ಅದು ಕೋಲ್ಕತ್ತಾದ ಬೇಲೂರು ಆಶ್ರಮ. ಅದೊಂದು ಮಧ್ಯರಾತ್ರಿ ಅಲ್ಲಿ ಮಲಗಿದ್ದ ತರುಣ ಸನ್ಯಾಸಿಯೋರ್ವ ದುತ್ತೆಂದು ಎದ್ದು ಹೊರಗೋಡಿ ಬರುತ್ತಾನೆ. ವೇದನೆಗೆ ಮನದಲ್ಲೇ ಚಡಪಡಿಸುತ್ತಾ ಅತ್ತಿಂದಿತ್ತಾ ಇತ್ತಿಂದತ್ತಾ ಅಲೆದಾಡುತ್ತಿರುತ್ತಾನೆ. ಇದನ್ನುಕಂಡ ಸಹವರ್ತಿಯೋರ್ವ ನಿದ್ದೆಯಿಂದ ಎದ್ದು ಆ ತರುಣ ಸನ್ಯಾಸಿಯ ಬಳಿಗೆ ಬಂದು ಅದೇನಾಯಿತು? ಹುಷಾರಿಲ್ಲವೇ? ನಿದ್ದೆ ಬಂದಿಲ್ಲವೇ...
Author - Prasad Kumar Marnabail
ನಮ್ಮಪೂರ್ವಜರ ನಂಬಿಕೆಗಳಲ್ಲೂ ವಿಜ್ಞಾನವಿದೆ
ಅಮ್ಮ ಹೇಳ್ತಿದ್ದಳು ಗ್ರಹಣ ಕಾಲದಲ್ಲಿ ಸೂರ್ಯಚಂದ್ರರನ್ನು ನೋಡಬಾರುದು, ಹೊರಗಡೆ ಓಡಾಡಬಾರದು ಅನ್ನ ಆಹಾರಗಳನ್ನು ಸೇವಿಸಬಾರದು ಅದು ಒಳ್ಳೆಯದಲ್ಲವೆಂದು. ಬರೇ ಅಂತೆಕಂತೆಗಳೆಂಬ ನಂಬಿಕೆಗಳ ಮೇಲೆ ನಿಂತಿರುವ ಹಿರಿಯರ ಇಂತಹ ಮಾತುಗಳನ್ನು ನಾನು ಅದಾಗಲೇ ಮೌಢ್ಯದ ಪಟ್ಟಿಗೆ ಸೇರಿಸಿದ್ದರಿಂದ ಅಮ್ಮನಿಗೆ ಅದೆಷ್ಟೋ ಬಾರಿ ಬುದ್ಧಿ ಹೇಳುವ ಮಟ್ಟದಲ್ಲಿನಿಲ್ಲುತ್ತಿದ್ದೆ! ಆದರೆ ಕಾಲ...
ಗುದ್ದೋಡು ಪ್ರಕರಣದಲ್ಲಿ ಬಲಿಯಾಯಿತು ನೋಡಿ ನಮ್ಮ ನ್ಯಾಯ!
ಅದು 2002ರ ಹಿಟ್ ಆ್ಯಂಡ್ ರನ್ ಪ್ರಕರಣ! ಆರೋಪಿ ಸಲ್ಮಾನ್’ಖಾನ್ ವಿರುದ್ಧ ಸಾಕ್ಷಿ ಹೇಳಲು ಕಟಕಟೆಗೆ ನಾಲ್ಕು ಸಾಕ್ಷಿದಾರರನ್ನು ಕರೆತರಲಾಗಿತ್ತು. ಮತ್ತು ಅವರೆಲ್ಲರೂ ಅಂದಿನ ದುರ್ಘಟನೆಯಲ್ಲಿ ಗಾಯಗೊಂಡು ಬದುಕುಳಿದವರು. ಅಂದರೆ ಪ್ರತ್ಯಕ್ಷ ಸಾಕ್ಷಿಗಳು. ಅವರಲ್ಲಿ ಒಬ್ಬ ಸಾಕ್ಷೀದಾರನ ಪ್ರಕಾರ ಘಟನೆ ನಡೆದಾಗ ಆರೋಪಿಯು ಅಂದರೆ ಸಲ್ಮಾನ್ ಕಾರಿನ ಬಲಗಡೆಯಿಂದೆದ್ದು ಬಂದಿದ್ದ...
‘ಕಿಸ್ ಆಫ್ ಲವ್’: ಇದೀಗ ಮೂಲ ಬೇರೇ ಅಲುಗಾಡುತ್ತಿದೆ!
ರಾಹುಲ್ ಪಶುಪಾಲನ್, ರಶ್ಮಿ ನಾಯರ್! ಕಳೆದ ಒಂದು ವರ್ಷದ ಕೆಳಗೆ ಏಕಾಏಕಿ ರಾರಾಜಿಸಿ ಹೀರೋಗಳಾದ ಜೋಡಿ ಹೆಸರುಗಳಿವು. ಮಾಡಿದ್ದ ಘನಂದಾರಿ ಕೆಲಸವೇನೆಂದರೆ ಅಂದು ಸಾರ್ವಜನಿಕವಾಗಿ ‘ಕಿಸ್’ ಕೊಡುವ ಕಾರ್ಯಕ್ರಮವನ್ನು ಆಯೋಜಿಸಿ ‘ಕಿಸ್ಆಫ್ ಲವ್’ ಎಂಬ ವಿಭಿನ್ನ ಪ್ರತಿಭಟನೆಯನ್ನು ಆಯೋಜಿಸಿದ್ದರು! ಅಂದಹಾಗೆ ಇವರಿಬ್ಬರು ದಂಪತಿಗಳು ಬೇರೆ. ಹಿಂದೂ...
ಅಗತ್ಯವೇ ಇಲ್ಲದ ವಿಷಯವನ್ನು ಎತ್ತಿಕಟ್ಟಿಬಿಟ್ಟರಲ್ಲ…. ಇದು ಯಾವ ಭಾಗ್ಯ!?
ಮೈಸೂರು ಹುಲಿ ಟಿಪ್ಪು ಸುಲ್ತಾನ್ ಮತಾಂಧನೋ ಅಲ್ಲವೋ, ತನ್ನ ಆಡಳಿತಾವಧಿಯಲ್ಲಿ ಹಿಂದೂ-ಕ್ರೈಸ್ತರುಗಳನ್ನು ನಿರ್ಧಯವಾಗಿ ಕೊಂದಿದ್ದಾನೋ ಇಲ್ಲವೋ ಈ ಬಗ್ಗೆ ಅದಾಗಲೇ ಸಾಕಷ್ಟು ಚರ್ಚೆಗಳು ನಡೆದಿವೆ,ಬೇಕಾದಷ್ಡು ಲೇಖನಗಳು, ಪುಸ್ತಕಗಳು ಹೊರಬಂದಿವೆ, ಹೊರಬರುತ್ತಿವೆ. ಆದ್ದರಿಂದ ಈ ಬಗ್ಗೆ ಮತ್ತಷ್ಟು ಗೀಚುವುದು ಬೇಡ. ಟಿಪ್ಪು ಸುಲ್ತಾನ್ ಮಾಡಿದ್ದು ತಪ್ಪು ಎನ್ನುವವರು ತಪ್ಪು...
ಮೀಸಲಾತಿ, ಜಾತಿ ಆಧಾರಿತ ಅಧಿಕಾರ ಇವೆಲ್ಲಾ ಯಾರ ಉನ್ನತಿಗೆ?
Miracle of democracy ಎಂದು ಪಿ.ವಿ ನರಸಿಂಹರಾವ್‍ರವರಿಂದ ಹೊಗಳಿಸಿಕೊಂಡ ರಾಜಕಾರಣಿ ಎಂದರೆ ಅದು ನಮ್ಮ ಮಾಯಾವತಿ. ದಲಿತ ಸಮಾಜವನ್ನು ಪ್ರತಿನಿಧಿಸುತ್ತಿದ್ದ ಈಕೆ ಕಾನ್ಸಿರಾಮ್‍ರವರ ಪಕ್ಕಾ ಶಿಷ್ಯೆ ಕೂಡ. ತನ್ನ ಸಂಘರ್ಷಯುಕ್ತ ಮಾತಿನ ಮೋಡಿ, ಸಂಘಟನಾ ಚಾತುರ್ಯತೆಯಿಂದ ಒಂದು ಕಾಲದಲ್ಲಿ ಉತ್ತರ ಪ್ರದೇಶದಾದ್ಯಂತ ಮನೆಮಾತಾಗಿದ್ದ ಈಕೆ ಅಲ್ಲಿನ ಸಮಾಜದ ಕೆಳಸ್ತರವನ್ನಂತೂ...
ಗೋಮಾಂಸ ಭಕ್ಷಣೆ ಮತ್ತು ನಮ್ಮ ರಾಜಕೀಯ
ಅವರು ಹೇಳುತ್ತಿದ್ದಂತೆ ನನ್ನ ಕಣ್ಣುಗಳೇ ತೇವಗೊಂಡಿದ್ದವು! ಒಂದು ರೀತಿಯ ಸೂತಕದ ಭಾವ ಅವರಲ್ಲಡಗಿತ್ತು. ಅದೇಗೆ ಸಾಂತ್ವಾನ ಹೇಳುವುದೆಂದೇ ನನಗೆ ಗೊತ್ತಾಗಲಿಲ್ಲ. ಅಂದು ಮಾತನಾಡುತ್ತಾ ಮಾತನಾಡುತ್ತ ಅತ್ತೇ ಬಿಟ್ಟಿದ್ದರವರು. ನೀವೇ ಹೇಳಿ ಕಳೆದ ಹನ್ನೊಂದು ವರುಷಗಳಿಂದ ಮನೆಮಗನಂತೆ ಸಾಕಿದ್ದ ಮುದ್ದಿನ ಗೋವು ರಾತ್ರೋ ರಾತ್ರಿ ಇಲ್ಲವಾಗುತ್ತೆ ಎಂದಾದರೆ, ಕಟುಕನ ಕತ್ತಿಗೆ...
ಭಾವೈಕ್ಯತೆಗೆ ಇಲ್ಲಿ ಮಾರಕವಾಗಿರುವುದಾದರೂ ಏನು!?
ಒಂದೆರಡು ವರುಷಗಳ ಹಿಂದೆ ಭೋಪಾಲಿನಲ್ಲಿ ನಡೆದ ಮೂರು ದಿನಗಳ ಆರ್ ಎಸ್ ಎಸ್ ಸಮಾವೇಶ ನೆನಪಿರಬಹುದು. ಅಲ್ಲಿ ಕೊನೆಯ ದಿನ ಸಂಘದ ಕಾರ್ಯಕರ್ತರು ಶಿಸ್ತಿನ ಪಥ ಸಂಚಲನನಡೆಸುತ್ತಾ ಮುಂದುವರೆಯುತ್ತಿದ್ದಾಗ ದಾರಿಯುದ್ದಕ್ಕೂ ಪುಷ್ಪವೃಷ್ಟಿಗೈದು ಸ್ವಾಗತ ಕೋರಿದ್ದು ಅಲ್ಲಿನ ಮುಸಲ್ಮಾನ ಸಮುದಾಯದವರು! ಅಂದೊಮ್ಮೆ ಮಂಗಳೂರಿನಲ್ಲಿ ನಡೆದ ಹಿಂದೂಸಮಾಜೋತ್ಸವದಲ್ಲೂ ಕುಡಿಯಲು ಪಾನೀಯವನ್ನು...