Author - Guest Author

ಕವಿತೆ

ಓ ನನ್ನ ಚೇತನ.

ಒಂದು ನಿಮಿಷವೂ ಸುಮ್ಮನೆ ಕೂರುತಿಲ್ಲ, ಅದೇನನ್ನೋ ಹುಡುಕುತ ಕನವರಿಸುತಿದೆ, ಎಲ್ಲವೂ ಇದೆಯಾದರೂ ಏನೂ ಇಲ್ಲವೆಂಬ ಭಾವ, ಕನಸುಗಳ ಒರತೆ ಬತ್ತಿಹೋಗಿದೆ ನನ್ನಲಿ….! ಎಲ್ಲರೂ ಜೊತೆಗಿದ್ದಾರೆ ಆದರೂ ನಾನು ತಬ್ಬಲಿ, ಎಲ್ಲವೂ ದೊರೆತಿದೆ ಆದರೂ  ಮನಸ್ಸಿಗೆ ಶಾಂತಿ ಇಲ್ಲ, ಕಾಣದ ಕೈಯ್ಯೊಂದು ನನ್ನನು ಆಡಿಸುತಿದೆ, ನನ್ನ ಆಸೆಗಳೇ ನನಗೆ ನೆನಪಿಲ್ಲದಂತಾಗಿದೆ…...

ಕವಿತೆ

ಪೃಥೆ…..,

ತನುವ ಕಾಂತಿ ಸೆಳೆಯುವಂತೆ ಹೊಳೆಯುತಿವೆಯಾ  ಕುಂಡಲಗಳು ಕರ್ಣಗಳಲಿ ಮಿರುಗುತಿದೆ ತನುವ ತಬ್ಬಿಹ ಕವಚ ಕಾಂತಿಗೆ ಕರುಳ ಬಳ್ಳಿಯಲಡಗಿದ ನೋವು ನರನರಗಳಲ್ಹರಡಿ ಇರಿದು ಬಂದಂತೆ ತನ್ನೊಡಲ ಕಂದ ನಗುವ ತಂದಂತೆ ಮರೆತೆಲ್ಲವನು ಬರೀ ನೆನಪಲ್ಲವವೆಲ್ಲ! ಮೊದಲುದಿಸಿದ ಮಮತೆಯ ಹೊನಲೋ ಭವಿತವ್ಯದ  ದಿಗಿಲೋ ಕನ್ಯಾಮಣಿಗೆ ಪೆಟ್ಟಿಗೆಯೊಳಗಣ ತೊಟ್ಟಿಲು ಹಸುಗೂಸಿಗೆ ತೇಲಿ ಬಿಟ್ಟಳದನಂದು ಗಂಗಾ...

ಅಂಕಣ

ಸ್ವಚ್ಛಂದ ಮನಸುಗಳು ತಾವಾಗಿಯೇ ಬೆಸೆಯುವವು..

ಸರಿ ಸಮಾರು ಬೆಳಿಗ್ಗೆ ಹತ್ತು ಗಂಟೆಯಾಗಿರಬಹುದು. ನಾನು ಆಗಿನ ಬಾಂಬೆ ಅಂದರೆ ಈಗಿನ ಮುಂಬೈಗೆ ಹೋಗಲು ಹರಿಹರ ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತಿದ್ದೆ. ಆಗ ಬೇಸಿಗೆ ಕಾಲ. ಬೇಸಿಗೆ ಎಂದರೆ ಅದರಲ್ಲೂ ಬಯಲು ಸೀಮೆ ಬೇಸಿಗೆ, ಬೇರೆ ಪ್ರದೇಶಕ್ಕೆ ಹೋಲಿಸಿದಾಗ ತುಸು ಹೆಚ್ಚು ಆದ್ದರಿಂದ ಹತ್ತು ಗಂಟೆಗಾಗಲೇ ಮೈ ಬಿಸಿ ಏರಿ ಬೆವರು ದೇಹದ ಎಲ್ಲಾ ಭಾಗಗಳಲ್ಲಿಯೂ ಇಳಿಯುತಿತ್ತು...

ಅಂಕಣ

ಮಕ್ಕಳ ಶಿಕ್ಷಣದಲ್ಲಿ;ವೃತ್ತಿಯ ಅಸಮಾನತೆಯಲ್ಲಿ ಪೋಷಕರ ಪಾತ್ರ

ತಮ್ಮ ಮಕ್ಕಳು ವಿದ್ಯಾವಂತರಾಗಿ, ಉತ್ತಮ ಸ್ಥಾನ-ಮಾನಗಳನ್ನು ಗಳಿಸಿ, ಕೈತುಂಬಾ ಸಂಬಳ ಗಳಿಸಬೇಕೆಂಬ ಮಹದಾಸೆ ಯಾವ ತಂದೆ-ತಾಯಿಗಿಲ್ಲ ಹೇಳಿ!! …ಈ ಮಾತು ಹಿಂದಿನ ಕಾಲಕ್ಕೆ ಸ್ವಲ್ಪಮಟ್ಟಿಗೆ ಅಪ್ರಸ್ತುತವೆಂದು ಕಂಡರೂ, ಈಗಿನ ಕಾಲಘಟ್ಟಕ್ಕೆ, ಇದು ಅಷ್ಟೇ ಪ್ರಸ್ತುತ. ಕೂಡಿಟ್ಟ ಕೋಟ್ಯಾಂತರ ರುಪಾಯಿಗಳಿದ್ದರೂ, ಮೂರು ತಲೆಮಾರು ನಿಶ್ಚಿಂತೆಯಿಂದ ಇರಬಹುದಾದ ಆಸ್ತಿಯಿದ್ದರೂ...

ಕವಿತೆ

ಕಾಲ

ಕಾಲ ಎಲ್ಲರಿಗೂ ಸಮಾನವಲ್ಲ ಕಾಲದ ಹೊಳೆಯಲಿ ಮೀಯುವರೆಲ್ಲಾ , ಅಲ್ಲಲ್ಲಿ ನಿಂತೆ ನಿಲ್ಲುವರು ನೋವು ಮಾಗಲೋ , ನೆನಪನಳಿಸಲೋ ಹೊಸತನದ ಹೂವರಳಲು . ಆಗಾಗ ಮತ್ತೆದೇ ಕಾಲದ ಬಯಕೆ ಕಾಲದ ಸಾಲಕ್ಕೂ ಹರಕೆ ಸಂಭ್ರಮ ಸಿರಿ ಘಳಿಗೆ ಬಾಚಲು ಅರಿವಿನ ಗರಿ ಬಿಚ್ಚಲು ಜಿಪುಣ ಕಾಲ , ನೀಡದು ಅರೆಘಳಿಗೆ ಕಾಲದೋಟಕೆ ನಮ್ಮ ಹತಾಶ ನಡಿಗೆ. ಆಗ ಒಂಟಿ ಕಾಲಲಿ ಕುಂಟೆಬಿಲ್ಲೆ ಆಡಿದ ಕಾಲವೊಂದಿತ್ತು...

ಕವಿತೆ

ಜೀವನ

ಬಗೆಹರಿಯದ ಒಗಟು, ದಡವರಿಯದಾ ಯಾನ.. ಈ ಎಲ್ಲ ಮನುಜಕುಲ ಬಿಡಿಸುವಲಿ ತಲ್ಲೀನ… ಬರಿಯ ಸಂತಸವಲ್ಲ ಕುಡಿದಂತೆ ಸವಿಪಾನ ನೋವಿನ ಮುಗಿಲಲ್ಲ ಸಿಹಿಕಹಿಯ ಲೇಪನ… ಎಲ್ಲ ತೊಂದರೆಗಳಿಗೂ ಸಿಗದಿಲ್ಲಿ ಕಾರಣ ದಾಟಬೇಕಿದೆ ಶರಧಿ ಹತ್ತಿಕ್ಕಿ ತಲ್ಲಣ ಕ್ಲೇಶದ ಬೆಟ್ಟಗಳ ಏರುತಲಿ ದಿನದಿನ ಮುಗಿಸಲೇ ಬೇಕು ಈ ಬದುಕೆಂಬ ಚಾರಣ ಕಂಡೆಲ್ಲ ಸ್ವಪ್ನಗಳ ಸಾಕಾರಗೊಳಿಸಲು ಈಜಲೇ ಬೇಕಿಂದು ಈ...

ಕಥೆ

ಕಾಣದ ಕಡಲಿಗೆ ಹಂಬಲಿಸಿದೆ ಮನ….

ಅವಳು: ಆಹಾ!ಉಪ್ಪಿನಕಾಯಿ ಎಂದರೆ ಹೀಗಿರಬೇಕೆ ಎಂದು ಗಂಡ ತಮ್ಮನ ಹೆಂಡತಿ ಮಾಡಿದ್ದ ಮಾಡಿದ್ದ ಊಟ ಮಾಡುತ್ತ ಎಲ್ಲ ಎರಡೆರಡು ಸಲ ಬಡಿಸಿಕೊಂಡು ತಿನ್ನುತ್ತಿದ್ದಾನೆ.ಅವಳಿಗೆ ತುಸು ಹೊಟ್ಟೆ ಕಿಚ್ಚಾದರೂ,ಇವಳಿಗೆಷ್ಟು ಆರಾಮ ಅಲ್ವ ಅನಿಸಿತು.ನೌಕರಿಯ ಜಂಜಾಟವಿಲ್ಲ.ಊರಿನ ವಿಶಾಲ ಮನೆಯಲ್ಲಿ ಇವಳು ರಾಣಿಯಂತೆ.ಅಲ್ಲೇ ಸಿಗುವ ತರಕಾರಿ,ಮೀನು.ಬಾವಿಯಲ್ಲಿ ನೀರಂತೂ ಬತ್ತಿದ್ದೇ ಇಲ್ಲ.ಇವಳ...

ಅಂಕಣ

 ಅಂಕಗಳನ್ನು ಸಹಜವಾಗಿ ಸ್ವೀಕರಿಸಲು ನಾವೆಂದು ಕಲಿಯುತ್ತೇವೆ?

   ಮೊತ್ತ ಮೊದಲನೆಯದಾಗಿ ಬಂದ ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಮುಂದಿನ ಕೆಲಸದಲ್ಲಿ ತೊಡಗಿರುವ ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಾಗೂ ಅವರ ತಂದೆತಾಯಂದಿರಿಗೆ ಅಭಿನಂದನೆಗಳನ್ನು ಹೇಳುತ್ತಾ…   ಅಚ್ಚರಿಯಾಗಿರಬೇಕಲ್ಲ? ಅಲ್ಲವೇ ಮತ್ತೆ. ಎಂಜಲು ಕೈಯಲ್ಲಿ ಕಾಗೆ ಓಡಿಸಿದರೆ ಬೀಳುವ ಅಗುಳಿನಷ್ಟೇ ಅಂಕಗಳನ್ನು ಕಳೆದುಕೊಂಡು ಮಾಧ್ಯಮಗಳಲ್ಲಿ...

ಅಂಕಣ

ನಲ್ವತ್ತೈದೇ ದಿನ ಶಾಲೆಗೆ ಹೋಗಿ ತೊಂಬತ್ತೊಂಬತ್ತು ಪರ್ಸೆಂಟ್ ಪಡೆದಳು

“ಅರ್ಚನಳ ಅಮ್ಮ ಡಾಕ್ಟರ್ ಅಗಿದ್ದು ಅವಳ ತಪ್ಪಾ? ಕ್ಲಿನಿಕ್ಕಿಗೆ ನೀವು ಹೋಗದಿದ್ರೆ ನಿಮ್ಮ ಬದ್ಲು ಬೇರೆ ಡಾಕ್ಟ್ರು ಹೋಗಬಹುದು.. ಆದ್ರೆ, ಅರ್ಚನಂಗೆ ಬೇರೆ ಅಮ್ಮ ಸಿಗ್ತಾರ?”-ಹಾಗಂತಾ ಹದಿನೈದರಬೆಳೆದ ಮಗ ಬಿಡು ಬೀಸಾಗಿ ಮುಖದ ಮೇಲೇ ಹೇಳಿ ಬಿಟ್ಟಾಗ ತಾಯಿಯಾದವಳಿಗೆ ಹೇಗನ್ನಿಸಬೇಕು? ಬೆಂಗಳೂರಿನಲ್ಲಿ ಟೇಬಲ್ ಟೆನಿಸ್ ಕಾಂಪಿಟೇಶನ್ನಿಗೆ ಪುಟ್ಟ ತಂಗಿಯನ್ನು ಕೈ ಹಿಡಿದು...

ಅಂಕಣ

ಗುಬ್ಬಚ್ಚಿ ಗೂಡಿನಲ್ಲಿ…..

ಗುಬ್ಬಚ್ಚಿಗಳು ನಮ್ಮ ಬಾಲ್ಯದ ದಿನಗಳಲ್ಲಿ ಎಲ್ಲಾ ಮನೆಯ ಅವಿಭಾಜ್ಯ ಅಂಗಗಳಾಗಿದ್ದವು.  ಮನೆಗಳಲ್ಲಿ ಗುಬ್ಬಚ್ಚಿಗಳಿಗಾಗಿ ಮುಚ್ಚಿಗೆಯಲ್ಲಿ ಗೂಡುಕಟ್ಟಿ ಇಡಲಾಗುತಿತ್ತು. ಮನೆಕಟ್ಟುವಾಗ ಮನೆಯ ವಿನ್ಯಾಸದೊಂದಿಗೆ ಗುಬ್ಬಚ್ಚಿಗೂಡಿನ ವಿನ್ಯಾಸವೂ ಮುಖ್ಯವಾಗಿತ್ತು. ಮರದ ಬೆಚ್ಚಗಿನ ಮುಚ್ಚಿಗೆಯಲ್ಲಿ ಸುಮಾರು ಅರ್ದ ಮೀಟರ್ ಉದ್ದಗಲದ ಪೊಟರೆಯಿಟ್ಟು, ಹೊರಗಡೆ ಸುಮಾರು ೫...