ಅಂಕಣ

ಶಾಸ್ತ್ರೀಜಿಯವರ ಸಾವಿನ ಸುತ್ತ ಅನುಮಾನಗಳ ಹುತ್ತ!!

ಭಾರತ ಕಂಡ ಪ್ರಾಮಾಣಿಕ ಮತ್ತು ಸ್ವಾಭಿಮಾನಿ ಪ್ರಧಾನಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಅಗ್ರಗಣ್ಯರು. ತತ್ವ, ಆದರ್ಶ ಸಹಿತ ರಾಜಕಾರಣವನ್ನು ಮಾಡಿದ ವಾಮನಮೂರ್ತಿ ಅವರು. ಕಳಂಕರಹಿತ ರಾಜಕಾರಣಕ್ಕೆ ಮತ್ತೊಂದು ಹೆಸರು ಶಾಸ್ತ್ರೀಜಿ ಎಂದರೆ ಅತಿಶಯೋಕ್ತಿಯಲ್ಲ ಎಂಬುದು ನನ್ನ ಭಾವನೆ.

ದೇಶದ ಎರಡನೇ ಪ್ರಧಾನಿಯಾಗಿ, ಶ್ರೇಷ್ಠ ಸ್ವಾಭಿಮಾನಿಯಾಗಿ ಭಾರತವನ್ನು ಶಾಸ್ತ್ರೀಜಿ ಮುನ್ನೆಡೆಸಿಡ ರೀತಿ ಅದ್ಭುತ. ಕೀಟಲೆ ಬುದ್ದಿಯ ಪಾಕಿಸ್ತಾನದ ವಿರುದ್ದ ಯುದ್ದ ಸಾರಿ ಪಾಕ್ ಪ್ರಧಾನಿ ಆಯುಬ್ ಖಾನ್ ನ  ಸೊಕ್ಕನನ್ನು ಅಡಗಿಸಿದ ಶಾಸ್ತ್ರೀಜಿ ಭಾರತದ ತಾಕತ್ತನ್ನು ಇಡೀ ಜಗತ್ತಿಗೆ ಅಂದು ತೋರಿಸಿದ್ದರು.

ಸ್ವಂತ ಗೃಹವನ್ನು ಮಾಡಿಕೊಳ್ಳದ ಏಕೈಕ ಗೃಹ ಮಂತ್ರಿ, ಹಣವನ್ನೇ ಮಾಡದ ನೀತಿವಂತ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರೀಜಿ. ಇಂದು ಲೂಟಿ ಮಾಡಲೆಂದೇ ರಾಜಕೀಯಕ್ಕೆ ಬರುವ ಕಪಟ ರಾಜಕಾರಣಿಗಳಿಗೆ ಶಾಸ್ತ್ರೀಜಿ ಆದರ್ಶವಾಗಬೇಕು. ಗಾಂಧಿಯ ತತ್ವಗಳನ್ನು ಕೊನೆಯ ಉಸಿರು ಪಾಲಿಸಿದ ಸಜ್ಜನ ಅವರು. ಸ್ವಚ್ಛ ರಾಜಕಾರಣದ  ಈ ಮಾಣಿಕ್ಯ ಮರೆಯಾಯಿತು, ತೆರೆಮರೆಗೆ ಸರಿದು ಬಿಟ್ಟಿತು. ತಮ್ಮ ಹೆಸರಿಗೆ ‘ಗಾಂಧಿ’ ಪದವನ್ನು ಸಿಕ್ಕಿಸಿಕೊಂಡ ಡೋಂಗಿ ಗಾಂಧಿಗಳು ಮರೆಮಾಚುವ ಕೆಲಸವನ್ನು ನಾಜೂಕಾಗಿ ಮಾಡಿ ಮುಗಿಸಿಬಿಟ್ಟರು.

ಶಾಸ್ತ್ರೀಜಿಯವರ ಸಾವಿನ ಅಧ್ಯಾಯದ ಸತ್ಯಗಳು ಮರೀಚಿಕೆಯಾಗಿಯೇ ಉಳಿದುಬಿಟ್ಟಿದೆ.  ದೇಶಕ್ಕಾಗಿ ಶ್ರಮಿಸಿದ ಆ ಪುಣ್ಯಾತ್ಮನ ಸಾವು ಒಂದು ದುರಂತವೇ ಸರಿ. ಅವರ ಸಾವಿನ ಸತ್ಯಗಳನ್ನು ಮುಚ್ಚಿಟ್ಟು ಮಹಾನ್ ನಾಯಕನಿಗೆ ಮಾಡಿದ ಅವಮಾನ ಬಹಳ ಖೇದಕರ ವಿಚಾರ.

ಶಾಸ್ತ್ರೀಜಿ ಇಹಲೋಕ ಲೋಕ ತ್ಯಜಿಸಿ 48 ವರ್ಷಗಳಾದರೂ ಅವರ ಸಾವಿನ ಕಾರಣ ಇಂದಿಗೂ ನಿಗೂಢ. ಹಲವು ಒಳಸಂಚಿನ ಸಿದ್ದಾಂತಗಳಿವೆ. ಒಂದೊಂದು ಸಿದ್ದಾಂತಗಳು ಒಂದೊಂದು ರೀತಿಯಲ್ಲಿ ತಿಳಿಸುತ್ತವೆ.  ಯಾವುದು ಸತ್ಯ ಎಂದು  ನಿರ್ಧರಿಸುವುದು ಬಹಳ ಕಷ್ಟ.  ಮಹಾನ್ ನಾಯಕನ ಸಾವಿನ ಸತ್ಯಗಳ ಕುರಿತುಬೆಳಕು ಚೆಲ್ಲುವ ಪ್ರಯತ್ನವಿದು. ಅವರ ಹುಟ್ಟುಹಬ್ಬದ ಈ ಹೊತ್ತಿನಲ್ಲಿ ಸತ್ಯಗಳನ್ನು ಅರಿಯುವುದು ಬಹುಮುಖ್ಯವೆಂಬುದು ನನ್ನ ಭಾವನೆ.

ತಾಷ್ಕೆಂಟ್ ಒಪ್ಪಂದದ ನಂತರ ಜನವರಿ 11 1966 ರಂದು ಲಾಲ್ ಬಹದ್ದೂರ್ ಶಾಸ್ತ್ರೀ ಹೃದಯಾಘಾತದಿಂದ ಮೃತಪಟ್ಟರು ಎಂದು ಇತಿಹಾಸ ನಮ್ಮನ್ನು ನಂಬಿಸುತ್ತದೆ. ಆದರೆ ಈ ಕೆಳಗಿನ ಸಂಗತಿಗಳು ಇದು ಸುಳ್ಳು ಎನ್ನುವುದಕ್ಕೆ ಪುಷ್ಟಿ ನೀಡುತ್ತವೆ.

  1. ಒಬ್ಬ ವ್ಯಕ್ತಿ ಮೃತ ಪಟ್ಟರೆ ಅವರ ಸಾವಿನ ಕಾರಣವನ್ನು ತಿಳಿಯಲು ಮರಣೋತ್ತರ ಪರೀಕ್ಷೆ ಮಾಡುವುದು ಕಡ್ಡಾಯ. ಆದರೆ ಶಾಸ್ತ್ರೀಜಿಯವರ ಮರಣೋತ್ತರ ಪರೀಕ್ಷೆ ಮಾಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಒಬ್ಬ ಪ್ರಭಾವಿ ವ್ಯಕ್ತಿ, ಒಂದು ದೇಶದ ಪ್ರಧಾನಿಯ ಮರಣೋತ್ತರ ಪರೀಕ್ಷೆ ನಡೆಯದಿರುವುದು ಬಹಳಷ್ಟುಅನುಮಾನಗಳನ್ನು ಸೃಷ್ಟಿಸುತ್ತದೆ.

2. 1965 ಭಾರತ- ಪಾಕ್ ಯುದ್ದದಲ್ಲಿ ಭಾರತ ಮುಕ್ಕಾಲು ಭಾಗ ಗೆದ್ದುಬಿಟ್ಟಿತ್ತು. ಪಾಕಿಸ್ತಾನ ಸೋಲಿನ ಸುಳಿಗೆ ಸಿಲುಕಿತ್ತು. ಈ ಸಂಧರ್ಭದಲ್ಲಿ ಶಾಂತಿ ಮಾತುಕತೆ ನಡೆದು ಯುದ್ದ ನಿಂತಿತ್ತು. ಯುದ್ದದ ಹೀರೋ ಶಾಸ್ತ್ರೀಜಿಯಾಗಿದ್ದರು. ರಷ್ಯಾಗೆ ಹೋಗುವ ಮುನ್ನ ಶಾಸ್ತ್ರೀಜಿ ಆರೋಗ್ಯವಾಗಿದ್ದರು. ಆರೋಗ್ಯವಾಗಿದ್ದ ವ್ಯಕ್ತಿಗೆಹೃದಯಾಘಾತ ಸಂಭವಿಸಿತು ಎಂದರೆ ನಂಬುವುದು ಅಸಾಧ್ಯ.

 3. ಶಾಸ್ತ್ರೀಜಿಯವರ ಸಾವಿನ ಬಗ್ಗೆ ಮೊದಲ ಬಾರಿಗೆ ತನಿಖೆ ನಡೆಸಿದ ರಾಜ್ ನರೈನ್ ತನಿಖೆಯ ಯಾವುದೇ ಆಧಾರಗಳು ಇಂದಿಗೂ ಸರ್ಕಾರದ ಬಳಿ ಇಲ್ಲ. ಇದು ಮರೆಯಾಯಿತೋ? ಮರೆಮಾಚಲಾಯಿತೋ?

4. 2009ರಲ್ಲಿ ಲೇಖಕ ಅನೂಜ್ ಧರ್ ಮಾಹಿತಿ ಹಕ್ಕು ಕಾಯ್ದೆ ಅರ್ಜಿಯ ಮೂಲಕ ಶಾಸ್ತ್ರೀಜಿಯವರ ಸಾವಿನ ಕುರಿತು ಸೂಕ್ತ ದಾಖಲೆ ನೀಡಿ ಎಂದು ಪ್ರಧಾನಿಯ ಕಚೇರಿಗೆ ಕೇಳಿಕೊಂಡಾಗ “ನಮ್ಮ ಬಳಿ ಕೇವಲ ಒಂದು ದಾಖಲೆ ಇದೆ, ಆದರೆ ಅದನ್ನು ನೀಡಿದರೆ ದೇಶದ ಏಕತೆ ಮತ್ತು ಸಾರ್ವಭೌಮತೆ, ಸುರಕ್ಷೆತೆಗೆದಕ್ಕೆಯಾಗುತ್ತದೆ” ಎಂದು ಪ್ರಧಾನಿ ಕಾರ್ಯಾಲಯದಿಂದ ಉತ್ತರ ಬಂದಿತ್ತು. ಪ್ರಧಾನಿಯ ಸಾವಿಗೆ ಒಂದು ದಾಖಲೆ ಸಾಕೇ? ಎಂಬುದೇ ಇಲ್ಲಿ ಪ್ರಶ್ನೆ.

 5. ಶಾಸ್ತ್ರೀಜಿ ಅವರ ಪತ್ನಿ ಲಲಿತಾ ಶಾಸ್ತ್ರೀ  ಶಾಸ್ತ್ರೀಜಿಯವರು ಆರೋಗ್ಯವಂತರಾಗಿದ್ದರು ಅವರಿಗೆ ಹೃದಯಾಘಾತವೆಂದರೆ ನಂಬುವುದು ಆಸಾಧ್ಯ. ಮತ್ತು ಶಾಸ್ತ್ರೀಜಿಯವರ ಮೃತ ದೇಹ ನೀಲಿ ಬಣ್ಣಕ್ಕೆ ತಿರುಗಿತ್ತು ಎಂದು ಆರೋಪಿಸಿದ್ದರು. ಶಾಸ್ತ್ರೀಜಿಯವರಿಗೆ ವಿಷವೂಣಿಸಿ ಕೊಲೆ ಮಾಡಲಾಯಿತೆ?

6. ಶಾಸ್ತ್ರೀಜಿಯವರ ಸಾವಿನ ಕುರಿತು ಸಾಕ್ಷಿ ಹೇಳಲು ಇಬ್ಬರು ಪ್ರತ್ಯಕ್ಷ ಸಾಕ್ಷಿಗಳಿದ್ದರು. ಒಬ್ಬರು ಆರ್. ಎನ್ ಚಾಗ್ ಶಾಸ್ತ್ರೀಜಿಯವರ ಅರೋಗ್ಯ ನೋಡಿಕೊಳ್ಳಲು ತಾಷ್ಕೆಂಟ್ ಗೆ ಹೋಗಿದ್ದ ವೈದ್ಯ. ಮತ್ತೊಬ್ಬರು ರಾಮ್ ನಾಥ್, ಶಾಸ್ತ್ರೀಜಿಯವರ ಸೇವಕ. ಆರ್. ಎನ್ ಚಾಗ್ ದೆಹಲಿಯಲ್ಲಿ ಸಾಕ್ಷಿ ಹೇಳಲು ರಸ್ತೆ ಮಾರ್ಗದಲ್ಲಿಹೋಗುತ್ತಿರುವಾಗ ಟ್ರಾಕ್ ಅವರ ವಾಹನಕ್ಕೆ ಒಡೆದು ಮೃತಪಟ್ಟರು. ರಾಮ್ ನಾಥ್ ಸಹ ಸಾಕ್ಷಿ ಹೇಳಲು ಪ್ರಯಾಣಿಸುತ್ತಿರುವಾಗ ಚಲಿಸುತ್ತಿದ್ದ ವಾಹನ ಅವರ ತಲೆಗೆ ಡಿಕ್ಕಿ ಹೊಡೆದ ಪರಿಣಾಮ ನೆನಪಿನ ಶಕ್ತಿಯನ್ನೇ ಕಳೆದುಕೊಳ್ಳಬೇಕಾಯಿತು. ಇದು ಕಾಕತಾಳೀಯವೇ? ಕಾಕತಾಳೀಯ ಎಂದು ನಂಬುವುದು ಮೂರ್ಖತನವೇಸರಿ.

ಈ ಎಲ್ಲ ಸಂಗತಿಗಳು ಶಾಸ್ತ್ರೀಜಿಯವರ ಸಾವು ಸಹಜ ಸಾವಲ್ಲ ಎಂದು ಹೇಳುತ್ತವೆ. ಅರೋಗ್ಯಕರವಾಗಿದ್ದ ವ್ಯಕ್ತಿ ಹೇಗೆ ಸಾಯಲು ಸಾಧ್ಯ? ತಮ್ಮ ಜೀವಮಾನದಲ್ಲಿ ಒಮ್ಮೆಯೂ ಶಾಸ್ತ್ರೀಜಿಯವರಿಗೆ ಹೃದಯಾಘಾತವಾಗಿರಲಿಲ್ಲ. ಅಂತಹವರಿಗೆ ಹೃದಯಘಾತವಾಯಿತೇ? ಅವರಿಗೆ ವಿಷ ನೀಡಿ ಕೊಲೆ ಮಾಡಿರಬಹುದೆಂಬವದಂತಿಗಳೆ ಸತ್ಯದಂತೆ ಕಾಣಿಸುತ್ತದೆ. ಸಾಕ್ಷಿಗಳು ಅಸಹಜ ಸಾವೆಂದು ದೃಡಪಡಿಸುತ್ತವೆ ಆದರೆ ಕೊಂದವರು ಯಾರು? ಮರಣೋತ್ತರ ಪರೀಕ್ಷೆ ನಡೆಸದೇ ಇರುವುದು, ಸಾವಿನ ಸೂಕ್ತ ತನಿಖೆಯ ಅನುಪಸ್ಥಿತಿ. ಸಾಕ್ಷಿಗಳ ಅಸಹಜ ಸಾವು ಇವೆಲ್ಲವೂ ಸಾಕಷ್ಟು ಪ್ರಶ್ನೆ, ಅನುಮಾನ, ಗೊಂದಲಗಳನ್ನು ಹುಟ್ಟುಹಾಕುತ್ತದೆ.

ಇಂದಿರೆಯ ಕೈವಾಡವೋ? ಅಥವಾ ಸಿ.. ಕುತಂತ್ರವೋ?    

ಶಾಸ್ತ್ರೀಜಿಯವರನ್ನು ಕೊಂದವರು ಯಾರು ಎಂದಾಗ ಸಹಜವಾಗಿಯೇ ನೆಹರೂವಿನ ಏಕ ಮಾತ್ರ ಪುತ್ರಿ ಇಂದಿರಾ ಗಾಂಧಿಯತ್ತ ಬೆರಳು ತೋರಿಸುತ್ತದೆ. ಪ್ರಧಾನಿ ಪಟ್ಟವನ್ನು ಗಳಿಸಲು ಇಂದಿರಾ ಗಾಂಧಿ ಶಾಸ್ತ್ರೀಜಿಯವರನ್ನು ಕೊಲ್ಲಿಸಿದರು ಎಂಬ ಅನುಮಾನ ಉಂಟಾಗುತ್ತದೆ. ಆದರೆ 1965 ರಲ್ಲಿ ಇಂದಿರಾ ಕ್ಯಾಬಿನೆಟ್ಮಂತ್ರಿ ಸಹ ಆಗಿರಲಿಲ್ಲ. ಆಕೆ ಪ್ರಭಾವಿಯಾಗಿದ್ದು ಪ್ರಧಾನಿಯಾದ ನಂತರ. ಅಧಿಕಾರ ಏನು ಇಲ್ಲದೇ ವಿದೇಶದಲ್ಲಿ ಒಬ್ಬ ವ್ಯಕ್ತಿಯನ್ನು, ಪ್ರಧಾನಿಯನ್ನು ಕೊಲೆ ಮಾಡಿಸುವುದು ಸುಲಭದ ಕೆಲಸವಲ್ಲ. ಆಗಾಗಿ ಇಂದಿರಾಗಾಂಧಿಯ ಕೈವಾಡ ಈ ಕೊಲೆಯಲ್ಲಿಲ್ಲ ಎಂದೂ ನಂಬಬಹುದು.

ರಾಬರ್ಟ್ ಕ್ರೌಲಿ ಎಂಬಾತ ತನ್ನ ಒಂದು ಸಂದರ್ಶನದಲ್ಲಿ ಶಾಸ್ತ್ರೀಜಿಯವರನ್ನು ಕೊಲೆ ಮಾಡಿದ್ದು ಅಮೇರಿಕಾದ  ಗುಪ್ತಚರ ಸಂಸ್ಥೆ ಸಿ.ಐ.ಎ  ಎಂದು ಆರೋಪಿಸಿದ್ದಾನೆ. 1965ರ ಯುದ್ದದಲ್ಲಿ ಪಾಕಿಸ್ತಾನಕ್ಕೆ ಅಮೇರಿಕ ಬೆಂಬಲ ನೀಡಿತ್ತು. ಅಮೇರಿಕಾದ ವಿರೋಧಿ ರಷ್ಯಾ ಭಾರತವನ್ನು ಬೆಂಬಲಿಸಿತ್ತು. ಭಾರತ ಮುಕ್ಕಾಲು ಭಾಗಪಾಕಿಸ್ತಾನವನ್ನು ಸೋಲಿಸಿತ್ತು. ಯುದ್ದದ ಗೆಲುವಿನ ರೂವಾರಿ ಶಾಸ್ತ್ರೀಜಿಯವರೆ ಆಗಿದ್ದರು. ಶಾಸ್ತ್ರೀಜಿ ಅಮೇರಿಕಾಗೆ ಶತ್ರುವಿನಂತೆ ಕಂಡಿದ್ದರು. ಪರಮಾಣು ಒಪ್ಪಂದವನ್ನು ಶಾಸ್ತ್ರೀಜಿ ನಿರಾಕರಿಸಿದ್ದರು. ತನ್ನ ಎದುರಾಳಿಗಳನ್ನು ಮುಗಿಸುವ ಕೆಲಸವನ್ನು ಅಮೇರಿಕಾ ಗುಪ್ತಚರ ಸಂಸ್ಥೆ ಸಿ.ಐ.ಎ ಗೆ ವಹಿಸಿತ್ತು. ರಷ್ಯದಲ್ಲಿ ತನ್ನಪ್ರಭಾವ ಬಳಿಸಿದ ಸಿ.ಐ.ಎ ಶಾಸ್ತ್ರೀಜಿಯವರಿಗೆ ವಿಷ ನೀಡಿ ಕೊಲೆ ಮಾಡಿರಬಹುದು.

ಇಂದಿರಾಗಾಂಧಿ ಪ್ರಧಾನಿಯಾದ ಮೇಲೆ ಈ ಸತ್ಯ ಅವರಿಗೆ ಗೊತ್ತಾಯಿತು. ಆದರೆ ತನ್ನ ಕುರ್ಚಿಗೆ ಇದರಿಂದ ತೊಂದರೆ ಎಂದು ಭಾವಿಸಿ ಎಲ್ಲ ಸತ್ಯಗಳನ್ನು ಮರೆಮಾಚಿದರು. ಆಧಾರಗಳನ್ನು ನಾಶಪಡಿಸಿದರು. ಶಾಸ್ತ್ರೀಜಿಯವರಿಗೆ ಹುತಾತ್ಮ ಪದವಿ ಸಿಗಬಾರದು ಎಂದು ವ್ಯವಸ್ಥಿತ ಸಂಚು ರೂಪಿಸಿದ ಇಂದಿರಾಶಾಸ್ತ್ರೀಜಿಯವರ ಹೆಸರನ್ನು ಇತಿಹಾಸದ ಪುಟಗಳಿಂದ ಅಳಿಸಿ ಹಾಕಲು ಪ್ರಯತ್ನಿಸಿದರು. ಇದಕ್ಕಾಗಿ ಇಂದಿರಾಗಾಂಧಿ ಸರ್ಕಾರ ಶಾಸ್ತ್ರೀಜಿಯವರ ಸಾವಿನ ತನಿಖೆಯನ್ನು ಮಾಡಲಿಲ್ಲ. ಇದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತು.

ಶಾಸ್ತ್ರೀಜಿಯವರ ಸಾವಿನ ನಿಜ ಕಾರಣ ತಿಳಿಯಬೇಕಾದರೆ ಸೂಕ್ತ ತನಿಖೆಯಾಗಬೇಕು ಆಧಾರಗಳಿಲ್ಲದೆ ಇದೇ ನಿಜವೆಂದು ತೀರ್ಮಾನಿಸಲು ಸಾಧ್ಯವಿಲ್ಲ. ಸೂಕ್ತ ತನಿಖೆ ಮಾತ್ರ ಎಲ್ಲ ಅನುಮಾನ, ಗೊಂದಲಗಳಿಗೆ ಉತ್ತರ ನೀಡಬಲ್ಲದು. ಶಾಸ್ತ್ರೀಜಿಯವರ ಸಾವಿನ ಕುರಿತು ತನಿಖೆ ನಡೆಸಿ ಅವರ ಸಾವಿನ ಕಾರಣವನ್ನು ಜಗತ್ತಿಗೆತಿಳಿಯಪಡಿಸುವುದೇ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವ.

Facebook ಕಾಮೆಂಟ್ಸ್

ಲೇಖಕರ ಕುರಿತು

Raviteja Shastri

ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!