ಅಂಕಣ

ಕಾನೂನು ಮತ್ತು ನ್ಯಾಯಾಲಯ

“ಕಾನೂನು ಮತ್ತು ನ್ಯಾಯಾಲಯ” ಇವೆರಡು ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮ ರಕ್ಷಣೆಗೆ ನಾವೇ ಮಾಡಿಕೊಂಡಿರುವಂತ ಒಂದು ಕಟ್ಟುಪಾಡು. ಇದರ ಬತ್ತಳಿಕೆಯಲ್ಲಿ ಹಲವಾರು ಅಸ್ತ್ರಗಳಿವೆ. ಆಯಾ ಸಂಧರ್ಬಕ್ಕೆ ಅನುಗುಣವಾಗಿ ಅಪರಾದಕ್ಕೆ ತಕ್ಕಂತೆ ಅಸ್ತ್ರಗಳನ್ನು ಬಳಸಿ ಅಪರಾಧ ಹಾಗು ಅಪರಾಧಿಗಳನ್ನು ಹತ್ತಿಕ್ಕುವ ಪ್ರಯತ್ನ ಎಡೆಬಿಡದೆ ನಡೆಯುತ್ತಿದೆ. ಇದರಲ್ಲಿ ಒಮ್ಮೆ ಸಫಲವಾದರೆ ಅನೇಕ ಬಾರಿ ವಿಫಲವುಗಳು ಎದುರಾಗಿವೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಇರುವ ಅಸ್ತ್ರಗಳ ಸಂಖ್ಯೆ, ಅಸ್ತ್ರಗಳ ಶಕ್ತಿ, ಅಸ್ತ್ರಗಳನ್ನು ಬಳಸುವ ರೀತಿ, ಅಸ್ತ್ರಗಳ ಬಗ್ಗೆ ಇರುವ ಪಾಂಡಿತ್ಯ ಹೀಗೆ ಹಲವಾರು. ಹೌದು ಇಲ್ಲಿ ನಾನು ಹೇಳಲು ಹೊರಟಿರುವುದು ನಮ್ಮ ದೇಶದ ನ್ಯಾಯಾಂಗದ ಬಗ್ಗೆ. ನಾವು ಅತೀಯಾಗಿ ಗೌರವಿಸುವ ಈ ಸಂವಿಧಾನದ ಒಂದು ಉತ್ತುಂಗದ ಸಂಸ್ಥೆಯ ಬಗ್ಗೆ.

[dropcap]ಸ್ವಾ[/dropcap]ತಂತ್ರ್ಯ ಅನಂತರ ಹಂತ ಹಂತವಾಗಿ ಬೆಳೆದ ದೇಶವನ್ನು ಅಪರಾದ ಮುಕ್ತವಾಗಿಸಲು ತಜ್ಞರು IPC, Cr PC ಹೀಗೆ  ವಿವಿಧ section ಎಂಬ ಅಸ್ತ್ರಗಳನ್ನು ಕಾನೂನು ಎಂಬ ಬತ್ತಳಿಕೆಗೆ  ತುಂಬಿದರು. ಅದು ಅಂದು ಬಹಳ ಶಕ್ತಿಯುತವಾಗಿತ್ತೋ ಏನೋ ಗೊತ್ತಿಲ್ಲ ಆದರೆ ಇಂದು ಆ ಅಸ್ತ್ರಗಳು ಅಪರಾದವನ್ನು ತಡೆಯಲು ಯಾವುದೇ ಛಾಪನ್ನು ಮೂಡಿಸುತ್ತಿಲ್ಲ. ಕಾಲಕ್ರಮೇಣ ಅಪರಾದದ ವ್ಯಾಪ್ತಿ, ರೀತಿ ಹಾಗು ಲಕ್ಷಣಗಳು ಬದಲಾಗಿವೆ. ಹೀಗೆ ಅಪರಾಧಿಗಳ ಕಾರ್ಯವೈಖರಿ ಬದಲಾಗಿದೆ , ಬುದ್ಧಿವಂತಿಕೆ ಹಾಗು ಕಾನೂನಿನಲ್ಲಿ ಇರುವ ತೊಡಕುಗಳ ಬಗ್ಗೆ ತಿಳುವಳಿಕೆ ಕೂಡ ಹೆಚ್ಚಾಗಿದೆ. ಇದರಿಂದ ಸಹಜವಾಗಿ ಕಾನೂನು ಎಂಬ ಅಸ್ತ್ರ ತನ್ನ ಶಕ್ತಿಯನ್ನು ಕಳೆದುಕೊಂಡಿದೆ ಹಾಗು ಜನರಿಗೂ ಇದರ ಬಗ್ಗೆ ಭಯವಿಲ್ಲದಂತಾಗಿದೆ. ಇದಕೆಲ್ಲ ಯಾರು ಹೊಣೆ, ಏನು ಕಾರಣ ಎಂದು ಹುಡುಕಿದರೆ  ನಮಗೆ ಮೇಲ್ನೋಟಕ್ಕೆ ಬೇಕಾದಷ್ಟು ಕಾಣಬಹುದು, ಆದರೆ ನಾವು ಮುಖ್ಯ ಕಾರಣ (root cause) ಗಳನ್ನು ಗುರುತಿಸಿ ಅವುಗಳನ್ನು ತಿದ್ದುವ ಕೆಲಸ ಅತ್ಯಂತ ಬೇಗ ಮಾಡಬೇಕಿದೆ .

ಮೇಲ್ನೋಟಕ್ಕೆ ಕಂಡು ಬರುವ ಕಾರಣಗಳು:

1) ಹಳೆಯ ಮತ್ತು ಹಳಸಿದ ಕಾನೂನು.

2) ಕಳೆಗುಂದಿದ ಶಿಕ್ಷೆಯ ಪ್ರಭಾವ

3) ನಿಧಾನಗತಿಯ  ನ್ಯಾಯಾಂಗ ವ್ಯವಸ್ಥೆ

4) ಸಮಾಜದಲ್ಲಿನ ಭ್ರಷ್ಟಾಚಾರ

5) ರಾಜಕಾರಣಿಗಳ ಹಸ್ತಕ್ಷೇಪ ಮತ್ತು ಪ್ರಭಾವ

6) ಹಣಕ್ಕಾಗಿ ಎಂತವರ ಪರವಾದರು ವಾದ ಮಂಡಿಸಲು ಸಿದ್ಧರಿರುವ ವಕೀಲರು

7) ವಿವಿಧ ಸರ್ಕಾರೀ ಇಲಾಖೆಗಳಲ್ಲಿರುವ ದೌರ್ಜನ್ಯ ಮತ್ತು ದಬ್ಬಾಳಿಕೆ

8) ವಿಧ್ಯೆ ಇಲ್ಲದಿರುವುದು

9) ಸಿನಿಮಾ ಮತ್ತು ದಾರವಾಹಿಗಳಲ್ಲಿ ವೈಭವೀಕರಿಸುವ ಕೌರ್ಯ ಮತ್ತು ಸಮಾಜ ಘಾತುಕ ಅಂಶಗಳು

10) ಸಮಾಜದಲ್ಲಿ ಹೆಚ್ಚುತ್ತಿರುವ ಅನ್ಯರ ಬಗ್ಗೆ ನಮ್ಮ ನಿರ್ಲಕ್ಸ್ಯ

ಹೀಗೆ ಪ್ರಮುಖ ಕಾರಣಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಆದರೆ ಇದರಲ್ಲಿ ಮುಖ್ಯ ಹಾಗು ಬಹು ಮುಖ್ಯ ಕಾರಣಗಳ ಬೆನ್ನು ಹತ್ತಿ ಹೊರಟರೆ ನಮಗೆ ಸಿಗುವುದು ಕೇವಲ ಎರಡು ಇಲ್ಲ ಮೂರು ಮಾತ್ರ. ನನ್ನ ಪ್ರಕಾರ ಅದಕ್ಕೆ ಸ್ಥಾನಗಳನ್ನ ಕೊಟ್ಟರೆ :

3ನೇ ಸ್ಥಾನ: “ನಾನು” ಎಂಬ ಭಾವ. ಬೇರೆಯವರಿಗೆ ಏನಾದರು ಸರಿ ನಾನು ಚೆನ್ನಾಗಿರಬೇಕು, ಅನ್ಯರಿಗೆ ಆದ ಅನ್ಯಾಯ ನನಗಲ್ಲ. ನನಗೆ ದುಡ್ಡು ಕೊಟ್ಟವರಿಗೆ ನನ್ನ ಮತ. ಇದು ದೇಶದ ಸಮಸ್ಯೆ ನನ್ನದಲ್ಲ. ನಾನು ನನ್ನ ಮನೆ ನನ್ನ ಮಕ್ಕಳು ನನ್ನ ಹೆಂಡತಿ ನನ್ನ ಕೆಲಸ ನನ್ನ ದುಡ್ಡು…..ಹೀಗೆ ಎಲ್ಲಿಯ ತನಕ ನಾನು ಎಂಬ ಅಹಂ ಭಾವ ವಿರುವುದೋ ಅಲ್ಲಿಯ ತನಕ “ನಮ್ಮ” ಎಂಬ ಪದಕ್ಕೆ ಜಾಗವಿಲ್ಲ. ಎಲ್ಲರಲ್ಲಿ ನಾನು ಒಬ್ಬ ಎಂಬ ಮನೋಭಾವನೆಗೆ ದಾರಿ ಸಿಗುವುದಿಲ್ಲ.

2ನೇ ಸ್ಥಾನ: “ಬಂಡವಾಳ ಶಾಹಿ ಪರಿಸರ” ಮಿತಿ ಮೀರಿದ ಹಣದ ಹೂಡಿಕೆ ಹಾಗು ಲಾಭ ಗಳಿಕೆಯ ಹುನ್ನಾರ. ಜನರಿಗೆ ಮನೋರಂಜನೆ ನೀಡುವ ನೆಪದಲ್ಲಿ ಸಮಾಜ ಘಾತುಕ ಪ್ರಸಂಗಗಳನ್ನು ಸಿನಿಮಾದಲ್ಲಿ ಹಾಗು ಟೀವಿ ವಾಹಿಗಳಲ್ಲಿ ವೈಭವೀಕರಿಸಿ ತೋರಿಸುವುದು ಹಾಗು ಜನರಲ್ಲಿ ಆ ಕ್ರೌರ್ಯದ ಕೆಲಸ ಮಾಡಿದಾಗ ಆತ ನಿಜವಾದ ಹೀರೋ ಎಂಬ ಭಾವನೆ ಮೂಡಿಸುವುದು. ವೇಗದ ಪ್ರಪಂಚದಲ್ಲಿ ಒಬ್ಬರಿಗೊಬ್ಬರ ಸಮಯ ಮೀಸಲು ಇಲ್ಲದಿರುವುದು.

1ನೇ ಸ್ಥಾನ: “ರಾಜಕಾರಣ” ಮೇಲೆ ಉಲ್ಲೇಖಿಸಿರುವ ಎಲ್ಲದರ ದುರ್ಲಾಭವನ್ನು ಪಡೆಯುತ್ತಿರುವುದು ರಾಜಕಾರಣಿಗಳು. ” ಸಭ್ಯ ರಾಜಕಾರಣ ಅಸಾಧ್ಯ ರಾಜಕಾರಣ” ವೆಂದು ಮಾಡಿದ್ದರೆ. ನಮ್ಮಿಂದ ಚುನಾಯಿತರಾಗಿ ತಮ್ಮ ರಕ್ಷಣೆಗಾಗಿ ಹಳೆಯ ಹಲ್ಲಿಲ್ಲದ ಕಾನೂನನ್ನು ಕಾಪಾಡುತ್ತಾರೆ. ಹೊಸ, ಚೈತನ್ಯ ತುಂಬಿರುವ, ಶಕ್ತಿಯುತವಾಗಿರುವ ಕಾನೂನು ಅವರಿಗೆ ಬೇಡವಾಗಿದೆ. ಎಲ್ಲದಕ್ಕೂ ಮೊಸಳೆ ಕಣ್ಣಿರು ಸುರಿಸಿ ನಮ್ಮ ದುಃಖದಲ್ಲಿ ಬಾಗಿಗಳೆಂದು ನಂಬಿಸುತ್ತಾರೆ. ಈ ಕಾರ್ಯ ಆ ಪಕ್ಷ ಈ ಪಕ್ಷ ವೆಂದು ಇಲ್ಲದೆ ಎಲ್ಲ ಪಕ್ಷದಲ್ಲಿಯೂ ನಡೆಯುತ್ತಿದೆ.

ಇದಕೆಲ್ಲ ಕಾರಣ ಶೇ 80 ರಷ್ಟು ರಾಜಕಾರಣಿಗಳು ಕ್ರಿಮಿನಲ್ ಹಿನ್ನಲೆಯಿಂದ ಬಂದಿರುತ್ತಾರೆ. ಚುನಾವಣೆಯಲ್ಲಿ ಬೇಕಾಬಿಟ್ಟಿ ಹಣವನ್ನು ಚೆಲ್ಲಿ ಆರಿಸಿ ಬಂದಿರುತ್ತಾರೆ, ಅವರಿಗೆ ಅವರ ಹಣವನ್ನು ಮರಳಿ ಗಳಿಸಬೇಕೆಂಬ ಆಸೆ ಇರುತ್ತದಯೇ ಹೊರತು ಸಮಾಜದ ಉದ್ದಾರವಲ್ಲ. ಹಣ ಕೊಡದಿದ್ದರೆ ಶ್ರೀ ಸಾಮಾನ್ಯ ಚುನಾವಣೆಗೆ ಸ್ಪರ್ಧಿಸಲಾರ ಹಾಗು ಒಂದು ವೇಳೆ ಸ್ಪರ್ಧಿಸಿದರೆ ಮತವನ್ನು ಗಳಿಸಲಾರ.

ಈ ಪರಿಸ್ಥಿತಿಯಲ್ಲಿ ಉತ್ತಮರು ರಾಜಕಾರಣದಿಂದ ದೂರ ಸರಿಯುತ್ತ ಸಮಾಜಘಾತುಕರಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಕಾನೂನು ರೂಪಿಸುವವರೇ ಹೀಗೆ ಇರುವಾಗ, ಇವರಿಂದ ಯಾವ ಹಳೆಯ ಕಾನೂನು ತಾನೇ ಸರಿ ಹೋಗುತ್ತದೆ? ಯಾವ ಶಿಕ್ಷೆಗೆ ತ್ವರಿತ ಗತಿಯಲ್ಲಿ ನ್ಯಾಯ ಸಿಗುತ್ತದೆ? ಅಪರಾದ ಮಾಡುವವರ ಬೆನ್ನೆಲುಬಾಗಿ ನಿಲ್ಲುವ ಇಂತ ತುಚ್ಚ ರಾಜಕಾರಣಿಗಳು ಇರುವಾಗ ಯಾವ ನರನಿಗೆ ಕಾನೂನಿನ ಬಗ್ಗೆ ಭಯ ಹಾಗು ಗೌರವವಿರುತ್ತದೆ?

ಮೇಲೆ ಹೇಳಿರುವ ಕಾರಣಗಳಿಂದ ಸಮಾಜದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹಿರಿಯ ನಾಗರಿಕರ ಮೇಲೆ ಶಕ್ತಿ ಪ್ರಯೋಗ, ಡಕಾಯಿತಿ, ಲೂಟಿ ಹಾಗು ಅಪಹರಣದ ಪ್ರಕರಣಗಳು ಹೆಚ್ಚುತ್ತಿವೆ.

ಇವೆಲ್ಲವನ್ನೂ ಸರಿ ದಾರಿಗೆ ತರಲು ನಡೆಯುತ್ತಿರುವ ಹೋರಾಟ ಒಂದೆಡೆಯಾದರೆ ಮತ್ತೊಂದೆಡೆ ನಾವು ಸ್ವತಃ ನಮನ್ನು ನಾವು ಮೊದಲು ಸರಿ ಹೋಗಬೇಕು. ಅನ್ಯರ ಕಷ್ಟಕ್ಕೆ ಸ್ಪಂಧಿಸಬೇಕು, ಕೆಟ್ಟ ಅಭ್ಯರ್ಥಿಗಳು ಎಷ್ಟೇ ಹಣದ ಆಮಿಷ ಒಡ್ಡಿದರು ಅವರಿಗೆ ಮತವನ್ನು ಹಾಕಬಾರದು. ಉತ್ತಮರನ್ನು ಹುಡುಕಿ ಅವರನ್ನು ಕಾನೂನಿನ ರಕ್ಷಕರನ್ನಗಿ ಆರಿಸಿ ಕಳಿಸಬೇಕು. ಉತ್ತಮ ಅಭ್ಯರ್ಥಿ ನಮಗೆ ಮತ ಹಾಕಲು ಹಣ ಕೊಡದಿರಬಹುದು ಆದರೆ ಸಮಾಜದಲ್ಲಿ ನೆಮ್ಮದಿಯಾಗಿ, ಧೈರ್ಯವಾಗಿ, ನ್ಯಾಯಯುತವಾಗಿ ಹಾಗು ಸ್ವಾಭಿಮಾನದಿಂದ ಬದುಕಲು ಅನುಕೂಲಕಾರಿ ವಾತಾವರಣವನ್ನು ನಿರ್ಮಿಸುವರು. ಇದೇ ತಾನೇ ನಾವು  ಕಾಣುತ್ತಿರುವ ರಾಮ ರಾಜ್ಯದ  ಕನಸು?

Rohith Simha

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!