ಕಾಲೇಜನಲ್ಲಿ ಕಂಡೆನು ಸುಂದರವಾದ ಕನ್ಯೆ,
ಅವಳ ಹೃದಯ ಕದಿಯಲು ಶುರುಮಾಡಿದೆ ಮೊನ್ನೆ.
ಹೋದೆ ಅವಳ ಬೆನ್ನ ಹಿಂದೆ ಗುಲಾಬಿಯ ಜೊತೆ,
ಮುಂದೇನಾಯಿತು ಕೇಳಬೇಡಿ ನನ್ನ ವ್ಯಥೆ.
ಸೋತು ಹೋದೆ ನೋಡ-ನೋಡುತ್ತಾ ಅವಳ ವಯ್ಯಾರ,
ಬಳಿಗೆ ಬಂದು ಕೇಳಿಯೇ ಬಿಟ್ಟಳು ನೀನ್ಯಾರ?
ಹೇಳಲು ಚಡಪಡಿಸಿದೆ,
ಮೌನವ ಅಲಂಕರಿಸಿದೆ.
ಮತ್ತೆ ಸುತ್ತಿದೆ ಅವಳ ಹಿಂದೆ ಹಿಂದೆ,
ಅವಳು ಹೋಗುತ್ತಿದಾಗ ನನ್ನ ಮುಂದೆ ಮುಂದೆ.
ಕ್ಯಾಂಟೀನ್ ನಲ್ಲಿ ಕಾದು ಕುಳಿತೆ ಅವಳಿಗಾಗಿ,
ನನ್ನೆದುರೇ ಹಾದು ಹೋದಳು ಅವಳು ಇನ್ನೊಬ್ಬನ ಜೊತೆಯಾಗಿ.
ಹೃದಯ ಗಾಜಿನಂತೆ ಪಳ್ ಎಂದಿತು,
ಮನಸ್ಸಿನೊಳಗೆ ಅವಳ ಕಾಲ್ಗೆಜ್ಜೆ ಚಲ್ ಚಲ್ ಎನ್ನುತಿತ್ತು.
ಆಗಿದ್ದನೆಲ್ಲ ಮರೆತು ಕ್ಲಾಸಿಗೆ ಹೋಗಿ ಕುಳಿತೆ,
ಸವಾಲೆಸೆಯಲು ಹೊರಟೆ ಒಬ್ಬಂಟಿತನಕೆ.
ಮತ್ತೆ ಕುಯ್ಯಿಗುಟ್ಟಿತು ಆ ಗೆಜ್ಜೆಯ ಆರ್ಥನಾದ,
ನನ್ನ ಕಣ್ಣ ಮುಂದೆ ಕಾಣಿಸಿತು ಆಕೆಯ ಪಾದ,
ತಲೆ ಎತ್ತಿ ನೋಡಿದೆ ಆಕೆಯ ಮುಖವನು,
ಪಕ್ಕದವ ಹೇಳಿದ ಜಾಸ್ತಿ ನೋಡಬೇಡ ಆಕೆಯ ನಗುವನು.
ಆಗಲೇ ಗೊತ್ತಾಗಿದ್ದು ಈ ಕಥಾನಾಯಕಿ ಬೇರಾರು ಅಲ್ಲ,
ನನ್ನಯ ತರಗತಿಯ ಹೊಸ ಶಿಕ್ಷಕಿ ಎಂದು.
ಯಪ್ಪಾ !
ಗುರುವೇ ಶಂಭು ಲಿಂಗಾ!!
Facebook ಕಾಮೆಂಟ್ಸ್