ಹುಟ್ಟಿದ ಊರು ಬಿಟ್ಟ ಬೆಂಗಳೂರಿನಂತಹ ನಗರಗಳನ್ನ ಸೇರುವಾಗ ಯಾವೊಬ್ಬನು ಕೂಡ ತನಗೆ ಮುಂದೆ ಒಂದು ದಿನ ಕಷ್ಟಗಳು ಬರುತ್ತವೆ ಎಂದೂ ಊಹೆ ಕೂಡ ಮಾಡಿರುವುದಿಲ್ಲ.ಆದರೆ ಈ ನಗರ ಮತ್ತು ಇಲ್ಲಿನ ಜೀವನವೇ ಬೇರೆ, ಕಷ್ಟಗಳು ಯಾವಾಗ ಬರುತ್ತವೆ ಅನ್ನೋ ಒಂದು ಸಣ್ಣ ಸುಳಿವು ಕೂಡ ಇರುವುದಿಲ್ಲ. ಊರು ಬಿಟ್ಟು ಬಂದ ಹೊಸದರಲ್ಲಿ ಕಷ್ಟಗಳ ಅನುಭವವಾಗುವುದು ತುಂಬಾ ಕಡಿಮೆ, ಯಾಕಂದರೆ ಅದು...
Author - Guest Author
ವ್ಯಕ್ತಿ ಮುಖ್ಯವಲ್ಲ, ಚಿಂತನೆಗಳೇ ಮುಖ್ಯ
ಅಭಿವೃದ್ಧಿ ಹೊಂದುತ್ತಿರುವಂತಹ ರಾಷ್ಟ್ರಗಳ ಪೈಕಿ ಭಾರತವು ಮುಂಚೂಣಿಯಲ್ಲಿದೆ. ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ಸೇರಲು ದೇಶದಲ್ಲಿ ಇನ್ನೂ ಹಲವಾರು ರೀತಿಯ ಬದಲಾವಣೆಗಳು ಆಗಲೇ ಬೇಕು. ಹೀಗಾದಲ್ಲಿ ಭಾರತ ಖಂಡಿತವಾಗಿಯೂ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಗೆ ಸೇರುವುದು ಖಚಿತ. ಹೌದು, ಈ ಮಾತು ಅಕ್ಷರಶಃ ಸತ್ಯ. ಏಕೆಂದರೆ ಈಗಿನ ರಾಜಕೀಯ ವ್ಯವಸ್ಥೆ ಹಾಗೂ...
ಬದಲಾವಣೆಯ ಹಾದಿಯಲ್ಲೊಮ್ಮೆ ಹಿಂದಿರುಗಿ ನೋಡಿದಾಗ
ಬೇಡ ಬೇಡ ಅನ್ನುತ್ತಲೇ ಬದಲಾವಣೆಗೆ ಅಂಟಿಕೊಂಡಿದ್ದೇವೆ. ಅದು ಬದುಕಿನ ಅನಿವಾರ್ಯವೂ ಆಗಿದೆ. ಇಲ್ಲದಿದ್ದರೆ ಕಾಲ ಮುಂದೆ ಓಡುತ್ತಿದ್ದರೆ ನಾವೆಲ್ಲಿ ಹಿಂದೆ ಬೀಳುತ್ತೀವೋ ಎನ್ನುವ ಭಯ, ಭಯದ ಜೊತೆಗೆ ನಮ್ಮನ್ನ ದಾಟಿ ಮುಂದೆ ಹೋಗುತ್ತಿರುವವರ ಜೊತೆ ಹೋಗುವ ಅಥವಾ ಅವರಿಗಿಂತ ಮುಂದೆ ಹೋಗಬೇಕೆನ್ನುವ ಧಾವಂತ, ಈ ಧಾವಂತದಲ್ಲಿ ಅದೆಷ್ಟೊಂದನ್ನ ಕಳೆದುಕೊಂಡಿದ್ದೇವೆ ಅನ್ನುವ...
ಮಾಸ್ಟರ್ ಪ್ಲಾನ್!
ಕಾಡು ಅಂದ್ರೆ ಹಾಗೇನೆ ಮುಪ್ಪಾನು ಮುದುಕರಿಗೂ ತಣಿಯದ ಕುತೂಹಲ, ಇನ್ನು ನಮ್ಮನ್ನ ಕೇಳಬೇಕೆ ನಾನು, ಸ್ವಟ್ಟ, ಗುಂಗಾಡಿ ಮತ್ತು ಬೂತ ನಾಲ್ಕನೆ ತರಗತಿಯ ಮೂರನೆ ಸಾಲಿನಲ್ಲಿ ಕುಳಿತುಕೊಳ್ಳೊ ಪೈಲ್ವಾನರು. ಲೇ ಬೂತ ನಾಳೆ ಶನಿವಾರ ಶಾಲೆ ಬಿಟ್ಟ ತಕ್ಷಣ ಬೇಗ ಪಾಟಿಚೀಲ ಇಟ್ಟು, ಗುಂಗಾಡಿನ ಕರಕೊಂಡು ಸ್ವಟ್ಟಾನ ಮಂತ್ಯಾಕ ಬಾ, ನಾನು ಅಲ್ಲೆ ಇರ್ತೀನಿ. ನಮ್ಮವ್ವ ಹೊಲಕ್ಕ ಹೊಗ್ತಾಳ...
ಮನೆಯ ಪಂಜೂರ್ಳಿ ಮತ್ತು ಮಗನ ಮದುವೆ
“ನಾಲ್ಕು ದಿನ ನಾವು ಯಾರೂ ಊರಲ್ಲಿರುವುದಿಲ್ಲ, ನೀನೇ ಮನೆ ಕಾವಲು ಕಾಯಬೇಕು. ಈ ಬಾರಿ ಪಕ್ಕದಲ್ಲಿರುವ ಅಣ್ಣ ತಮ್ಮಂದಿರ ಮನೆಯವರಿಗಾಗಲೀ, ಕೆಲಸದವರ ಮನೆಯವರಿಗಾಗಲೀ ಯಾರಿಗೂ ಮನೆಯಲ್ಲಿ ಉಳಿಯಲು ಹೇಳುವುದಿಲ್ಲ. ಬೆಳಿಗ್ಗೆ ಸಂಜೆ ತಮ್ಮನ ಹೆಂಡತಿ ಬಂದು ಹಾಲು ಕರೆದು ಹೋಗುತ್ತಾಳೆ. ಇದನ್ನು ಬಿಟ್ಟರೆ ಇನ್ಯಾರು ಬರಲಾರರು. ಆದ್ದರಿಂದ ನೀನೇ ತೋಟ ಮನೆ ಕಾಯಬೇಕು”...
ಸಾವು ಮತ್ತು ಸೈನಿಕ
ಕಾದು ಕುಂತಿದೆ ಕಾಲನ ಕುಣಿಕೆ ಕಾಲ ಮೇಲೆ ಕಾಲು ಹಾಕಿಕೊಂಡು ಕಟ್ಟ ಕಡೆಯ ಸರಹದ್ದಿನಲಿ ಕಾವಲು ಕಾಯುವ ಸೈನಿಕನ ನೋಡಿ ಕ್ರೂರ ನಗುವಿನ ಕರಾಳ ಮಾರ್ದನಿ ಕೂಳ ಸಮಯದ ಕುತಂತ್ರ ಅನಿ ಸುತ್ತ ಆವರಿಸಲು ಕುಲೋಚನ ಕಾಂತಿ ಬರುತಿದೆ ಹತ್ತಿರತ್ತಿರ ಸಾವಿನ ಅಡಿ ಸದ್ದು ಮಾಡುತಿರಲು ಸ್ಫೋಟದ ಆಟ ಎದ್ದು ನಿಂತಿದೆ ಕಾವಲಿನ ನೋಟ ಹೊತ್ತಿ ಉರಿಯುತಿರೆ ಹಿಮದ ಶಯನ ಯೋಧ ಬಯಸಿಹನು ಶತ್ರುವಿನ...
ಹಾಕಿ ಎಂಬ ಪಟವೂ ….ಧ್ಯಾನ್ ಚಂದ್ ಎಂಬ ಸೂತ್ರಧಾರಿಯೂ…
ಕ್ರಿಕೆಟ್’ಗೆ ಸಚಿನ್ ಎನ್ನುವುದಾದರೆ ಹಾಕಿಗೆ ಯಾರು..?ಎಂಬೊಂದು ಪ್ರಶ್ನೆಯೊಟ್ಟಿಗೆ ಹೊರಟರೆ ಪ್ರಾಯಶಃ ನಮಗೆ ಉತ್ತರ ಸಿಗದೇ ಇರಬಹುದು. ಸಿಕ್ಕರೂ ಅದು ‘ಹಾಕಿ ಮಾಂತ್ರಿಕ’ ದಿ ಗ್ರೇಟ್ ಧ್ಯಾನ್ ಚಂದ್ ಅವರ ಹೆಸರೇ ಆಗದಿರಬಹುದು.ಹೌದು..,ಧ್ಯಾನ್ ಚಂದ್. ವಿಶ್ವ ಹಾಕಿ ಕಂಡ ದಂತಕಥೆ. ಭಾರತ ದೇಶದ ಹಾಕಿಯ ಪುಸ್ತಕ...
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮುತ್ತಿಗೆ ಎಷ್ಟು ಸರಿ…?
ಚಲೋ ಉಡುಪಿ ಕಳೆದ ಒಂದು ವಾರದಿಂದ ಕೇಳುತ್ತಿದ್ದೇವೆ. ಈ ಹೋರಾಟದ ಉದ್ದೇಶ ದಲಿತ ಸಮುದಾಯದ ಏಳಿಗೆಗೋ ಅಥವಾ ಕೆಲವು ಬುದ್ದಿಜೀವಿಗಳ ಸ್ವಹಿತಕ್ಕೋ ಅರ್ಥವಾಗುತ್ತಿಲ್ಲ. ಚಲೋ ಉಡುಪಿ ಹೋರಾಟ ಹುಟ್ಟಿಕೊಳ್ಳಲು ಕಾರಣವೇನು…? ಇದರಿಂದ ಲಾಭ ಅಥವಾ ನಷ್ಟ ಯಾರಿಗೆ ಇನ್ನೂ ನಿಗೂಢ. ಧರ್ಮದ ವಿರುದ್ಧ ಹೋರಾಟ ಮಾಡುವುದು ಸುಲಭ. ಅದರಿಂದ ಧರ್ಮಗಳ ನಂಬಿಕೆ, ಆಚಾರ, ವಿಚಾರ, ಧಾರ್ಮಿಕ...
ಕಲಾಂ ಅಜ್ಜನ ಕ್ಷಿಪಣಿ ಕನಸು
1983, ದೆಹಲಿಯ ಸೌತ್ ಬ್ಲಾಕ್’ನ ರಕ್ಷಣಾ ಸಚಿವಾಲಯದಲ್ಲಿ ಒಂದು ಉನ್ನತ ಮಟ್ಟದ ಸಭೆ. ರಕ್ಷಣಾ ಸಚಿವರ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಉಪಸ್ಥಿತರಿದ್ದವರು ದೇಶದ ರಕ್ಷಣಾ ಪಡೆಯ ಮುಖ್ಯಸ್ಥರು ಮತ್ತು ಉನ್ನತ ಮಟ್ಟದ ಅಧಿಕಾರಿಗಳೆ ಆದರೂ ಸಭೆಯ ಕೇಂದ್ರ ಬಿಂದು ಮಾತ್ರ ಒಬ್ಬ ವಿಜ್ಞಾನಿ ಮತ್ತು ಈ ವಿಜ್ಞಾನಿ ಪ್ರಸ್ತಾಪಿಸಿದ ಸುಧೀರ್ಘ 12 ವರುಷಗಳ, ಬರೊಬ್ಬರಿ 390 ಕೋಟಿ...
ಆದಿಕವಿ ಶ್ರೀ ವಾಲ್ಮೀಕಿ ಮಹರ್ಷಿ…
ವಾಲ್ಮೀಕಿ ಮಹರ್ಷಿಯ ಪರಿಚಯ – ತಂದೆ : ಪ್ರಚೇತಸೇನ. – ಮೂಲನೆಲೆ : ಕರ್ನಾಟಕದ ಕೋಲಾರ ಜಿಲ್ಲೆ, ಮುಳಬಾಗಿಲು ತಾಲೂಕಿನ ಹವಣಿ ಎಂಬ ಪ್ರದೇಶ. – ವಾಲ್ಮೀಕಿ ರಾಮಾಯಣದಲ್ಲಿ ಕಂಡು ಬರುವ ಪ್ರಮುಖ ಕರ್ನಾಟಕದ ಪ್ರದೇಶಗಳು : ಹಂಪಿ ಬಳಿ ಇರುವ ಪಂಪಾ ಸರೋವರ, ಮಾತಂಗ ಬೆಟ್ಟ, ಶಬರಿ ಆಶ್ರಮ, ಸುಗ್ರೀವನು ವಾಸವಾಗಿದ್ದ ಋಷಿಮುಖ ಪರ್ವತ. ವಾಲ್ಮೀಕಿಯು...