ಅಂಕಣ

ಭಾರತಕ್ಕೆ ಚಾಚಾ ನೀಡಿದ ಬಳುವಳಿಗಳು!

ನಾವು ಮನೆ ಕಟ್ಟುವ ಮುನ್ನ ಅಡಿಪಾಯ ಹಾಕುತ್ತೇವೆ. ಇದರ ಉದ್ದೇಶ  ನಾವು ಕಟ್ಟುವ ಮನೆ ಸದೃಢವಾಗಿ, ದೀರ್ಘ ಕಾಲ ಬಾಳಬೇಕು ಎಂದು. ಇದು ದೇಶಕ್ಕೂ ಅನ್ವಯಿಸುತ್ತದೆ. ದೇಶದ ಉನ್ನತಿ ಸದೃಢ ಮತ್ತು ಬಲಿಷ್ಠ ಅಡಿಪಾಯವನ್ನು ಅವಲಂಬಿಸಿದೆ. ಅಡಿಪಾಯ ಸರಿಯಿದ್ದರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದರೆ ದುರದೃಷ್ಟವಶಾತ್ ಭಾರತಕ್ಕೆ ಭದ್ರವಾದ ಅಡಿಪಾಯ ದೊರಕಲೇ ಇಲ್ಲ. ಸ್ವಾತಂತ್ರ್ಯದ ನಂತರ ನಮ್ಮನ್ನು ಆಳಿದ ನಾಯಕರಾದ ನೆಹರು ಮತ್ತು ಗಾಂಧಿ ದೇಶವನ್ನು ಸಮರ್ಪಕವಾಗಿ ಮುನ್ನಡೆಸಲಿಲ್ಲ. ಅವರು ಮಾಡಿದ ಅನಾಹುತಗಳ ಸರಮಾಲೆಗಳ ಪರಿಣಾಮವನ್ನು ಇಂದಿಗೂ ನಾವು ಎದುರಿಸುತ್ತಿದ್ದೇವೆ.

ಈ ಅನಾಹುತ ಶುರುವಾಗಿದ್ದು ನಮ್ಮ ರಾಷ್ಟ್ರಪಿತ ಮಹಾತ್ಮ ಗಾಂಧಿಯವರಿಂದ. ಅತಿಯಾದ ಹುಚ್ಚು ನೆಹರು ಪ್ರೇಮ ಅವರಿಗೆ ಆವರಿಸಿತ್ತು. ಸ್ವಾತಂತ್ರ್ಯ ಭಾರತದ ಮೊದಲ ಪ್ರಧಾನಿಯಾರಾಗಬೇಕೆಂದಾಗ ಆಗಿನ ಕಾಂಗ್ರೆಸ್ನ ಬಹುಪಾಲು ಮಂದಿ ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ರ ಪರವಾಗಿ ಮತ ಹಾಕಿದರು. ಆದರೂ ತಮ್ಮ ಪ್ರಿಯ ಶಿಷ್ಯ ನೆಹರೂವನ್ನು ಪ್ರಧಾನಿ ಗಾದಿಯಲ್ಲಿ ಕುಳ್ಳಿರಿಸಿ ಅನಾಹುತಗಳ ಸರಮಾಲೆಗೆ ಮೊದಲ ಮಣಿಯನ್ನು ಪೋಣಿಸಿದರು ಗಾಂಧೀಜಿ. ಗಾಂಧಿಯವರನ್ನು ಗೌರವಿಸುತ್ತಿದ್ದ ಪಟೇಲರು ಪ್ರತಿಭಟಿಸದೆ ತಮ್ಮ ದೊಡ್ಡತನವನ್ನು ಮೆರೆದರು. ಈಗಿನ ರಾಜಕಾರಣಿಗಳಂತೆ ಪಟೇಲರು ನಡೆದುಕೊಳ್ಳಲಿಲ್ಲ. ನೆಹರು ಪ್ರಧಾನಿಯಾದ ನಂತರ ಮಾಡಿದ್ದೆಲ್ಲವೂ ಅನಾಹುತಗಳೇ. ಅಭಿವೃದ್ದಿಯ ಕಡೆಗೆ ನುಗ್ಗಬೇಕಿದ್ದ ದೇಶವನ್ನು ಪಾತಾಳಕ್ಕೆ ನೂಕಿದ ಮಹಾನ್ ಪ್ರಧಾನಿ ನಮ್ಮ ಚಾಚ ನೆಹರು. ಅವರು ಭಾರತಕ್ಕೆ ಕೊಟ್ಟ ಬಳುವಳಿಗಳು ಅಸಂಖ್ಯ.  ಅಡಿಪಾಯ ಸರಿಯಿದ್ದರೆ ತಾನೇ  ಮನೆ ಉತ್ತಮವಾಗಿರೋದು. ನೆಹರುವಿನ ಅನಾಹುತಗಳ ಬಳುವಳಿಗಳ ಪರಿಚಯ ಇಲ್ಲಿದೆ.

ಕಾಶ್ಮೀರ ಸಮಸ್ಯೆಯ ಜನಕ :

 ಭಾರತದ ಎಲ್ಲ ಸಣ್ಣಪುಟ್ಟ ರಾಜ್ಯ, ಸಂಸ್ಥಾನಗಳನ್ನು ಏಕೀಕರಣಗೊಳಿಸುವ ಕೆಲಸವನ್ನು ಸರ್ದಾರ್ ಪಟೇಲ್ ವಹಿಸಿಕೊಂಡಿದ್ದರು. ತಮ್ಮ ದಿಟ್ಟ ನಿರ್ಧಾರ ಮತ್ತು ಅಚಲ ಇಚ್ಚಾಶಕ್ತಿಯಿಂದ ಪಟೇಲರು ಎಲ್ಲ ರಾಜ್ಯಗಳನ್ನು ಭಾರತಕ್ಕೆ ಸೇರಿಸಿ ಉಕ್ಕಿನ ಮನುಷ್ಯರೆನಿಸಿದರು. ಆದರೆ ಕಾಶ್ಮೀರದ ಏಕೀಕರಣವನ್ನು ಪಟೇಲರಿಗೆ ವಹಿಸದೆ ತಾವೇ ನಿರ್ವಹಿಸುವುದಾಗಿ ಹೇಳಿ ತಮ್ಮ ಅವಿವೇಕಿ ನಿರ್ಧಾರಗಳಿಂದ ನೆಹರು  ಕಾಶ್ಮೀರ ಸಮಸ್ಯೆಯನ್ನು ಹುಟ್ಟುಹಾಕಿದರು. ನೆಹರು ನಿರ್ಧಾರದಿಂದ ಕಾಶ್ಮೀರ ಭಾರತದ ಕೈತಪ್ಪುವ ಹಂತ ತಲುಪಿತ್ತು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪಟೇಲರು ಸೇನೆಯನ್ನು ನುಗ್ಗಿಸಿ ಕಾಶ್ಮೀರವನ್ನು ಭಾರತದಲ್ಲಿ ವಿಲೀನಗೊಳಿಸಿದರು. ಕಾಶ್ಮೀರದ ರಾಜ ಹರಿಸಿಂಗ್ ಭಾರತಕ್ಕೆ ಸೇರಲು ನಿರ್ಧರಿಸಿದ್ದ ಆದರೆ ಷೇಕ್ ಅಬ್ದುಲ್ಲಾನ ಮಾತು ಕೇಳಿದ ನೆಹರು ಸಮಸ್ಯೆಗಳನ್ನು ಸೃಷ್ಟಿಸಿದರು. ಕಾಶ್ಮೀರದ ಸಮಸ್ಯೆ ಉಲ್ಬಣಗೊಂಡಾಗ ನೆಹರು ವಿಶ್ವ ಸಂಸ್ಥೆಯ ಕದ ತಟ್ಟಿದ್ದರು. ನಮ್ಮ ಮನೆಯಲ್ಲಿ ಜಗಳವಾದಾಗ ಪಕ್ಕದ ಮನೆಯವನನ್ನು ಕರೆದು ರಾಜಿ ಮಾಡಿಸುವುದು ಮೂರ್ಖತನವಲ್ಲವೇ?ಇಂತಹ ಸಣ್ಣ ಸಣ್ಣ ಸಂಗತಿಗಳೂ ನೆಹರುಗೆ ತಿಳಿಯಲಿಲ್ಲ. ತಮ್ಮ ಹಟ ಸಾಧಿಸಿದರು. ಆದರ ಪರಿಣಾಮ ಕಾಶ್ಮೀರ ಸಮಸ್ಯೆ ಇನ್ನು ಜೀವಂತ.

ಭಾರತದ ಆರ್ಥಿಕತೆಯನ್ನು ಪಾತಾಳಕ್ಕೆ ತಳ್ಳಿದ ಮಹಾನ್(?) ಪುರುಷ  ನೆಹರು :

ಯಾವುದೇ ಪ್ರಭುತ್ವವಾದರೂ ದೇಶದ ಆರ್ಥ ನೀತಿ ಭದ್ರವಾದ ನೆಲೆಗಟ್ಟಿನ ಮೇಲೆ ನಿಲ್ಲಬೇಕು. ನಮ್ಮ ಅರ್ಥ ನೀತಿ ನಮ್ಮ ನಾಯಕರ( ನೆಹರು ಅವರ) ಆತುರದಿಂದ ಅತಂತ್ರದಾರಿಗೆ ಹೋಗಿದೆ ಎಂದು ನಮಗೆ ಭಯವಾಗುತ್ತಿದೆ, ವೆಚ್ಚದಲ್ಲಿ ವಿತರಣೆ ಸಾಲದೇ ಹೋಗಿದೆ. ಅನಿರ್ವಾರ್ಯವಾದ ಒಂದು ಮಟ್ಟಕ್ಕಿಂತ ಹೆಚ್ಚಾಗಿ ಹಣ ಪೋಲಾಗುತ್ತಿದೆ. ಅಭಿವೃದ್ದಿ ಸಿದ್ದಿಸದೆ ನಮಗೆ ನಷ್ಟವಾಗುತ್ತಿದೆ.ಈ ರೀತಿ ಕಳವಳ ವ್ಯಕ್ತ ಪಡಿಸಿದವರು ಕನ್ನಡದ ಆಸ್ತಿ ಮಾಸ್ತಿಯವರು.

ಭಾರತದ ಆರ್ಥಿಕತೆ ಬಲಗೊಳಿಸಬೇಕಾದರೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಉದ್ದಾರವಾಗಬೇಕೆಂದು  ಗಾಂಧೀಜಿ ನಂಬಿದ್ದರು ಆದರೆ ಗಾಂಧಿ ಶಿಷ್ಯ. ನೆಹರುಗೆ ಇದರ ಮೇಲೆ ನಂಬಿಕೆಯೇ ಇರಲಿಲ್ಲ. ದೊಡ್ಡ ದೊಡ್ಡ ಯಂತ್ರಗಳ ಕೈಗಾರಿಕೆಗಳಿಂದ ದೇಶ ಉದ್ದಾರವಾಗುತ್ತದೆ ಎಂದು ಅವರು ನಂಬಿದರು. ವಿದೇಶಗಳಿಂದ ಬಂಡವಾಳವನ್ನು ತಂದು ಬೃಹತ್ ಕೈಗಾರಿಕೆಗಳನ್ನು ನಿರ್ಮಿಸಿದರು. ಆದರೆ ಅರ್ಥಿಕ ಅಶಿಸ್ತಿನ ಪರಿಣಾಮ ಬಾರಿ ನಷ್ಟ ಉಂಟಾಯಿತು, ರಷ್ಯಾ ಮತ್ತು ಬೇರೆ ರಾಷ್ಟ್ರಗಳ ನೀತಿಗಳನ್ನು ಪಾಲಿಸಿದರ ಪರಿಣಾಮ ಭಾರತದ ಸಾಲ ಹೆಚ್ಚಾಯಿತು.

ವೆಚ್ಚದ ನಿಯಂತ್ರಣ ಪದವೇ ನೆಹರುಗೆ ತಿಳಿದಿರಲಿಲ್ಲವೇನೋ. ಕಾಂಗ್ರೆಸ್ ಅಧಿವೇಶನಗಳಿಗೆ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದರು. ನೆಹರು ಜಾರಿಗೆ ತಂದ ಪಂಚವಾರ್ಷಿಕ ಯೋಜನೆಗಳೆಲ್ಲ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡಿತೆ ಹೊರತು ಏನು ಮಾಡಲಿಲ್ಲ. ಇಂದು ನಾವು ವಿತ್ತೀಯ ಕೊರತೆ (Fiscal Deficit) ಸಮಸ್ಯೆ ಎದುರಿಸುತ್ತಿದ್ದೇವೆ ಇದರ ಜನಕ ನಮ್ಮ ನೆಹರೂನೆ! ವಿಶ್ವ ಬ್ಯಾಂಕ್ನಿಂದ ಸಾಲ ತರಿಸಿಕೊಂಡ ನೆಹರೂ ಸರ್ಕಾರ ತೀರಿಸಲು ಆಗದೆ ಮತ್ತಷ್ಟು ಸಾಲ ಮಾಡಿತು. ವೆಚ್ಚ ನಿಯಂತ್ರಣ ಶೂನ್ಯ. ಪರಿಣಾಮ ಎಲ್ಲ ಭಾರತೀಯರ  ತಲೆ ಮೇಲೆ ಸಾಲದ ಹೊರೆ. ನಮ್ಮ ನಂತರ ಸ್ವಾತಂತ್ರ್ಯ ಪಡೆದ ದೇಶಗಳು ಅರ್ಥಿಕ ಪ್ರಗತಿಯನ್ನು ಸಾಧಿಸಿವೆ. ಆದರೆ ಭಾರತ ಇನ್ನು ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರ. ಇದಕ್ಕೆ ಮೂಲ ಕಾರಣ ನೆಹರು.

ಸೆಕ್ಯುಲರಿಸಂ ಮತ್ತು ತುಷ್ಟೀಕರಣದ ಪಿತಾಮಹ :

ಸೆಕ್ಯುಲರಿಸಂ ಎಂಬ ಕೊಳಕು ಇಂದು ದೇಶದಲ್ಲಿದೆ. ಈ ಕೊಳಕನ್ನು ಸೃಷ್ಟಿಸಿದ್ದೆ ನೆಹರು. ಜಾತ್ಯತೀತ ಎಂದರೆ ಎಲ್ಲ ಧರ್ಮಗಳು ಒಂದೇ ಎಲ್ಲರೂ ಸಮಾನರು ಎಂದರ್ಥ. ಆದರೆ ನೆಹರು ಪಾಲಿಗೆ ಬಹುಸಂಖ್ಯಾತರಿಂದ ಅಲ್ಪಸಂಖ್ಯಾತರನ್ನು ರಕ್ಷಿಸುವುದೇ ಸೆಕ್ಯುಲರಿಸಂ. ತಮ್ಮ ಗುರು ಗಾಂಧಿಯಿಂದ ವರವಂತೆ ಪಡೆದ ತುಷ್ಟೀಕರಣ ನೀತಿಯನ್ನು ಗಾಂಧಿಯ ಅನುಪಸ್ಥಿತಿಯಲ್ಲಿ ಅಚ್ಚುಕಟ್ಟಾಗಿ  ಗಾಂಧಿಗಿಂತ ಹೆಚ್ಚಾಗಿ ಪಾಲಿಸಿದರು ನಮ್ಮ ನೆಹರು. ಪರಿಣಾಮ ಪಾಕಿಸ್ಥಾನದ  ಹುಚ್ಚಾಟ, ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಅಟ್ಟಹಾಸವನ್ನು ಇಂದಿಗೂ ಎದುರಿಸುತ್ತಿದ್ದೇವೆ. ಒವೈಸಿ ಎಂಬ ಮತಾಂಧ ಇಂದು ಐದು ನಿಮಿಷ ಪೊಲೀಸರು ಸುಮ್ಮನಿದ್ದರೆ ಹಿಂದೂಗಳನ್ನು ಮುಗಿಸುತ್ತೇನೆ, ಭಾರತದ ಮೇಲೆ ಪಾಕಿಸ್ತಾನ ಯುದ್ದ ಸಾರಿದರೆ ಮುಸ್ಲಿಮರು ಭಾರತದ ವಿರುದ್ದ ಹೋರಾಡಬೇಕು”  ಸಲಹೆ ನೀಡುತ್ತಾನೆ. ಇಂತಹ ಮತಾಂಧರ ಬೆಳವಣಿಗೆಗೆ ಗಾಂಧಿ ಮತ್ತು ನೆಹ್ರೂನೆ ಕಾರಣ.

ಇವತ್ತು ಬುದ್ದಿ ಜೀವಿಗಳು ಎಂದು ಆರಚುವ, ತಲೆಯಲ್ಲಿ ಲದ್ದಿ ತುಂಬಿರುವ ಲದ್ದಿಜೀವಿಗಳು ಇದೇ ನೆಹರುವಿನ ಬಳುವಳಿಯಾದ  ಸೆಕ್ಯುಲರಿಸಂನಿಂದಲೇ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿರುವುದು. ಈ ಬುದ್ದಿಜೀವಿಗಳು ಎನ್ನುವ ದುರ್ಬುದ್ಧಿಜೀವಿಗಳ ಜನಕ ನೆಹರು ಅಂದರೆ ಯಾವುದೇ ತಪ್ಪಿಲ್ಲ ಎನಿಸುತ್ತದೆ.

ಹಿಮಾಲಯನ್ ಬ್ಲಂಡರ್ :

ನೆಹರುಗೆ ಕಮ್ಯುನಿಸ್ಟ್ ವಾದವೆಂದರೆ ಅದೇನೋ ಹುಚ್ಚು ಪ್ರೀತಿ. ಈ ಪ್ರೀತಿಯಿಂದಲೇ ಕೃಷ್ಣ ಮೆನನ್ ಎಂಬ ಪಕ್ಕ ಕಮ್ಯುನಿಸ್ಟ್ ಮನುಷ್ಯನನ್ನು ನೆಹರು ರಕ್ಷಣ ಸಚಿವರನ್ನಾಗಿ ಮಾಡಿದ್ದು. ಈತ ಮಂತ್ರಿಯಾಗಿದ್ದಾಗ ಭಾರತಕ್ಕಿಂತ ಹೆಚ್ಚಾಗಿ ಚೀನಾಗೆ ನಿಷ್ಠೆ ತೋರಿಸುತ್ತಿದ್ದ. ಇವನು ಮಾಡಿದ ಅನಾಹುತಗಳು ಒಂದೇ ಎರಡೆ?. ಇದರ ಪರಿಣಾಮವೇ 1962 ರ ಚೀನಾ ಮತ್ತು ಭಾರತದ ನಡುವಿನ ಯುದ್ದದ ಸೋಲು .

ನೆಹರುಗೆ ತನ್ನನ್ನು ತಾನು ದೊಡ್ಡ ಶಾಂತಿ ಪ್ರಿಯ ಎಂದು ಗುರುತಿಸಿಕೊಳ್ಳಬೇಕೆಂಬ ಖಯಾಲಿ. ಅರ್ಲಿಪ್ತ ನೀತಿ ನಮ್ಮದು ಎಂದು ಭಾಷಣ ಮಾಡುತ್ತಿದ್ದ ಮಹಾನ್ ಮಾತುಗಾರ ನೆಹರು. ಇದರಿಂದ ರಕ್ಷಣ ಇಲಾಖೆಗೆ ಮಹತ್ವವೇ ಸಿಗಲಿಲ್ಲ. ಯಾವ ಸಿದ್ದತೆಗಳು ಇರಲಿಲ್ಲ. ಶಸ್ತ್ರಾಸ್ತ್ರ ಖರೀದಿಯ ಬಗ್ಗೆ ತಿರಸ್ಕಾರ ನೆಹರೂಗಿತ್ತು. ಯಾವುದೇ ಸಿದ್ದತೆಯಿಲ್ಲದೆ ಯುದ್ದ ಘೋಷಣೆ ಮಾಡಿದರು. ಆಪಾರ ಸಾವು ನೋವುಗಳು ಸಂಭವಿಸಿದವು. ಅದೆಷ್ಟೋ ನೆಲವನ್ನು ಭಾರತ ಕಳೆದುಕೊಂಡಿತು. ಕೃಷ್ಣ ಮೆನನ್ ಮತ್ತು ನೆಹರು ಮಾಡಿದ ಅನಾಹುತಗಳಿಂದ ಸಾಕಷ್ಟು ಸೈನಿಕರು ಯುದ್ದ ಉಪಕರಣವಿಲ್ಲದೆ, ನೀರು,ಆಹಾರವಿಲ್ಲದೆ ಯುದ್ದ ಮಾಡಿ ಅಪಾರ ನೋವುಗಳನ್ನು ಅನುಭವಿಸಿದರು.

ಇವಷ್ಟೇ ಅಲ್ಲ ಭಾಷಾವಾರು ಪ್ರಾಂತ್ಯ ರಚನೆಯಾದಾಗ ನೆಹರು ನೀತಿಗಳಿಂದ ಸಾಕಷ್ಟು ಅನ್ಯಾಯಗಳಾದವು. ನೆಹರು ಸಾವರ್ಕರ್, ಅಂಬೇಡ್ಕರ್’ರಂತ ಮಹಾನ್ ಪುರುಷರಿಗೆ ನಾನಾ ತೊಂದರೆಗಳನ್ನು ಕೊಟ್ಟರು. ಸಾವರ್ಕರ್ ಮೇಲೆ ಸುಖಾಸುಮ್ಮನೆ ಗಾಂಧಿ ಹತ್ಯೆಯ ಆರೋಪ ಹೊರೆಸಿ ಅವರನ್ನು ಅವಮಾನಿಸಿದರು. ದೇಶ ಭಕ್ತ ಸಂಘಟನೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ  ನಿಷೇಧ ಹೇರಿದರು. ಹೀಗೆ ತಮಗೇ ಯಾರು ವಿರುದ್ದವಾಗಿದ್ದರೋ ಅವರೆನ್ನೆಲ್ಲ ಮುಗಿಸಬೇಕು ಎನ್ನುವುದೇ ನೆಹರುವಿನ ಸಿದ್ದಾಂತವಾಗಿತ್ತು

ನೆಹರುವಿನ ಬ್ಲಂಡರ್’ಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪುಟಗಳು ಮೀರುತ್ತ ಹೋಗುತ್ತದೆ. ನೆಹರೂ ತನ್ನ ವಂಶವನ್ನು ಬೆಳೆಸಿದ್ದು ಸಹ ಅನಾಹುತವೇ. ಪ್ರಧಾನಿಯಾಗಿದ್ದಾಗಲೇ ತನ್ನ ಮಗಳು ಇಂದಿರಾಳನ್ನು ಪ್ರಭಾವಿಯಾಗಿ ಬೆಳೆಸಿದರು ನೆಹರು. ನೆಹರು ನಂತರ ಯಾರು ಎಂಬ ಪ್ರಶ್ನೆ ಬಂದಾಗ ನೆಹರುಗೆ ವೈ ನಾಟ್ ಇಂದಿರಾಎಂದು ನೆಹರು ಬಂಟರು ಅವರಿಗೆ ಸಲಹೆ ಕೊಟ್ಟಿದ್ದರಂತೆ. ಆಗ ನೆಹರು ನಾಟ್ ನೌಎಂದಷ್ಟೇ ಉತ್ತರಿಸಿದ್ದರು. ಅವರು ನಿರಾಕರಿಸಲಿಲ್ಲ. ನೆಹರು ಮಾಡಿದ ಅನಾಹುತಗಳನ್ನೇ ಇಂದಿರಾ ಮುಂದುವರೆಸಿದರು, ಕಾಂಗ್ರೆಸ್ ಅನ್ನು ವಿಭಜಿಸಿದರು. ಅಮ್ಮನ ನೆರಳಿನಲ್ಲೇ ನಡೆದ ರಾಜೀವ್ ಗಾಂಧಿ ಸಹ ಇದನ್ನೇ ಮುಂದುವರೆಸಿದರು. ರಾಜೀವ್ ಗಾಂಧಿಯ ನಂತರ ಕಾಂಗ್ರೆಸ್ ನಿಷ್ಟರು  ವಿದೇಶೀ ಮುಖ ಸೋನಿಯಾ ಗಾಂಧಿಯನ್ನು  ತಂದು ನಿಲ್ಲಿಸಿದರು. ಹತ್ತು ವರ್ಷ ದೇಶ ಆಳಿದ ಸೋನಿಯಾ ಮಾಡಿದ್ದು ಅನಾಹುತಗಳೇ, ದೇಶವನ್ನು ಹಳ್ಳಕ್ಕೆ ದೂಡುವ ಕೆಲಸಗಳೇ. ಈಗ ರಾಜೀವ್ ಕುಡಿ ರಾಹುಲ್’ಗೆ ಅಧಿಕಾರ ಸಿಕ್ಕರೆ ಮುಂದೆ ಆಗೋದು ಅನಾಹುತವೇ. ಒಟ್ಟಿನಲ್ಲಿ  ನೆಹರು ವಂಶ ಮಾಡಿದ್ದು ಅನಾಹುತಗಳೇ, ಮಾಡೋದು ಅನಾಹುತಗಳೇ.  

ನಮ್ಮ ದೇಶದ ಯಾವುದೇ ಜ್ವಲಂತ ಸಮಸ್ಯೆಯನ್ನು ಅವಲೋಕಿಸಿ ಕಾರಣ ಹುಡುಕಿದರೆ ಅದು ನೆಹರು, ಗಾಂಧಿ ಮತ್ತು ನೆಹರು ಕುಟಂಬದ ವರವೇ ಆ ಸಮಸ್ಯೆಯಾಗಿರುತ್ತದೆ. ಅಡಿಪಾಯ ಸರಿಯಿದ್ದರೆ ತಾನೇ ಮನೆ ಚೆನ್ನಾಗಿರೋದು.

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!