ಕಥೆ

ಕಥೆ

ಕಾಮಿತ ಫಲದೇ …

ಆಗಿನ್ನೂ ನಾನು ಚಿಕ್ಕವ .ನಾನೇಕೆ ಹೀಗಿದ್ದೇನೆ ಎಂಬುದು ನನಗೆ ವಿಚಿತ್ರವೆನಿಸುತ್ತಿತ್ತು. ನಾನು ನೋಡಿದ ಯಾವ ಮನುಷ್ಯರಿಗೂ ಕೋಡಿರಲಿಲ್ಲ. ನನ್ನಪ್ಪ ವಿಂಭಾಡಕ ಮುನಿಗಳ ಬಳಿ ಹೋಗಿ ಪೆದ್ದು ಪೆದ್ದಾಗಿ ‘ ನಾನೇಕೆ ಹೀಗೆ? ‘ ಎಂದು ಕೇಳುತ್ತಿದ್ದೆ. ಅವರಾದರೂ ಹೇಗೆ ಹೇಳಿಯಾರು? ನಾನು ಸ್ನಾನ ಮಾಡುತ್ತಿದ್ದಾಗ ನನ್ನ ಮುಂದೆ ಊರ್ವಶಿ ಬಂದಳು, ಅವಳನ್ನು ನೋಡಿ ನಾನು...

ಕಥೆ ಕಾದಂಬರಿ

ಕರಾಳ ಗರ್ಭ ಭಾಗ -೧೨

ರಾತ್ರಿ ಮಲಗಿದ್ದರೂ ನಿದ್ದೆಹತ್ತಲಿಲ್ಲ. ಜಾನಿ ಮತ್ತು ಅವನ ಪ್ರಿಯತಮೆ ಶಾಂತಿಯ ಕೊಲೆಗಳು ನನ್ನ ಕಣ್ಣಿಗೆ ಕಟ್ಟಿದಂತಾಗಿ  “ನೀನು ನಮ್ಮನ್ನುಉಳಿಸಲು ಆಗುತ್ತಿರಲಿಲ್ಲವೇ’ ಎಂದು ಚುಚ್ಚಿ ಚುಚ್ಚಿ ಕೇಳಿದಂತಾಯಿತು. ಕಡೇ ಪಕ್ಷ ಅವರ ಕೊಲೆಗಾರನನ್ನಾದರೂ ನಾನು ಪತ್ತೆ ಹಚ್ಚಿ ಕಾನೂನಿಗೆ ಕೊಡಬೇಕೆಂಬ ಛಲ ಹುಟ್ಟಿತು. ಮುಂದಿನ ದಿನ ಬೆಳಿಗ್ಗೆ ನಾನು ಕಾಫಿ ತಿಂಡಿ...

ಕಥೆ

ಲಾಲಿಪಾಪ್

ಅದು ನಗರದ ಹೊರವಲಯದಲ್ಲಿದ್ದ ಐಷಾರಾಮಿ ಅಪಾರ್ಟ್ಮೆಂಟ್ ’ಸ್ಕೈ ಲೈನ್’. ಹೆಸರೇ ಸೂಚಿಸುವ೦ತೆ ಆಕಾಶದೆತ್ತರ ಎದ್ದು ನಿ೦ತಿತ್ತು. ಅದರ ಹತ್ತನೇ ಮಹಡಿಯ ಫ್ಲಾಟ್ ಒಂದರಲ್ಲಿ ವಾಸವಾಗಿದ್ದಳು ಕರುಣಾ. ಸಮಯ ಬೆಳಗ್ಗೆ ಎಂಟು ಗಂಟೆ ಕಳೆದು ಐದು ನಿಮಿಷ. ಗಂಡ ಇನ್ನೂ ರಾತ್ರಿ ಶಿಫ್ಟ್ ಮುಗಿಸಿ ಬರಬೇಕಷ್ಟೆ. ಕರುಣಾಳು ಬೆಳಗ್ಗಿನ ಶಿಫ್ಟ್ ಗೆ ಹೊರಡುತ್ತಿದ್ದಳು. ಗಂಡ, ಹೆಂಡತಿ ಇಬ್ಬರೂ...

ಕಥೆ

*ಸಿಂಗಪ್ಪಯ್ಯರ ಅಭ್ಯಂಜನ*

ಅದೊಂದು ಶರದೃತುವಿನ ದಿನ. ದೀಪಾವಳಿ ಕಳೆದು ಕೆಲದಿನಗಳಾಗಿತ್ತಷ್ಟೇ. ನೀಲಾಕಾಶದ ಮಧ್ಯೆ ಅಲ್ಲಲ್ಲಿ ಕಾಣುವ ಬೆಳ್ಳಗಿನ ಮೋಡಗಳು ಯಾವುದೋ ಗುರಿಯ ತಲುಪಲು ನಿರ್ಧರಿಸಿವೆಯೇನೋ ಎಂಬಂತೆ ಒಂದೇ ದಿಕ್ಕಿನಲ್ಲಿ ತೇಲಿ ಹೋಗುತ್ತಿತ್ತು. ಸಿಂಗಪ್ಪಯ್ಯ ಮೈಗೆ ಎಳ್ಳೆಣ್ಣೆ ಅಭ್ಯಂಜನ ಮಾಡಿಕೊಳ್ಳಲು ಎಣ್ಣೆ ಬಟ್ಟಲಿನ ಸಮೇತ ಮನೆಯ ಮುಂದಿನ ಅಂಗಳದ ತುದಿಯಲ್ಲಿರುವ ಅಡಕೆ ಬೇಯಿಸುವ ಹಂಡೆಯ ಬಳಿ...

ಕಥೆ ಕಾದಂಬರಿ

ಕರಾಳ ಗರ್ಭ ಭಾಗ – 11

ನಾನೆಂದೆ: “ ಆ..ಮತ್ತೆ ನಿಮ್ಮ ಈಗಿನ ಪತಿ ರಾಮನ್…ಅವರು?’ ನನ್ನತ್ತಲೇ ನೋಡುತ್ತಾ ರಚನಾ ನುಡಿದರು..”ನೀವೇನಾದರೂ ಇನ್ಸ್ಪೆಕ್ಟರ್ ಶ್ರೀನಿವಾಸನ್’ರವರ ಫೋಟೋ ನೋಡಿದ್ದಿದ್ದರೆ ಖಂಡಿತಾ ಹೋಲಿಕೆ ಹೇಳಿಬಿಡುತ್ತಿದ್ದಿರಿ, ನನ್ನ – ಮೃದುಲಾ ಬಗ್ಗೆ ಹಿಡಿದಿರಲ್ಲಾ ಹಾಗೆ!…ಶ್ರೀನಿವಾಸನ್’ರವರ ಮಗನೇ ನನ್ನ ಗಂಡ ರಾಮನ್!. ಅಪ್ಪನ ಮಾತಿಗೆ ಎದುರು ಹೇಳದೇ ನನ್ನ ಕುತ್ತಿಗೆಗೆ ಮುಂದಿನ...

ಕಾದಂಬರಿ

ಕರಾಳಗರ್ಭ ಭಾಗ- 10

೧೨ ಆಫೀಸಿಗೆ ಮರಳುತ್ತಲೇ ಕೂಲಾದ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತ ತಕ್ಷಣ, ಲೂಸಿ ” ಕಾಫಿ ಬೇಕಲ್ಲವೇ ?”ಎಂದಳು…ಅದಲ್ಲವೇ ಮಾತು! “ಕಾಫಿ ಕುಡಿದು ಯಾವುದೋ ಯುಗವೇ ಆಯಿತು..ಕೊಡು, ಕೊಡು …ಈ ತೂಕಡಿಸುವ ಮಿದುಳಿಗೆ ಚಾಲನೆ ಕೊಟ್ಟು ಬೇಗ ಈ ಕೇಸಿನ ಪರಿಹಾರ ಹುಡುಕೋಣಾ…” ಎಂದೆ “ ಇನ್ಯಾರಾದರೂ ಪ್ರಾಣ ಬಿಡುವ ಮುಂಚೆ ಅಂತಲೆ?” ಎಂದಳು ಕಾಫಿ ಬಗ್ಗಿಸುತ್ತಾ. “ಇನ್ಯಾರೋ ಅಲ್ಲಾ...

ಕಥೆ ಕಾದಂಬರಿ

ಕರಾಳಗರ್ಭ- 9

ನಾನು ಈ ರೀತಿ ಹೇಳಿದ್ದೆಲ್ಲಾ ಕೇಳಿ ಲೂಸಿ ತನ್ನ ಆಫೀಸಿನಲ್ಲಿ ಬಹಳೇ ಅಚ್ಚರಿಪಟ್ಟಳು.. “ ವಿಜಯ್, ನನಗನಿಸುವ ಮಟ್ಟಿಗೆ ನಾವು ಮಾಡಿರುವ ಪ್ರಗತಿ ಆಶಾದಾಯಕವಾಗಿಯೇ ಇದೆ..ಮುಂದೇನಾದರೂ ದಾರಿ ಹುಡುಕಿ ರಚನಾ ಸುಮಾರು ೧೬ ವರ್ಷ ತರುಣಿಯಾಗಿದ್ದಾಗ ಯಾವ ಯುವಕನೊಂದಿಗೆ ಸಂಬಂಧ ಬೆಳೆಸಿ ಗರ್ಭಿಣಿಯಾದಳು ತಿಳಿದುಕೊಳ್ಳಬೇಕು..ಅವಳಪ್ಪ ಅಮ್ಮ ಸುಲಭವಾಗಿ ಗರ್ಭಪಾತ ಮಾಡಿಸಿ ಅವರು ಈ...

ಕಥೆ

ಆ ಮಳೆಯ ರಾತ್ರಿ….!!

  ಮಳೆ ಜೋರಾಗಿ ಸುರಿಯತ್ತಿತ್ತು..!! ಪಳಕ್ಕನೆ ಮಿಂಚುವ ಮಿಂಚು, ಅದರ ಬೆನ್ನಿಗೆ ಗುಡುಗಿನ ಆರ್ಭಟ, ಗಾಳಿಯೂ ಅವರ ಜೊತೆ ಸೇರಿತ್ತು..ಒಂಥರಾ ಭಯಾನಕ ವಾತಾವರಣ..!!ಇದು ಇವತ್ತೇ ಪ್ರಳಯವಾಗುತ್ತೇನೋ ಎಂಬ ಭಯವನ್ನುಂಟು ಮಾಡುತ್ತಿತ್ತು…ಎಲ್ಲಿ ನೋಡಿದರಲ್ಲಿ ನೀರು..ರಸ್ತೆ ಕಾಣಿಸುತ್ತಿಲ್ಲ..!! ಮಂಗಳೂರಲ್ಲಿ, ರಿಲೇಷನ್ ಒಬ್ಬರ ಮದುವೆ ರಿಸೆಪ್ಷನ್ ಮುಗಿಸಿ ಆತುರಾತುರವಾಗಿ...

ಕಥೆ

ಕನಸು ನನಸಾದಾಗ….?!

ಸುಮಾರು ೩೫ ವರ್ಷಗಳ  ಹಿಂದಿನ ಮಾತು. ರೋಹಿತ್ ನ ಬಾಲ್ಯದ ದಿನಗಳವು. ಆ ದಿನಗಳಲ್ಲಿಯೇ ರೋಹಿತ್ ಗೆ ಬಾಹ್ಯಾಕಾಶ , ಆಕಾಶಕಾಯಗಳು, ಉಪಗ್ರಹಗಳು ಇವುಗಳ ಬಗ್ಗೆ ಅತ್ಯಂತ ಆಸಕ್ತಿ.  ಕರೆಂಟಿಲ್ಲದ ಆ ಕತ್ತಲ ರಾತ್ರಿಯಲ್ಲಿ ಆಕಾಶವನ್ನು ವೀಕ್ಷಿಸುವುದು ಒಂದು ಹವ್ಯಾಸವಾಗಿತ್ತು. ಸಪ್ತಋಷಿ ಮಂಡಲ, ಧ್ರುವ ನಕ್ಷತ್ರ,  ನಕ್ಷತ್ರ ಪುಂಜಗಳು, ಶುಕ್ರ, ಮಂಗಳ, ಗುರು ಗ್ರಹಗಳನ್ನು...

ಕಥೆ ಕಾದಂಬರಿ

ಕರಾಳಗರ್ಭ-8

“ನಾನು ವಿವರಿಸುತ್ತೇನೆ, ತಾಳಿ..ಮೂವತ್ತೈದು ವರ್ಷದ ಹಿಂದೆ ನಿಮ್ಮ ತಾಯಿ ಒಂದು ಹೆಣ್ಣು ಮಗುವನ್ನು ಹೆತ್ತು, ಅದನ್ನು ಬೇರೆ ದಂಪತಿಗಳಿಗೆ ಸಾಕಿಕೊಳ್ಳಲು ದತ್ತು ಕೊಟ್ಟರೆಂದು ನಮಗೆ ತಿಳಿದು ಬಂದಿದೆ..ಇದು ನಿಜವೆ?, ನಿಮಗೆ ಇದರ ಬಗ್ಗೆ ಏನು ಗೊತ್ತು ?”ಎಂದಳು ಅಕೆಯ ಮುಖ ತಕ್ಷಣವೆ ವಿವರ್ಣವಾಗಿ ತಮ್ಮ ಎದೆಯನ್ನು ಗಾಬರಿಯಿಂದ ಒತ್ತಿಕೊಂಡರು.  “ನಮ್ಮಮ್ಮ?, ನನ್ನ ತಂಗಿ...