Author - ಶ್ರೀ ತಲಗೇರಿ

ಅಂಕಣ

‘ಸಂಜೆಗಡಲು’

        ….ಮಳಲ ಮೇಲೆ ಪ್ರೀತಿ,ಸಾವು ಮತ್ತು ನೆಳಲು…!           ಮುಸ್ಸಂಜೆಯ ಸಮಯ..ಬಾನ ತುಂಬೆಲ್ಲಾ ರಂಗುರಂಗಿನ ರಂಗವಲ್ಲಿ. ಒಂದೊಂದು ರೂಪದ ಒಂದೊಂದು ಚಿತ್ರಗಳೋ ಎಂಬಂತೆ ಮೋಡಗಳ ಹಾವಳಿ..ವಿವಿಧ ಬಣ್ಣಗಳ ಸಂಗಮದಿ ಸೃಷ್ಟಿ ರಚಿಸಿದ ಚಿತ್ರವೇ ಅದೆಂಥ ಮನೋಹರ. ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಬಣ್ಣಬಣ್ಣಗಳಲ್ಲೂ ಅದಾವ ಚಂಚಲತೆ?ಸೃಷ್ಟಿಯ ಕುಂಚದ ಹೊರಳಾಟಕ್ಕೆ...

ಕವಿತೆ

“ಸಂಜೆ”…

  ಸಂಜೆ ಆರೇಳರ ಸಮಯ.. ತಳ್ಳುಗಾಡಿಯವನ ಚಕ್ರದ ತುಂಬೆಲ್ಲಾ ಚಿತ್ರಿಸಿದ ಬಳ್ಳಿಗಳಿಗೆ ಅರಳುತ್ತವಂತೆ ಹೂಗಳು; ಅವನ ಕಾಲ್ಗಳ ಸದ್ದಿಗೆ.. ನೆರಳು ಕರಗುವ ಕ್ಷಣದಿ ಗರಿ ಬಿಚ್ಚಲೆಂದೇ ಕಾದಿರುವ ಕನಸುಗಳ ಸರದಿ… ತೇಲಿ ಬಿಟ್ಟ ಹಿಟ್ಟಿನುಂಡೆ ಮೈಬಿಚ್ಚಿಕೊಳ್ಳುತ್ತದೆ ಉಷ್ಣತೆಗೆ ಎಣ್ಣೆಯ ಕಮಟು ವಾಸನೆಯ ಅಭ್ಯಂಜನಕೆ ನಾಸಿಕದ ರೋಮಗಳ ತಳಮಳ.. ಗಾಳಿಗೀಗ ತುಂಬು...

ಕವಿತೆ

ಬೆಳಕು ಮಾರಾಟಕ್ಕಿದೆ…

ಮೊನ್ನೆಯಷ್ಟೇ, ಮನೆಯ ಛಾವಣಿಯಲ್ಲಿ ಸೋರುತ್ತಿದ್ದ ಬೆಳಕ ಬೊಗಸೆಯಲಿ ಹಿಡಿದು ಗೋದಾಮಿನಲಿ ತುಂಬಿಟ್ಟಿದ್ದೇನೆ.. ತಪ್ಪಿಸಿಕೊಳ್ಳಬಾರದೆಂದು ಕಿಟಕಿ ಬಾಗಿಲುಗಳ ಮುಚ್ಚಿ ಅಗಳಿ ಓಡಾಡದಂತೆ ಒಂದೆರಡು ಬೀಗ ಜಡಿದಿದ್ದೇನೆ; ಕಾಣೆಯಾಗಿದೆ ಬೀಗದ ಕೈ… ಭೂಮಿ ಬಾನು ದಿಗಂತದಲಿ ಸೇರುತ್ತವೆ ಅಂದುಕೊಂಡ ತಪ್ತ ಸೂರ್ಯನ ಮೈಯಿಂದೊಸರಿದ ಬೆವರ ಹನಿಗಳನ್ನ ಶೀಷೆಯಲಿ ಶೇಖರಿಸಿ ಮುಚ್ಚಳ...

ಅಂಕಣ

“ಜಾಲ”… …ನೆಪಕ್ಕೆ ಪ್ರೇಮದ ಲೇಪನ…

“ಏ ಪ್ರಭಾ, ವಿಷ್ಯ ಗೊತ್ತಾಯ್ತಾ? ಕಮಲಕ್ಕನ್ ಮಗ್ಳು ನೇಣಾಕ್ಕೊಂಡ್ಬಿಟ್ಳಂತೆ, ಮದ್ವೇನೇ ಆಗಿರ್ಲಿಲ್ಲಾ, ಆಗ್ಲೇ ಗರ್ಭಿಣಿ ಬೇರೆ ಆಗ್ಬಿಟ್ಟಿದ್ಲಂತೆ..”.. ” ಹೇ ಶಶಿ, ಮೊನ್ನೆ ಮೊನ್ನೆ ನಮ್ ಕಣ್ಮುಂದೆ ದೊಡ್ಡಾದ್ ಹುಡ್ಗಿ ಶಮಿತಾ ವಿಷ ತೊಗೊಂಡ್ಬಿಟ್ಳಂತೆ”… ಹೀಗೇ ಹೀಗೇ, ಈ ಥರದ ಎಷ್ಟೋ ವಿಷಯಗಳನ್ನ ಆಗಾಗ ಕೇಳ್ತಿರ್ತೀವಿ...

ಅಂಕಣ

ಮುರುಕು ಸ್ವಪ್ನ ಬಿಂಬ 2

ಮುರುಕು ಸ್ವಪ್ನ ಬಿಂಬ 1 ಅರವಿಂದರಾಯರು ಸಿದ್ದಾರ್ಥ ಬರುತ್ತಾನಂತೆ ಅಂತ ಹೇಳುತ್ತಾರೆ. ಸಾರಿಕಾ ನಿಟ್ಟುಸಿರುಬಿಡುತ್ತಾಳೆ. ಸಿದ್ದಾರ್ಥ ವಿಮಾನದಲ್ಲಿ ಬರುತ್ತಾನೆ. ಮನೆಗೆ ಬರುವಾಗ ಸಂಜೆ ಸುಮಾರು ೫ ಗಂಟೆ. ಮನೆಯಲ್ಲಿ ಬೆಳಿಗ್ಗೆಯಿಂದ ಯಾರೂ ಅನ್ನಾಹಾರ ಸೇವಿಸಿಲ್ಲ. ಎಲ್ಲರೂ ಆತನ ಬರುವಿಕೆಗಾಗಿ ಕಾಯುತ್ತಲೇ ಇದ್ದರು. ಸಿದ್ದಾರ್ಥ ಮನೆ ಬಾಗಿಲಿಗೆ ಬಂದಿಳಿದ. ಆತ...

ಅಂಕಣ

ಮುರುಕು ಸ್ವಪ್ನ ಬಿಂಬ….

…ಬಿಡುಗಡೆಗೆ ಹಂಬಲಿಸುತಿಹ ಅಂತರ್ಮುಖಿಯ ನಭ…. ಮೌನ…ಎದೆ ಕರಗಿಸುವ ಮೌನ..ಮರುಕ್ಷಣ ರಕ್ತಹೆಪ್ಪುಗಟ್ಟುವ ಆಕ್ರಂದನ..ಹೃದಯ ಮಿಡಿವ ಮೃದು ತಂಗಾಳಿಯಲ್ಲಿ ಬಿರುಗಾಳಿಯ ಭೋರ್ಗರೆತದ ಝೇಂಕಾರವೇಕೆ? ನಂದಗೋಕುಲದಂತಾಗಬೇಕಿದ್ದ ಮನೆಯ ನಂದಾದೀಪ ನಂದಿದ್ದೇಕೆ?ನೆಲಕ್ಕೆ ಏನೋ ಬಡಿದಂತೆ ಸದ್ದು..ಕಿಟಾರನೆ ಕಿರುಚಿಕೊಂಡಿದ್ದಾರೆ ಯಾರೋ! ದೇವರ ಕೋಣೆಯೊಳಗಿಂದ...

ಅಂಕಣ

ಬದಲಾಗೋಣ.. ಒಂದಿಷ್ಟು…

ಈ ವಿಷಯವನ್ನ ಹೀಗೇ ಶುರು ಮಾಡುತ್ತೇನೆ.. “ರಾಮ್ ಪ್ರಸಾದ್ ಬಿಸ್ಮಿಲ್ಲಾ ಕಾಕೋರಿ ಮೊಕದ್ದಮೆಯಲ್ಲಿ ಗಲ್ಲು ಶಿಕ್ಷೆಗೊಳಪಡುತ್ತಾನೆ. ಗಲ್ಲೀಗ್ ಹೋಗೋದಿಕ್ಕೂ ಮುಂಚೆ ಅವನ ತಾಯಿ ಅವನನ್ನ ನೋಡಬೇಕು ಅಂತ ಜೈಲಿಗೆ ಬರ್ತಾಳೆ. ಅಮ್ಮ ಬರ್ತಿದ್ದಾಳೆ ಅನ್ನೋ ಸುದ್ದಿ ಕೇಳೇ ಅವನ ಕಣ್ಣು ಒದ್ದೆಯಾಗತ್ತೆ.. ತಾಯಿ ಎದುರಿಗೆ ಬಂದು ನಿಂತಾಗ, ಕಂಗಳಿಂದ ನೀರಿನ ಧಾರೆ. ಆಗ ಅವನ ತಾಯಿ...

ಕವಿತೆ

ಮತ್ತೆ ಕಾದಳು ಶಬರಿ…

ಪುಟ್ಟ ಗುಡಿಸಲ ಪರಿಧಿಯೊಳಗೆ ನಿತ್ಯ ಮೌನದ ಗಾನದೊಳಗೆ ತನ್ನ ಅರಿವಿನ ದಿಟ್ಟಿಯೊಳಗೆ ಮತ್ತೆ ಕಾದಳು ಶಬರಿ.. ಘಂಟೆ ತಮಟೆಯ ನಾದವಿರದೆ ಯಾವ ಧರ್ಮದ ಬೋಧವಿರದೆ ಗುಡಿಯ ಹೊಸಿಲ ದಾಟಿ ಬರದೆ ಮತ್ತೆ ಕಾದಳು ಶಬರಿ… ಎಲ್ಲ ಬೆಡಗಿನ ಸೋಗ ತೊರೆದು ಜಗದ ಸೊಗಡನು ಬರೆದಳು.. ಮನದಿ ಆರದ ಹಣತೆ ಬೆಳಗಿ ಮತ್ತೆ ಕಾದಳು ಶಬರಿ.. ರಾಮನೆನುವ ರೂಪ ನೆನೆದು ದಿನವು ಒಲವಲಿ ಹೆಜ್ಜೆ ಕಾದು...