“ದೇವತೆಗಳ ನಾಡು” ಎನ್ನುವ ಅನ್ವರ್ಥನಾಮ ಪಡೆದಿರುವ ಈ ರಾಜ್ಯವನ್ನು ವರ್ಣಿಸಲು ಪದಗಳೇ ಸಾಲದು. ಅದೆಷ್ಟು ಸುಂದರ, ಎಲ್ಲಿ ನೋಡಿದರಲ್ಲಿ ಸಸ್ಯ ಶಾಮಲೆಯಿಂದ ಕಂಗೊಳಿಸಿ, ಹಸಿರುಡಿಗೆ ಉಟ್ಟ ಭೂರಮಣಿ, ನೋಡಲು ಕಣ್ಣುಗಳೆರಡು ಸಾಲದು. ದ್ವೀಪವನ್ನು ಸೃಷ್ಟಿಸಿದಂತಿರುವ ಸಮುದ್ರ ಕಿನಾರೆಗಳು, ಸ್ವರ್ಗವೇ ಧರೆಗೆ ಇಳಿದು ಬಂದಂತಿರುವ ಅಂದದ ಪ್ರಾಚೀನ ದೇಗುಲಗಳ...
Author - Guest Author
ಊರುಗೋಲು ಅಜ್ಜಿ
ಹೌದು.. ಅವಳು ನನ್ನ ಮುದ್ದಿನ ಅಜ್ಜಿ, ಊರೆಲ್ಲಾ ಊರುಗೋಲು ಅಜ್ಜಿ ಅಂತಾನೇ ಮನೆಮಾತು. ನಮ್ಮನೆಗಂತೂ ಮಹಾರಾಣಿ, ಅಜ್ಜಿಯ ಕುಡುಗೋಲು ಅವಳ ಆಸ್ತಿಯೆನ್ನುವಂತೆ ಅವಳ ಜೊತೆಯೇ ಇರುತಿತ್ತು. ಏಳು ಮಕ್ಕಳ ತಾಯಿ ಆಕೆ, ಅವಳು ಕಾಡುತ್ತಲೇ ಇದ್ದಾಳೆ.. ಇರುತ್ತಾಳೆ ಕೂಡ! ಅಜ್ಜಿಯ ಅರವತ್ತೈದರ ಹರೆಯಕ್ಕೆ ನಮ್ಮಜ್ಜ ಅವಳ ಪ್ರೀತಿಯ ಕೈ ಬಿಟ್ಟು ದೇವರ ಸಾನಿಧ್ಯ ಸೇರಿದ್ದ. ಅವಾಗ ಅಜ್ಜಿ...
“ಗೊತ್ತಿಲ್ಲ”
ಬಿದ್ದ ಮಳೆಗೆ ನೆಲ ತುಂಬ ಹಸಿರು ಚಿಗುರಿದೆ ಬೀಜ ಉತ್ತವರಾರೋ ? ಗೊತ್ತಿಲ್ಲ, ಎಳೆಯ ಮಗು ನಿದ್ದೆಯಲಿ ನಗುತಲಿದೆ ನಗಿಸಿದವರಾರೋ ? ಗೊತ್ತಿಲ್ಲ, ಹಣತೆ ಉರಿದು ಬೆಳಕ ಚೆಲ್ಲುತಿದೆ ದೀಪ ಎಲ್ಲಿಂದ ಬಂತೋ ? ಗೊತ್ತಿಲ್ಲ, ಅರಳಿದ ಹೂವು ತೋಟದ ತುಂಬ ಕಂಪ ಸೂಸಿದೆ ಆ ಕಂಪ ಯಾರು ನೀಡಿದರೋ ? ಗೊತ್ತಿಲ್ಲ, ನನಗೆ ಅದು-ಇದು ಅವನು-ಅವಳು ತುಂಬಾ ಇಷ್ಟ ಈ ಇಷ್ಟ ಎಲ್ಲಿಂದ ಬಂತೋ ...
ಪೊಟ್ಟುಕಥೆ
ಪ್ರತೀ ತಿಂಗಳು ಮನೆಯಲ್ಲಿ ಸಾಮಾನ್ಯವಾಗಿ ನಡೆಯುವ ಪ್ರಸಂಗ ನನ್ನ ಹೇರ್ ಕಟಿಂಗ್ ಬಗ್ಗೆ ಸುಧೀರ್ಘ ಚರ್ಚೆ. ನಮ್ಮ ಕಾಲೇಜಿನಲ್ಲಿ ಪ್ರತೀ ದಿನ ಒಬ್ಬಬ್ಬರೂ ಒಂದಂದು ರೀತಿ ಹೇರ್ ಸ್ಟೈಲ್ ಮಾಡಿಕೊಂಡು ಬರುವಾಗ ನನಗೆ ಹೊಟ್ಟೆ ಉರಿಯುತ್ತಿತ್ತು. ಹೇರ್ ಕಟ್ ಮಾಡಿಸಿ ಒಂದು ತಿಂಗಳಾದ ಮೇಲೆ ಏನೋ ಅಲರ್ಜಿಯಿಂದ ಒಂದು ಸೀನು ಬಂದ್ರೆ ಸಾಕು ಶುರು ಆಗ್ತದೆ ಮಾಮೂಲಿ ವರಸೆ. “ಹೋಗು, ಬೇಗ...
ವರಶರಾವತೀ ತೀರದಲಿ ಮಿಂಚಿ ಮರೆಯಾದ ನಕ್ಷತ್ರ -ಕಣ್ಣೀಮನೆ.
ಸರಿಸುಮಾರು ಹತ್ತೋ ಹನ್ನೆರಡು ವರ್ಷದ ಹಿಂದಿನ ನೆನಪಿನ ಬುತ್ತಿಯನ್ನು ಬಿಚ್ಚಿಡಹೊರಟಿದ್ದೇನೆ ಇಂತಿ ನಿಮ್ಮ ಪ್ರೀತಿಯ ಗೆಳೆಯ ಪ್ರಮೋದ. ಬನ್ನಿ ಬುತ್ತಿಯನ್ನು ಹಂಚಿತಿನ್ನೋಣವಂತೆ! ವರ್ಷ 2005 ಇರಬೇಕು. ಅದೊಂದು ದಿನ ಸರಿಯಾಗಿ ಘಂಟೆ 4:30 ಕ್ಕೆ ನಮ್ಮ ಕನ್ನಡ ಶಾಲೆಯ ದಿನಚರಿ ಮುಗಿದಿತ್ತು. ನಾನು ಮತ್ತು ನನ್ನ ಜೀವದ ಗೆಳೆಯ ಊರ ಸುತ್ತಮುತ್ತಲಿನ ಗುಡ್ಡ ಬೆಟ್ಟ ಅಲೆದಾಡಿ...
ಅವಳು ಸ೦ಭಾಳಿಸುವಳು
ಅಡುಗೆ ಮನೆಯ ತನಕ ಓಡಿ ಹಾಲುಕ್ಕದ೦ತೆ ಉಳಿಸುವಳು ಚಿಕ್ಕಪುಟ್ಟ ಮಾಮೂಲಿಕ್ಷಣಗಳ ಸೇರಿಸುವುದರಲಿ ಭಗ್ನ ಕನಸುಗಳ ದುಃಖ ಮರೆಯುವಳು ಸಮಯದಲಿ ಅನ್ನ ಹತ್ತದ೦ತೆ ತಡೆಯುವಳು ಎಷ್ಟೋಆಸೆಗಳನು ತಾನೇ ಸುಟ್ಟು ಬೂದಿ ಮಾಡುವಳು ಚಿಕ್ಕ ಗಾಜಿನತಟ್ಟೆ ಒಡೆಯದ೦ತೆ ಜಾಗ್ರತೆವಹಿಸುವಳು ಒಡೆದ ಮಹತ್ವಾಕಾ೦ಕ್ಷೆಗಳ ಸೌಧ ತಾನೇ ಉರುಳಿಸುವಳು ಬಟ್ಟೆಯಲಿರುವ ಕಲೆಗಳ ಉಳಿಯದ೦ತೆ ಹೋಗಲಾಡಿಸುವಳು ತಾಜಾ...
ಹನಿಗವನಗಳು – ಮೌನ
ನಿಶೆಯೆಲ್ಲಿ ಜಗ ಮಲಗಿದೆ ಮೌನದ ಭುಗಿಲೆದ್ದಿದೆ ಶಬ್ಧ ಕೇಳಿಸದು ಯಾಕೆ? ಅದು ಮೌನ *** ಮೌನದ ಬಾಗಿಲಲ್ಲಿ ಶಬ್ಧಗಳ ತೋರಣ ಇಲ್ಲವಾದಲ್ಲಿ ಮೌನಕೆ ಬಾಗಿಲಿಲ್ಲ. *** ಮೌನ ಪುಟದಲಿ ಮೊದಲ ಪದ ಮೌನ, ಇಲ್ಲಿ ಭಾವನೆ ಮೌನ, ಇಲ್ಲಿ ಕಲ್ಪನೆ ಮೌನ ಕನಸುಗಳು ಮೌನ ನೆನಪುಗಳೂ ಮೌನ *** ಆಶುಭಾಷಣಕಾರನಿಗೆ ವಿಷಯ ‘ಮೌನ’ವಾಗಿತ್ತು...
ತಾಯಿ
ತಾಯಿ ತಾಯಿ ಅಂದರೆ ಪ್ರೀತಿ ಮಾಡಬೇಡಿ ಆಕೆಗೆ ಭೀತಿ ಸಲಹಿಹಳು ಒಂಬತ್ತು ತಿಂಗಳು ಗರ್ಭದಲಿ ನೋವ ತರಿಸದಿರಿ ಆಕೆಯ ಆಂತರ್ಯದಲಿ ತಂದೆ ತಂದೆ ಎಂದರೆ ಭೀತಿ ಆದರೆ ಒಳಗೊಳಗೆ ಪ್ರೀತಿ ಕಷ್ಟಕಾಲದಲ್ಲಿ ಧೈರ್ಯ ನೀಡುವ ಧೈರ್ಯವಂತ ಗೆದ್ದಾಗ ಗೆಲುವ ನೋಡುವ ಹೃದಯವಂತ ಪ್ರೀತಿ ಹೇಳಿದೆ ಒಂದು ಕವನವನ್ನ ಕೇಳಿದಳು ಕಿವಿಗೊಟ್ಟ ಅದನ್ನ ನಿವೇದಿಸಿದೆ ನನ್ನ ಪ್ರೀತಿಯನ್ನ ಕೊಟ್ಟಳು ಸಿಹಿ...
ಪ್ರೇಮಪತ್ರ
ಓ ಪ್ರಿಯಾ, ಹೇಗಿದ್ದೀಯಾ? ಅದೆಷ್ಟು ವರ್ಷ ಆಗೋಯ್ತೊ ನಿನ್ನ ನೋಡದೆ! ಯಾಕೊ ನಿನ್ನ ಮುನಿಸಿನ್ನೂ ಹೋಗಿಲ್ವೇನೊ? ಅಲ್ಲ ಅಲ್ಲ ಅದು ಮುನಿಸಲ್ಲ. ಮತ್ತೆ ನಾನೆ ನಿನ್ನ ಮಾತಾಡಿಸಬೇಕು ಅಂತ ಇಷ್ಟು ವರ್ಷ ಕಾದೆಯೇನೊ? ಕೊಬ್ಬು ಕಣೊ ನಿನಗೆ. ಅಲ್ಲಾ ಆ ದಿನ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿರುವಾಗ ಅಕಸ್ಮಾತ್ ನೀ ಸಿಕ್ಕಾಗ ಆದ ಸಂತೋಷದಲ್ಲಿ ಮಾತೆ ಹೊರಡಲಿಲ್ಲ. ನೀನೂ...
ಬೈಕ್ ಸವಾರರಿಗೊಂದು ಸವಾಲ್
ನಮಗೆ ಇಡೀ ವ್ಯವಸ್ಥೆಯೇ ಸರಿಯಿಲ್ಲ ಅನಿಸುತ್ತದೆ. ಸರ್ಕಾರವನ್ನೋ, ಆಡಳಿತವನ್ನೋ ದೂರುತ್ತಲೇ ಇರುತ್ತೇವೆ. ರಾಜಕಾರಣಿಗಳನ್ನು ದೂರುತ್ತೇವೆ. ಸರ್ಕಾರಿ ಅಧಿಕಾರಿಗಳನ್ನು ಬೈದುಕೊಳ್ಳುತ್ತೇವೆ. ಎಲ್ಲವೂ ಸರಿ. ನಮಗಾಗುವ ಅನ್ಯಾಯ, ತೊಡಕುಗಳ ವಿರುದ್ಧ ಪ್ರತಿಭಟನೆ, ಧಿಕ್ಕಾರ, ವ್ಯಂಗ ಎಲ್ಲವೂ ಸರಿಯೇ. ನ್ಯಾಯಕ್ಕಾಗಿ ಹೋರಾಡುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಇದ್ದೇ ಇದೆ. ನಾವು...