ಅಂಕಣ

‘ಆತ್ಮಾಹುತಿ’ಯಿಂದ ಆತ್ಮವಿಮರ್ಶೆ

ಮಹಾಭಾರತ, ರಾಮಾಯಣದಂತ ಯಾವುದೇ ಗ್ರಂಥವಾಗಲಿ ಮೊದಲ ಬಾರಿಗೆ ಓದುವಾಗ ಮನಸ್ಸಲ್ಲಿ ಒಂದು ವಿಶೇಷ ತನ್ಮಯ ಭಾವವಿರುತ್ತದೆ. ‘ವಿಶೇಷ’ ಏಕೆಂದರೆ ಇದು ಬೇರೆ ಪುಸ್ತಕಗಳಂತಲ್ಲದೆಸುತ್ತ-ಮುತ್ತ ಕೇಳಿದ, ಜೀವನದಲ್ಲಿ ಬೆರೆತ, ಅಜ್ಜಿ ಶುರು ಮಾಡಿದ ಒಂದು ಕುತೂಹಲದ ಕಥೆ. ಓದುವಾಗ ಬೇರೆ ಯುಗವನ್ನೇ ನೋಡಿ ಬಂದಂತಹ ಪುಳಕ, ಪಾತ್ರಗಳ ಜೀವನದಲ್ಲಿ ಭಾಗಿಯಾದಂತಹರೋಮಾಂಚನ. ಪೂರ್ವಜರ ಚರಿತ್ರೆಯೆಂದೆನೊ.. ಪುಸ್ತಕ ಮುಗಿದಾಗ ಮನಸು ತುಂಬಿ ಬರುತ್ತದೆ. ಇನ್ನು ಕೊನೆ ಅಧ್ಯಾಯದ ಪುಟಗಳಲ್ಲಿ ಕಣ್ಣಾಡಿಸುವಾಗ ಬಿಟ್ಟು ಹೋದ ಎಷ್ಟೋ ಹೆಜ್ಜೆ ಗುರುತುಗಳನ್ನುಹಚ್ಚಿಕೊಂಡು ಬಿಟ್ಟಿರುತ್ತೇವೆ.

ಹೀಗೆ ಪುರಾಣಗಳಂತೆ ಮನಸಿಗೆ ಹತ್ತಿರವಾಗುವ, ಎತ್ತರದಲ್ಲಿ ನಿಲ್ಲುವ ಒಂದು ಅದ್ಭುತ ಕೃತಿ ಶಿವರಾಮುರವರ ‘ಆತ್ಮಾಹುತಿ’. ಇದು 1970 ರಲ್ಲಿ ಮೊದಲ ಬಾರಿಗೆ ಪ್ರಕಟಗೊಂಡಿತು. ಪ್ರತಿಯೊಬ್ಬಭಾರತೀಯನೂ ತಿಳಿದಿರಬೇಕಾದ ಇತಿಹಾಸ ಇದು. ಓದಲೇ ಬೇಕಾದ the best book.

ಸ್ವಾತಂತ್ರ್ಯ ವೀರ ಸಾವರಕರ ರವರ ಜೀವನ ಚರಿತ್ರೆ. ಇದನ್ನು ಆತ್ಮಕಥೆಯಂತೆ ನಿರೂಪಿಸಲಾಗಿದೆ. ಸಾಮಾನ್ಯ ವ್ಯಕ್ತಿಯೊಬ್ಬನ ಉನ್ನತ ಧೇಯ್ಯೋದ್ದೇಶಗಳು ಹೇಗೆ ಮಹಾನ್ ವ್ಯಕ್ತಿತ್ವಕ್ಕೆಮೆಟ್ಟಿಲುಗಳಾಗುತ್ತವೆ ಎಂಬುದಕ್ಕೆ ನಿದರ್ಶನವಿದು. ಬಾಲಕನಿದ್ದಾಗ ಚಿಗುರುವ ದೇಶ ಭಕ್ತಿ ಇಡೀ ವಿಶ್ವಕ್ಕೆ ವ್ಯಾಪಿಸುವ ಕಥಾನಕವಿದು. ಹಿಂದುತ್ವದ ಅಮೋಘ ಪರಿಕಲ್ಪನೆಯನ್ನು ಅನಾವರಣಗೊಳಿಸುವಇವರ ಜ್ಞಾನ ಅಗಾಧ. ಇದೆಲ್ಲವನ್ನೂ ಕೇಳುವುದಕ್ಕಿಂತ ಅನುಭವಿಸ ಬೇಕೆಂದಿದ್ದರೆ ಆತ್ಮಾಹುತಿಯನ್ನು ಓದಲೇಬೇಕು ಬೇಕು.

ಈ ಆದರ್ಶಪ್ರಾಯವಾದ ಪುಸ್ತಕದ ಅಗತ್ಯ ಇಂದಿಗೂ ಇದೆ.ಆದರೆ ಈಗ ಸ್ವತಂತ್ರ ಪೂರ್ವ ಇತಿಹಾಸ ಇಂದಿನ ಕಂಪ್ಯೂಟರ್ ಯುಗದಲ್ಲಿ ಎಷ್ಟು ಪ್ರಸ್ತುತ ಎಂಬುದೇ ಒಂದು ಜಿಜ್ಞಾಸೆಯಾಗಿದೆ. ಇಡೀಜಗತ್ತಿನಲ್ಲಿ ಮಾನವ ಜನಾಂಗ ವಿವಿಧ ದೇಶಗಳಲ್ಲಿ ತನ್ನದೇ ಆದ ಸಂಸ್ಕೃತಿಯೊಂದಿಗೆ ಹಬ್ಬಿಗೊಂಡಿದೆ. ಈ ಸಂಸ್ಕೃತಿ ಪ್ರತಿಯೊಬ್ಬನಿಗೆ ಪೂರ್ವಜರಿಂದ ಬರುವ ಬಳುವಳಿ. ಅದರಲ್ಲಿಸುಖ,ನೆಮ್ಮದಿ,ಉತ್ಕೃಷ್ಟ ಜೀವನಕ್ಕೆ ಒಂದಷ್ಟು ಜ್ಞಾನ ಕಾಲದಿಂದ ಕಾಲಕ್ಕೆ ಪ್ರವಹಿಸುತ್ತದೆ. ಮನುಷ್ಯನ ಗರಿಷ್ಟ ಆಯಸ್ಸು ನೂರು ವರ್ಷವೆಂದರೂ ಈ ಸಮಯದಲ್ಲಿ ಎಲ್ಲಾ ಅನುಭವ ಪಡೆದು ಜೀವನವನ್ನುನಡೆಸಲಾಗುವುದಿಲ್ಲ. ಅಂತೆಯೇ ನಿತ್ಯ ಸೂತ್ರಗಳು ಸಂಸ್ಕಾರದ ರೂಪದಲ್ಲಿ ದಾರಿ ದೀಪವಾಗುತ್ತದೆ. ಈ ಸಂಸ್ಕಾರ  ಭೌಗೋಳಿಕವಾಗಿ, ಮಾನಸಿಕ ಸ್ಥಿತಿಯ ಮೇಲೆ, ಇತಿಹಾಸದ ಮೇಲೆ, ಪೂರ್ವಜರಕೃಷಿಯ ಮೇಲೆ ದೇಶದಿಂದ ದೇಶಕ್ಕೆ ವಿಭಿನ್ನವಾಗಿರುತ್ತದೆ.

ಯುದ್ಧ ,ಕಲಹವೆಂದು ಒಂದರ ಮೇಲೆ ಮತ್ತೊಂದನ್ನು ಹೇರಬಹುದು.ಆಗ ಸ್ವಂತ ಮನೆಯನ್ನು ದರೋಡೆಯಿಂದ ರಕ್ಷಿಸುವಂತೆ ದೇಶವನ್ನು ರಕ್ಷಿಸಲೇ ಬೇಕಾಗುತ್ತದೆ. ಈಗಂತೂ ಮನೆ, ಸಂಸಾರವೆಂದುಯೋಚಿಸುವುದೇ ದೊಡ್ಡ ವಿಚಾರವಾಗಿದೆ. ಎಲ್ಲಾ ವಿಚಾರಗಳು ಕೂಡ ಸ್ವಂತಕ್ಕೆ ಕೇಂದ್ರವಾಗಿದ್ದು, ಅದರಾಚೆಗಿನ ಯೋಚನೆಗಳು ನಿರೀಕ್ಷೆಗೂ ನಿಲುಕದ್ದಾಗಿದೆ. ಕೇವಲ ತನಗೆ,ತನ್ನ ಮನೆಗೆ ಇಷ್ಟು ಮಹತ್ವಕೊಟ್ಟರೂ ನೆಮ್ಮದಿ, ಸಂತೃಪ್ತಿ ದೂರದ ಮರೀಚಿಕೆಯಾಗಿಯೇ ಇದೆ. ಜೀವನದ ಧ್ಯೇಯವೇ ಗೊಂದಲಮಯವಾಗಿರುವಾಗ ಆದರ್ಶಗಳ ಕಟ್ಟಿನಲ್ಲಿ ಸುಂದರ ಚಿತ್ರ ಬಿಡಿಸಿದ ಈ ವೀರನ ಬದುಕು ಒಂದುಹೊಸ ಚಿಂತನೆಯನ್ನು ಹುಟ್ಟು ಹಾಕುವುದಂತೂ ಸತ್ಯ.

ಪುಸ್ತಕದಲ್ಲಿ ಬೇಕಾದಷ್ಟು ವಿಷಯಗಳು ನಮಗೆ ಹೇಳಿಕೊಟ್ಟ ಇತಿಹಾಸಕ್ಕೆ ವಿರುದ್ಧ ಅನಿಸಬಹುದು. ಆದರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಿಂದ ಸ್ವತಂತ್ರೋತ್ತರ ಭಾರತದವರೆಗಿನ ಘಟನೆಗಳುಪ್ರಾಮಾಣಿಕವಾಗಿ ಇದರಲ್ಲಿ ಬಿಂಬಿತವಾಗಿದೆ. ಒಟ್ಟಿನಲ್ಲಿ ಮನಸ್ಸನ್ನು ಜಾಗೃತಗೊಳಿಸುವ,ಎಚ್ಚರಿಸುವ ಒಂದು ದೀಪದಂತೆ ಸಾವರಕರ ಅವರು ಗುರುವಾಗುತ್ತಾರೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!