X
    Categories: Featured

ಪುಸ್ತಕವಾಗುತ್ತಿರುವ ರೀಡೂ ಕನ್ನಡ ಲೇಖನ ಮಾಲೆ – ಸ್ಫ್ಯಾನಿಷ್ ಗಾದೆಗಳು

ಪುಸ್ತಕ ರೂಪದಲ್ಲಿ ರೀಡೂ ಕನ್ನಡದಲ್ಲಿ ಪ್ರಕಟವಾದ ರಂಗಸ್ವಾಮಿ ಮೂಕನಹಳ್ಳಿ ಅವರ ಅಂಕಣ ಮಾಲೆ – ಸ್ಪ್ಯಾನಿಷ್ ಗಾದೆಗಳು.

2017 ಸೆಪ್ಟೆಂಬರ್ 18ರಂದು ರಂಗಸ್ವಾಮಿ ಮೂಕನಹಳ್ಳಿ ಅವರು ರೀಡೂ ಕನ್ನಡದಲ್ಲಿ ಬರೆಯಲು ಆರಂಭಿಸಿದ ಅಂಕಣ – ಸ್ಪ್ಯಾನಿಷ್ ಗಾದೆಗಳು. ಸ್ಪೇನ್ ನಲ್ಲಿದ್ದಾಗ ಅಲ್ಲಿ ಜನರ ಒಡನಾಟದಿಂದ ತಿಳಿದುಕೊಂಡ ಹಲವು ಗಾದೆಗಳು ನಮ್ಮ ಕನ್ನಡದಲ್ಲಿರುವ ಗಾದೆಗಳನ್ನೇ ಹೋಲುತ್ತವೆ ಎನ್ನುವುದನ್ನು ಅರಿತ ಲೇಖಕ ರಂಗಸ್ವಾಮಿ ಗಾದೆಗಳನ್ನು ರೀಡೂ ಕನ್ನಡದಲ್ಲಿ ಬರಹರೂಪದಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. 
 
ಮೇ 5, 2019ರಂದು ಈ ಎಲ್ಲಾ ಗಾದೆಗಳ ಲೇಖನಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಲಿದೆ. ಇವರ ಬರಹ ಇದೇ ರೀತಿಯಲ್ಲಿ ಸಾಗುತ್ತಿರಲಿ; ರೀಡೂ ತಂಡದ ಪರವಾಗಿ ಶುಭಾಶಯಗಳು. 
 
ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮದ ವಿವರ ಕೆಳಗಿದೆ 
 
ಮುಖ್ಯ ಅತಿಥಿಗಳು: ಶ್ರೀ ರೋಹಿತ್ ಚಕ್ರತೀರ್ಥ, ಜನಪ್ರಿಯ ಅಂಕಣಕಾರರು
                           ಶ್ರೀ ಶಿವಪ್ರಸಾದ್ ಭಟ್, ಸಂಪಾದಕರು ರೀಡೂ ಕನ್ನಡ 
 
ಉಪಸ್ಥಿತಿ: ಶ್ರೀ ರಂಗಸ್ವಾಮಿ ಮೂಕನಹಳ್ಳಿ,ಲೇಖಕರು
               ಶ್ರೀ ಹರ್ಷ, ಪ್ರಕಾಶರು
               ಶ್ರೀ ಮುಖೇಶ್ ಬೊರ, ಉದ್ಯಮಿ
               ಶ್ರೀ ಪವನ್ ಚಂದ್ ನಹರ್, ಉದ್ಯಮಿ 
 
ದಿನಾಂಕ: ಮೇ 5, 2019
ಸಮಯ: ಬೆಳಗ್ಗೆ 10.30ಕ್ಕೆ 
ಸ್ಥಳ: ಎಂ.ಡಿ.ಪಿ. ಕಾಫಿ ಹೌಸ್ ಮಳಿಗೆ #೮೦/೧, ಹೊಸ ತಿಪ್ಪಸಂದ್ರ ಮುಖ್ಯರಸ್ತೆ, ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ, ಇಂದಿರಾನಗರ, ಬೆಂಗಳೂರು ೭೫  

Facebook ಕಾಮೆಂಟ್ಸ್

Readoo Staff: Tailored news content, just for you.
Related Post