

ಹಿಂದೂಗಳನ್ನು ಜರಿಯುವುದೂ ಒಂದು ಫ಼್ಯಾಶನ್…!

ಅದೊಂದು ಯುವಕರ ಗುಂಪು, ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಬೆಕೆಂಬ ನೈಜ ಹಂಬಲ. ಜನಪರ ಕೆಲಸ ಮಾಡುತ್ತಾ ಮತದಾರರ ವಿಶ್ವಾಸ ಗಳಿಸುವ ಗುಂಪಿನ ನಾಯಕ ಮತ್ತು ಅವನಿಗೆ ಸಹಾಯ ಮಾಡುವ ಅವನ ಪತ್ರಿಕಾ ಮಿತ್ರ. ಅದೊಂದು ದಿನ ನಾಯಕ ಭಾಷಣ ಮಾಡುತ್ತಿದ್ದ ವೇದಿಕೆಗೆ ಬಾಂಬ್ ದಾಳಿಗೆ ತುತ್ತಾಗಿ ಅನೇಕ ಅಮಾಯಕರ ಸಾವು ಸಂಭವಿಸುತ್ತದೆ. ಜನರ “sympathy “ ಗಿಟ್ಟಿಸುವಲ್ಲಿ ಯಶಸ್ವಿಯಾದ ನಾಯಕ ಪ್ರಚಂಡ ಜಯ ಸಾಧಿಸುತ್ತಾನೆ. ಕೊನೆಗೊಂದು ದಿನ ಅವನ ಪತ್ರಕರ್ತ ಮಿತ್ರನಿಗೆ ಇದೆಲ್ಲ ಅಧಿಕಾರ ಹಿಡಿಯಲು ನಾಯಕ ಮಾಡಿದ ಷಡ್ಯಂತ್ರ ಎಂದು ತಿಳಿದುಬಿಡುತ್ತದೆ. ಅಷ್ಟು ಹೊತ್ತಿಗೆ ನಾಯಕ ತಾನೆ ಸೃಷ್ಟಿಸಿದ ಕೂಪದಲ್ಲಿ ಬಿದ್ದು ಸಾವನ್ನಪ್ಪುತ್ತಾನೆ. ಈ ಎಲ್ಲ ದುಷ್ಕೃತ್ಯವನ್ನು ಸಾಕ್ಷ್ಯ ಸಮೇತ ತನ್ನ ಪತ್ರಿಕೆಯಲ್ಲಿ ಪ್ರಕಟಿಸಲು ಮುಂದಾದ ಮಿತ್ರನಿಗೆ, ಪಕ್ಷದ ನಾಯಕನನ್ನು ಹೊರತುಪಡಿಸಿ ಉಳಿದವರೆಲ್ಲರೂ ನಿಜವಾಗಲೂ ಸಮಾಜದ ಸುಧಾರಣೆಗೆ ಪಣ ತೊಟ್ಟು ನಿಂತ ಪ್ರಾಮಾಣಿಕ ಯುವಕರು ಎಂದು ಮನವರಿಕೆಯಾಗುತ್ತದೆ. ತಾನು ಹೇಳ ಹೊರಟಿರುವ ಸುದ್ದಿಯಿಂದ ಎಲ್ಲಿ ಜನರ ಮನಸ್ಸಿನಲ್ಲಿ ಪ್ರಾಮಾಣಿಕ ರಾಜಕಾರಣಿಗಳ ಮೇಲಿನ ನಂಬಿಕೆ ಶಾಶ್ವತವಾಗಿ ಅಳಿಸಿಬಿಡುತ್ತದೊ ಎಂಬ ಅಳುಕಿನಿಂದ ಆ ವಿಷಯವನ್ನು ಅಲ್ಲಿಯೇ ಕೈಬಿಡುತ್ತಾನೆ.

ಅರೆರೆ! ಇದು ತಮಿಳಿನಲ್ಲಿ ತೆರೆಕಂಡ “ಕೊ” ಚಿತ್ರದ ಕಥೆಯಲ್ಲವೆ? ಹೌದು, ಇದನ್ನು ಯಾಕೆ ನೆನೆಪಿಸಬೇಕಾಗಿಬಂತೆಂದರೆ, ಈ ಚಿತ್ರದಲ್ಲಿ ಒಬ್ಬ ಪತ್ರಕರ್ತನಾಗಿ ನಾಯಕ ತೋರಿಸಿದ ನೈತಿಕತೆ, ಪ್ರೌಢಿಮೆ, ಸಮಾಜದ ಸ್ವಾಸ್ಥ್ಯ ಕಾಪಾಡಲು ಪಡುವ ಶ್ರಮ ಈಗಿನ ಯಾವ ಸುದ್ದಿ ಮಾಧ್ಯಮದಲ್ಲಿ ನಮಗೆ ಕಾಣಸಿಗುತ್ತದೆ? ಒಬ್ಬ ಮಾದ್ಯಮ ವರದಿಗಾರನಾಗಿ ಸುಳ್ಳನ್ನು ಹೇಳಬೇಕು ಅಥವ ಸತ್ಯವನ್ನು ಮುಚ್ಚಿಡಬೇಕು ಎಂದೇನು ಹೇಳುತ್ತಿಲ್ಲ.ಬದಲಾಗಿ, ಸಮಾಜವನ್ನು ಒಡೆಯುವ, ಪ್ರಚೋದಿಸುವ ವಾರ್ತೆಯನ್ನು ದಿನಗಟ್ಟಲೆ ಬಿತ್ತರಿಸುತ್ತ, ಅದಕ್ಕೆ ತಮ್ಮದೆ ಆದ ವ್ಯಾಖ್ಯಾನ ನೀಡಿ ನ್ಯಾಯಾಧೀಶರ ಕೆಲಸ ಮಾಡುವುದು ಎಷ್ಟು ಸರಿ? ಈ ದೇಶದ ಸಂವಿಧಾನ ಸಮರ್ಥ ಆಡಳಿತವನ್ನು ಜನತೆಗೆ ನೀಡಲು ಶಾಸಕಾಂಗ,ಕಾರ್ಯಾಂಗ ಮತ್ತು ನ್ಯಾಯಾಂಗವೆಂಬ ೩ಭಾಗಗಳನ್ನು ನೀಡಿದೆ. ಇದು ಸಮರ್ಪಕವಾಗಿ ಕಾರ್ಯ ನಿರ್ವಹಿಸದೆ ಇದ್ದಾಗ, ಜನರ ಆಶ್ವಾಸನೆಗೆ ಸ್ಪಂದಿಸದೆ ಇದ್ದಾಗ, ಅದನ್ನು ಖಂಡಿಸಿ ಒಂದು “mass opinion” ಸೃಷ್ಟಿಸುವ ಶಕ್ತಿ ಯಾರಿಗಾದರು ಇದ್ದರೆ ಅದು ಮಾಧ್ಯಮಕ್ಕೆ. ಆದರೆ ಇವತ್ತಿನ ಹೆಚ್ಚಿನ ಮಾಧ್ಯಮ ಮಡುತ್ತಿರುವ ಕೆಲಸವಾದರೂ ಏನು? ಸುದ್ದಿಮನೆಯಲ್ಲಿ ಏನೂ ಹೊಸ ಸುದ್ದಿ ಇಲ್ಲದೆ TRP ಕುಸಿಯುತ್ತಿದೆಯೇ, ಇಲ್ಲ ಪತ್ರಿಕೆಗಳ ಪ್ರಸಾರ ಕಡಿಮೆ ಅಗುತ್ತಿದೆಯೇ? ಬಿಟ್ಟಿಗೆ ಬಿದ್ದಂತೆ ಸಿಕ್ಕೆ ಸಿಗುತ್ತದಲ್ಲಾ ಹೇಳಲಿಕ್ಕೆ, “RSS, ಹಿಂದು ಧರ್ಮ, BJP ಮತ್ತು ಮೋದಿ”. ಈ ವಿಷಯಗಳ ಬಗ್ಗೆ ನಕಾರಾತ್ಮಕವಾಗಿ ಮಾತಾಡೋದು ಈಗೀಗ fashion, trend ಅಗಿಬಿಟ್ಟಿದೆ.

ಮೊನ್ನೆ ಮೊನ್ನೆ ನಡೆದ ಘಟನೆ. ಇಡೀ ದಾದ್ರಿ ಪ್ರಕರಣಕ್ಕೆ ದನದ ಮಾಂಸವೇ ಕಾರಣವಾ ಇಲ್ಲ ಬೇರೇನಾದರು ಅಂಶ ಇತ್ತೆ? ಉಹೂಂ ಅದು ಇವರಿಗೆ ಬೇಕಿಲ್ಲ. ನಮ್ಮ ಕೇಂದ್ರ ಸಚಿವರಾದ ವಿ.ಕೆ.ಸಿಂಗ್ ಅವರು ಮಾತಿನ ಭರಾಟೆಯಲ್ಲಿ ಹರಿಯಾಣದ ಬಾಲಕಿಯ ಬಗ್ಗೆ ನೀಡಿದ ಹೇಳಿಕೆಯನ್ನೇ ತೆಗೆದು ಅವರೇನೊ ದೇಶದ್ರೋಹ ಎಸಗಿದಂತೆ ಅವರ ಸಾಧನೆಯನ್ನೂ ಲೆಕ್ಕಿಸದೆ, ಬಿಂಬಿಸಿದವು. RSS ಮುಖಂಡರಾದ ಭಾಗವತ್ ಮೀಸಲು ನೀತಿಯ ಬಗ್ಗೆ ಆಡಿದ ಮಾತಿಗೂ ಅದೆ ಗತಿಯಾಯಿತು. ಅವರ ಮಾತಲ್ಲಿದ್ದ ಉದ್ದೇಶವೇನು ಎಂದು ಅರಿಯವ ಪ್ರಸಂಗವೇ ಇಲ್ಲ. ಅದು ತಪ್ಪೊ ಸರಿಯೊ ಅಮೇಲಿನ ವಿಚಾರ, ಆದರೆ ತಕ್ಷಣಕ್ಕೆ ಅವರನ್ನು ಸಮಾಜದಮುಂದೆ ತಪ್ಪಿತಸ್ಥರೆಂದು ತೀರ್ಮಾನ ಹೊರಡಿಸಿದರಾಯ್ತು ಎನ್ನುವ ಧೋರಣೆ ಮಾಧ್ಯಮದವರದ್ದು. ಏಕೆಂದರೆ ಇವರುಗಳು BJP, RSS ನವರಲ್ಲವೆ… ಹೇಗಾದರೂ ಮಾಡಿ ಮೋದಿಯವರಿಗೆ ಮುಜುಗರ ಉಂಟು ಮಾಡುವುದೆ ಇವರ ಇರಾದೆ ಎಂಬುದರಲ್ಲಿ ಆನುಮಾನವೇ ಇಲ್ಲ. ಬಿಹಾರ ಚುನಾವಣೆ ಸಮಯದಲ್ಲಿ ನಿಮ್ಮ ವರದಿಜನರಲ್ಲಿ ಎಷ್ಟು ಪರಿಣಾಮ ಬಿರುತ್ತಿದೆ ಎಂಬುದು ನಿಮಗೆ ಗೊತ್ತಿರದ ಸಂಗತಿಯೆ? ಇದನ್ನು ಹೇಳಿದರೆ ನಾನೀಗ ಮೋದಿಯ ಭಕ್ತ ಅಥವ RSS ಕಾರ್ಯಕರ್ತ ಅಥವ ಬಲಪಂಥೀಯವಾದಿ ಎನ್ನುತ್ತಾರೆ. ದುರಾದೃಷ್ಟಕ್ಕೆ ಅದನ್ನು ಅಲ್ಲಗೆಳೆದರೆ ನಂಬುವವರು ಯಾರು ಇಲ್ಲ ಬಿಡಿ.

ನಮ್ಮ ಕರ್ನಾಟಕದ ವಿಷಯಕ್ಕೇ ಬರೋಣ. ಮೊನ್ನೆ ಕನ್ನಡದ ಒಂದು ಪ್ರಖ್ಯಾತ ವಾಹಿನಿಯ ಸಂಪಾದಕರು “ನಮ್ಮ ಮೇಷ್ಟ್ರು” ಎನಿಸಿಕೊಂಡ ಭಗವಾನ್‍ರ‌ವರನ್ನು ಕರೆಸಿಕೊಂಡು ಮಾತಾಡಿಸಿ, ಅವರು ಉದುರುಸಿದ ಅಣಿಮುತ್ತನ್ನು ವೀಕ್ಷಕರ ಮುಂದೆ ಇಟ್ಟು ತಾನೇನೋ ದೊಡ್ಡ ಸಾಧನೆ ಮಾಡಿದಂತೆ pose ಕೊಟ್ಟಿದ್ದೂ ಆಯಿತು. ಪಾಪ, ಅವರ ಮಾತು ನಂಬಿಕೊಂಡು ಭಗವಾನ್‍ರಿಗೆ ನೀರು ಕುಡಿಸಲು ಹೊರಟ ಆಚಾರ್ಯರಿಗೆ ಕಾರ್ಯಕ್ರಮದ ನಂತರ phone ಮುಖಾಂತರ ಸಂಪಾದಕರ ಅವಾಚ್ಯ ಬೈಗುಳ ಸಿಕ್ಕಿದ್ದೂ ಆಯಿತು. ಸಾಲದಕ್ಕೆ, ಪತ್ರಕರ್ತರನ್ನು ಪ್ರಶ್ನೆಯೇ ಮಾಡಬಾರದು, ಮಾಡಿದರೆ ಹುಡುಕಿಕೊಂಡು ಬಂದು ಹೊಡಿತೆನೆ ಎಂದು ಧಮಕಿಹಾಕುವಷ್ಟು ಧಾಷ್ಟ್ಯ, ಕೀಳು ಮಟ್ಟದ ಮನಸ್ಥಿತಿ ಈ ಮಹಾಶಯರದ್ದು. ಅದೂ ಸಾಲದೆಂಬಂತೆ, ಭಗವಾನ್ ಅವರಿಗೆ ಉತ್ತರ ಪ್ರತಿ-ಸವಾಲು ಎನ್ನುವಂತೆ ಇನ್ನೊಂದು ಕಾರ್ಯಕ್ರಮ ನಡೆಸಿ ಅದರಲ್ಲಿ, ರೇಜಿಗೆ ಹುಟ್ಟಿಸುವಷ್ಟು ತಮ್ಮ ಬಗ್ಗೆ ತಾವೇ ಸಮರ್ಥಿಸಿಕೊಳ್ಳಲು ಆ session ನಡೆಸಿದರು ಎಂಬುದು ಸ್ಪಷ್ಟವಾಗಿ ಬಯಲಾಗಿತ್ತು, “ನಮ್ಮದು ಪತ್ರಕರ್ತ ಜಾತಿ” ಎಂಬ ಶೀರ್ಷಿಕೆ ಸಾವಿರಾರು ಬಾರಿ ಪರದೆಯ ಮೇಲೆ ಕಂಡವರಿಗೆ. ಯಾಕೆ ಸ್ವಾಮಿ, ಭಗವದ್ಗೀತೆಯ ಸರಿಯಾದ ಸಾರ, ಅರ್ಥವನ್ನ ವಿದ್ವಾಂಸರಿಂದ (ನೈಜ ವಿದ್ವತ್ ಇದ್ದವರು) ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಬಾರದು? ಒಂದು ವೇಳೆ ಯಾರನ್ನಾದರು ಕರೆತಂದರೂ ಅವರು ಇನ್ನೇನುಸರಿಯಾಗಿ ವಿವರಿಸಬೇಕು ಎನ್ನುವಷ್ಟರಲ್ಲಿ, ಯಾವುದಾದರು ಕೆಲಸಕ್ಕೆ ಬಾರದ ಕರೆಗಳನ್ನು ಸ್ವೀಕರಿಸಿ “ಹೇಳಿ ಸಾರ್, ನಿಮ್ಗೆ ಇದ್ರ ಬಗ್ಗೆ ಏನನಿಸ್ತಿದೆ?” ಎನ್ನುವ as usual ಪ್ರಶ್ನೆ, ಕಾಲಹರಣ.

ಇನ್ನೊಂದು ಉದಾಹರಣೆ, ಮೊನ್ನೆಯ ಟಿಪ್ಪು ಜಯಂತಿ ಬಗ್ಗೆ! ಟಿಪ್ಪುವಿನ ಬಗ್ಗೆ ಸಂಶೋಧನೆ ನಡೆಸಿದ, ಪುಸ್ತಕ ಬರೆದವರನ್ನು ಕರೆಸಿ ಸಮಾಜಕ್ಕೆ ಸತ್ಯ ತಿಳಿಸುವುದನ್ನು ಬಿಟ್ಟು, ಸುಖಾಸುಮ್ಮನೆ “ಬುದ್ಧಿ ಇಲ್ಲದ ಜೀವಿ”ಗಳನ್ನು ಕರೆಸಿ ಏಕಪಕ್ಷೀಯ ವಾದ ಮಂಡಿಸಿ, ಜನರಲ್ಲಿ ಇನ್ನಷ್ಟು ಗೊಂದಲ ಸೃಷ್ಟಿಸಿದರೇ ಹೊರತು, TV showನಲ್ಲಿ ಕುಳಿತು ಲಜ್ಜೆಬಿಟ್ಟು ಸಮಾಜಘಾತುಕ ಹೇಳಿಕೆ ನೀಡುತ್ತಿರುವ ನಮ್ಮ ಸಿ.ಎಂ ಸಿದ್ದುರವರಿಗೆ, ಇಂತಹ ಪ್ರಕ್ಷುಬ್ದ ಸನ್ನಿವೇಶದಲ್ಲಿ ಟಿಪ್ಪುಜಯಂತಿ ಆಚರಣೆ ಸರಿಯಲ್ಲ ಎಂದು ಮನವರಿಕೆ ಮಾಡುವ, ಅವರ ನಿರ್ಧಾರ ಖಂಡಿಸುವ ದಿಟ್ಟತನ ತೋರಲಿಲ್ಲ. ಏಕೆಂದರೆ, ಮತ್ತದೇ same reason, “ against ಹಿಂದು factor”. ಹೀಗಾದರೆ ನಿಮಗೂ, ರಾಜಕಾರಣಿಗಳಿಗೂ ಏನು ವ್ಯತ್ಯಾಸ? ಅವರು ಸಮಾಜ ಒಡೆದು ವೋಟ್ ಬ್ಯಾಂಕ್ ಸೃಷ್ಟಿಸಿದರೆ, ನೀವು ಸಮಾಜವನ್ನುಗೊಂದಲಕ್ಕೆ ತಳ್ಳಿ, ಸಾಮರಸ್ಯ ಕೆಡಿಸಿ, ಅದರಿಂದ ಆಗುವ ಘರ್ಷಣೆಯನ್ನೆ ತೋರಿಸಿ, TRP ಪಡೆದುಕೊಳ್ಳುತ್ತೀರಿ, ಅಷ್ಟೇ.

ಅಟಲ್ ಬಿಹಾರಿ ವಾಜಪೇಯೀ ಪತ್ರಿಕೆಗಳ ಕುರಿತು – ಪತ್ರಿಕೋದ್ಯಮ ಮೊದಲು passion ಆಗಿತ್ತು, ನಂತರ profession ಆಯಿತು, ಈಗ business organization ಆಗಿದೆ, ಮುಂದೇನಾಗುವುದೋ ಗೊತ್ತಿಲ್ಲ ಎಂದಿದ್ದರು. ಬಹುಶಃ ಈಗಿನ ಪರಿಸ್ಥಿತಿ ಅವಲೋಕಿಸಿದ್ದರೆ ಅವರು “politically influenced organization” ಎನ್ನುತ್ತಿದ್ದರೇನೊ. ಪತ್ರಿಕೆಗಳೇ ಹೀಗೆ ಜನರನ್ನು ಹಾದಿ ತಪ್ಪಿಸುತ್ತಿರುವಾಗ, Infosys ನಾರಾಯಣ ಮೂರ್ತಿ, ವಿಜ್ಞಾನಿ ಭಾರ್ಗವ, ಸಾಹಿತಿ ಮಹಾದೇವಪ್ಪನಂತವರು “ಮೋದಿ, RSS, ಅಸಹಿಷ್ಣುತೆ” ಬಗ್ಗೆ ನಕಾರಾತ್ಮಕ ಹೇಳಿಕೆ ನೀಡಿದರೆ ಆಶ್ಚರ್ಯವೇನಿಲ್ಲ ಬಿಡಿ. ಮನೆಯ ಜಗಳವನ್ನು TV ಪರದೆಯ ಮುಂದೆ ತಂದು ಜನಗಳಿಗೆ ತಮಾಷೆ ತೋರಿಸುವ, bigbossನಂತಹ ಸುದ್ದಿಯೇ ಅಲ್ಲದ ರಿಯಾಲಿಟಿ ಶೋಗಳನ್ನು ಗಂಟೆಗಟ್ಟಲೆ ಪ್ರಸಾರ ಮಾಡುವ,ಇಂಥಹ ನಕಾರಾತ್ಮಕ ಚಿಂತನೆಯನ್ನು ತುಂಬುತ್ತೀರೇ ವಿನಃ , ಮೋದಿ ಬಂದ ಮೇಲೆ ಸರಕಾರಿಕಾರ್ಯಾಲಯದಲ್ಲಿ ಆದ ಬದಲಾಅವಣೆಗಳ ಬಗ್ಗೆಯಾಗಲೀ, ೬೦ ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಭಾರತದ ರಕ್ಷಣಾ ವಿಭಾಗದಲ್ಲಿ ಈಗಿನ ಸರ್ಕಾರ ಮಾಡುತ್ತಿರುವ ಕ್ಷಿಪ್ರ ಬೆಳವಣಿಗೆಯ ಬಗ್ಗೆ, RSSನಂಥ ಹಿಂದು ಸಂಘಟನೆಗಳು ಮಾಡುತ್ತಿರುವ ಸಮಾಜ ಸೇವೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ, ಜನರಿಗೆ ಕೂಲಂಕುಶವಾಗಿತಿಳಿಹೇಳಬೇಕು ಎಂಬುದಾಗಿ ನಿಮಗೆ ಅನಿಸುವುದಿಲ್ಲವೆ? ಕೇವಲ ಕೆಂಪು ಉಗ್ರರ ಉಪಟಳ, BJP RSSನ ಕೈಗೊಂಬೆ, ಹಿಂದು ಸ್ವಾಮೀಜಿಯಿಂದ ವಂಚನೆ, ಇಂತದ್ದೇ ಮಾತುಗಳು ಏಕೆ ಬರುತ್ತವೆ? ನಿಮಗೆ ಬೇಕಾಗಿರುವುದಾದರೂ ಏನು? ಕೇವಲ ಅಧಿಕಾರದ ಹಪಹಪಿಗೆ ಬಿದ್ದು, ಜನರನ್ನು ಯಾವೆಲ್ಲ ರೀತಿಯಲ್ಲಿ ಒಡೆಯಲುಸಾಧ್ಯವೋ ಅದೆಲ್ಲವನ್ನು ಪ್ರಯೋಗಿಸಿ, ದೇಶದ ಪ್ರಗತಿಯನ್ನೇ ಕುಂಠಿತಗೊಳಿಸಿದ, ಬೇರೆ ಪಕ್ಷಗಳನ್ನು ಅಧಿಕಾರದಿಂದ ದೂರ ಇರಿಸಲು ಯಾವ ಕೀಳು ಮಟ್ಟಕ್ಕೊ ಇಳಿಯುವ, ಬಾಯಿಗೆ ಬಂದಂತೆ ಬೊಬ್ಬಿಡುವ “ಪಪ್ಪು”ವಿನ “ಕೈ”ಕೆಳಗಿರುವ ಪಕ್ಷವೇ ಬೇಕೇನು? ದೇಶ ಹಿಂದೆಂದೂ ಕಾಣದಂಥಹ , ಎಲ್ಲರೂ ಎದೆತಟ್ಟಿಕೊಂಡುಹೇಳುವಂತಹ ಪ್ರಧಾನಿ, ರಕ್ಷಣಾ ವಿಭಾಗದ ವಿ.ಕೆ.ಸಿಂಗ್,ಅಜಿತ್ ದೋವಲ್, ವಿತ್ತ ಸಚಿವರಾದ ಜೇಟ್ಲಿ ಇಂತಹ ಉತ್ತಮ ತಂಡವೇ (ಎಲ್ಲರೂ ಸಮರ್ಥರು ಎಂದು ಹೇಳುತ್ತಿಲ್ಲ, ಅದು ಸಾಧ್ಯವೂ ಇಲ್ಲ) ನಮಗೆ ಕೊಟ್ಟಿದ್ದರೂ “ಇವರು ಕೇವಲ ಪರದೇಶ ಸುತ್ತುವ ಪ್ರಧಾನಿ” ಎಂದು ಜರಿಯುತ್ತೀರಲ್ಲ ನಿಮಗೆ ಇನ್ನೇನು ಬೇಕು ಸ್ವಾಮಿ?

ಭಾರತದ ಮಾಧ್ಯಮವೆಂದಲ್ಲ, ಮೋದಿಯ ಕೈ ಕುಲುಕಿದ್ದೆ ತಪ್ಪು ಎಂದು ಆಜ್ಞೆ ಹೊರಡಿಸಿ ಅದೆಷ್ಟೊ sanitizer ಬಾಟಲ್‍ಗಳನ್ನು ಒಬಾಮಾಗೆ ಕಳುಹಿಸಿದ ಅಮೇರಿಕಾದ ಮಾಧ್ಯಮಗಳಿಗೆ, ತನ್ನ ದೇಶ ವಿಯಾಟ್ನಾಮ್, ದಕ್ಶಿಣ ಅಮೇರಿಕ, ಇರಾಕ್‍ನಂಥಾ ದೇಶಗಳಲ್ಲಿ ನಡೆಸಿದ ಮಾರಣಹೋಮ ಮರೆತುಹೋಗಿದೆಯೇನು? 26/11ಧಾಳಿ ಬಳಿಕ ಸಿಖ್ಖರನ್ನೂ ಮುಸ್ಲಿಂ ಎಂದು ಬಗೆದು ಕಂಡಕಂಡಲ್ಲಿ ಹಲ್ಲೆ ಮಾಡಿದ್ದನ್ನು ಅಷ್ಟು ಬೇಗ ಮರೆಯಲು ಸಾಧ್ಯವೇ? ಭಯೋತ್ಪಾದನೆಯನ್ನು ಜಗತ್ತಿಗೆ ಪರಿಚಯಿಸಿದ ಇವರಿಗೆ ಹಿಂದು ಸಂಘಟನೆಗಳನ್ನು “ಕೇಸರಿ ಭಯೋತ್ಪಾದನೆ” ಎಂದೂ, ಕರಿಯರ ಮೇಲೆ ನಾಯಿ ಚೂಬಿಟ್ಟು ತಮಾಷೆ ನೋಡುತ್ತಿದ್ದವರು ನನ್ನ ದೇಶ“ಅಸಹಿಷ್ಣುತೆ”ಯಿಂದ ತುಂಬಿದೆ ಎಂದು ಹಲುಬಲು ಹೇಗೆ ಸಾಧ್ಯ? ಇನ್ನು ಬ್ರಿಟನ್ ವಿಷಯಕ್ಕೆ ಬಂದರೆ, ಜಗತ್ತಿನ ಅರ್ಧಕ್ಕು ಹೆಚ್ಚು ರಾಷ್ಟ್ರಗಳನ್ನು ದಾಸ್ಯಕ್ಕೆ ಒಳಪಡಿಸಿ ಹೀನಾಯವಾಗಿ ನಡೆಸಿಕೊಂಡವರು ನಮಗೆ ಶಾಂತಿಯ ಪಾಠ ಮಾಡುತ್ತಿದ್ದಾರೆಂದರೆ ಅದಕ್ಕಿಂತ ನಗೆಪಾಟಲಿನ ವಿಷಯವೇನಿದೆ? ಅವರ ದೇಶಕ್ಕಗುವಾಗ ಅದುಭೂತಕಾಲ, ಅದನ್ನು ನಾವೆಲ್ಲ ಮರೆತು ಮುಂದೆ ಸಾಗಬೇಕು. ನಮಗಾಗುವಾಗ ಮಾತ್ರ ಅದು ಹಿಂದು, BJP, RSS ಇವರ ರೋಗಗ್ರಸ್ತ ಮನಸ್ಥಿತಿ. ಚೆನ್ನಾಗಿದೆ ಅಲ್ಲವೆ?

ಈ ಮಾಧ್ಯಮ, ಪ್ರಶಸ್ತಿ ವಾಪಸ್ ನೀಡುತ್ತಿರುವ ಸಾಹಿತಿಗಳು, ಬುದ್ಧಿಜೀವಿಗಳ ಈ ರೀತಿಯ ವರ್ತನೆ ಇಂದು ನೆನ್ನೆಯದಲ್ಲ. ಇಂದಿರಾ ಗಾಂಧಿ ಕಾಲದಿಂದಲೂ ಇವರು ಈ ಚಮಚಾಗಿರಿಯನ್ನು ಮಾಡಿಕೊಂಡು ಬಂದಿರುವವರೇ. ೧೯೭೫ರಲ್ಲಿ ವಿನಾಕಾರಣ emergency ವಿಧಿಸಿದಾಗ, ಅವರ ಮಗ ಇನ್ನಿಲ್ಲದಂತೆ ಗಲಭೆ-ದೊಂಬಿಗಳನ್ನು ನಡೆಸಿದಾಗಲೂ ಜಾಣ ಮೌನ ತಾಳಿದ್ದು ಮಾತ್ರವಲ್ಲದೆ, ಇವರುಗಳ ಬಗ್ಗೆ ಪುಂಖಾನುಪುಂಖವಾಗಿ ಹೊಗಳಿ ಬರೆದಿದ್ದವು ಇದೇ ಪತ್ರಕರ್ತರೆನಿಸಿಕೊಂಡವರು. ಅದೇನು ಮೋಹವೊ ದೇಶ ಹಾಳುಮಡುವವರ ಬಗ್ಗೆ, ಅದೇನು ದ್ವೇಷವೋ ಹಿಂದೂವಾದಿಗಳ ಬಗ್ಗೆ, ನಾಕಾಣೆ! ಒಟ್ಟಾರೆ ಇವರೆಲ್ಲರ ಉದ್ದೇಶ ಹಿಂದೂಶಕ್ತಿಯನ್ನು ಕುಂದಿಸುವುದು, ಭಾರತದ ಸಂಸೃತಿ ಪರಂಪರೆಗೆ ಧಕ್ಕೆ ತಂದು ಇಲ್ಲಿ ಅಶಾಂತಿ ಮೂಡಿಸುವುದು, ಇದಂತು ಸ್ಪಷ್ಟ! ಅದಕ್ಕೆ ಅಲ್ಲವೆ ನಮ್ಮ ಮೋದಿ ಮೊನ್ನೆ ಬ್ರಿಟನ್ನಿನಲ್ಲಿ ನಿಂತು ಈ ಮಾಧ್ಯಮದವರಿಗೆ light ಆಗಿ ಕಪಾಳ ಮೋಕ್ಷ ಮಾಡಿದ್ದು…

ಬೌಂಡ್ರಿ: ನಾನು ಈ ಮೇಲಿನ ಮಾತುಗಳನ್ನು ಎಲ್ಲ ಮಾಧ್ಯಮದ ಬಗ್ಗೆ ಹೇಳುತ್ತಿಲ್ಲ, ಆದರೆ ಹೆಚ್ಚಿನ ಮಾಧ್ಯಮಗಳು ಇದೇ ಧೋರಣೆ ಹೊಂದಿವೆ ಎಂದು. “ಅಭಿವ್ಯಕ್ತಿ ಸ್ವಾತಂತ್ರ್ಯ” ಬೇಕು ಎಂದು ಬೊಬ್ಬೆ ಹಾಕುವವರಿಗೆ ನಾನು ಇಷ್ಟಾದರೂ ಸ್ವಾತಂತ್ರ್ಯ ತೆಗೆದುಕೊಂಡು ನನ್ನ ಅಭಿಪ್ರಾಯ ವ್ಯಕ್ತಪಡಿಸದಿದ್ದರೆ ಹೇಗೆ, ಅಲ್ವಾ?

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!