ನಾನು ಈಗ ಹೇಳುವದನ್ನು ಸ್ವಲ್ಪ ಕಲ್ಪನೆ ಮಾಡಿ ಇದು ನಿಮಗೆ ಹುಚ್ಚಾಟವೆನಿಸಬಹುದು ಆದರೂ ಇದು ಇಲ್ಲಿ ಅಗತ್ಯ. ದೀಪಾವಳಿಯ ಹಿಂದಿನ ದಿನ ಅಮ್ಮ ಹಬ್ಬಕ್ಕೆ ರುಚಿಯಾದ ತಿನಿಸುಗಳನ್ನು ಮಾಡುತ್ತಿರುತ್ತಾಳೆ, ಅಪ್ಪ ಪೇಟೆಗೆ ಹೋಗಿ ಹಬ್ಬದ ಖರೀದಿಯಲ್ಲಿ ಮುಳುಗಿರುತ್ತಾನೆ, ಅಕ್ಕ ನಾಳೆ ಯಾವ ರಂಗೋಲಿ ಮನೆ ಮುಂದೆ ಹಾಕಬೇಕೆಂದು ಯೋಚಿಸುತ್ತಿರುತ್ತಾಳೆ ಗಂಡು ಮಕ್ಕಳು ಪಟಾಕಿ ಹೊಡೆಯಲು...
Author - Guest Author
ಹೋಮ ಹವನ ಸನಾತನ ಧರ್ಮದ ಪ್ರತೀಕ, ಅದರ ತೇಜೋವಧೆ ಡಂಭಾಚಾರಕ
ಕೆಲ ದಿನಗಳ ಹಿಂದೆ ಬಂಡಾಯ ಸಾಹಿತಿಗಳಾದ ಮಾನ್ಯ ವೇಣುರವರು ಕನ್ನಡದ ದಿನಪತ್ರಿಕೆ “ವಿಶ್ವವಾಣಿ”ಯಲ್ಲಿ ಮತ್ತೂರಿನಲ್ಲಿ ನಡೆದ ಸೋಮಯಾಗದ ಬಗ್ಗೆ ತಮ್ಮ ಕಪೋಲಕಲ್ಪಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ. ವೇಣುರವರು ವೈಭವದ ಮಾತು ಮತ್ತು ತಮ್ಮ ಬರಹಗಳಿಂದ ವಾಚಕವೃಂದವನ್ನು ಆಕರ್ಷಿಸಬಹುದು ಎಂದು ತಿಳಿದಿದ್ದರೆ, ಅದು ಅವರ ಭ್ರಮಾಲೋಕದ ಪರಮಾವಧಿಯಾಗಿದೆ...
ಲಿವಿಂಗ್ ಟುಗೆದರ್…
“ಮಧುವನ್ ಮೇ ಜೋ ಕನ್ಹಯ್ಯಾ ಕಿಸೀ ಕೋ ಪೀಸೆ ಮಿಲೇ ಕಭಿ ಮುಸುಕಾಯೇ ಕಭೀ ಛೇಡೇ ಕಭೀ ಬಾತ್ ಕರೇ ರಾಧಾ ಕೈಸೇ ನ ಜಲೇ? ರಾಧಾ ಕೈಸೇ ನ ಜಲೇ?” ಕಿವಿಗೆ ಇಯರ್ ಫೋನ್ಸ್ ಸಿಕ್ಕಿಸಿಕೊಂಡು ಹಾಡು ಕೇಳುತ್ತಾ ಯಮನಾ ತೀರದಲ್ಲಿ ಕುಳಿತು ಹುಣ್ಣಿಮೆ ಚಂದ್ರನನ್ನು ನೋಡುತ್ತಾ ನಿಟ್ಟುಸಿರಿಟ್ಟಳು ರಾಧೆ. ಮನೆಯಲ್ಲಿ ಈವನಿಂಗ್ ನ್ಯೂಸ್ ಅಪ್ಡೇಟ್ಸ್ ನೋಡುತ್ತಾ...
ಹೊಸ ಬೆಳಗು
ಎಲ್ಲ ಮುಗಿದಿರುವಾಗ, ಹೊಸದು ಕಾದಿರುವಾಗ, ಹಳತೇ ಹೊನ್ನೆಂಬುದಿನ್ನೆಂಥ ಬ್ರಾಂತಿ!!! ಹಳೆಕೊಳೆಯ ನೋಡುತ್ತ, ಗತ ನೆನಪ ಜೀಕುತ್ತ, ಕುಳಿತಿದ್ದರೆಂತು ಸಾಧ್ಯ? ಹೊಸ ಬೆಸುಗೆ – ಪ್ರೀತಿ… ನನ್ನ ನಿಲುಕಿಗೆ ಸಿಗದ, ದ್ವಂದ್ವ ನಿಲುವಿನ ಮನದ, ನಿರ್ಧಾರಕಾರು ಹೊಣೆ, ಏನು ಗತಿ?? ಗಾಯ ಮಾದಿರುವಾಗ, ಮನಸು ಮಾಗಿರುವಾಗ, ಇನ್ನೇಕೆ ಆ ನೆನಪು, ಹಳೆ ಪ್ರೀತಿ...
ನೆರಳು
ಅದು ಬಿರು ಬಿಸಿಲು ಕಾಲ. ಏನೊ ಕೆಲಸದ ನಿಮಿತ್ತ ಕಂಡವರ ಕಾಲಿಡಿದು ಹಳೆಯ ಪಳಯುಳಿಕೆಗಳ ಛಾಪು ತೊಳೆದುಬಿಡುವ ಹಂಬಲದಲ್ಲಿ ಹೊರ ನಡೆದ ಗಾಯಿತ್ರಿ ಮಧ್ಯಾಹ್ನದ ಉರಿ ಬಿಸಿಲಲ್ಲಿ ಮನೆಗೆ ಬಂದವಳೇ ಬ್ಯಾಗು ಬಿಸಾಕಿ ಅದುವರೆಗೂ ಹಿಡಿದಿಟ್ಟುಕೊಂಡ ಅಳು ತಡೆಯಲಾರದೆ ಜೋರಾಗಿ ಒಮ್ಮೆ ರೋದಿಸಿಬಿಡುತ್ತಾಳೆ. ಅದು ಅವಳ ಸ್ವಭಾವವೂ ಹೌದು. ಕೇಳುವ ಮನಸ್ಸಿನ ಪ್ರಶ್ನಗಳಿಗೆಲ್ಲ...
ದೇವರ ನಾಡಲ್ಲಿ ಅರಳಿದ ಕಮಲ
ಅಂತೂ – ಇಂತೂ ದೇವರ ನಾಡಲ್ಲಿ ಕಮಲವೊಂದು ಅರಳಿದೆ .ಅದು 30-40 ವರ್ಷಗಳ ಪ್ರಯತ್ನದ ನಂತರ ,ಬಿ.ಜೆ.ಪಿ ಅಭ್ಯರ್ಥಿ A.O ರಾಜಗೋಪಾಲ್ ನೆಮಂ ಕ್ಷೇತ್ರದಿಂದ ವಿಜೇತರಾಗಿ ಕೇರಳ ರಾಜ್ಯ ವಿಧಾನಸಭೆಯಲ್ಲಿ ಬಿ.ಜೆ.ಪಿ ಖಾತೆ ತೆರೆದಿದ್ದಾರೆ . ಅಲ್ಲಿಗೆ ಲಕ್ಷಾಂತರ ಕಾರ್ಯಕರ್ತರ ಹಗಲಿರುಳಿನ ಶ್ರಮಕ್ಕೊಂದು ಅರ್ಥ ಬಂದಿದೆ. ಇದನೆಲ್ಲಾ ನೋಡುತ್ತಿರುವಾಗ 80-90ನೇ ದಶಕದ...
ಛೋಟಾ ಭೀಮ್.. ಛೋಟಾ ಭೀಮ್..
ಛೋಟಾ ಭೀಮ್.. ಛೋಟಾ ಭೀಮ್.. ಛೋಟಾ ಭೀಮ್……. ಅರೆರೆ ನನ್ನ 5 ವರ್ಷ ಮಗನ೦ತೆ ಎಲ್ಲ ಮುದ್ದು ಪುಟಾಣಿಗಳ ಕಿವಿ ನಿಮಿರಿ ಕಣ್ಣು ದೂರದರ್ಶನದ ಪೋಗೋ ವಾಹಿನಿಯತ್ತ ಸಾಗಿದೆಯೇ.. ಹೌದು, ಭಾರತದ ಶೇ. 90 ದೂರದರ್ಶನ ವೀಕ್ಷಿಸುವ ಪುಟಾಣಿಗಳ ಅಚ್ಚುಮೆಚ್ಚಿನ ಹೀರೋ, ಕಾಲ್ಪನಿಕ ಕಾರ್ಟೂನಿನ ಹುಡುಗನೇ ಈ ಸಣ್ಣ ಭೀಮ!! ಶಕ್ತಿ ಶಾಲಿಯಾಗಿ ಎಲ್ಲರನ್ನೂ ಮಣಿಸುವ ಪುಟಾಣಿ...
ಇಳಿಸಂಜೆಯ ಹಾಡು…
ಬಲಿತು ಮಾಗಿದ ದೇಹ ಬಾಗಿದೆ ಕರೆ-ಕರೆದು ಕೂಗಿದೆ ಅಂತ್ಯಕೆ ನಿಡಿಸುಯ್ದ ಮನಸನ್ನು ಒದ್ದೆ ಮಾಡಿದ ಪರಿ – ಸರಿ ಸಮದ ಸಮಯದ ಕೊನೆ ಕಾಣುವ ತವಕದಲ್ಲಿ… ಸುಕ್ಕುಗಟ್ಟಿದ ಮೈಯ ಚರ್ಮ ಜೋಲಿದೆ ಹೊಳೆವ ಕನ್ನಡಿ ಮಾರು ದೂರಕೆ ಜೊತೆ ನೆರಳು ನಕ್ಕು ನಕ್ಕು ಅಣಕಿಸಿದ ಪರಿಹಾಸ್ಯದ ಅಪರಿಮಿತ ಸತ್ಯದ ಪ್ರತಿ ದಿನದ ಸೋಲುವಿಕೆಯಲ್ಲಿ.. ಬಾಳ ಹಾದಿಗೆ ಅನುಭವ ದೀಪ ತೋರಿದೆ ದೇವರು ಬರಿ ಮನಸಿನ...
ಜೀವನದ ಸ೦ತೆಯಲಿ – ಮಿ೦ಚ೦ತೆ ಮಿ೦ಚಿಹೊಯ್ತು…
ನೂರಾರು ಕನಸುಗಳ ಕಟ್ಟಿಕೊ೦ಡಿದ್ದ ಆಕೆಯನ್ನು ತು೦ಬು ಕುಟು೦ಬಕ್ಕೆ ಮದುವೆಮಾಡಿಕೊಟ್ಟರು. ಹಸಿರನೇ ಹೊದ್ದಿರುವ ಹಳ್ಳಿಯಲ್ಲಿ ಮೈ – ಮ೦ಡೆಯೆಲ್ಲ ಕೆಲಸವೇ… ಜವಾಬ್ಧಾರಿಯ ಹೆಗಲು, ಭಾರ ತಾಳಲಾರದೆ ಬಾಗಿರುವುದು ಮೊದಲ ರಾತ್ರಿಯೇ ಆಕೆಗೆ ತಿಳಿದುಬಿಟ್ಟಿತು. ಕೈಹಿಡಿದ ಗ೦ಡನೇ ಹಿರಿಯವನಾಗಿದ್ದರಿ೦ದ ತಾನು ಹೊ೦ದಿಕೊ೦ಡು ಹೋಗಬೇಕು ಎ೦ಬ ಸತ್ಯವನ್ನು ಹಾಲು ಕುಡಿಯುವಾಗಲೇ...
ಸಿನಿಮಾ.. ಸಿನಿಮಾ..
ಅದೊಂದು ಭಾನುವಾರದ ಮಧ್ಯಾನ, ಕಾಲೇಜಿಗೆ ರಜೆ ಇದ್ದರು ಗೆಳೆಯರೊಡನೆ ಕಾಲ ಕಳೆಯಲೆಂದು ಕಾಲೇಜಿಗೆ ಹೋದ ನೆನಪು. ಕ್ಲಾಸಿಗೆ ಹೋಗದಿದ್ದರೂ ಕ್ಯಾಂಟೀನಿಗೆ ತಪ್ಪದೆ attendance ಹಾಕುತಿದ್ದ ನಾವು, ಅಂದು ಸಹ ಕ್ಯಾಂಟೀನಿನಲ್ಲಿ ಕುಳಿತು ಭಟ್ಟರು ಕೊಟ್ಟ ಚಹಾ ಹೀರುತ್ತಾ, ಒಬ್ಬರೊಬ್ಬರ ಕಾಲು ಎಳೆಯುತ್ತ ಹರಟ ತೊಡಗಿದೆವು. ಅರುಣ, ನನಗೆ ಹೊಟ್ಟೆ ತಾಳ ಹಾಕುತ್ತಿದೆ ಎಂದಾಗಲೇ...