ಅಂಕಣ

ಕೃಷಿಕರ ಆತ್ಮಹತ್ಯೆ ತಡೆಗೆ ಕರಾವಳಿ ಕೃಷಿ ಕ್ರಮ ಪರಿಹಾರ

ಕೃಷಿಕರ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಚರ್ಚೆಗಳು, ಆರೋಪಗಳು ಜೋರಾಗಿ ನಡೆಯುತ್ತವೆ. ಒಂದು ಅಂಕಿ ಅಂಶ ಪ್ರಕಾರ ಪ್ರತಿ ಅರ್ಧ ಘಂಟೆಗೊಬ್ಬ ರೈತ ನಮ್ಮದೇಶದಲ್ಲಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಆತ್ಮಹತ್ಯೆಗೆ ಬೇರೆ ಬೇರೆ ಜನರು ತಮ್ಮ ತಮ್ಮ ಭಾವನೆಗಳ ನೆರಳಿನಲ್ಲಿ ವ್ಯಾಖ್ಯಾನಗಳನ್ನು ದಾಖಲಿಸುತ್ತಾರೆ.ಜಾಗತೀಕರಣದ ಪ್ರಭಾವ ಈ ಆತ್ಮಹತ್ಯೆಗಳ ಹಿಂದೆ ಕೆಲಸ ಮಾಡಿದೆ. ಸರಕಾರಗಳಿಗೆ ದೇಶದ ಬೆನ್ನೆಲುಬಾದ ಕೃಷಿಕನ ಬಗೆಗೆ ಕಾಳಜಿ ಇಲ್ಲ. ದೇಶದ ಜನಸಂಖ್ಯೆಯ ಅರ್ಧ ಶತಮಾನಕ್ಕಿಂತ ಹೆಚ್ಚು ಜನರು ಕೃಷಿ ಕ್ಷೇತ್ರದೊಡನೆ ನಿಕಟ ಸಂಬಂಧ ಹೊಂದಿರುವಾಗ ಅವರನ್ನು ಬಿಟ್ಟು ದೇಶವನ್ನು ಮುಂಚೂಣಿರಾಷ್ಟ್ರಗಳೊಡನೆ ಪೈಪೋಟಿಯೊಡ್ಡಲು ಸಜ್ಜಾಗಿಸುವುದು ಮೂರ್ಖತನ ಅನ್ನುವ ವಾದವನ್ನು ಕೆಲವು ಬುದ್ಧಿಜೀವಿಗಳು ಪ್ರಸ್ತಾವಿಸುವುದಿದೆ. ಬ್ಯಾಂಕುಗಳುಸುಲಭವಾಗಿ ಸಾಲಕೊಡುವುದಿಲ್ಲ, ಕೊಟ್ಟ ಸಾಲವನ್ನು ಕೃಷಿಕನ ಪರಿಸ್ಥಿತಿಯ ಅರಿವಿದ್ದಾಗಲೂ ಒತ್ತಾಯ ಪೂರ್ವಕ ಅಥವ ದಂಡ ಪ್ರಯೋಗದ ಮೂಲಕ ವಸೂಲಿಗೆಮುಂದಾಗುವುದು, ಕೃಷಿಕ ಬೆಳೆದ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವಲ್ಲಿ ಅಧಿಕಾರಿಗಳು ವ್ಯವಸ್ಥೆ ಮಾಡಿಕೊಡುತ್ತಿಲ್ಲ ಮುಂತಾದ ಹತ್ತು ಹಲವು ಕಾರಣಗಳುರೈತನ ಆತ್ಮಹತ್ಯೆಯ ಹಿಂದೆ ಕೆಲಸಮಾಡಿವೆ ಅನ್ನುವುದಿದೆ. ಆದರೆ ನಮ್ಮ ಕರಾವಳಿಯ ಕೃಷಿಕರು ಆತ್ಮಹತ್ಯೆಯಂತಹ ಹೇಡಿ ಕೆಲಸಗಳಿಗೆ ಇಳಿಯದೆಪರಿಸ್ಥಿತಿಗಳನ್ನು ಧೈರ್ಯದಿಂದ ಎದುರಿಸುವುದನ್ನು ಕಾಣುವಾಗ ಬಯಲು ಸೀಮೆಯ ಜನರಿಗೆ ಇವರೇಕೆ ಆದರ್ಶರಾಗಬಾರದು ಅನ್ನಿಸುವುದಿದೆ. ಇದು ಅಧ್ಯಯನಮಾಡಬಹುದಾದ ವಿಷಯ.

ಏಕಬೆಳೆ ಪೂರಕವಲ್ಲ

ಸಾಮಾನ್ಯವಾಗಿ ಏಕಬೆಳೆ ಪದ್ಧತಿ ಕೃಷಿಕರನ್ನು ಕೈಚೆಲ್ಲುವಂತೆ ಮಾಡುತ್ತದೆ. ಬಯಲು ಸೀಮೆಯ ಕ್ರಮ ಇದು. ಅಲ್ಲಿ ಎಷ್ಟು ದೊಡ್ಡ ಜಮೀನಾದರೂ ಅಲ್ಲಿ ಬೆಳೆಒಂದು. ನೀರುಳ್ಳಿಯಾದರೆ ಇಡೀ ಜಮೀನು ನೀರುಳ್ಳಿಮಯ. ಇಲ್ಲದಿದ್ದರೆ ಬೇಳೆ ಕಾಳುಗಳದ್ದೆ ಕಾರುಬಾರು. ಫಸಲು ಕೈಸೇರುವ ಹೊತ್ತಿಗೆ ಹವಾಮಾನ ಅಥವಮಾರುಕಟ್ಟೆ ಏರುಪೇರಾದರೆ ಕೃಷಿಕ ಕಂಗೆಡುತ್ತಾನೆ. ಮಾಡಿದ ಸಾಲ ಮರುಪಾವತಿ ಮಾಡಲಾರದೆ ಸೋಲುತ್ತಾನೆ. ಏಕಬೆಳೆ ಯಾವತ್ತೂ ಪೂರಕವಲ್ಲ. ಇದ್ದಜಮೀನನ್ನು ಎರಡೊ ಮೂರೊ ಬೆಳೆಗಳಿಗೆ ಹಂಚಿಕೊಳ್ಳುವುದು ಬಹಳ ಮುಖ್ಯ. ಆಯಾ ಪ್ರದೇಶದಲ್ಲಿ ಯಾವೆಲ್ಲ ಬೆಳೆಗಳನ್ನು ಬೆಳೆಯಲು ಸಾಧ್ಯವಿದೆಯೊಅಂತವುಗಳ ಬಗ್ಗೆ ಆಸಕ್ತಿವಹಿಸುವುದು ಅಗತ್ಯ. ಹೀಗೆ ಮಾಡಿದಾಗ ಒಂದು ಬೆಳೆ ಕೈಕೊಟ್ಟರೆ ಕೃಷಿಕರನ್ನು ಮತ್ತೊಂದು ಬೆಳೆ ಸಂರಕ್ಷಿಸುತ್ತದೆ. ಇಲ್ಲಿ ಯಾವ ಬೇನೆಬೇಸರುಗಳಿಗೂ ಎಡೆಯಿಲ್ಲ.

ಕರಾವಳಿ ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾದ ಅಡಿಕೆಯ ಜೊತೆಗೆ ಹೆಗಲೆಣೆಯಾಗಿ ನಿಲ್ಲುವ ಬೆಳೆ ತೆಂಗು. ಕಾಳುಮೆಣಸು ಮತ್ತು ಬಾಳೆ ಹೆಚ್ಚಿನ ಬೆಳೆಗಾರರ ಖಾಯಂಆಸಕ್ತಿ. ಈಗ ಅದರ ಜೊತೆಗೆ ಕೊಕ್ಕೋ, ರಬ್ಬರ್, ಜಾಯಿಕಾಯಿ, ಅನಾನಸು, ಏಲಕ್ಕಿ, ತರಕಾರಿಗಳು, ಮಾವು, ಹಲಸು, ನೇರಳೆ, ಮಂಗೋಸ್ಟಿನ್, ರಂಬುಟಾನ್ಮುಂತಾದ ಹಣ್ಣು ಹಂಪಲುಗಳು ಕೃಷಿಕನ ಕೃಷಿ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ. ಇದರ ಜೊತೆಗೆ ಹೈನುಗಾರಿಕೆಯತ್ತಲೂ ಗಮನ ಕೇಂದ್ರೀಕರಿಸಿಕೊಂಡಕೃಷಿಕರು ಹಳ್ಳಿಯಲ್ಲಿದ್ದಾರೆ. ನಷ್ಟವೊ ಲಾಭವೊ ಒಟ್ಟು ಕೃಷಿಯ ನಿಟ್ಟಿನಲ್ಲಿ ಹೈನುಗಾರಿಕೆಯ ಪಾಲು ಬಹಳ ದೊಡ್ಡದು ಎಂಬುದನ್ನು ತಿಳಿದವರು ಇನ್ನೂ ಅದರಿಂದವಿಮುಖರಾಗದೆ ಉಳಿಸಿಕೊಂಡಿರುವುದು ಮತ್ತು ಯುವಜನಾಂಗ ಇದರಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿರುವುದು ಒಂದು ಶುಭ ಸೂಚನೆ. ರಬ್ಬರ್ ಧಾರಣೆಯಲ್ಲಿ ತೀವ್ರಇಳಿಮುಖವಾದಾಗ ಯಾವ ಬೆಳೆಗಾರನೂ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಟ್ಯಾಪಿಂಗ್ ನಿಲ್ಲಿಸಿ ಬೇರೆ ಕೃಷಿಯತ್ತ ಉಳಿದ ಗಮನವನ್ನು ಕೇಂದ್ರೀಕರಿಸಿದ್ದಾನೆ. ಅಡಿಕೆತೋಟದೊಳಗಿನ ಬಾಳೆ ಕೃಷಿ ಹೆಚ್ಚಿನ ಕೃಷಿಕರಿಗೆ ದೊಡ್ಡ ಹೊರೆಯಾಗದೆ ಗರಿಷ್ಠ ಮೊತ್ತದ ಆದಾಯ ತಂದುಕೊಡುತ್ತಿದೆ. ಈಗಂತು ತೋಟದಿಂದ ಹೊರಗೆ ಪ್ರತ್ಯೇಕಬಾಳೆಬೆಳೆಯುವ ಹುಮ್ಮಸ್ಸು ಜೋರಾಗಿದೆ. ಅಡಿಕೆಯನ್ನು ಒಂದಷ್ಟು ಸಮಯ ದಾಸ್ತಾನು ಮಾಡಿ ತತ್ಕಾಲದ ಖರ್ಚುಗಳಿಗೆ ತೆಂಗಿನ ಕಾಯಿಯನ್ನುಉಪಯೋಗಿಸುವ ಕೃಷಿಕರ ಸಂಖ್ಯೆ ಜೋರಾಗಿದೆ.

ಕಾಲ ಕಾಲಕ್ಕೆ ಸಮಾಜ ಬದಲಾವಣೆ ಕಾಣುವಾಗ ಅದರ ಜೊತೆಗೆ ಕೃಷಿಕನೂ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದನ್ನು ಕರಾವಳಿ ಜಿಲ್ಲೆಗಳಲ್ಲಿ ಸ್ಪಷ್ಟವಾಗಿಗುರುತಿಸಿಕೊಳ್ಳಬಹುದು. ಇವರಲ್ಲಿ ಹೆಚ್ಚಿನವರಿಗೆ ವಿವಿಧ ಬ್ಯಾಂಕ್ ಸಾಲಗಳಿವೆ. ದೊಡ್ಡ ಮೊತ್ತದ ಸಾಲ ತೆಗೆದು ಮರುಪಾವತಿ ಸಾಧ್ಯವಾಗದೆ ಪತ್ರಿಕೆಯಲ್ಲಿ ಏಲಂನೋಟೀಸು ಕಂಡರೂ ಧೃತಿಗೆಡದೆ ಒಂದಲ್ಲ ಒಂದು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಮಣ್ಣಿನ ಹಿರಿಯರು ಈ ರೀತಿಯ ಕೃಷಿ ತಳಹದಿಯನ್ನು ಮುಂದಿನಪೀಳಿಗೆಗೆ ಉಳಿಸಿಕೊಟ್ಟುದು ಈ ಯಶಸ್ವಿಗೆ ಮೂಲ ಕಾರಣ.

ವೆನಿಲ್ಲಾದ ಕಥೆ ಏನಿಲ್ಲಾ ಆದಾಗ ಸಾವಿರಾರು ರೂಪಾಯಿಗಳನ್ನು ಇದರ ಕೃಷಿಗೆ ಸುರುವಿದ ಕೃಷಿಕರಾರೂ ಸೋತು ಮಲಗಲಿಲ್ಲ. ಅದನ್ನು ಅಲ್ಲಿಗೆ ಬಿಟ್ಟುಮತ್ತೊಂದರ ಕಡೆಗೆ ಗಮನ ಕೊಟ್ಟಿದ್ದಾರೆ. ಎಲ್ಲೆಲ್ಲಿಂದ ವೆನಿಲ್ಲಾ ಬಳ್ಳಿಗಳನ್ನು ತಂದು ಬಹಳ ವೈಜ್ಞಾನಿಕ ರೀತಿಯ ಕೃಷಿಗೆ ತೊಡಗಿಕೊಂಡು ಕೈಸುಟ್ಟುಕೊಂಡವರುಈಗ ಅದನ್ನೆಲ್ಲ ಮರೆತಿದ್ದಾರೆ.

ಧೈರ್ಯ ಬೇಕಾಗಿದೆ.

ಕರಾವಳಿ ಜಿಲ್ಲೆಗಳ ಕೃಷಿಕ ಪುಕ್ಕಲು ಮನಸ್ಸಿನವನಲ್ಲ. ಆತ ಸೋತರೆ ಕಂಗೆಡುವುದಿಲ್ಲ. ಬಟ್ಟೆ ಹೊದ್ದು ಮಲಗುವುದಿಲ್ಲ. ಬೇರೆ ದಾರಿ ನೋಡಿಕೊಳ್ಳುತ್ತಾನೆ. ಅಗತ್ಯಬಿದ್ದರೆ ಕೃಷಿ ಕಾರ್ಮಿಕನಾಗುತ್ತಾನೆ. ಕೃಷಿಯ ಒಂದು ಮಗ್ಗುಲು ನೋವು ತಂದರೆ ಮತ್ತೊಂದು ಮಗ್ಗುಲಿಗೆ ಹೊರಳುವ ಚಾಕಚಕ್ಯತೆ ಕರಗತವಾಗಿದೆ. ಕೃಷಿಯಲ್ಲಿಸೋತರೆ ಕೃಷ್ಯೇತರ ಕ್ಷೇತ್ರಕ್ಕೆ ಕಾಲಿಡುತ್ತಾನೆ. ಅಗತ್ಯ ಬಿದ್ದಾಗ ಮತ್ತೆ ಕೃಷಿಗೆ ಮರಳುತ್ತಾನೆ. ಇಂಥ ಧೈರ್ಯ ಕೃಷಿಕನಿಗೆ ಬಂದರೆ ಆತ್ಮಹತ್ಯೆಯ ದಾರಿಮುಚ್ಚಿಕೊಳ್ಳುತ್ತದೆ.

ಸಹಕಾರ ಕೊಡೋಣ

ಕೃಷಿಕ ಸಾಲ ಮಾಡಿ ಸೋತಾಗ ಸ್ನೇಹ – ಸಹಕಾರ ಕೊಡೋಣ. ಆತನಿಗೆ ಸ್ವಾಭಿಮಾನ ತೊಡಿಸೋಣ. ನಾವು ದೂರ ನಿಂತು ಅವನ ಬಗ್ಗೆ ಮಾತನಾಡುತ್ತೇವೆ.ಕ್ಷೇತ್ರಕ್ಕೆ ಹೋಗಿ ಅವನ ಕಣ್ಣು ಒರೆಸುವ ಕೆಲಸ ಮಾಡುತ್ತಿಲ್ಲ. ಬ್ಯಾಂಕ್ ಕೊಟ್ಟ ಸಾಲವನ್ನು ಸದುಪಯೋಗಪಡಿಸುವ ದಾರಿಯನ್ನು ಸೂಚಿಸೋಣ. ಯುವಜನಾಂಗಕೃಷಿಯತ್ತ ಒಲವು ತುಂಬಿಕೊಂಡಾಗ ಬಹುತೇಕ ಸಮಸ್ಯೆಗಳು ದೂರ ಹೋಘುತ್ತವೆ. ಅಂಥಹ ವಾತಾವರಣ ನಿರ್ಮಾಣ ಸಮಾಜದ ಗುರಿಯಾಗಬೇಕಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!