ಅಂಕಣ

MOM ಗೆ ಮೊದಲ ಹುಟ್ಟು ಹಬ್ಬ

ಕಳೆದ ವರ್ಷ ಇದೇ ದಿನ, ಭಾರತಕ್ಕೆ ಭಾರತವೇ ಸಂಭ್ರಮಿಸಿತ್ತು, ಅಂತಹಾ ಕಾರಣವೂ ಇತ್ತು. ಇಸ್ರೋದ MOM (ಮಾರ್ಸ್ ಆರ್ಬಿಟರ್ ಮಿಷನ್), ಯಶಸ್ವಿಯಾಗಿ ಮಂಗಳನ ಕಕ್ಷೆ ಪ್ರವೇಶಿಸಿದ ದಿನವದು. ಸಂತಸಕ್ಕೆ ಮತ್ತಷ್ಟು ಪುಷ್ಟಿ ಕೊಟ್ಟ ವಿಷಯವೆಂದರೆ ಮಂಗಳನನ್ನು ತಲುಪಿದ ನಾಲ್ಕನೇ ರಾಷ್ಟ್ರವಾಗಿತ್ತು ಭಾರತ ಮಾತ್ರವಲ್ಲದೇ, ತನ್ನ ಪ್ರಥಮ ಪ್ರಯತ್ನದಲ್ಲೇ ಯಶಸ್ಸನ್ನು ಪಡೆದ ಪ್ರಥಮ ರಾಷ್ಟ್ರ ಭಾರತ. ಸಂಭ್ರಮಿಸಲು ಇದರಿಂದ ಹೆಚ್ಚಿನದ್ದೇನು ಬೇಕು?

ಮಂಗಳ ಯಾನದ ಹೆಜ್ಜೆ:

ಯೋಜನಾ ವೆಚ್ಚ ರೂ.450 ಕೋಟಿ
ಉಡಾವಣೆ ನವೆಂಬರ್ 5 – 2013
ನೌಕೆಯನ್ನು ಕಕ್ಷೆಗೆ ಸೇರಿಸಲು ಆರು ಹಂತಗಳು ನಡೆದಿದ್ದು ನವೆಂಬರ್ 7,8,9,11,12,16 – 2013
ಸೂರ್ಯನ ವಲಯವನ್ನು ಸೇರಿದ್ದು ಡಿಸೆಂಬರ್4
ಪಯಣದ ೧೦೦ನೇ ದಿನ ಫೆಬ್ರವರಿ 4-2014
ನೌಕೆ ನಿಗದಿತ ಪಡಿಸಿದ ದಾರಿಯಲ್ಲಿ ಸಾಗುವಂತೆ ಪಥ ಸರಿಪಡಿಸಿದ್ದು ಸೆಪ್ಟೆಂಬರ್ 22-2014
ಮಂಗಳನ ಕಕ್ಷೆಗೆ ಪ್ರವೇಶಿಸಿದ್ದು ಸೆಪ್ಟೆಂಬರ್ 24-2014
ಮಹತ್ವದ ಮಾಹಿತಿಗಳೊಂದಿಗೆ ಮಾಮ್ ಕಳುಹಿಸಿದ ಮಂಗಳನ ಅಟ್ಲಾಸ್ ಬಿಡುಗಡೆ ಹಾಗೂ ವರುಷದ ಹರುಷ ಸೆಪ್ಟೆಂಬರ್ 24-2015

ಜೂನ್ 15 ರಂದು ಭೂಮಿ ಮತ್ತು ಮಂಗಳ ಗ್ರಹದ ನಡುವೆ ಸೂರ್ಯ ಅಡ್ಡ ಬಂದು, ಇಸ್ರೋದ ಸಂಪರ್ಕದಿಂದ ತಪ್ಪಿಕೊಂಡಿತ್ತು. ಎಲ್ಲರಿಗೂ ಸ್ವಲ್ಪ ಭೀತಿಯನ್ನೂ ಉಂಟುಮಾಡಿತ್ತು, ಆದರೆ MOM ಎಲ್ಲವನ್ನೂ ಸರಿಪಡಿಸಿಕೊಂಡು ಎಲ್ಲವೂ ಸುಸೂತ್ರವಾಗಿ ಸಾಗಿತು.
ಇವೆಲ್ಲದರ ಕ್ರೆಡಿಟ್ಸ್ ನಮ್ಮ ವಿಜ್ಞಾನಿಗಳಿಗೇ ಸಲ್ಲುತ್ತದೆ. ಇಂದು ಮೊದಲನೆಯ ವರುಷವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇಸ್ರೋ ತಂಡ ಕೆಂಪು ಗ್ರಹದ ಹಲವು ಚಿತ್ರಗಳನ್ನು ಹೊಂದಿದ ಅಟ್ಲಾಸ್ ಅನ್ನು ಬಿಡುಗಡೆ ಮಾಡಿದೆ.

image-2
ಅಂದ ಹಾಗೆ ಮಂಗಳನ ಅಟ್ಲಾಸ್  ಇಲ್ಲಿ ಸಿಗತ್ತೆ ನೋಡಿ:  ಮಂಗಳನ ಅಟ್ಲಾಸ್

 

image-3

image-4

image-5

ನಮ್ಮ ಸನಿಹದವರಿಗೆ, ಸೆಲೆಬ್ರೆಟಿಗಳಿಗೆ ಮರೆಯದೇ ಬರ್ತ್’ಡೇ ವಿಶ್ ಮಾಡ್ತೇವಂತೆ, ದೇಶಕ್ಕೆ ದೇಶವೇ ಸಂಭ್ರಮಿಸಿದ, ಮತ್ತು ವಿಶ್ವದಲ್ಲಿ ಭಾರತ ತನ್ನ ಹೆಜ್ಜೆಯನ್ನು ದಿಟ್ಟವಾಗಿ ಗುರುತಿಕೊಂಡ ದಿನವನ್ನು ಮತ್ತು ಇದನ್ನು ಸಾಧ್ಯಮಾಡಿದ ಇಸ್ರೋ ತಂಡಕ್ಕೆ ವಿಶ್ ಮಾಡದಿದ್ದರೆ ಹೇಗೆ ಹೇಳಿ?

ಇಸ್ರೋದ ಹಿಂದಿನ ರೂವಾರಿ, 55 ವರ್ಷಗಳ ಹಿಂದೆ ಇಂತದ್ದೊಂದು ಭಾರತಕ್ಕೆ ಬೇಕೆ ಬೇಕು ಎಂದು ಮನಗಂಡ ವಿಕ್ರಮ್ ಸಾರಾಭಾಯಿ ಅವರನ್ನೂ ನೆನಪಿಸಿಕೊಳ್ಳುತ್ತಾ,
ಹ್ಯಾಪಿ ಬರ್ತ್’ಡೇ ಮಾಮ್ 🙂
ಆಲ್ ದಿ ಬೆಸ್ಟ್ ಟೀಮ್ ಇಸ್ರೋ 🙂

Facebook ಕಾಮೆಂಟ್ಸ್

ಲೇಖಕರ ಕುರಿತು

Readoo Staff

Tailored news content, just for you.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!