ಮೋದಿ! ಸದ್ಯಕ್ಕೆ, ಭಾರತದ ಹೆಸರನ್ನು ವಿಶ್ವಮಟ್ಟದಲ್ಲಿ ರಾರಾಜಿಸುವಂತೆ ಮಾಡಿದ ಅಪರೂಪದ ರಾಜಕಾರಣಿ. ಯಾವತ್ತು ಈ ಮೋದಿ ಗುಜರಾತಿನಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಿ ಮಾಮೂಲಿ ರಾಜಕಾರಣಿ ತಾನಲ್ಲ ಎಂಬುದನ್ನು ಸಾಬೀತುಮಾಡಲು ಶುರು ಮಾಡಿದರೋ, ಅಂದಿನಿಂದಲೇ ಅರ್ಬನ್ ನಕ್ಸಲರು ಜಾಗೃತರಾಗಿ ಕೆಲಸ ಶುರುಮಾಡಿದರು.
ಬದಲಾದ ಸಮಯದಲ್ಲಿ ಮೋದಿ ಪ್ರಧಾನಿಯಾದರು. ಮೋದಿಗೆ ವೀಸಾ ನಿರಾಕರಿಸಿದ್ದ ಅಂದಿನ ಅಮೆರಿಕ ಸರಕಾರವನ್ನು ಕೊಂಡಾಡಿ ಪ್ರೈಮ್ ಟೈಮ್ ಅಲ್ಲಿ ಕಾರ್ಯಕ್ರಮ ಮಾಡಿದ ನಿರೂಪಕನೇ ಇಂದು ಮೋದಿಯವರ ಒಂದು ಸಂದರ್ಶನಕ್ಕಾಗಿ ಹಾತೊರೆಯುತ್ತಿದ್ದಾನೆ. ಈ ಅರ್ಬನ್ ನಕ್ಸಲರು ಕೂಡ ತಮ್ಮ ಹೋರಾಟದ ದಿಸೆಯನ್ನು ಬದಲಿಸಿಕೊಂಡರು. ನಕ್ಸಲಿಸಂನ ನೆರಳಲ್ಲಿ ಬಚ್ಚಿಟ್ಟುಕೊಂಡಿದ್ದ ಅನೇಕರ ಮುಖವಾಡ ಕಳಚಿಬೀಳಲು ಶುರುವಾಯಿತು. ಮೇಧಾ ಪಾಟ್ಕರ್ ರಿಂದ ಹಿಡಿದು ಇಲ್ಲಿ ಕರ್ನಾಟಕದಲ್ಲಿ ಲಿಂಗಾಯತರ ಧರ್ಮ ಸ್ಥಾಪಿಸಲು ಹೊರಟ ಫೈಯರ್ ಚೇತನ್’ವರೆಗೆ ಎಲ್ಲರೂ ಕೆಂಬಾವುಟದ ಕಾಮ್ರೆಡರು ಎಂಬುದು ಈಗ ಸ್ಪಷ್ಟವಾಗಿದೆ. ಭಾರತವನ್ನು ಹೀನಾಯ ದೇಶವೆಂದು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತೋರಿಸಿ ಹಣ ಪೀಕುತ್ತಿದ್ದ ಅನೇಕ ಸ್ವಯಂಸೇವಾ ಸಂಸ್ಥೆಗಳಿಗೆ ಯಾವಾಗ ಮೋದಿ ಬೀಗ ಜಡಿದರೋ, ಆಗ ಅಕ್ಷರಶಃ ಈ ಕೆಂಬಾವುಟದ ಕಾಮ್ರೆಡುಗಳು ಬೀದಿಗೆ ಬಿದ್ದರು. ಮೋದಿಯಿಂದ ಭಾರತದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ ಎಂಬ ಹಾರಾಟ ಶುರುವಾಯಿತು. ಇದನ್ನೆಲ್ಲ ಬಲ್ಲ ಮೋದಿ ಸೋತು ಕೂತಿದ್ದ ಭಾರತಾಂಬೆಗೆ ಶಕ್ತಿ ತುಂಬುವ ಕೆಲಸವನ್ನು ಮಾತ್ರ ಮಾಡಿದರು. ಮೋದಿ ಇಲ್ಲಿಯವರೆಗೆ ಒಂದೇ ಒಂದು ಪತ್ರಿಕಾಗೋಷ್ಟಿಯನ್ನು ಮಾಡಿಲ್ಲ. ಆದರೆ ಯಾವ ತಳ ಸಮುದಾಯದ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕಿತ್ತೋ, ಅವರೊಂದಿಗೆ ಉತ್ತಮವಾದ ಸಂಬಂಧವನ್ನೇ ಇಟ್ಟುಕೊಂಡರು. ಈಗ ಶಿರಸಿಯ ಮೂಲೆಯಿಂದ ಯಾವುದೋ ಸಮಸ್ಯೆಯ ಬಗ್ಗೆ ಮೋದಿಗೊಬ್ಬ ಪತ್ರ ಬರೆಯಬಹುದು ಮತ್ತು ಅದಕ್ಕೊಂದು ಪರಿಹಾರ ಕೂಡ ದೊರಕಬಹುದು. ಮೋದಿಗೆ ಇಸಂಗಳ ಹಂಗಿನಲ್ಲಿ ಬದುಕುತ್ತಿರುವ ಪತ್ರಕರ್ತರ ಸಹವಾಸ ಬೇಕಾಗಿಯೇ ಇರಲಿಲ್ಲ.
ಕರ್ನಾಟಕವೆಂಬ ಈ ರಾಜ್ಯವನ್ನು ಅಕ್ಷರಶಃ ಟಿಪ್ಪುವಿನಂತೆ ಆಳಿದ ನಿಕಟಪೂರ್ವ ಮುಖ್ಯಮಂತ್ರಿಗಳು ರಾಜ್ಯ ಚುನಾವಣೆಯಲ್ಲಿ ಸೋತು ಸುಣ್ಣವಾದರೂ ಅಪ್ಪ ಮತ್ತು ಮಗ ಕೈ ಹಿಡಿದು ಟಿಪ್ಪುವಿಗೆ ಉತ್ತರಾಧಿಕಾರಿಯಾಗಿದ್ದು ಈಗಿನ ವಾಸ್ತವ. ಇಷ್ಟೆಲ್ಲದರ ನಡುವೆ ಇನ್ನೊಂದೈದಾರು ತಿಂಗಳಲ್ಲಿ ಮತ್ತೆ ಲೋಕಸಭಾ ಚುನಾವಣೆ ಬರಲಿದೆ. ಆಗ ಈ ಟಿಪ್ಪು ವಂಶಸ್ಥರು ಮತ್ತೆ ಕೇಳುತ್ತಾರೆ ‘ಮೋದಿ ಏನ್ರೀ ಮಾಡಿದಾರೆ?’ ಎಂದು. ಅದಕ್ಕುತ್ತರವೇ ಈ ಲೇಖನ. ಅಪ್ಪ ಮತ್ತು ಮಕ್ಕಳು ಹೇಸಿಗೆ ಹುಟ್ಟಿಸುವ ರಾಜಕಾರಣವನ್ನು ಮಾಡುತ್ತಾ ಜನರನ್ನು ದಂಗೆ ಎಬ್ಬಿಸಲು ಹೊರಟಿರುವ ಈ ಸಮಯದಲ್ಲಿ ಮೋದಿ ಕರ್ನಾಟಕಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ನಾವು ಹೇಳಲೇಬೇಕಲವೇ? ಮೋದಿ ಕರ್ನಾಟಕಕ್ಕೆ ಏನ್ರೀ ಕೊಟ್ಟಿದ್ದಾರೆ ಎಂದು ಕೇಳೋ ಅಜ್ಞಾನಿಗಳಿಗೆ ಒಂದಿಷ್ಟು ಜ್ಞಾನ ತುಂಬುವ ಕೆಲಸ ಮಾಡೋಣ ಇವತ್ತು ಅಲ್ವ?
1. ಕರ್ನಾಟಕಕ್ಕೆ ಮೊದಲ ಐಐಟಿ. 2015 ರವರೆಗೆ ದೇಶದಲ್ಲಿ 16 ಐಐಟಿ ಗಳು ಇದ್ದವು. ಕರ್ನಾಟಕದಲ್ಲಿ ಒಂದೇ ಒಂದು ಐಐಟಿ ಇರಲಿಲ್ಲ. ಅ ಸಮಯದಲ್ಲಿ ಕರ್ನಾಟಕದ ಧಾರವಾಡಕ್ಕೆ ಮೊದಲ ಐಐಟಿ ಕೊಟ್ಟಿದ್ದು ಮೋದಿ ಸರಕಾರ.
2. ದೇವೇಗೌಡ್ರ ಕನಸಿನ ರೈಲಿಗೆ ಕೊನೆಗೂ ಮುಕ್ತಿ. ಎರಡು ದಶಕದ ಕನಸಾಗಿದ್ದ ಹಾಸನ-ಬೆಂಗಳೂರು ನಡುವಿನ ರೈಲು ಯೋಜನೆಗೆ ಮುಕ್ತಿ ನೀಡಲು ಪ್ರಧಾನಿ ನರೇಂದ್ರ ಮೋದಿಯವರೇ ಬರಬೇಕಾಯಿತು. ಹಲವಾರು ರೈಲ್ವೇ ಸಚಿವರು ಬಂದರೂ ಸಹ ಆ ಯೋಜನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.
3. ಕರ್ನಾಟಕದಲ್ಲಿ ಇರುವ 18 ಸರ್ಕಾರಿ ಮೆಡಿಕಲ್ ಕಾಲೇಜ್ ಗಳಲ್ಲಿ, ಮೂರು ಕಾಲೇಜ್ ಗಳು ಮೋದಿ ಸರ್ಕಾರದ ಕೊಡುಗೆ. ವೈದ್ಯರಾಗುವ ಹಂಬಲವಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಮೋದಿ ಸರ್ಕಾರದ ಮತ್ತೊಂದು ಕೊಡುಗೆ ಇದಲ್ಲವೇ.
4. ಇನ್ನು ಮೈಸೂರಿಗೆ ಟೆಕ್ಸ್ ಟೈಲ್ ಮೆಘಾ ಕ್ಲಸ್ಟರ್. ಕೇಂದ್ರ ಸರ್ಕಾರದ ಪರಿಷ್ಕೃತ ಸಮಗ್ರ ವಿದ್ಯುತ್ ಮಗ್ಗ ಅಭಿವೃದ್ಧಿ ಯೋಜನೆಯಡಿ ದೇಶದಲ್ಲಿ ಒಟ್ಟು 6 ಕ್ಲಸ್ಟರ್ ಗಳ ಅಭಿವೃದ್ಧಿಗೆ ಅನುಮೋದನೆ ನೀಡಿದೆ. ಅದರಲ್ಲಿ ಮೈಸೂರು ಮೆಗಾ ಸಿಲ್ಕ್ ಕ್ಲಸ್ಟರ್ ಕೂಡ ಒಂದಾಗಿದೆ.
5. ಸ್ವಾತಂತ್ರ್ಯ ಬಂದರೂ ವಿದ್ಯುತ್ ತಲುಪದ ಕರ್ನಾಟಕದ 7 ಲಕ್ಷ ಮನೆಗಳಿಗೆ ವಿದ್ಯುತ್ ಒದಗಿಸುವ ಕೆಲಸವನ್ನು ಮೋದಿ ಸರಕಾರ ಮಾಡಿದೆ. ಕೇಂದ್ರದ ವಿಶೇಷ ಸೌಭಾಗ್ಯ ಯೋಜನೆಯಡಿ ರಾಜ್ಯದ ಜನರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ದೇಶದಾದ್ಯಂತ ಒಟ್ಟಾರೆ 18 ಸಾವಿರ ಹಳ್ಳಿಗಳಿಗೆ ಮೋದಿ ಸರ್ಕಾರ ವಿದ್ಯುತ್ ತಲುಪಿಸಿದೆ.
6. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಳೆಬಾಗಿಲು-ಸಿಗಂದೂರು ಸಂಪರ್ಕ ಸೇತುವೆಗೆ ಮೋದಿ ಸರಕಾರ ಹಸಿರು ನಿಶಾನೆ ತೋರಿಸಿ 600 ಕೋಟಿ ಬಿಡುಗಡೆ ಮಾಡಿದೆ. ಶಿವಮೊಗ್ಗ ಭಾಗದ ಮುಳುಗಡೆ ಸಂತ್ರಸ್ತರ ಎರಡು ದಶಕಗಳ ಬೇಡಿಕೆ ಇದಾಗಿತ್ತು.
7. ಬೀದರ್-ಕಲ್ಬುರ್ಗಿ ನಡುವಿನ ರೈಲ್ವೇ ಮಾರ್ಗದ ಕನಸನ್ನ ಅಟಲ್ ಬಿಹಾರಿ ವಾಜಪೇಯಿ ಕಂಡಿದ್ದರು. ಆದರೆ ಕಾಂಗ್ರೆಸ್ ಹತ್ತು ವರ್ಷಗಳ ಕಾಲ ಅದನ್ನ ನಿಲ್ಲಿಸಿತ್ತು. ಮೋದಿಯವರು ಕೇವಲ ಎರಡು ವರ್ಷದಲ್ಲಿ ಆ ಯೋಜನೆಯನ್ನ ಪೂರ್ತಿಗೊಳಿಸಿ, ಸ್ವತಃ ಬಂದು ಉದ್ಘಾಟಿಸಿದ್ದಾರೆ.
8. ಚೆನ್ನೈ-ಬೆಂಗಳೂರು-ತುಮಕೂರು-ಚಿತ್ರದುರ್ಗ ಇಂಡಸ್ಟ್ರಿಯಲ್ ಕಾರಿಡಾರ್, ಬೆಂಗಳೂರು-ಮುಂಬೈ ಎಕನಾಮಿಕ್ ಕಾರಿಡಾರ್‌ನಲ್ಲಿ ತುಮಕೂರು ಮೂಲಕ ಹಾದುಹೋಗಲಿದೆ. ತುಮಕೂರಿಗೆ ಪವರ್ ಗ್ರಿಡ್, ಹೆಲಿಕ್ಯಾಪ್ಟರ್ ಉತ್ಪಾದನಾ ಘಟಕಗಳೂ ಮಂಜೂರಾಗಿದೆ.
9. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿಯಲ್ಲಿ ಕರ್ನಾಟಕದ ರೈತರು 11 ಸಾವಿರ ಕೋಟಿ ಪರಿಹಾರ ಪಡೆದಿದ್ದಾರೆ. ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಹಾಕುವುದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿದೆ. ಸಂಕಷ್ಟದಲ್ಲಿರುವ ರೈತರಿಗೆ ಕೊಂಚ ಮಟ್ಟಿನ ನೆಮ್ಮದಿ ತಂದಿದೆ.
10. ಯುಪಿಎ ಸರ್ಕಾರದ ಅವಧಿಯಲ್ಲಿನ ಹಣಕಾಸು ಆಯೋಗ ಕರ್ನಾಟಕಕ್ಕೆ ಕೊಟ್ಟಿದ್ದು ಕೇವಲ 70,000 ಕೋಟಿ. ಈಗ ಮೋದಿ ಸರಕಾರ 2.19 ಲಕ್ಷ ಕೋಟಿ ಹಣವನ್ನು ಮಂಜೂರು ಮಾಡಿದೆ. ಇದು ಹಿಂದಿಗಿಂತಲೂ 180 ಪಟ್ಟು ಹೆಚ್ಚು. ಇದು ಕನ್ನಡಿಗರ ತೆರಿಗೆ ಹಣವೇ ಆಗಿರಬಹುದು, ಆದರೆ ಇಷ್ಟು ವರ್ಷ ನಮಗೆ ಅನ್ಯಾಯವಾಗುತ್ತಿತ್ತು. ಈಗ ಮೋದಿ ಸರ್ಕಾರ ಸರಿದೂಗಿಸಿಕೊಂಡು ಸಾಗುತ್ತಿದೆ.
11. ಈ ಹಿಂದೆ 50 ಕಿಲೋ NPK ರಸಗೊಬ್ಬರ ಬೆಲೆ ಸುಮಾರು ರೂ.400 ಇದ್ದು ದರ ಏರುಗತಿಯಲ್ಲಿ ಇತ್ತು. ಈಗ ಆದರ ಬೆಲೆ ಕೇವಲ ರೂ 260. ಇದ್ದಕ್ಕೆ ಕಾರಣ ಗೊಬ್ಬರದ ಮೇಲೆ ಕೇಂದ್ರದ ಭಾರೀ ಸಬ್ಸಿಡಿ. ಒಂದೇ ಬಾರಿಗೆ ಈ ಹಿಂದೆ ಕಂಡು ಕೇಳರಿಯದಂತೆ, ಧಾನ್ಯಗಳ ಬೆಂಬಲ (MSP) ಬೆಲೆಯಲ್ಲಿ ಶೇಕಡಾ 150ರಷ್ಟು ಏರಿಕೆ ಮಾಡಲಾಗಿದೆ.
12. ಕರ್ನಾಟಕ ಸರಕಾರ 2,24,000 ಮೆಟ್ರಿಕ್ ಟನ್‌ನಷ್ಟು ಪಡಿತರ ವಿತರಣೆ ಮಾಡುತ್ತಿದೆ. ಇದರಲ್ಲಿ 2,17,403 ಮೆಟ್ರಿಕ್ ಟನ್ ಕೇಂದ್ರ ಸರಕಾರ ನೀಡುತ್ತಿದೆ. ಸುಮಾರು 7,000 ಮೆಟ್ರಿಕ್ ಟನ್ ಮಾತ್ರ ರಾಜ್ಯ ಸರಕಾರ ಸೇರಿಸುತ್ತಿದೆ. ಕೇಂದ್ರ ಸರಕಾರ ಅಕ್ಕಿಯನ್ನು ಕೆ.ಜಿ.ಗೆ 29 ರೂ.ಗೆ ಖರೀದಿಸಿ ರಾಜ್ಯಕ್ಕೆ 3 ರೂ.ಗೆ, ಗೋಧಿಯನ್ನು ಕೆ.ಜಿ.ಗೆ 20 ರೂ.ಗೆ ಖರೀದಿಸಿ 2 ರೂ.ಗೆ, ಹಾಗೆಯೇ ಸಕ್ಕರೆಯನ್ನು ಕೆ.ಜಿ.ಗೆ 24 ರೂ.ಗೆ ಖರೀದಿಸಿ 13.50 ರೂ.ಗೆ ರಾಜ್ಯ ಸರಕಾರಕ್ಕೆ ನೀಡುತ್ತಿದೆ. ಅಂದರೆ ರಾಜ್ಯ ಸರ್ಕಾರ ತನ್ನದು ಎಂದು ಹೇಳಿಕೊಳ್ಳುವ ಮಹತ್ವಾಕಾಂಕ್ಷೆಯ ‘ಅನ್ನ ಭಾಗ್ಯ’ ಯೋಜನೆಗೆ ಬಹುತೇಕ ಹಣ ನೀಡುತ್ತಿರುವುದು ಮೋದಿ ಸರ್ಕಾರ
13. 2009ರಿಂದ 2013-14ರ ನಡುವೆ ಯುಪಿಎ ಸರ್ಕಾರ ಕರ್ನಾಟಕದ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಕೊಡಮಾಡಿದ ಸರಾಸರಿ ವಾರ್ಷಿಕ ಮೊತ್ತ 835 ಕೋಟಿ ರೂಪಾಯಿಗಳು. 2014-15 ರಿಂದ 2016-17ರಲ್ಲಿ ಎನ್.ಡಿ.ಎ ಸರ್ಕಾರ ನೀಡಿರುವ ಸರಾಸರಿ ವಾರ್ಷಿಕ ಮೊತ್ತ 2,197.7 ಕೋಟಿ.
14. ಕರ್ನಾಟಕದಲ್ಲಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ 27,482 ಕೋಟಿ ರೂ.ಹಣವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. 3,546 ಕಿ ಮೀ ಉದ್ದದ 50 ಯೋಜನೆಗಳನ್ನ ಇದು ಒಳಗೊಂಡಿದೆ.
ಫಲಾನುಭವಿ ಪ್ರದೇಶಗಳು :ಹೊಸಪೇಟೆ – ಚಿತ್ರದುರ್ಗ,ಹೊಸಪೇಟೆ – ಬಳ್ಳಾರಿ,ಹಾಸನ – ಬಿ.ಸಿ.ರೋಡ್,ಶಿವಮೊಗ್ಗ – ಮಂಗಳೂರು,ಅಂಕೋಲಾ – ಹುಬ್ಬಳ್ಳಿ,ಹುಬ್ಬಳ್ಳಿ – ಹೊಸಪೇಟೆ.
15. ಭಾರತಮಾಲಾ ಯೋಜನೆಯಡಿಯಲ್ಲಿ ಘೋಷಣೆ ಯಾಗಿರುವ ವರ್ತುಲ ರಸ್ತೆಗಳು:ಬೆಂಗಳೂರು, ಬೆಳಗಾವಿ, ಚಿತ್ರದುರ್ಗ
ಬೈಪಾಸ್ ರಸ್ತೆಗಳು:ಬಳ್ಳಾರಿ, ಹೊಸಪೇಟೆ, ರಾಯಚೂರು, ಬಾಗಲಕೋಟೆ.
16. ಕೇಂದ್ರ ಸರ್ಕಾರದ ವಿಶೇಷ ಆರ್ಥಿಕ ಕಾರಿಡಾರ್ ಅಡಿಯಲ್ಲಿ ಈ ಕೆಳಗಿನ ರಸ್ತೆಗಳು ಘೋಷಣೆಯಾಗಿ ಕಾಮಗಾರಿಗಳು ನಡೆಯುತ್ತಿವೆ.ಬೆಂಗಳೂರು-ಮಲ್ಲಾಪುರ (323 ಕಿ.ಮೀ)
ಬೆಂಗಳೂರು-ಮಂಗಳೂರು(319 ಕಿ.ಮೀ)
ಬೆಂಗಳೂರು-ನೆಲ್ಲೂರು(286 ಕಿ.ಮೀ)
ಮಂಗಳೂರು-ರಾಯಚೂರು(461 ಕಿ.ಮೀ)
ಬಳ್ಳಾರಿ-ಸೊಲ್ಲಾಪುರ(434 ಕಿ.ಮೀ)
17. ಕಳೆದ ಎರಡು ವರ್ಷದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ 8,719 ಕೋಟಿ ರೂ. ಅನುದಾನ ನೀಡಿದೆ.
18. ಉದಯ್ ಯೋಜನೆಯಡಿಯಲ್ಲಿ ಕರ್ನಾಟಕದಲ್ಲಿ 2014ರಲ್ಲಿ 14,269 ಮೆ. ವ್ಯಾಟ್ ನಷ್ಟಿದ್ದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ, 2017ರಲ್ಲಿ 21,316 ಮೆ.ವ್ಯಾಟ್ ವರೆಗೆ ಹೆಚ್ಚಿಸಲಾಗಿದೆ.
19. ಪರಿಶಿಷ್ಟ ಪಂಗಡ (ಎಸ್‌ಟಿ) ವ್ಯಾಪ್ತಿಗೆ ಸೇರಿಸಬೇಕೆಂಬ ‘ಪರಿವಾರ’ ಮತ್ತು ‘ತಳವಾರ’ ಸಮುದಾಯಗಳ ಬಹುದಿನದ ಬೇಡಿಕೆಯನ್ನು ಮೋದಿ ಸರ್ಕಾರ ಈಡೇರಿಸಿದೆ. ಬಿ.ಎಸ್. ಯಡಿಯೂರಪ್ಪ ಹಾಗು ಸಂಸದ ಶ್ರೀ ರಾಮುಲು ಅವರ ವಿಶೇಷ ಪ್ರಯತ್ನದ ಫಲವಾಗಿ ದಶಕಗಳ ಬೇಡಿಕೆ ಈಡೇರಿದೆ
20. ರಾಯಚೂರಿನಲ್ಲಿ ರಾಜ್ಯದ ಮೊದಲ ಐಐಐಟಿ ಸ್ಥಾಪನೆ. ಈ ಮೂಲಕ ವಿದ್ಯಾಭ್ಯಾಸಕ್ಕಾಗಿ ಪರರಾಜ್ಯಗಳಿಗೆ ಹೋಗಬೇಕಿದ್ದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕರ್ನಾಟಕದಲ್ಲೇ ಐಐಟಿ ಹಾಗೂ ಐಐಐಟಿ ನೀಡಿದ್ದು ಇದೇ ನರೇಂದ್ರ ಮೋದಿ.
21. ಕನ್ನಡಿಗರಿಗೆ ಇದೇ ಮೊದಲ ಬಾರಿಗೆ ರೈಲ್ವೇ ಪರೀಕ್ಷೆಯನ್ನ ಕನ್ನಡ ದಲ್ಲಿಯೇ ಬರೆಯಲು ಅವಕಾಶ ನೀಡಿದೆ ಮೋದಿ ಸರ್ಕಾರ. ಹಲವು ದಶಕಗಳ ಕನ್ನಡಿಗರ ಕನಸು ಈಡೇರಿದೆ.ಇದು ಸಾಮಾನ್ಯವಾದ ವಿಷಯವ? ಕನ್ನಡ ಹೋರಾಟದ ಮುಖವಾಡ ಹಾಕಿಕೊಂಡು ಕಾಂಗ್ರೆಸ್ ಗುಲಾಮರಂತೆ ವರ್ತಿಸುತ್ತಿದ್ದವರು ಮೋದಿಯವರು ಈ ಕೆಲಸ ಮಾಡಿದ್ದಕ್ಕೆ ಅಭಿನಂದಿಸಿದ್ದಾರಾ?
22. ರಾಷ್ಟ್ರಾದ್ಯಂತ ಪ್ರಧಾನಮಂತ್ರಿ ಜನರಿಕ್ ಔಷಧಿ ಕೇಂದ್ರಗಳನ್ನು ತೆಗೆದು ಸಾಮಾನ್ಯ ಜನರಿಗೆ ಅತಿ ಕಡಿಮೆ ದರದಲ್ಲಿ ಔಷಧಿಗಳು ಸಿಗುವಂತೆ ಮೋದಿ ಮಾಡಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ 240 ಕ್ಕೂ ಅಧಿಕ ಜನೌಷಧಿ ಕೇಂದ್ರಗಳು ಸ್ಥಾಪನೆಯಾಗಿ ಲಕ್ಷಾಂತರ ಜನ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಪ್ರತಾಪ್ ಸಿಂಹ ತಮ್ಮ ಕ್ಷೇತ್ರದ ಒಂದು ಭಾಗವಾದ ಮೈಸೂರು ನಗರದಲ್ಲೊಂದರಲ್ಲೇ ನಲವತ್ತಕ್ಕೂ ಹೆಚ್ಚು ಜನ್ ಔಷಧ ಕೇಂದ್ರ ಆರಂಭಿಸಿ ಮೈಸೂರನ್ನಯ ರಾಜ್ಯದಲ್ಲೇ ಅತೀ ಹೆಚ್ಚು ಕೇಂದ್ರ ಹೊಂದಿರುವ ನಗರವನ್ನಾಗಿಸಿದ್ದಾರೆ.
23. 48 ಗಂಟೆಗಳಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಲು ಸುಪ್ರೀಂ ಕೋರ್ಟ್ ಆದೇಶಿಸಿದಾಗ ಅದು ನಿಮ್ಮ ಕೆಲಸವಲ್ಲ, ಸಂಸತ್ತಿನ ಕೆಲಸ ಅಂತಾ ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಗಟ್ಟಿಧ್ವನಿಯಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದ್ದು ಇದೇ ಮೋದಿ ಸರ್ಕಾರ. ಏನು ತಾರತಮ್ಯ ಮಾಡಿದ್ದಾರೆ ಮೋದಿ?
24. ಬರ ಪರಿಹಾರ, ಅನುದಾನದ ವಿಷಯದಲ್ಲಿ ಹಿಂದಿನ ಯುಪಿಎ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದ ಅನುದಾನಕ್ಕಿಂತ ಹೆಚ್ಚಾಗಿ ಮೋದಿ ಸರ್ಕಾರದಲ್ಲಿ ಸಿಕ್ಕಿದೆ. ರಾಜ್ಯಕ್ಕೆ ಅತಿಹೆಚ್ಚು ಬರ ಪರಿಹಾರ ನೀಡಿದ ಖ್ಯಾತಿ ಮೋದಿ ಸರ್ಕಾರದ್ದು. ಕರ್ನಾಟಕಕ್ಕೆ ಅತಿ ಹೆಚ್ಚು ಬರ ಪರಿಹಾರದ ಜೊತೆಗೆ ಅತಿಹೆಚ್ಚು ನೆರೆ ಪರಿಹಾರ ನೀಡಿದ್ದು ಇದೇ ಮೋದಿ ಸರ್ಕಾರ. ಅಂತೆಯೇ ಕರ್ನಾಟಕಕ್ಕೆ ನೆರೆ ಪರಿಹಾರವಾಗಿ ₹ 171.69 ಕೋಟಿ ರೂಗಳು ಕಳೆದ ವರ್ಷ ಸಿಕ್ಕಿದೆ.
25.ಶಿವಮೊಗ್ಗ, ಬಳ್ಳಾರಿ, ಮೈಸೂರು ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪಾಸ್ ಪೋರ್ಟ್ ಸೇವಾಕೇಂದ್ರಗಳನ್ನ ಕೇಂದ್ರ ಸರ್ಕಾರ ತೆರೆದಿದೆ. ಈ ಮೊದಲು ನಾಡಿನ ಜನರು ಪಾಸ್ ಪೋರ್ಟ್ ಗಾಗಿ ಬೆಂಗಳೂರಿನಂತಹ ಮಹಾನಗರಗಳಿಗೆ ಅಲೆಯಬೇಕಾಗಿತ್ತು.
26.ಇದೇ ಮೊದಲ ಬಾರಿಗೆ ರೈಲ್ವೇ ಟಿಕೆಟ್ ಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗಿದೆ. ಬೇರೆ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ಇದುವರೆಗೂ ರೈಲ್ವೇ ಟಿಕೆಟ್ ಗಳು ಪ್ರಕಟವಾಗಿಲ್ಲ. ಆ ಮೂಲಕ ಕನ್ನಡಿಗರ ಹಲವು ದಿನಗಳ ಬೇಡಿಕೆ ಈಡೇರಿದೆ.
27.ಸ್ಮಾರ್ಟ್ ಸಿಟಿ ಯೋಜನೆಗಾಗಿ ಕರ್ನಾಟಕಕ್ಕೆ 1960 ಕೋಟಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಆದರೆ ಅದರಲ್ಲಿ ಬಹುತೇಕ ಅನುದಾನ ವನ್ನು ರಾಜ್ಯ ಸರ್ಕಾರ ಬಳಸಿಕೊಳ್ಳದೆ ಹಾಗೇ ಉಳಿಯುವಂತಾಗಿದೆ. ಇದಕ್ಕೂ ಮೋದಿಯವರನ್ನು ವಿರೋಧಿಸುವವರನ್ನು ಮುಟ್ಠಾಳರು ಅನ್ನಬಹುದಲ್ಲವೇ?
28.ಬೆಳಗಾವಿ ವಿಷಯ ಬಂದಾಗ ಅದು ಕರ್ನಾಟಕದ ಅವಿಭಾಜ್ಯ ಅಂಗ ಅಂತಾ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದ್ದು ಇದೇ ನರೇಂದ್ರ ಮೋದಿಯವರ ನೇತೃತ್ವದ ಎನ್.ಡಿ.ಎ ಸರ್ಕಾರ.
29.ಈ ಹಿಂದೆ ನಾವುಗಳೆಲ್ಲಾ ಪತ್ರಿಕೆಗಳಲ್ಲಿ ಓದಿದ್ದೀವಿ, ರಸಗೊಬ್ಬರ ಕೊಳ್ಳಲು, ಬಿತ್ತನೆ ಬೀಜ ಕೊಳ್ಳಲು ಲಾಠೀ ಚಾರ್ಜ್, ಗೋಲಿಬಾರ್. ಆದರೆ ನೀವು ಈ ನಾಲ್ಕು ವರ್ಷಗಲ್ಲಿ ಈ ಮಾತನ್ನ ಎಂದಾದರೂ ಕೇಳಿದ್ದೀರಾ? ಅಷ್ಟರ ಮಟ್ಟಿಗೆ ಕೇಂದ್ರ ಸರ್ಕಾರ ಬಿತ್ತನೆ ಬೀಜಗಳನ್ನು ರಾಜ್ಯಕ್ಕೆ ಪೂರೈಸಿದೆ.
30.ರಾಜ್ಯದ ಹಲವು ನಗರಗಳು ಸ್ಮಾರ್ಟ್ ಸಿಟಿಗೆ ಆಯ್ಕೆ, ಅಮೃತ್ ಯೋಜನೆಗೂ ಹಲವು ಪ್ರಮುಖ ನಗರಗಳ ಆಯ್ಕೆ, ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ 107 ಕೋಟಿ ಬಿಡುಗಡೆ ಮಾಡಿದೆ ಮೋದಿ ಸರ್ಕಾರ. ಇದೇ ಅಮೃತ್ ಯೋಜನೆಯಡಿಯಲ್ಲಿ ನಗರಗಳ ಎಷ್ಟೋ ಪಾರ್ಕಗಳು ಅಭಿವೃದ್ಧಿಯಾಗುತ್ತಿದೆ. ಅಮೃತ್ ಯೋಜನೆಯಡಿಯಲ್ಲಿ ಕರ್ನಾಟಕದ ನಗರಗಳ ಅಭಿವೃದ್ಧಿಗಾಗಿ 4,900 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ.
31.ಸ್ಮಾರ್ಟ್ ಸಿಟಿ ಮಿಷನ್ ನಲ್ಲಿ ಕರ್ನಾಟಕದಲ್ಲಿ ಆಯ್ಕೆಯಾಗಿರುವ 6 ಸ್ಮಾರ್ಟ್ ಸಿಟಿಗಳಾದ ಬೆಳಗಾವಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ, ತುಮಕೂರು ಮತ್ತು ಮಂಗಳೂರಿನ ಅಭಿವೃದ್ಧಿಗೆ ನೂರಾರು ಕೋಟಿ ರೂ. ಬಿಡುಗಡೆ.
32.17 ಸಾವಿರ ಕೋಟಿ ಹಣವನ್ನ ಬೆಂಗಳೂರಿನ ಸಬ್ ಅರ್ಬನ್ ರೈಲ್ವೇ ಯೋಜನೆಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯವರು ಘೋಷಿಸಿದ್ದರು. ಒಟ್ಟಾರೆ ಬಜೆಟ್ ನಲ್ಲಿ 40 ಸಾವಿರ ಕೋಟಿಯಷ್ಟು ಹಣವನ್ನು ಸಬ್ ಅರ್ಬನ್ ರೈಲ್ವೇಗೆ ತೆಗೆದಿಡಲಾಗಿದೆ. ಇದರಲ್ಲಿ ಸಿಂಹಪಾಲು ಕರ್ನಾಟಕಕ್ಕೆ ಬಂದಿದೆ. ತುಮಕೂರಿನಲ್ಲಿ ಹೆಲಿಕಾಪ್ಟರ್ ತಯಾರಿಕಾ ಘಟಕ ಯೋಜನೆಗೆ 500 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಗೆ ಶಂಕುಸ್ಥಾಪನೆಯಾಗಿದೆ. ನೆನಪಿದೆಯಾ?
33.ಕರ್ನಾಟಕದ ಹಲವಾರು ಜನರ ಪತ್ರಗಳಿಗೆ ಮೋದಿಯವರು ಸ್ಪಂದಿಸಿದ್ದಾರೆ. ಸ್ಥಳೀಯ ಆಡಳಿತದಿಂದ ನ್ಯಾಯ ದೊರಕದೇ ಇದ್ದಾಗ ಖುದ್ದು ಪ್ರಧಾನಮಂತ್ರಿ ಯವರಿಗೆ ಪತ್ರ ಬರೆದು ನ್ಯಾಯ ಪಡೆದ ನೂರಾರು ಉದಾಹರಣೆಗಳು ಕರ್ನಾಟಕದಲ್ಲಿವೆ.
34.ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅನ್ನ ಭಾಗ್ಯದ ಪ್ರತೀ ಕಿಲೋಗ್ರಾಂ ಅಕ್ಕಿಗೆ ಕೇಂದ್ರ ಸರ್ಕಾರ 29.64 ರೂಪಾಯಿ ಕೊಟ್ಟರೆ, ರಾಜ್ಯ ಸರ್ಕಾರ ಕೊಡುವುದು ಕೇವಲ 3 ರೂಪಾಯಿ. ಗೋಧಿ, ಬೇಳೆ ಕಾಳುಗಳಿಗೂ ಕೇಂದ್ರವೇ ಹಣ ಕೊಡುತ್ತದೆ. ಅನ್ನ ಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಸಾವಿರಾರು ಕೋಟಿ ಹಣ ನೀಡುತ್ತಿದೆ. ನಿಜ ಅರ್ಥದಲ್ಲಿ ಅನ್ನ ಭಾಗ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಹಾಗು ಬಿಜೆಪಿಯ ಕೊಡುಗೆಯೇ ಹೊರತು ಕಾಂಗ್ರೆಸ್ ನದ್ದಲ್ಲ..
35.ಎರಡು ವರ್ಷದ ಹಿಂದೆ ಅಡಿಕೆ ಧಾರಣೆಯಲ್ಲಿ ವ್ಯಾಪಕ ಕುಸಿತ ಕಂಡಿದ್ದಾಗ ಮೋದಿ ಸರ್ಕಾರದ ಬಳಿ ಕರ್ನಾಟಕದ ರೈತರು ನಿಯೋಗ ಕೊಂಡೊಯ್ದಿದ್ದರು. ಅದಕ್ಕೆ ಸ್ಪಂದಿಸಿದ್ದ ಮೋದಿ ಸರ್ಕಾರ, ವಿದೇಶದಿಂದ ಆಮದಾಗುತ್ತಿದ್ದ ಅಡಿಕೆ ಮೇಲಿನ ಸುಂಕ ಹೆಚ್ಚಿಸಿ, ಕರ್ನಾಟಕದ ಅಡಿಕೆಗೆ ಉತ್ತಮವಾದ ಮಾರ್ಕೆಟ್ ಒದಗಿಸಿದ್ದರು. ಪರಿಣಾಮವಾಗಿ ಕೆಲವೇ ದಿನದಲ್ಲಿ ಅಡಿಕೆ ಧಾರಣೆಯಲ್ಲಿ ಗಣನೀಯ ಏರಿಕೆ ಕಂಡು ಬಂದು ರೈತರು ನಿಟ್ಟುಸಿರು ಬಿಡುವಂತಾಗಿತ್ತು. ಮತ್ತೆ ಈ ವರ್ಷ ಕುಸಿತಕಂಡಿದ್ದ ಅಡಿಕೆ ಬೆಲೆಯನ್ನು ಮೇಲೆತ್ತಲು ಸುರೇಶ್ ಪ್ರಭು ಮಹತ್ತರವಾದ ಕೆಲಸವೊಂದನ್ನು ಮಾಡಿದ್ದಾರೆ. ಅಡಿಕೆ ಮೇಲಿನ ಮಿನಿಮಮ್ ಇಂಪೋರ್ಟ್ ಪ್ರೈಸ್ ಮುಂಚೆ ಪ್ರತೀ ಕೆಜಿಗೆ 162 ರೂಪಾಯಿತ್ತು ಅದನ್ನು 251 ರೂಪಾಯಿಗೆ ನಿಗದಿ ಮಾಡಿ ಅಡಿಕೆ ಬೆಳೆಗಾರರ ಕೈ ಹಿಡಿದಿದ್ದು ಮೋದಿ ಸರಕಾರ.
36.ಪ್ರಧಾನಮಂತ್ರಿ ಉಜ್ವಲ್ ಯೋಜನೆಯಡಿಯಲ್ಲಿ 4,300 ಕೋಟಿ ರೂಪಾಯಿ ಅನುದಾನ ಕರ್ನಾಟಕಕ್ಕೆ ಬಂದಿದೆ. ಕರ್ನಾಟಕದ ಲಕ್ಷಾಂತರ ಬಡ ಮಹಿಳೆಯರ ಮನೆಗಿಂದು ಉಚಿತ ಗ್ಯಾಸ್ ಸೌಲಭ್ಯ ಕಲ್ಪಿಸಲಾಗಿದೆ.
37.ಕರ್ನಾಟಕದ ನೇಕಾರರ ಅಭಿವೃದ್ಧಿಗಾಗಿ 5 ಕೋಟಿ ವೆಚ್ಚದಲ್ಲಿ ನೂಲು ಬ್ಯಾಂಕ್ ಸ್ಥಾಪಿಸಲು ಅನುದಾನ ನೀಡಿದೆ. ನೇಕಾರರ ಬಾಳನ್ನ ಹಸನಾಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
38.ರಾಜ್ಯದಲ್ಲಿ ಸ್ವಚ್ಛ ಭಾರತ ಯೋಜನೆಯಡಿಯಲ್ಲಿ 34 ಲಕ್ಷ ಶೌಚಾಲಯಗಳ ನಿರ್ಮಾಣವನ್ನು ಕೇಂದ್ರ ಸರಕಾರ ಮಾಡಿದೆ. ಜಿಲ್ಲಾ ಖನಿಜ ನಿಧಿಯಡಿಯಲ್ಲಿ ಕರ್ನಾಟಕಕ್ಕೆ 34,353 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
39.ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ 27,000 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಬಹುತೇಕ ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣ ನಡೆಯುತ್ತಿದೆ. ಮೈಸೂರು ಬೆಂಗಳೂರಿನ ನಡುವೆ ದಶಪಥ ರಸ್ತೆಯನ್ನು ಮಾಡಬೇಕು ಎಂಬ ಪ್ರತಾಪ್ ಸಿಂಹರ ಕನಸನ್ನು ಮೋದಿ ನನಸಾಗಿಸಿದ್ದು ಈಗ ಇತಿಹಾಸ. ಈಗಾಗಲೇ ಲ್ಯಾಂಡ್ ಅಕ್ವಿಸಿಶನ್ ಮುಗಿದಿದ್ದು ಎಲ್ಲಾದರೂ ಒಂದು ಗಲಾಟೆಯಾದ ವರದಿ ನೋಡಿದ್ದೀರಾ? ಪ್ರತಾಪ್ ಸಿಂಹರೇ ಹೇಳುವಂತೆ ಸುಮಾರು ಮೂರುವರೆ ಸಾವಿರ ಕೋಟಿ ಕೇವಲ ಲ್ಯಾಂಡ್ ಅಕ್ವಿಸಿಶನ್ ಗೆ ಉಪಯೋಗಿಸಲಾಗಿದೆಯಂತೆ. ಇದನ್ನೇ ಗುಡ್ ಗವರ್ನೆನ್ಸ್ ಅನ್ನುವುದಲ್ಲವ?
40.ಪ್ರಧಾನಮಂತ್ರಿ ಕೃಷಿ ಸಿಂಚಯ್ ಯೋಜನೆಯಡಿಯಲ್ಲಿ 405 ಕೋಟಿ ರೂಪಾಯಿ ಹಣ ಕರ್ನಾಟಕಕ್ಕೆ ಬಂದಿದೆ. ರೈತರಿಗಾಗಿಯೇ ಮಾಡಲಾಗಿರುವ ಈ ಯೋಜನೆಯಿಂದ ಲಕ್ಷಾಂತರ ರೈತರು ಉಪಯೋಗ ಪಡೆಯುತ್ತಿದ್ದಾರೆ.
41.ಸಾರಿಗೆ ವ್ಯವಸ್ಥೆಯ ಸುಧಾರಣೆಗಾಗಿ ಕೇಂದ್ರ ಸರ್ಕಾರದಿಂದ 239 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ.
42.ಬಡವರಿಗೆ ನಿವಾಸಗಳನ್ನು ಕಟ್ಟಿಕೊಡಲೆಂದೇ ರೂಪಿಸಲಾಗಿರುವ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ 219 ಕೋಟಿ ರೂಪಾಯಿ ಅನುದಾನ ಕನ್ನಡಿಗರಿಗೆ ಬಂದಿದೆ.
43.ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಸ್ವಚ್ಚ ಭಾರತ್ ಯೋಜನೆಯಡಿಯಲ್ಲಿ 204 ಕೋಟಿ ರೂಪಾಯಿ ಅನುದಾನ ಕರ್ನಾಟಕಕ್ಕೆ ಬಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಲಕ್ಷಾಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
44.ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ವಿತರಿಸಲು 31 ಕೋಟಿ ರೂಪಾಯಿ ಹಣ ಕರ್ನಾಟಕಕ್ಕೆ ಬಿಡುಗಡೆಯಾಗಿದೆ.
45.ರಾಜ್ಯದ ಕಾಳುಮೆಣಸು ಬೆಳೆಗಾರರ ಮನವಿಗೆ ತಕ್ಷಣವೇ ಸ್ಪಂದಿಸಿದ್ದು ಇದೇ ಮೋದಿ ಸರ್ಕಾರ. ಕಾಳುಮೆಣಸಿಗೆ ಬೆಂಬಲ ಬೆಲೆ ಘೋಷಿಸಿದ್ದಲ್ಲದೇ, ಹೊರ ದೇಶಗಳಿಂದ ಆಮದಾಗುತ್ತಿದ್ದ ಕಾಳುಮೆಣಸನ್ನ ನಿಷೇಧಿಸಿ, ಕಾಳುಮೆಣಸು ಧಾರಣೆಯಲ್ಲಿ ಗಣನೀಯವಾಗಿ ಏರಿಕೆಯಾಗುವಂತೆ ಮಾಡಿದ್ದು ಮೋದಿ ಸರ್ಕಾರ.
ಇಷ್ಟಕ್ಕೇ ಮುಗಿದಿಲ್ಲ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಒಬ್ಬರೇ ಅವರ ಕ್ಷೇತ್ರಕ್ಕೆ ಸಾವಿರಾರು ಕೋಟಿ ಕೆಲಸ ತಂದಿದ್ದಾರೆ. ಮೊನ್ನೆ ಸಂಸತ್ತಿನಲ್ಲಿ ಕೂಡ ಮೋದಿ ಒಂದು ಮಾತನ್ನು ಪ್ರಸ್ತಾಪ ಮಾಡಿದರು ಅದೇನೆಂದರೆ “ಭಾರತದ ಎಲ್ಲ ರಾಜ್ಯಗಳ ಪ್ರತೀ ಜಿಲ್ಲೆಯ ಎಲ್ಲ ಜನರ ಏಳ್ಗೆಯೇ ನಮ್ಮ ಗುರಿ ನಮಗೆ ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ ಎಂಬುದು ಮುಖ್ಯವಲ್ಲ”. ಇದನ್ನೇ ಅಲ್ಲವೇ ಅಭಿವೃದ್ಧಿ ರಾಜಕಾರಣ ಅನ್ನುವುದು. ಇಲ್ಲಿ ಮೇಲೆ ನಾನು ಪಟ್ಟಿ ಮಾಡಿದ್ದಷ್ಟೇ ಮೋದಿಯವರು ಕರ್ನಾಟಕಕ್ಕೆ ನೀಡಿದ್ದಲ್ಲ. ಹೇಳುವುದು ಇನ್ನೂ ಇದೆ. ಜಿಎಸ್ಟಿ ಯಿಂದ ಬರುವ ಆದಾಯದ ಸಿಂಹಪಾಲು ದೊರಕುವುದು ರಾಜ್ಯಗಳಿಗೆ ಇದು ಕೂಡ ಮೋದಿಯವರ ಕೊಡುಗೆಯಲ್ಲವೇ? ತಾರತಮ್ಯದ ಸಂಸ್ಕೃತಿಯನ್ನು ಹುಟ್ಟುಹಾಕಿ ಸಾಮಾನ್ಯರನ್ನು ಇಷ್ಟುವರ್ಷ ಆಳಿದ ‘ಕಾಂಗ್ರೆಸ್ಸಿ’ಗರಿಗೆ ಯಾವ ಮುಖವಿದೆ ಮೋದಿಯವರನ್ನು ಪ್ರಶ್ನಿಸಲು? ಕಾಂಗ್ರೆಸಿಗರೆ ನಿಮ್ಮ ತಲೆಯಲ್ಲಿನ ಗುಲಾಮಿತನವನ್ನು ಹೊಡೆದೋಡಿಸುವ ಕಾಲಬಂದಿದೆ ಬನ್ನಿ ನಮ್ಮ ಜೊತೆ ಕೈ ಜೋಡಿಸಿ. ಬದಲಾಗಿ.
ಚುನಾವಣೆಗೂ ಮುಂಚೆ “ರಾಹುಲ್ ಗಾಂಧಿಯವರೇ ನಾನು ನಿಮ್ಮ ಮುಲಾಜಿನಲ್ಲಿಲ್ಲ…” ಎಂದು ಮತ್ತು ಮುಖ್ಯಮಂತ್ರಿ ಆದಮೇಲೆ “ನಾನು ಕನ್ನಡಿಗರ ಮುಲಾಜಿನಲ್ಲಿಲ್ಲ ನಾನು ರಾಹುಲ್ ಗಾಂಧಿಯ ಮುಲಾಜಿನಲ್ಲಿದ್ದೇನೆ..” ಎನ್ನುವ ನಮ್ಮ ಹೆಮ್ಮೆಯ ಮುಖ್ಯಮಂತ್ರಿ ಮುಂದೆ ಇದೇ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಬಂದಾಗ ಅವರು ಕೇಳುವ ಪ್ರಶ್ನೆ ಕೂಡ ‘ಮೋದಿ ಏನ್ರೀ ಮಾಡಿದಾರೆ..’ ಎಂಬುದೇ ಆಗಿರುತ್ತದೆ ಹಾಗಾಗಿ ಈ ಉತ್ತರ ಕೊಡಲು ಸಿದ್ಧರಾಗೋಣ ಮತ್ತು ಮೋದಿ ಮತ್ತೊಮ್ಮೆ ಅನ್ನೋಣ.
Facebook ಕಾಮೆಂಟ್ಸ್