ಮೇ ತಿಂಗಳು ಕಾಲಿಟ್ಟಿತೆಂದರೆ ನೀರೆಲ್ಲಾ ಖಾಲಿ ಖಾಲಿ. ಜಲ ಮೂಲಗಳಾದ ನದಿ, ಕೆರೆ, ಕಟ್ಟೆ, ಕಾಲುವೆಗಳೆಲ್ಲಾ ಒಣಗಿ ಬಿಸಿಲ ತಾಪಕ್ಕೆ ಭಣಗುಡುತ್ತವೆ. ವರುಣದೇವ ಕೃಪೆ ತೋರುವವರೆಗೆ ಬೇಸಿಗೆಯ ರಣ ಬಿಸಿಲನ್ನು ತಡೆದುಕೊಳ್ಳುವುದು ಜೀವ ಸಂಕುಲಗಳಿಗೆ ಪ್ರಾಣಸಂಕಟ! ಬಿಸಿಲ ಬೇಗೆಗೆ ಗಾರು ಬಡಿದು ಹೋಗುವ ಭುವಿಯ ಒಡಲಿಗೆ ತಂಪೆರುವ ಗಾರುಡಿಗನಾರಾದರೂ ಇದ್ದರೆ ಅದು ಮುಂಗಾರು ಮಾತ್ರ...
Author - Sandesh H Naik
ಆಧುನಿಕ ‘ಅರ್ಥ’ಸಮೀಕ್ಷೆ
ಬದಲಾವಣೆಯೊಂದು ಅದರ ಮೂಲ ಅರ್ಥದ ಚೌಕಟ್ಟನ್ನು ಮೀರಿ ನಡೆದರೆ ಅಲ್ಲಿ ಅಪಾರ್ಥ, ಅನರ್ಥಗಳು ಹುಟ್ಟುವುದು ಸಹಜ. ಬದಲಾವಣೆ ಬವಣೆಯೂ ಆಗಬಹುದು. ಇಲ್ಲಿ ಅಂಥ ಕೆಲವೊಂದಷ್ಟು ಪದಗಳ ಆಧುನಿಕ ಅರ್ಥ ವಿಸ್ತಾರವನ್ನು ಪಟ್ಟಿಮಾಡಲಾಗಿದೆ. ಹಾಗಂತ ಇದು ಅನರ್ಥ ವ್ಯಾಖ್ಯಾನಗಳ ಸಾರ್ವತ್ರೀಕರಣವಲ್ಲ. ಇವುಗಳಿಗೆ ಹೊರತಾದ ಪ್ರಶಂಸನೀಯ ಉದಾಹರಣೆಗಳೂ ಇವೆಯೆನ್ನಿ. ಇಲ್ಲಿ ಒಂದಷ್ಟು ಕಟು...
ಭಾರೀ “ತೂಕ”ದ ಶಿಕ್ಷಣ!!
ಎರಡು ತಿಂಗಳುಗಳ ಕಾಲ ಹಗಲು ರಾತ್ರಿಯೆನ್ನದೆ ಕುಣಿದು ಕುಪ್ಪಳಿಸಿದ ಮಕ್ಕಳು ಮತ್ತೆ ಬ್ಯಾಗನ್ನು ಹೆಗಲಿಗೇರಿಸಿಕೊಂಡು ಹೊರಟಿದ್ದಾರೆ. ರಜಾದಿನಗಳಲ್ಲಿ ಕೇಕೆ ಹಾಕಿ ನಲಿದ ಮಕ್ಕಳು ಅಯ್ಯೋ ಇಷ್ಟು ಬೇಗ ರಜೆ ಮುಗಿಯಿತೇಕೆ ಎಂಬ ಮುಖಮುದ್ರೆಯೊಂದಿಗೆ ಶಾಲೆಯತ್ತ ಹೆಜ್ಜೆಹಾಕುತ್ತಿದ್ದಾರೆ. ಮಳೆ ಹನಿ ಜಿನುಗುವ ಕಾಲವಷ್ಟೇ ಅಲ್ಲ ಇದು ಮಕ್ಕಳ ಕಣ್ಣೀರ ಹನಿ ಜಾರುವ ಸಮಯವೂ ಹೌದು...
‘ಗೋರಕ್ಷಕರು V/S ಭಕ್ಷಕರು
ದನ ಮತ್ತು ಧನ ಇವೆರಡೂ ನಮ್ಮ ರಾಜಕೀಯ ಆಗುಹೋಗುಗಳ ಜೊತೆಗೆ ಆಳವಾಗಿ ಬೆರೆತು ಹೋಗಿವೆ. ಅದರಲ್ಲೂ ಗೋ-ರಾಜಕೀಯವಂತೂ ಒಮ್ಮೊಮ್ಮೆ ಘೋರ ಸ್ವರೂಪವನ್ನೇ ಪಡೆದುಕೊಳ್ಳುತ್ತದೆ. ಅದನ್ನು ಸಾಕುವ ರೈತ ಕೆಚ್ಚಲಿಗೆ ಕೈಹಾಕಿ ಹಾಲು ಹಿಂಡಿ ಮೊಸರು, ಮಜ್ಜಿಗೆ, ಬೆಣ್ಣೆ ತುಪ್ಪ ಮಾಡಿಕೊಳ್ಳುವ ಬಗ್ಗೆ ಯೋಚಿಸಿದರೆ, ರಾಜಕಾರಣಿಗಳು, ಮಾತನಾಡದ ಈ ಮೂಕ ಪ್ರಾಣಿಯ ನೆರವಿನಿಂದಲೂ ಮತ...
‘MODI’ಫಿಕೇಷನ್’ನ 3ನೇ ‘ವರ್ಷ’ನ್
ಕೇಂದ್ರದಲ್ಲಿ ‘ನಮೋ’ ಘೋಷ ಮೊಳಗಿ ಮೂರು ವರುಷ ಕಳೆಯಿತು. ಪ್ರಧಾನಿ ಪಟ್ಟಕ್ಕೆ ‘ನಮೋ’ ಹೆಸರು ಘೋಷಣೆಯಾಗುತ್ತಿದ್ದಂತೆ ಕೆಲವರು ವಿವಿಧ ನಮೂನೆಯ ಟೀಕೆಯ ಕೇಕೆ ಹಾಕಲಾರಂಭಿಸಿದ್ದರು. ಇತ್ತ ಜನರು ಮಾತ್ರ ಪ್ರಧಾನಿಯಾಗಿ ನಮಗೆ ನರೇಂದ್ರ ಮೋದಿಯೇ ಬೇಕೆಂಬ ಆಶಯದೊಂದಿಗೆ ಕಮಲ ಅರಳಿಸುವ ಮೂಲಕ ಮೋದಿ ಆಡಳಿತಕ್ಕೆ ಭದ್ರ ಪೀಠಿಕೆ ಹಾಕಿಬಿಟ್ಟಿದ್ದರು...
ಎಚ್ಚರ! ಇದು ವೈರಸಾಸ್ತ್ರ!!
ಹಿಂದೆಲ್ಲಾ ಸಾಂಕ್ರಾಮಿಕ ರೋಗಗಳು ಮಾನವನ ಜೀವವನ್ನು ಸಾಮೂಹಿಕವಾಗಿ ಆಹುತಿ ತೆಗೆದುಕೊಳ್ಳುತ್ತಿದ್ದವು. ಆ ರೋಗಗಳು ಸಾಮಾನ್ಯವಾಗಿ ಉಗುಳು, ಸೀನು, ಕೆಮ್ಮುವಿನ ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತಿದ್ದವು. ಸದ್ಯ ಸಾಂಕ್ರಾಮಿಕ ಕಾಯಿಲೆಗಳು ಒಂದು ಮಟ್ಟಿಗೆ ನಿರ್ಮೂಲನೆ ಹೊಂದಿವೆ. ಆದರೆ ಅಂತಹದ್ದೇ ಕಾಯಿಲೆ, ತಂತ್ರಜ್ಞಾನಗಳ ಬಳುವಳಿಯಾಗಿ ನಮಗೆ ದಕ್ಕಿರುವ ಹಾಗೂ ಪ್ರಸ್ತುತ...
ಫಲಿತಾಂಶದ ಲೆಕ್ಕಾಚಾರಗಳು
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ಈ ಬಾರಿಯೂ ‘ಫೀಮೆಲ್’ಗೈ’ ಸಾಧಿಸಿದ್ದಾರೆ. ಪ್ರತೀ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸುತ್ತಿರುವುದು ಹುಡುಗರ ಪಾಲಿಗೆ ನುಂಗಲಾರದ ತುತ್ತು. ಫಲಿತಾಂಶದ ಜೊತೆ ಜೊತೆಗೇ ಪ್ರಾದೇಶಿಕ ಹಣಾಹಣಿಯ ವಾದ ವಿವಾದಗಳೂ ಈ ಸಂದರ್ಭದಲ್ಲಿ ತೆರೆದುಕೊಳ್ಳುವುದೂ ಸಹಜ. ಕೆಲವು...
ಪುಂಡ ಪಾ(ತ)ಕಿಸ್ತಾನದ ಭಂಡತನ
ಯುದ್ಧವಿರಾಮದ ಕರಾರುಗಳನ್ನು ಉಲ್ಲಂಘಿಸುತ್ತಾ ಸದಾ ಒಂದಿಲ್ಲೊಂದು ವಿಷಯಕ್ಕೆ ತಕರಾರು ತೆಗೆಯುತ್ತಲೇ ನೆರೆ ರಾಷ್ಟ್ರಗಳ ಪಾಲಿಗೆ ಅಕ್ಷರಶಃ ಹೊರೆಯಾಗಿರುವ ದೇಶವೆಂದರೆ ಅದು ಪಾಕಿಸ್ಥಾನ. ಇದರ ದುರ್ವರ್ತನೆಯ ಧೂರ್ತತನ ಹಾಗೂ ಕುಟಿಲ ತಂತ್ರಗಳ ಕ್ಷುಲ್ಲಕ ವರ್ತನೆಯನ್ನು ನೋಡಿದರೆ “ಅಯ್ಯೋ! ಏನಾದರೂ ಸರಿಯೇ ನೆರೆ ಹೊರೆ ಮಾತ್ರ ಚೆನ್ನಾಗಿರಬೇಕು” ಎಂಬ ಹಿರಿಯರ...
ಜಗಳ್’ಬಂಧಿ ಪಾರ್ಟಿಗಳು
ಮತ್ತೊಂದು ಜಗಳಾಪರ್ವಕ್ಕೆ ರಾಜ್ಯದಲ್ಲಿ ಗರಿಗೆದರಿದೆ. ಅತ್ತ ಬಾಹುಬಲಿ ಚಲನಚಿತ್ರದ ಪ್ರಚಾರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಹೊರತಾಗಿಯೂ ಮಾಧ್ಯಮಗಳಲ್ಲಿ ಯಡಿಯೂರಪ್ಪ-ಈಶ್ವರಪ್ಪನವರ ನಡುವಿನ ಜಂಗೀ ಕುಸ್ತಿಯ ಬಗ್ಗೆ ವರದಿ ಹಾಗೂ ಚರ್ಚೆಗಳು ಪ್ರಸಾರವಾಗುತ್ತಿವೆಯೆಂದರೆ ಅದರ ತೀವ್ರತೆ ಅರಿವಾಗಿಬಿಡುತ್ತದೆ. ಬ್ರಿಗೇಡ್ ಕಟ್ಟಿಕೊಂಡು ಬಿಗ್ರೇಡ್ ರಾಜಕಾರಣ...
ಬೇವು ನುಂಗಿ, ಬೆಲ್ಲ ಸವಿದು ನವಸಂವತ್ಸರವ ಸ್ವಾಗತಿಸೋ ಯುಗಾದಿ
ಋತುಗಳ ರಾಜ ವಸಂತ ಕಾಲಿಟ್ಟನೆಂದರೆ ಎಲ್ಲೆಲ್ಲೂ ಜೀವಕಳೆಯ ಸಂಭ್ರಮ ಪಲ್ಲವಿಸುತ್ತದೆ. ಹಳೆಬೇರಿನ ಆಧಾರದ ಮೇಲೆ ಹೊಸ ಚಿಗುರು ಬಿರಿಯುವ ಈ ಕಾಲ ಪ್ರಕೃತಿಯ ನಿರಂತರ ಚಲನಶೀಲತೆಯ ಮಹಾನ್ ದ್ಯೋತಕವೂ ಹೌದು ಮತ್ತು ಮಾನವನ ಬದುಕಿನ ಏರಿಳಿತಗಳನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ರೂಪಕವೂ ಹೌದು. ಹೊಸ ಟಿಸಿಲಿನ ಲವಲವಿಕೆ ಹಾಗೂ ತಾಜಾತನಗಳಂತಹ ಪ್ರಕೃತಿದತ್ತ ಪ್ರಭಾವಳಿಯೊಂದಿಗೆ...