ನವಂಬರ ತಿಂಗಳಲ್ಲಿ ನಾವು ನೆಟ್ಟ ಭತ್ತದ ಸಸಿ ತೆನೆಹೊತ್ತು ಕೊಯಿಲಿಗೆ ಸಿದ್ಧವಾಗಿರುತ್ತದೆ. ಭತ್ತ ನೆಡಲು ಗದ್ದೆಯನ್ನು ಹದ ಮಾಡುವುದು , ಅನಂತರ ಭತ್ತ ನೇಜಿ ನೆಡುವುದು, ನೀರು ನೋಡಿಕೊಳ್ಳ್ಳುವುದು, ಕಳೆ ನಿಯಂತ್ರಣ. ಹೀಗೆ ಭತ್ತ ಬೆಳೆಯಲು ಅನೇಕ ಶ್ರಮದಾಯಕ ಕೆಲಸಗಳಿವೆ (ಓದಿ ಶ್ರೀ ಎ.ಪಿ ಚಂದ್ರಶೇಖರರು ಬರೆದ – ಅನ್ನದ ಅರಿವು ಕೃತಿ). ಇವೆಲ್ಲಕ್ಕಿಂತ ತ್ರಾಸದಾಯಕ ಭತ್ತ...
ಪರಿಸರದ ನಾಡಿ ಬಾನಾಡಿ
ಕೃಷಿಕರೇಕೆ ಪಕ್ಷಿಗಳನ್ನು ಗಮನಿಸಬೇಕು?
ಆರು ತಿಂಗಳ ಹಿಂದೆ ನಾನು ನಮ್ಮ ಪಕ್ಕದ ತೋಟದಲ್ಲಿ ಗೂಡು ಮಾಡುತ್ತಿದ್ದ ಅಂಬರಕೀಚುಗದ (Ashy wood swallow) ಹಿಂದೆ ಬಿದ್ದೆ. ವಾರಕ್ಕೆ 3- 4 ದಿನದಂತೆ ಅದರ ಬಾಣಂತನವನ್ನು ಒಂದು ತಿಂಗಳ ಕಾಲ ದಾಖಲಿಸಿದ್ದೆ . ಆ ಕಾಲಾವಧಿಯಲ್ಲಿ ಕೀಚುಗವು ತನಗಾಗಿ ಮತ್ತು ತನ್ನ ಮಕ್ಕಳಿಗಾಗಿ ಎಂದು ಗಂಟೆಗೆ ಏನಿಲ್ಲವಾದರೂ ಸುಮಾರು 50 ಕೀಟಗಳನ್ನು ಹಿಡಿಯುತ್ತಿದ್ದುವು. ಕೀಟಗಳಲ್ಲೂ...
ಮಿಕ್ಸೆಡ್ ಹಂಟಿಂಗ್ ಪಾರ್ಟಿ– ಮಿಶ್ರ ಕೂಟ ಬೇಟೆ
ಬರ್ತ್ಡೇ ಪಾರ್ಟಿ, ಆನಿವರ್ಸರಿ ಪಾರ್ಟಿ, ಮದುವೆ ರಿಸೆಪ್ಶನ್ ಪಾರ್ಟಿ, ಬ್ಯಾಚುಲರ್ ಪಾರ್ಟಿ, ಫೇರ್ವೆಲ್ ಪಾರ್ಟಿ, ಹೀಗೆ ಅನೇಕ ಪಾರ್ಟಿಗಳು ನಿಮಗೆ ಗೊತ್ತಿರಬಹದು. ಇದೀಗ ನಿಮಗೆ ಪ್ರಕೃತಿಯಲ್ಲಿ ನಡೆಯುವ ಹೊಸದೊಂದು ಪಾರ್ಟಿಯನ್ನು ಪರಿಚಯಿಸುವೆ. ಅದು ನಮ್ಮ ಬಾನಾಡಿಗಳ ಪಾರ್ಟಿ. ಬಗೆ ಬಗೆಯ ಬಾನಾಡಿಗಳು ಆಡಿ, ಹಾಡಿ, ಹಬ್ಬ ಮಾಡುವ ಪಾರ್ಟಿ, ಇಂಗ್ಲೀಷ್ನಲ್ಲಿ mixed...
ಮೊದಲ ವಲಸಿಗ ಪೀಪಿ – 2
ಕಳೆದ ವಾರ : ಗದ್ದೆ ಗೊರವ ಚುಕ್ಕೆ ಗೊರವ wood sandpiper / spotted sandpiper (Tringa glareola) ಗದ್ದೆ ಗೊರವಕ್ಕಿಂತ ತುಸು ಎತ್ತರವಿರುವ ಇದು ಅದಕ್ಕಿಂತ ಸಪೂರ ಹೊರಮೈ ಹೊಂದಿದೆ. ಇವು ಗದ್ದೆ ಗೊರವಗಳಂತೆ ಒಂಟಿಯಾಗಿರುವುದಿಲ್ಲ. ಹೆಚ್ಚಾಗಿ ಎರಡರಿಂದ ಐದು ಪೀಪಿಗಳು ಒಟ್ಟಾಗಿರುತ್ತವೆ. ಒತ್ತಾದ ಬಿಳಿ ಗೀರುಗಳಿರುವ ಬೂದುಗಂದು ಮೇಲ್ಮೈ ; ತಿಳಿಗಂದು ಎದೆ...
ಮೊದಲ ವಲಸಿಗ – ಪೀಪಿ (SANDPIPER)
ಜುಲೈ ತಿಂಗಳಲ್ಲಿ ಬಿತ್ತಿದ ಭತ್ತದ ನೇಜಿ ಆಗಸ್ಟ್ ಹೊತ್ತಿಗೆ ನೆಡಲು ತಯಾರಾಗಿರುತ್ತದೆ. ಇದನ್ನು ಏಣೇಲು ಬೆಳೆ/ ಐನು ಫಸಲು ಎನ್ನುವರು. ನೆಟ್ಟ ಪೈರು ಶುರುವಿನಲ್ಲಿ ತುಸು ಬಾಡಿ ಒಂದು ವಾರದಲ್ಲಿ ಹಸಿರಾಗುತ್ತದೆ. ಇಂಥಾ ಗದ್ದೆ, ಕೆಸರು ಗದ್ದೆ , ಹಸಿರು ಗದ್ದೆ ಅನೇಕ ಜೀವ ಜಂತುಗಳಿಗೆ ಸೂರು. ವಿವಿಧ ಮೃದ್ವಂಗಿಗಳು (ನರ್ತೆ), ಕೀಟಗಳು, ಏಡಿಗಳು, ವಲ್ಕಳಗಳು, ಮಿಡತೆಗಳು...
ಎಲ್ಲ ಗಡಿಗಳ ಮೀರಿ ಹಕ್ಕಿಗಳು ತೋರಿ! – 2
ಇಲ್ಲಿಗೇ ಮುಗಿದಿಲ್ಲ, ವಲಸೆ ಹೋಗೋದು ಅಂದ್ರೆ ಸುಮ್ಮನೇ ಆಗತ್ತಾ? ನಾವು ಒಂದೆರಡು ದಿನದ ಟ್ರಿಪ್ ಹೋಗ್ಬೇಕು ಅಂದ್ರೆ ಎಷ್ಟೆಲ್ಲಾ ತಯಾರಿ ಮಾಡ್ಕೊಳ್ತೇವೆ, ಅದಕ್ಕಿಂತ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತವೆ ಹಕ್ಕಿಗಳ ಪ್ರಪಂಚ. ಅದೇನೆಂದು ಮುಂದಿನ ವಾರ ನೋಡಿ ಎನ್ನುವುದರೊಂದಿಗೆ ನಿಲ್ಲಿಸಿದ ಕಳೆದ ವಾರದ ಬರಹದ ಮುಂದುವರಿದ ಭಾಗ…. ಇದೂ ಓದಿ: ಎಲ್ಲ ಗಡಿಗಳ ಮೀರಿ...
ಎಲ್ಲ ಗಡಿಗಳ ಮೀರಿ ಹಕ್ಕಿಗಳು ತೋರಿ! – 1
ಸೆಪ್ಟ್ಂಬರ್ ತಿಂಗಳು ಮುಗಿದು ಅಕ್ಟೋಬರ್ ಪ್ರಾರಂಭವಾಯಿತೆಂದರೆ ಸಾಕು ಮನೆ ಸುತ್ತ ಮುತ್ತ ಹಕ್ಕಿ ಗಳ ಕಲರವ ಮೊದಲಿಗಿಂತ ತುಸು ಜಾಸ್ತಿ. ಅಕ್ಟೋಬರ್ ನವಂಬರದಲ್ಲಂತೂ ಇದು ದುಪ್ಪಟ್ಟು ! ಏಪ್ರಿಲಿನಿಂದ ಸೆಪ್ಟ್ಂಬರ್ ತಿಂಗಳವರೆಗೆ ಕೇಳದ ಅನೇಕ ಸ್ವರಗಳು ಕಿವಿಗಾಗ ಹೊಸ ಇಂಪು ಕೊಡುತ್ತವೆ! ಅದೇನು? ಮನೆಯಿಂದ ತುಸು ಹೊರ ಹೋಗಿ, ಆಗ ಕಾಣುವುದು ಪ್ರಕೃತಿಯ ವಿಸ್ಮಯ, ಆಕಾಶದ...