ಎಲ್ಲಿ ಮನ ಕಳುಕಿರದೊ, ಎಲ್ಲಿ ತಲೆ ಬಾಗಿದರೋ
ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ
ಎಲ್ಲಿ ಮನೆಯೋಗ್ಗಟ್ಟು, ಸಂಸಾರ ನೆಲೆಗಟ್ಟು ಧೂಳೊಡೆಯದಿಹುದೊ ತಾನಾ ನಾಡಿನಲ್ಲಿ
ಒಂದು ಉತ್ತಮ ಸಮಾಜ ನಿರ್ಮಾಣದ ಕನಸನ್ನು ಹೊತ್ತ ಪ್ರಾರ್ಥನಾ ಗೀತೆಯ ಸಾಲು ಇದು. ಅಂತಹ ಸಮಾಜದ ನಿರ್ಮಾಣವಾಗಬೇಕಾದರೆ ಉತ್ತಮ ಕಲೆ-ಸಾಹಿತ್ಯದಂತಹ ಧನಾತ್ಮಕ ವಿಚಾರಗಳು ನಮ್ಮ ಸುತ್ತಮುತ್ತ ತುಂಬಿರುವುದು ಕೂಡಾ ಅಗತ್ಯವಾಗಿರುತ್ತದೆ. ನಮ್ಮೊಳಗಿನ ಉತ್ತಮ ವಿಚಾರಗಳನ್ನು ಇನ್ನಷ್ಟು ಜನರಿಗೆ ತಲುಪಿಸುವುದು, ಇಂತಹ ವಿಚಾರಗಳನ್ನು ದೊಡ್ಡ ಮಟ್ಟದಲ್ಲಿ ದೊಡ್ಡ ಸಮುದಾಯಕ್ಕೆ ಅರಿವು ಮೂಡಿಸುವ ಪ್ರಯತ್ನ ಮಾಡುವುದು ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ. ನಮ್ಮ ಪ್ರಯತ್ನವನ್ನು ತೃಣಮಾತ್ರವೂ ಮಾಡದೇ, ಸಮಾಜ ಸರಿ ಇಲ್ಲ, ಪರಿವರ್ತನೆಯ ಹಾದಿ ಋಣಾತ್ಮಕವಾಗಿ ಸಾಗುತ್ತಿದೆ ಎನ್ನುವ ಯಾವ ನೈತಿಕ ಹಕ್ಕನ್ನೂ ನಾವು ಪಡೆಯುವುದಿಲ್ಲ. ಇದನ್ನು ಅರಿತುಕೊಂಡ ಮಂಗಳೂರಿನ ತಂಡವೊಂದು ಈ ನಿಟ್ಟಿನಲ್ಲಿ ಆಲೋಚನೆಯನ್ನು ಮಾಡಿದ ಪರಿಣಾಮವೇ ೨೦೧೮ರ ನವೆಂಬರ್ ೩ ಮತ್ತು ೪ರಂದು ಮಂಗಳೂರಿನ ಟಿ.ಎಂ.ಎ. ಪೈ ಇಂಟರ್’ನ್ಯಾಷನಲ್ ಸಭಾಂಗಣದಲ್ಲಿ ನಡೆಯಲಿರುವ ‘ಸಾಹಿತ್ಯ ಹಬ್ಬ’ – ‘ಮಂಗಳೂರು ಲಿಟ್ ಫೆಸ್ಟ್’
ಏನಿದು ವಿಶೇಷ ಹಬ್ಬ?
ಮಂಗಳೂರು ಲಿಟ್ ಫೆಸ್ಟ್’ನ ಸಂಕಲ್ಪವೇ ಸಾಹಿತ್ಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಎತ್ತಿಹಿಡಿಯುವುದು, ತನ್ಮೂಲಕ ಬುದ್ಧಿಮತ್ತೆಗೆ ಒರೆಹಚ್ಚಲು ಅನುಕೂಲಕರವಾದ ವೇದಿಕೆಯನ್ನು ಸೃಷ್ಟಿಸುವುದು ಮತ್ತು ಬೌದ್ಧಿಕ ವಿಚಾರಗಳಿಗೆ ಸರಿಯಾದ ಹಾದಿಯನ್ನು ತೋರುವುದು.
‘ಉತ್ತಮ ವಿಚಾರಗಳು ಜಗತ್ತಿನೆಲ್ಲೆಡೆಯಿಂದ ಹರಿದು ಬರಲಿ’ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಅಂತೆಯೇ, ಮಂಗಳೂರು ಲಿಟ್ ಫೆಸ್ಟ್ ‘ದಿ ಐಡಿಯಾ ಆಫ್ ಭಾರತ್’ – ‘ಭಾರತದ ಕಲ್ಪನೆ’ಯನ್ನು ತೆರೆದಿಡಲು ಪ್ರಯತ್ನ ಮಾಡುತ್ತಿದೆ. ಪುರಾತನ ಭಾರತದ ಶಾಂತಿಯುತ ವಿವೇಕ, ಭಾತೃತ್ವ ಮತ್ತು ವಿಶ್ವದ ಎಲ್ಲರ ಯೋಗಕ್ಷೇಮ, ‘ಉದಾರ ಚರಿತಾನಾಂ ತು ವಸುಧೈವ ಕುಟುಂಬಕಮ್’ ಎನ್ನುವ ನಮ್ಮ ಭಾರತೀಯ ಕಲ್ಪನೆಯಂತೆ, ವಿಶ್ವದಾದ್ಯಂತದ ಅತ್ಯುತ್ತಮ ಸಾಹಿತ್ಯಿಕ ವಿಚಾರಗಳ ಮೂಲಕ ಬೌದ್ಧಿಕ ಹಸಿವನ್ನು ತಣಿಸುವ ಪ್ರಯತ್ನ ಇದಾಗಿದೆ.
ಆಚರಣೆಗೆ ಹೇಗಿರಲಿದೆ?
ನವೆಂಬರ್ ೩ರಂದು ಬೆಳಗ್ಗೆ ೧೦ಗಂಟೆಗೆ ಟಿ.ಎಂ.ಎ. ಪೈ ಇಂಟರ್’ನ್ಯಾಷನಲ್ ಸಭಾಂಗಣದ ಪ್ರಮುಖ ಆಡಿಟೋರಿಯಂನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪ್ರಫುಲ್ಲ ಕೇತ್ಕಾರ್ ಅವರು ಮುಖ್ಯಭಾಷಣವನ್ನು ಮಾಡಲಿದ್ದಾರೆ. ಮುಖ್ಯಅತಿಥಿಗಳಾಗಿ, ಹಬ್ಬದ ರೂವಾರಿಗಳೂ ಆದ ವಿನಯ ಹೆಗ್ಡೆ, ರಾಜೀವ್ ಚಂದ್ರಶೇಖರ್, ಸಂಧ್ಯಾ ಪೈ ಅವರು ವೇದಿಕೆಯಲ್ಲಿ ಇರುತ್ತಾರೆ.
ನಂತರ ನಡೆಯುವ ಕಾರ್ಯಕ್ರಮಗಳು ಹೀಗಿವೆ:
ನವೆಂಬರ್ 3
ಸಮಯ | ಆಡಿಟೋರಿಯಂ ಎ | ಆಡಿಟೋರಿಯಂ ಬಿ |
ಮಧ್ಯಾಹ್ನ 11.30-12.30 | Reclaiming the true Hindu Narrative – Dr. David Frawley in conversation with Anirban Ganguly | Modinomic – Reactionary or Revolutionary?
M.R. Venkatesh and Gautham Chikermane with Vivek Mallya |
12.30-1.30 | The Selective Outrage – Good Dissent, Bad Dissent or Dissent of Convenience
Anand Ranganathan, Madhu Kishwar, Prakash Belwadi with Shefali Vaidya |
Sri Aurobindo’s idea of Spiritual Nationalism – Going beyond European idea of Nation States
Vinayachandra Banavathy in conversation with Vinay Prabhu |
ಅಪರಾಹ್ನ 2.15-3.15 | Urban Naxals – a conversation
Vivek Agnihothri in conversation with R. Jagannath |
Indian Academia and India in Academia – A Debate
Dr. Vishal Hegde, Dr. B.M. Hegde, Dr. Varadesh Hiregange in conversation with Prof. Ravishankar Rao |
3.30-4.30 | Critique of Hindu Activism Rajeev Malhotra | Hindu Civilisation in seize or on upsurge?
Abhinav Prakash in conversation with Nithin Sridhar |
ಸಂಜೆ ೫-೬.೩೦ | ಮುಖ್ಯ ಸಭಾಂಗಣ – ಸಾಂಸ್ಕೃತಿಕ ಕಾರ್ಯಕ್ರಮ | |
೭.೦೦-೮.೧೫ | ಸನ್ಮಾನ | ಶ್ರೀ ಎಸ್.ಎಲ್. ಭೈರಪ್ಪ
ಮುಖ್ಯ ಅತಿಥಿಗಳು – ವಿನಯ ಹೆಗ್ಡೆ, ರಾಜೀವ್ ಚಂದ್ರಶೇಖರ್, ಸಂಧ್ಯಾ ಪೈ |
ಆಡಿಟೋರಿಯಂ ಸಿ – Book Stall | ||
Book release and Discussion | ||
3.30 p.m. | Your Prime Minister is dead by Anuj Dhar | |
4.30. p.m. | Job Crisis in India by R. Jagannathan |
ನವೆಂಬರ್ 4
ಸಮಯ | ಆಡಿಟೋರಿಯಂ ಎ | ಆಡಿಟೋರಿಯಂ ಬಿ |
10-11.00 a.m. | Overreaching regulations and Relentless faiths – Traditions, Courts and Constitutions
Sandeep Shastri, Lakshmi Iyengar, Chaitra Mattighatta with Tejaswi Surya |
|
11.15-12.15 p.m. | India in cinema Representation and Narrative
Rishab Shetty, Rohit Padaki in conversation with Pradeep Kenchanur |
Poetry Conference
H. Dundiraj, Subraya Chokkadi, Dr. Dhanjaya Kumble, Nandini Heddurga, Poornima Suresh, B.R. Lakshman Rao, Dr. Vasanth Kumar Perla |
12.30-1.30 p.m. | Engineered violence in Keral and Kashmir
Major Gaurav Arya and Nanda kumar in conversation with Sandeep Balakrishnan |
Women and Religion – From Triple Talaq to Shabarimala
Yogini Shambhavi Chopra, Preethi Nagaraj, Smt. Padma Rani in conversation with Malavika Avinash |
2.15-3.15 p.m. | Regional Art and Literature
Prabhakar Joshi, Narendra Rai Derla, Gurudat Baliga in conversation with Prabhakar Joshi |
ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ
Sahana Vijaykumar, AjakkaLa Girish Bhat in conversation with Rohith Chakrateertha |
3.30 p.m. | ಸಮಾರೋಪ ಸಮಾರಂಭ | Key note: Nanda Kumar
Chief guests: Vinaya Hegde, Rajeev Chandrashekhar, Smt. Sandhya Pai |
ಆಡಿಟೋರಿಯಂ ಸಿ – Book Stall | ||
Book release and Discussion | ||
10.30 a.m. | What is Hinduism by Dr. David Frawley | |
11.30. p.m. | Kasheera by Sahana Vijaykumar |
ಭಾಗವಹಿಸುವುದು ಹೇಗೆ?
ಇಷ್ಟೆಲ್ಲಾ ವಿವರ ತಿಳಿದ ಮೇಲೆ ಹಬ್ಬದ ಆಚರಣೆಯಲ್ಲಿ ನಾವೂ ಜೊತೆಯಾಗದಿದ್ದರೆ ಹೇಗೆ ಹೇಳಿ? ಆಚರಣೆಯಲ್ಲಿ ಭಾಗವಹಿಸಲು ಈ ರೀತಿ ರಿಜಿಸ್ಟರ್ ಮಾಡಿಕೊಳ್ಳೋಣ – http://mlrlitfest.org/register/ – ಇಲ್ಲಿ ನಿಮ್ಮ ಹೆಸರು, ಈಮೈಲ್ ಐಡಿ, ಸಂಪರ್ಕ ಸಂಖ್ಯೆ ನಮೂದಿಸಿ, ಹಬ್ಬ ಆಚರಿಸೋಣ, ಬನ್ನಿ! ಹಾ.. ಜೊತೆಗೆ ಮಂಗಳೂರಿನ ಆಹಾರವನ್ನೂ ಸವಿಯೋಣ.
Facebook ಕಾಮೆಂಟ್ಸ್